Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 32:3 - ಕನ್ನಡ ಸತ್ಯವೇದವು C.L. Bible (BSI)

3 ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ: “ಗುಂಪಾಗಿ ಕೂಡಿದ ಬಹುಜನಾಂಗಗಳ ಕೈಯಿಂದ, ನಾ ನಿನ್ನ ಮೇಲೆ ಬೀಸುವೆ ಬಲೆಯೊಂದ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ಗುಂಪಾಗಿ ಕೂಡಿದ ಬಹು ಜನಾಂಗಗಳವರ ಮೇಲೆ ನಾನು ನನ್ನ ಬಲೆಯನ್ನು ಬೀಸುವೆನು; ಅವರು ನಿನ್ನನ್ನು ಆ ಬಲೆಯಿಂದ ಮೇಲಕ್ಕೆ ಎಳೆಯುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

3 ಕರ್ತನಾದ ಯೆಹೋವನು ಇಂತೆನ್ನುತ್ತಾನೆ - ಗುಂಪಾಗಿ ಕೂಡಿದ ಬಹುಜನಾಂಗಗಳವರ ಕೈಯಿಂದ ನಾನು ನನ್ನ ಬಲೆಯನ್ನು ನಿನ್ನ ಮೇಲೆ ಬೀಸುವೆನು; ಅವರು ನಿನ್ನನ್ನು ಆ ಬಲೆಯಿಂದ ಮೇಲಕ್ಕೆ ಎಳೆಯುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

3 ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: “ಅನೇಕರನ್ನು ನಾನು ಒಟ್ಟುಗೂಡಿಸಿದ್ದೇನೆ. ಈಗ ನನ್ನ ಬಲೆಯನ್ನು ನಿನ್ನ ಮೇಲೆ ಬೀಸುವೆನು. ಆಗ ಅವರು ನಿನ್ನನ್ನು ಒಳಸೆಳೆಯುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

3 “ ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: “ ‘ಆದ್ದರಿಂದ ನಾನು ಗುಂಪಾಗಿ ಕೂಡಿದ ಬಹಳ ಜನಾಂಗಗಳ ಮೇಲೆ ಬಲೆಯನ್ನು ಬೀಸುವೆನು. ಅವರು ನಿನ್ನನ್ನು ನನ್ನ ಬಲೆಯಲ್ಲಿ ಮೇಲಕ್ಕೆಳೆಯುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 32:3
8 ತಿಳಿವುಗಳ ಹೋಲಿಕೆ  

ನಾನು ಅವನಿಗೆ ನನ್ನ ಬಲೆಯೊಡ್ಡುವೆನು, ನಾನು ಹಾಕಿದ ಉರುಲಿನಲ್ಲಿ ಸಿಕ್ಕಿಬೀಳುವನು: ಬಾಬಿಲೋನಿಯಾ ದೇಶದ ಬಾಬಿಲೋನ್ ನಗರಕ್ಕೆ ಅವನನ್ನು ಒಯ್ಯುವೆನು; ಅಲ್ಲೇ ಇದ್ದು ಸಾಯುವನು, ಆದರೂ ಆ ದೇಶವನ್ನು ನೋಡನು.


ಸರ್ವೇಶ್ವರ ಹೀಗೆನ್ನುತ್ತಾರೆ : “ಇಗೋ, ನಾನು ಬಹುಮಂದಿ ಬೆಸ್ತರನ್ನು ಕಳಿಸುವೆನು, ಅವರು ನನ್ನ ಜನರನ್ನು ಹಿಡಿಯುವರು, ಬಳಿಕ ಬಹುಜನ ಬೇಡರನ್ನು ಕಳಿಸುವೆನು. ಅವರು ಎಲ್ಲ ಬೆಟ್ಟಗುಡ್ಡಗಳಿಂದಲೂ ಬಂಡೆಗಳ ಸಂದುಗೊಂದುಗಳಿಂದಲೂ ನನ್ನ ಜನರನ್ನು ಹೊರಡಿಸಿ ಬೇಟೆಯಾಡುವರು.


ಅವರು ಹೋಗುವಾಗ ನನ್ನ ಬಲೆಯನ್ನು ಅವರ ಮೇಲೆ ಬೀಸುವೆನು. ಆಕಾಶದ ಪಕ್ಷಿಗಳಂತೆ ಅವರನ್ನು ಕೆಳಕ್ಕೆ ಎಳೆದುಬಿಡುವೆನು. ಅವರ ದುಷ್ಕೃತ್ಯಗಳಿಗನುಸಾರ ಅವರನ್ನು ದಂಡಿಸುವೆನು.


ನಾನು ಅವನಿಗೆ ನನ್ನ ಬಲೆಯೊಡ್ಡುವೆನು; ನಾನು ಹಾಕಿದ ಉರುಳಿನಲ್ಲಿ ಸಿಕ್ಕಿಬೀಳುವನು. ಅವನನ್ನು ಬಾಬಿಲೋನಿಗೆ ತಂದು, ಅಲ್ಲೇ ಅವನೊಂದಿಗೆ ವಾದಿಸಿ, ಅವನು ನನಗೆ ಮಾಡಿದ ಅಪರಾಧವನ್ನು ಅವನ ಮೇಲೆ ಹೊರಿಸುವೆನು.


“ಆಕಾಶದಿಂದ ಆತ ಸುರಿಸಿದ್ದಾನೆ ಅಗ್ನಿಯನ್ನೆ ಅದು ದಹಿಸುತ್ತಿದೆ ನನ್ನೊಳಗಿನ ಎಲುಬುಗಳನ್ನೆ ನನ್ನ ಕಾಲುಗಳಿಗೆ ಬಲೆಯೊಡ್ಡಿದ್ದಾನೆ ಅದು ನನ್ನನ್ನೆಳೆಯುತ್ತಿದೆ ನೆಲಕ್ಕೆ ಹಾಳುಬಿದ್ದ ನಾನು ಸದಾ ಬಳಲುತ್ತಿದ್ದೇನೆ.”


ತನ್ನ ನಿಶ್ಚಿತಕಾಲ ಯಾವಾಗ ಬರುವುದೆಂದು ಮಾನವನಿಗೆ ತಿಳಿಯದು. ಮೀನುಗಳು ಮೋಸಬಲೆಗೂ, ಹಕ್ಕಿಗಳು ಉರುಲುಬಲೆಗೂ, ಸಿಕ್ಕಿ ಬೀಳುವಂತೆ ನರಮಾನವರು ತಮ್ಮ ಮೇಲೆ ತಟ್ಟನೆ ಬೀಳುವ ಕಾಲಪಾಶಕ್ಕೆ ಸಿಕ್ಕಿಕೊಳ್ಳುತ್ತಾರೆ.


ನಾನೇನು ಕಡಲೋ? ಕಡಲಿನ ಘಟಸರ್ಪವೋ? ನೀವು ನನ್ನ ಮೇಲೆ ಕಾವಲಿಡುವುದು ಸರಿಯೋ?


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು