Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 31:7 - ಕನ್ನಡ ಸತ್ಯವೇದವು C.L. Bible (BSI)

7 ಬೇರಿಗೆ ಬೇಕಾದ ಜಲಾಸರೆ ಪಡೆದಿದ್ದ ಆ ಮರವು ಎತ್ತರದಿಂದ, ನೀಳವಾದ ರೆಂಬೆಗಳಿಂದ ಕಂಗೊಳಿಸಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

7 ಹೀಗೆ ಅದು ತನ್ನ ದೊಡ್ಡಸ್ತಿಕೆಯಲ್ಲಿ ತನ್ನ ನೀಳವಾದ ಕೊಂಬೆಗಳಿಂದ ಕಂಗೊಳಿಸುತ್ತಿತ್ತು. ಏಕೆಂದರೆ ಅದರ ಬೇರು ಸಾಕಷ್ಟು ನೀರಿನ ಆಸರೆ ಪಡೆದಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

7 ಅದರ ಬೇರಿಗೆ ಜಲಾಸರೆಯಿದ್ದದರಿಂದ ಆ ಮರವು ಎತ್ತರದಿಂದಲೂ ಕೊಂಬೆಗಳ ನೀಳದಿಂದಲೂ ಕಂಗೊಳಿಸುತ್ತಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

7 ಆ ಮರವು ಮನೋಹರವಾಗಿತ್ತು. ಅದು ದೊಡ್ಡದಾಗಿತ್ತು. ಅದರ ಕೊಂಬೆಗಳು ವಿಶಾಲವಾಗಿದ್ದವು. ಅದರ ಬೇರುಗಳಿಗೆ ಧಾರಾಳವಾದ ನೀರಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

7 ಹೀಗೆ ಅದರ ತನ್ನ ದೊಡ್ಡಸ್ತಿಕೆಯಲ್ಲಿ ತನ್ನ ನೀಳವಾದ ಕೊಂಬೆಗಳಿಂದ ಸುಂದರವಾಗಿತ್ತು. ಏಕೆಂದರೆ ಅದರ ಬೇರು ಸಾಕಷ್ಟು ನೀರಿನ ಆಸರೆ ಪಡೆದಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 31:7
3 ತಿಳಿವುಗಳ ಹೋಲಿಕೆ  

ಆ ರೆಂಬೆಗಳಲ್ಲಿ ಗೂಡುಮಾಡಿದ್ದವು ಆಕಾಶದ ಪಕ್ಷಿಗಳೆಲ್ಲವು ಅದರಡಿಯಲಿ ಮರಿಗಳನೀಯುತ್ತಿದ್ದವು ಭೂಜಂತುಗಳೆಲ್ಲವು ಅದರ ನೆರಳನಾಶ್ರಯಿಸುತ್ತಿದ್ದವು ಮಹಾಜನಾಂಗಗಳೆಲ್ಲವು.


ದೇವೋದ್ಯಾನದ ಇತರ ದೇವದಾರುಗಳಿಂದ ಅದನು ಮುಚ್ಚಲಾಗಲಿಲ್ಲ. ತುರಾಯಿ ಮರಗಳು ಅದರ ರೆಂಬೆಗಳಷ್ಟು ಉದ್ದವಾಗಿರಲಿಲ್ಲ. ಅತ್ತಿಮರಗಳು ಅದರ ಕೊಂಬೆಗಳಷ್ಟು ದಪ್ಪವಾಗಿರಲಿಲ್ಲ. ದೇವರವನದಲ್ಲಿನ ಯಾವ ಮರವೂ ಅದರಷ್ಟು ರಮಣೀಯವಿರಲಿಲ್ಲ.


ಅದರ ಎಲೆಗಳು ಚೆಲುವಾಗಿದ್ದವು. ಅದು ಹಣ್ಣುಗಳಿಂದ ತುಂಬಿತ್ತು. ಅದರಿಂದ ಎಲ್ಲಕ್ಕೂ ಆಹಾರ, ವನ್ಯಮೃಗಗಳಿಗೆ ಅದರ ನೆರಳಿನಲ್ಲಿ ಆಶ್ರಯ, ಆಕಾಶದ ಪಕ್ಷಿಗಳಿಗೆ ಅದರ ಕೊಂಬೆಗಳಲ್ಲಿ ನೆಲೆ, ಎಲ್ಲಾ ಪ್ರಾಣಿಗಳಿಗೂ ಅದರಿಂದ ಪೋಷಣೆ ದೊರಕುತ್ತಿತ್ತು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು