Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 30:5 - ಕನ್ನಡ ಸತ್ಯವೇದವು C.L. Bible (BSI)

5 “ಸುಡಾನರು, ಲೀಡಿಯರು, ಲೂದ್ಯರು, ಬಗೆಬಗೆಯ ಸಕಲವಿದೇಶೀಯರು, ಕೂಬ್ಯರು, ಮಿತ್ರರಾಜ್ಯದವರು ಇವರೆಲ್ಲ ಈಜಿಪ್ಟಿನವರೊಂದಿಗೆ ಖಡ್ಗದಿಂದ ಹತರಾಗುವರು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

5 “‘ಕೂಷ್ಯರು, ಪೂಟ್ಯರು, ಲೂದ್ಯರು, ಬಗೆಬಗೆಯ ಸಕಲ ವಿದೇಶೀಯರು, ಕೂಬ್ಯರು, ಒಡಂಬಡಿಕೆ ಮಾಡಿಕೊಂಡ ಮಿತ್ರ ರಾಜ್ಯದವರೂ ಐಗುಪ್ತ್ಯರೊಂದಿಗೆ ಖಡ್ಗದಿಂದ ಹತರಾಗುವರು.’”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

5 ಕೂಷ್ಯರು, ಪೂಟ್ಯರು, ಲೂದ್ಯರು, ಬಗೆಬಗೆಯ ಸಕಲ ವಿದೇಶೀಯರು, ಕೂಬ್ಯರು, ವಿುತ್ರರಾಜ್ಯದವರು, ಇವರೆಲ್ಲಾ ಐಗುಪ್ತ್ಯರೊಂದಿಗೆ ಖಡ್ಗದಿಂದ ಹತರಾಗುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

5 “‘ಅನೇಕ ದೇಶಗಳವರು ಈಜಿಪ್ಟಿನವರೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು. ಆದರೆ ಇಥಿಯೋಪ್ಯ, ಪೂಟ್, ಲೂದ್, ಅರೇಬಿಯ, ಲಿಬ್ಯ ಮತ್ತು ಇಸ್ರೇಲಿನ ಜನರು ಇವರೆಲ್ಲರೂ ನಾಶವಾಗುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

5 ಕೂಷ್ಯರು, ಪೂಟ್ಯರು, ಲೂದ್ಯರು, ಎಲ್ಲಾ ಅರಬ್ಬಿಯರೂ ಕೂಬ್ಯರೂ ಒಡಂಬಡಿಕೆ ಮಾಡಿಕೊಂಡ ಮಿತ್ರ ರಾಜ್ಯದವರೂ ಅವರ ಸಂಗಡ ಖಡ್ಗದಿಂದ ಹತರಾಗುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 30:5
13 ತಿಳಿವುಗಳ ಹೋಲಿಕೆ  

ಊಚ್ ನಾಡಿನ ಎಲ್ಲ ಅರಸರು, ಫಿಲಿಷ್ಟಿಯ ದೇಶದ ಎಲ್ಲ ಅರಸರು, ಅಷ್ಕೆಲೋನ್, ಗಾಜಾ, ಎಕ್ರೋನ್, ಅಷ್ಟೋದಿನ ಶೇಷ, ಈ ಪ್ರಾಂತ್ಯಗಳ ಎಲ್ಲ ಅರಸರು;


“ಪಾರಸಿಯರೂ ಲೂದ್ಯರೂ ಪೂಟ್ಯರೂ ನಿನ್ನ ಸೈನ್ಯದ ಭಟರಾಗಿದ್ದರು. ಖೇಡ್ಯ ಶಿರಸ್ತ್ರಾಣಗಳನ್ನು ನಿನ್ನಲ್ಲಿ ನೇತುಹಾಕಿ ನಿನ್ನನ್ನು ಭೂಷಿಸುತ್ತಿದ್ದರು.


ಅರಬೀಯದ ಎಲ್ಲ ಅರಸರು, ಅರಣ್ಯವಾಸಿಗಳಾದ ಮಿಶ್ರಜಾತಿಯ ಎಲ್ಲ ನಾಯಕರು;


ಹೊಡೆಯಲಿ ಅಶ್ವಗಳನ್ನೂ ರಥಗಳನ್ನೂ ಬಾಬಿಲೋನಿನಲ್ಲಿರುವ ನಾನಾ ವಿದೇಶಿಯರನ್ನೂ ಬೆದರಿಸಲಿ ಅವರ ಹೆಂಗಸರನ್ನು, ಕಬಳಿಸಲಿ, ಸೂರೆಮಾಡಲಿ ಆ ಖಡ್ಗ ಅವರ ಸಂಪತ್ತನ್ನು.


ಅಶ್ವಗಳೇ, ಕುಣಿದಾಡಿ; ರಥಗಳೇ, ರಭಸವಾಗಿ ಓಡಿ! ಹೊರಡಲಿ ಶೂರರು, ಖೇಡ್ಯ ಸನ್ನದ್ಧರಾದ ಸುಡಾನರು, ಲಿಬಿಯಾದವರು ಮುನ್ನುಗ್ಗಲಿ ಧನುರ್ಧಾರಿಗಳಾದ ಲಿಡಿಯದವರು.


ಇಗೋ, ನಿಮಗೆ ಒಳಿತನ್ನು ಅಲ್ಲ, ಕೇಡನ್ನು ಬರಮಾಡಬೇಕೆಂದು ನಿಮ್ಮ ವಿಷಯದಲ್ಲಿ ಎಚ್ಚರಗೊಂಡಿದ್ದೇನೆ. ಈಜಿಪ್ಟಿನ ಎಲ್ಲ ಯೆಹೂದ್ಯರು ಖಡ್ಗ-ಕ್ಷಾಮಗಳಿಂದ ನಾಶಹೊಂದುತ್ತಾ ನಿರ್ನಾಮವಾಗುವರು.


ಅದೇ ಪ್ರಕಾರ ಅಸ್ಸೀರಿಯದ ಅರಸನು ಈಜಿಪ್ಟಿನ ಸೆರೆಯಾಳುಗಳನ್ನೂ ಸುಡಾನಿನ ಕೈದಿಗಳನ್ನೂ - ದೊಡ್ಡವರು ಚಿಕ್ಕವರು ಎನ್ನದೆ ಎಲ್ಲರನ್ನೂ ಬಟ್ಟೆಯಿಲ್ಲದೆ ಬೆತ್ತಲೆಯಾಗಿಸಿ, ಬರಿಗಾಲಿನಲ್ಲೇ ಸೆರೆಮನೆಗೆ ನಡೆಯುವಂತೆ ಮಾಡುವನು. ಹೀಗೆ ಈಜಿಪ್ಟಿನ ನಿವಾಸಿಗಳನ್ನು ಮಾನಭಂಗಕ್ಕೆ ಗುರಿಪಡಿಸುವನು.


ಎಥಿಯೋಪಿಯದ ನದಿಗಳಾಚೆ ಇರುವ ಸೀಮೆಗೆ ಧಿಕ್ಕಾರ ! ರೆಕ್ಕೆಗಳನ್ನು ಪಟಪಟನೆ ಬಡಿಯುವ ಮಿಡತೆಗಳಿಂದ ಕೂಡಿರುವ ನಾಡಿಗೆ ಧಿಕ್ಕಾರ !


ಮತ್ತು ಎಲ್ಲ ಖೇಡ್ಯಶಿರಸ್ತ್ರಾಣಧಾರಿಗಳಾದ ಪರ್ಷಿಯರು, ಕೂಸ್ಯರು, ಪೂಟ್ಯರು ಇವರನ್ನು ಹಾಗು


ಬೆಳ್ಳಿಬಂಗಾರಗಳ ನಿಧಿನಿಕ್ಷೇಪಗಳನ್ನು ಹಾಗು ಈಜಿಪ್ಟಿನ ಒಳ್ಳೊಳ್ಳೆಯ ವಸ್ತುಗಳೆಲ್ಲವನ್ನು ವಶಮಾಡಿಕೊಳ್ಳುವನು. ಲಿಬ್ಯ ಮತ್ತು ಸುಡಾನಿನವರು ಅವನನ್ನು ಹಿಂಬಾಲಿಸುವರು.


ಈಜಿಪ್ಟಿನ ಅರಸ ಶೀಶಕನು, ಸಾವಿರದ ಇನ್ನೂರು ರಥಗಳನ್ನೂ ಅರವತ್ತು ಸಾವಿರ ಮಂದಿ ರಾಹುತರನ್ನೂ ಈಜಿಪ್ಟಿನ, ಲಿಬ್ಯದ, ಸುಕ್ಕೀಯದ ಹಾಗೂ ಕೂಷ್ಯದ ಅಸಂಖ್ಯ ಸೈನಿಕರನ್ನೂ ಕೂಡಿಸಿಕೊಂಡು ಜೆರುಸಲೇಮಿಗೆ ಹೊರಟುಬಂದನು.


ಸುಡಾನಿನ ಜನರೇ, ನೀವೂ ಸಹ ಕತ್ತಿಗೆ ತುತ್ತಾಗುವಿರಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು