Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 29:7 - ಕನ್ನಡ ಸತ್ಯವೇದವು C.L. Bible (BSI)

7 ಈಜಿಪ್ಟೇ, ಇಸ್ರಯೇಲರು ನಿನ್ನ ಮೇಲೆ ಕೈಯಿಡಲು, ನೀನು ಅವರನ್ನು ಮುರಿದು ಅವರೆಲ್ಲರ ಹೆಗಲನ್ನು ಚುಚ್ಚಿದೆ; ನಿನ್ನ ಮೇಲೆ ಊರಿಕೊಳ್ಳಲು, ನೀನು ಒಡೆದು ಅವರೆಲ್ಲರ ನಡುವಿಗೆ ನಡುಕವನ್ನು ಉಂಟುಮಾಡಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

7 ಇಸ್ರಾಯೇಲರು ನಿನ್ನ ಮೇಲೆ ಕೈಯಿಡಲು, ನೀನು ಮುರಿದು ಅವರೆಲ್ಲರ ಹೆಗಲನ್ನು ಚುಚ್ಚಿದೆ; ಅವರು ನಿನ್ನ ಮೇಲೆ ಆತುಕೊಳ್ಳುವಾಗ, ನೀನು ಅವರನ್ನು ಒಡೆದು, ಅವರ ಕಾಲುಗಳಿಗೆ ಮತ್ತು ನಡುವಿಗೆ ನಡುಕವನ್ನು ಉಂಟುಮಾಡಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

7 [ಐಗುಪ್ತವೇ,] ಇಸ್ರಾಯೇಲ್ಯರು ನಿನ್ನ ಮೇಲೆ ಕೈಯಿಡಲು ನೀನು ಮುರಿದು ಅವರೆಲ್ಲರ ಹೆಗಲನ್ನು ಚುಚ್ಚಿದಿ; ಊರಿಕೊಳ್ಳಲು ನೀನು ಒಡೆದು ಅವರೆಲ್ಲರ ನಡುವಿಗೆ ನಡುಕವನ್ನು ಉಂಟುಮಾಡಿದಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

7 ಇಸ್ರೇಲ್ ಜನರು ಈಜಿಪ್ಟಿನ ಮೇಲೆ ಆತುಕೊಂಡರು. ಆದರೆ ಈಜಿಪ್ಟ್ ಅವರ ಕೈಗಳನ್ನೂ ಭುಜಗಳನ್ನೂ ಗಾಯಗೊಳಿಸಿತು. ನಿನ್ನ ಸಹಾಯಕ್ಕಾಗಿ ಅವರು ನಿನ್ನನ್ನು ಆಶ್ರಯಿಸಿದರು. ಆದರೆ ನೀನು ಅವರ ಬೆನ್ನೆಲುಬನ್ನು ತಿರುಗಿಸಿ ಮುರಿದುಬಿಟ್ಟೆ.’”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

7 ಇಸ್ರಾಯೇಲರು ನಿನ್ನ ಮೇಲೆ ಕೈಯಿಡಲು ನೀನು ಮುರಿದು ಅವರ ಹೆಗಲನ್ನು ಚುಚ್ಚಿದೆ; ಅವರು ನಿನ್ನನ್ನು ಆದರಿಸಿಕೊಂಡಾಗ ನೀನು ಮುರಿದು ಅದರ ನಡುವುಗಳನ್ನೆಲ್ಲಾ ನಿಲ್ಲಿಸಿಬಿಟ್ಟೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 29:7
14 ತಿಳಿವುಗಳ ಹೋಲಿಕೆ  

ಮುರಿದ ಜೊಂಡಿಗೆ ಸಮಾನವಾದ ಈಜಿಪ್ಟ್ ಎಂಬ ಊರುಗೋಲಿನ ಮೇಲೆ ನಿನಗೆ ಭರವಸೆಯಿದೆಯಷ್ಟೆ. ಆದರೆ ಅದು ಊರಿಕೊಳ್ಳುವವನ ಕೈಯನ್ನು ಚುಚ್ಚಿ ತಿವಿಯುವ ಕೋಲು. ಈಜಿಪ್ಟಿನ ರಾಜ ಫರೋಹನಲ್ಲಿ ಭರವಸೆಯಿಟ್ಟವರಿಗೆ ಆಗುವ ಗತಿ ಇದೇ.


ಕಷ್ಟಕಾಲದಲ್ಲಿ ಕಪಟಿಯನ್ನು ನಂಬುವುದು, ಮುರುಕು ಹಲ್ಲನ್ನು ಕುಂಟಕಾಲನ್ನು ನಂಬಿದಂತಾಗುವುದು.


ಮುರಿದ ಜೊಂಡಿಗೆ ಸಮಾನವಾದ ಈಜಿಪ್ಟಿನ ಮೇಲೆ ನಿನಗೆ ಭರವಸೆಯಿದೆಯಷ್ಟೆ. ಅಂಥ ಜೊಂಡನ್ನು ಊರಿಕೊಳ್ಳುವವನ ಕೈಯನ್ನೇ ಚುಚ್ಚಿ ತಿವಿಯುವ ಕೋಲು ಅದು. ಈಜಿಪ್ಟಿನ ರಾಜ ಫರೋಹನಲ್ಲಿ ಭರವಸೆಯಿಟ್ಟವರಿಗೆ ಆಗುವ ಗತಿ ಇದೇ.’


ಸುಡಾನನ್ನು ನೆಚ್ಚಿಕೊಂಡಿದ್ದವರು ಮತ್ತು ಈಜಿಪ್ಟನ್ನು ಕುರಿತು ಕೊಚ್ಚಿಕೊಳ್ಳುತ್ತಿದ್ದವರು ನಾಚಿಕೆಪಟ್ಟು ನಿರಾಶೆಗೊಳ್ಳುವರು.


ಮಬ್ಬಾಯಿತು ಕಣ್ಣು ವ್ಯರ್ಥವಾಗಿ ನೆರವನ್ನು ನಿರೀಕ್ಷಿಸುತ ರಕ್ಷಿಸಲಾಗದ ರಾಷ್ಟ್ರಕ್ಕಾಗಿ ಕೋವರದಲ್ಲಿ ಕಾದು ನೋಡುತ.


ಈಜಿಪ್ಟ್ ಇನ್ನು ಇಸ್ರಯೇಲ್ ವಂಶದವರ ಭರವಸೆಯಾಗದು; ಅದರ ಕಡೆಗೆ ಕಣ್ಣೆತ್ತುವಾಗ ದೇವದ್ರೋಹದ ನೆನಪು ಇಸ್ರಯೇಲರಲ್ಲಿ ಹುಟ್ಟುವುದು; ನಾನೇ ಸರ್ವೇಶ್ವರ ಎಂದು ಅವರಿಗೆ ಮನದಟ್ಟಾಗುವುದು.”


ಆದರೆ ಫರೋಹನ ಆಶ್ರಯದಿಂದ ಅವರಿಗೆ ನಾಚಿಕೆಯಾಗುವುದು. ಈಜಿಪ್ಟಿನವರನ್ನು ಮರೆಹೋಗುವುದರಿಂದ ಅವರಿಗೆ ಅವಮಾನ ಉಂಟಾಗುವುದು.


ಸುಡಾನ್ ಮತ್ತು ಈಜಿಪ್ಟ್ ಅದಕ್ಕೆ ಬೆಂಬಲವಾಗಿದ್ದವು. ಪೂಟ್ ಮತ್ತು ಲಿಬ್ನ ಅದಕ್ಕೆ ಮಿತ್ರನಾಡುಗಳಾಗಿದ್ದವು


ಆದರೂ ತೇಬೆಸ್ ನಗರವು ಗಡೀಪಾರಾಗಿ ಸೆರೆಹೋಯಿತು. ಅದರ ಮಕ್ಕಳನ್ನು ಬೀದಿಬೀದಿಯ ಮೂಲೆಗಳಲ್ಲಿ ಬಂಡೆಗಳಿಗೆ ಅಪ್ಪಳಿಸಲಾಯಿತು. ಅದರ ಪ್ರಮುಖರನ್ನು ಬಂಧಿಸಿ ಕೊಂಡೊಯ್ದು, ಚೀಟುಹಾಕಿ ಹಂಚಿಕೊಳ್ಳಲಾಯಿತು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು