Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 29:16 - ಕನ್ನಡ ಸತ್ಯವೇದವು C.L. Bible (BSI)

16 ಈಜಿಪ್ಟ್ ಇನ್ನು ಇಸ್ರಯೇಲ್ ವಂಶದವರ ಭರವಸೆಯಾಗದು; ಅದರ ಕಡೆಗೆ ಕಣ್ಣೆತ್ತುವಾಗ ದೇವದ್ರೋಹದ ನೆನಪು ಇಸ್ರಯೇಲರಲ್ಲಿ ಹುಟ್ಟುವುದು; ನಾನೇ ಸರ್ವೇಶ್ವರ ಎಂದು ಅವರಿಗೆ ಮನದಟ್ಟಾಗುವುದು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

16 ಐಗುಪ್ತವು ಇನ್ನು ಇಸ್ರಾಯೇಲ್ ವಂಶದವರ ಭರವಸೆಯಾಗದೆ, ಅದರ ಕಡೆಗೆ ಕಣ್ಣೆತ್ತುವ ದೇವದ್ರೋಹದ ನೆನಪು ಇಸ್ರಾಯೇಲರಲ್ಲಿ ಐಗುಪ್ತದಿಂದ ಇನ್ನು ಹುಟ್ಟುವುದಿಲ್ಲ. ನಾನೇ ಯೆಹೋವನು’” ಎಂದು ಅವರಿಗೆ ತಿಳಿಯುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

16 ಐಗುಪ್ತವು ಇನ್ನು ಇಸ್ರಾಯೇಲ್ ವಂಶದವರ ಭರವಸವಾಗದು; ಮತ್ತು ಅದರ ಕಡೆಗೆ ಕಣ್ಣೆತ್ತುವ ದೇವದ್ರೋಹದ ನೆನಪು ಇಸ್ರಾಯೇಲ್ಯರಲ್ಲಿ ಐಗುಪ್ತದಿಂದ ಇನ್ನು ಹುಟ್ಟದು. ನಾನೇ ಯೆಹೋವನು ಎಂದು ಅವರಿಗೆ ಮನದಟ್ಟಾಗುವದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

16 ಇಸ್ರೇಲರು ಅವರ ಮೇಲೆ ಇನ್ನು ಎಂದಿಗೂ ಭರವಸವಿಡುವುದಿಲ್ಲ. ಇಸ್ರೇಲರು ಸಹಾಯಕ್ಕಾಗಿ ದೇವರ ಬಳಿಗೆ ಹೋಗದೆ ಈಜಿಪ್ಟಿನವರ ಮೇಲೆ ಭರವಸವಿಟ್ಟಿದ್ದ ಪಾಪವನ್ನು ಅರಿತುಕೊಳ್ಳುವರು. ಆಗ ಅವರು ನಾನೇ ಒಡೆಯನಾದ ಯೆಹೋವನೆಂದು ತಿಳಿದುಕೊಳ್ಳುವರು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

16 ಇನ್ನು ಅದು ಇಸ್ರಾಯೇಲ್ ವಂಶದವರ ಭರವಸೆಯಾಗದೆ, ಇವರು ಅವರ ಕಡೆಗೆ ನೋಡಿದಾಗ ಪಾಪವನ್ನು ಜ್ಞಾಪಕಕ್ಕೆ ತರುವರು. ಆಗ ನಾನೇ ಸಾರ್ವಭೌಮ ಯೆಹೋವ ದೇವರೆಂದು ಅವರಿಗೆ ತಿಳಿಯುವುದು.’ ”

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 29:16
30 ತಿಳಿವುಗಳ ಹೋಲಿಕೆ  

ಎಫ್ರಯಿಮಿನವರು ಬಲಿಪಶುಗಳನ್ನು ನನಗೆ ನೈವೇದ್ಯವಾಗಿ ವಧಿಸುತ್ತಾರೆ, ವಧಿಸಿದ್ದನ್ನು ಭುಜಿಸುತ್ತಾರೆ. ಆದರೆ ಆ ಬಲಿಗಳನ್ನು ನಾನು ಮೆಚ್ಚುವುದಿಲ್ಲ. ಅವರ ಅಧರ್ಮವನ್ನು ನೆನಪಿಗೆ ತಂದುಕೊಂಡು ಅವರ ಪಾಪಕ್ಕೆ ತಕ್ಕ ದಂಡನೆಯನ್ನು ವಿಧಿಸುವೆನು. ಆ ಜನರು ಈಜಿಪ್ಟಿಗೆ ಹಿಂದಿರುಗಬೇಕಾಗುವುದು.


ಸುಡಾನನ್ನು ನೆಚ್ಚಿಕೊಂಡಿದ್ದವರು ಮತ್ತು ಈಜಿಪ್ಟನ್ನು ಕುರಿತು ಕೊಚ್ಚಿಕೊಳ್ಳುತ್ತಿದ್ದವರು ನಾಚಿಕೆಪಟ್ಟು ನಿರಾಶೆಗೊಳ್ಳುವರು.


ಆದರೆ ಪುರನಿವಾಸಿಗಳು ತಾವು ಆ ಅರಸನಿಂದ ಮಾಡಿಸಿಕೊಂಡ ಪ್ರಮಾಣಗಳಲ್ಲಿ ಭರವಸೆಯಿಟ್ಟು, ಈ ಶಕುನವು ಸುಳ್ಳೆಂದು ಭಾವಿಸುವರು; ಆದರೆ ಅವರು ತನ್ನ ಕೈಗೆ ಸಿಕ್ಕಿಬೀಳಲೆಂದು ಅವರ ಅಧರ್ಮವನ್ನು ಅವನು ಬೆಳಕಿಗೆ ತರುವನು.


ಮಬ್ಬಾಯಿತು ಕಣ್ಣು ವ್ಯರ್ಥವಾಗಿ ನೆರವನ್ನು ನಿರೀಕ್ಷಿಸುತ ರಕ್ಷಿಸಲಾಗದ ರಾಷ್ಟ್ರಕ್ಕಾಗಿ ಕೋವರದಲ್ಲಿ ಕಾದು ನೋಡುತ.


ಈ ಜನರನ್ನು ಕುರಿತು ಸರ್ವೇಶ್ವರ ನನಗೆ ಹೇಳಿದ ಮಾತುಗಳು : “ಇವರು ಅಲೆದಾಡಲು ಇಷ್ಟಪಡುವ ಜನರು. ತಮ್ಮ ಕಾಲಿನ ಮೇಲೆ ಹತೋಟಿಯಿಲ್ಲದವರು. ಆದಕಾರಣ ಸರ್ವೇಶ್ವರನಾದ ನಾನು ಇವರನ್ನು ಕರುಣೆಯಿಂದ ನೋಡುವುದಿಲ್ಲ. ಇದೀಗಲೆ ಇವರ ಅಪರಾಧಗಳನ್ನು ನೆನಪಿಗೆ ತಂದುಕೊಂಡು ಇವರ ಪಾಪಗಳಿಗೆ ದಂಡನೆಯನ್ನು ವಿಧಿಸುವೆನು.”


ಸ್ವಾಮಿ, ನಮ್ಮ ಮೇಲೆ ಅತಿಕೋಪಗೊಳ್ಳದಿರಿ. ಸದಾ ನಮ್ಮ ಅಕ್ರಮಗಳನ್ನು ನೆನೆಸದಿರಿ, ಇಗೋ ನೋಡಿ, ಬೇಡುತ್ತಿದ್ದೇವೆ, ನಾವೆಲ್ಲರೂ ನಿಮ್ಮ ಜನರು.


ಯೌವನದೆನ್ನ ಪಾಪಪ್ರವೃತ್ತಿಗಳ ಮನದಲ್ಲಿಟ್ಟುಕೊಳ್ಳಬೇಡ I ನಿನ್ನೊಲುಮೆ ನಲ್ಮೆಗಳ ನಿಮಿತ್ತ ಪ್ರಭು, ನನ್ನ ನೆನೆಯದಿರಬೇಡ II


ಮಹಾನಗರವು ಮೂರು ಭಾಗವಾಗಿ ಸೀಳಿಹೋಯಿತು. ಎಲ್ಲಾ ದೇಶಗಳ ನಗರಗಳು ನಾಶವಾದವು. ಬಾಬಿಲೋನ್ ಎಂಬ ಮಹಾನಗರವನ್ನು ದೇವರು ಮರೆಯಲಿಲ್ಲ; ತಮ್ಮ ರೋಷವೆಂಬ ಮದ್ಯಪಾತ್ರೆಯಿಂದ ಅದಕ್ಕೆ ಕುಡಿಯಲು ಕೊಟ್ಟರು.


“ಅವರ ಪಾಪಗಳನ್ನೂ ತಪ್ಪುನೆಪ್ಪುಗಳನ್ನೂ ನೆನಪಿಗೆ ತಂದುಕೊಳ್ಳೆನು,” ಎಂದಿದ್ದಾರೆ.


ಬದಲಿಗೆ, ಪ್ರತಿವರ್ಷವೂ ಸಮರ್ಪಿಸಲಾಗುವ ಬಲಿಯರ್ಪಣೆಗಳು ಪಾಪನಿವಾರಣೆ ಆಗದ್ದನ್ನು ಜ್ಞಾಪಕಕ್ಕೆ ತರುತ್ತವೆ.


ಅಸ್ಸೀರಿಯದಿಂದ ನಮಗೆ ರಕ್ಷಣೆ ದೊರಕದು. ನಾವು ಕಾಳಗದ ಕುದುರೆಗಳ ಮೇಲೆ ಇನ್ನೆಂದೂ ಸವಾರಿಮಾಡೆವು. ನಮ್ಮ ಕೈಗಳು ನಿರ್ಮಿಸಿರುವ ವಿಗ್ರಹಗಳನ್ನು ವೀಕ್ಷಿಸಿ, ‘ನೀವೇ ನಮ್ಮ ದೇವರು’ ಎಂದು ಜಪಿಸೆವು. ಓ ದೇವಾ, ದಿಕ್ಕಿಲ್ಲದವರಿಗೆ ಕರುಣೆ ತೋರಿಸುವವನು ನೀನೇ,” ಎಂದು ಹೇಳು.


“ಎಫ್ರಯಿಮ್ ಕೇವಲ ಗಾಳಿಗೆ ಕುರಿಗಾಹಿ; ಅದು ದಿನವಿಡೀ ಗುದ್ದಾಡುತ್ತಿರುವುದು ಮೂಡಣಗಾಳಿಯನ್ನೇ. ಅದು ಮೋಸವನ್ನೂ ಹಿಂಸೆಯನ್ನೂ ನಿರಂತರವಾಗಿ ಹೆಚ್ಚಿಸುತ್ತಿದೆ. ಅಸ್ಸೀರಿಯದೊಂದಿಗೆ ಒಪ್ಪಂದಮಾಡಿಕೊಳ್ಳುತ್ತಿದೆ. ಈಜಿಪ್ಟಿಗೆ ಎಣ್ಣೆಯನ್ನು ಕಾಣಿಕೆಯಾಗಿ ಕಳುಹಿಸುತ್ತಿದೆ.”


ಪೂರ್ವದಲ್ಲಿ ಗಿಬ್ಯದವರು ಭ್ರಷ್ಟರಾದಂತೆ ಎಫ್ರಯಿಮಿನವರು ಅತಿ ಭ್ರಷ್ಟರಾಗಿದ್ದಾರೆ. ದೇವರು ಅವರ ಅಪರಾಧವನ್ನು ನೆನಪಿಗೆ ತಂದುಕೊಳ್ಳುವರು. ಅವರ ಪಾಪಕ್ಕೆ ತಕ್ಕ ದಂಡನೆಯನ್ನು ವಿಧಿಸುವರು.


ಎಫ್ರಯಿಮ್ ಬುದ್ಧಿವಿವೇಕವಿಲ್ಲದ ಪಾರಿವಾಳದಂತೆ; ಅದರ ಜನರು ಈಜಿಪ್ಟನ್ನು ಸಹಾಯಕ್ಕೆ ಕರೆಯುತ್ತಾರೆ. ಅಸ್ಸೀರಿಯದ ಆಶ್ರಯಕ್ಕೆ ಓಡುತ್ತಾರೆ.


“ಎಫ್ರಯಿಮ್ ತನ್ನ ರೋಗವನ್ನು ಅರಿತುಕೊಂಡಿತು; ಜುದೇಯವು ತನ್ನ ಹುಣ್ಣನ್ನು ಕಂಡುಕೊಂಡಿತು. ಆಗ ಎಫ್ರಯಿಮ್ ಅಸ್ಸೀರಿಯಾದ ಕಡೆಗೆ ತಿರುಗಿಕೊಂಡು ಜಗಳಗಂಟಿಯಾದ ರಾಜನ ಬಳಿಗೆ ದೂತರನ್ನು ಕಳುಹಿಸಿತು. ಆದರೆ ಅವನು ನಿಮ್ಮ ರೋಗವನ್ನು ವಾಸಿಮಾಡಲಾರನು, ನಿಮ್ಮ ಹುಣ್ಣನ್ನು ಗುಣಪಡಿಸಲಾರನು.


“ಆ ದಿನದಲ್ಲಿ ನಾನು ಇಸ್ರಯೇಲ್ ವಂಶಕ್ಕೆ ಕೋಡುಮೂಡಿಸಿ ಆ ವಂಶದವರ ಮಧ್ಯೆ ನಿನ್ನ ಬಾಯನ್ನು ಬಿಚ್ಚುವೆನು; ನಾನೇ ಸರ್ವೇಶ್ವರ ಎಂದು ಅವರಿಗೆ ಖಚಿತವಾಗುವುದು.


ಫರೋಹನು, - ‘ಈ ನದಿ ನನ್ನದೇ, ನಾನೇ ಮಾಡಿಕೊಂಡೆ’ ಎಂದುಕೊಂಡನು. ಈ ಕಾರಣ ಈಜಿಪ್ಟ್ ದೇಶ ಹಾಳುಪಾಳಾಗುವುದು; ಆಗ ನಾನೇ ಸರ್ವೇಶ್ವರ ಎಂದು ಅವರಿಗೆ ಗೊತ್ತಾಗುವುದು.


ಅಲ್ಲಿ ನಿರ್ಭಯವಾಗಿರುವರು; ಮನೆಗಳನ್ನು ಕಟ್ಟಿಕೊಂಡು, ತೋಟಗಳನ್ನು ಮಾಡಿಕೊಂಡು, ಸುಖವಾಗಿ ವಾಸಿಸುವರು; ಅವರನ್ನು ಹೀನೈಸುವ ನೆರೆಹೊರೆಯವರನ್ನು ನಾನು ದಂಡಿಸಿದ ಮೇಲೆ ನಾನೇ ತಮ್ಮ ದೇವರಾದ ಸರ್ವೇಶ್ವರ ಎಂದು ಅವರಿಗೆ ನಿಶ್ಚಯವಾಗುವುದು.”


ಹೊರಿಸಬೇಡ ಪೂರ್ವಿಕರ ತಪ್ಪುಗಳನು ನಮ್ಮ ಮೇಲೆ I ಉರಿಸಂಕಟದಲ್ಲಿರುವೆವು, ತೋರೆಮಗೆ ಕರುಣೆಯನೀಗಲೆ II


ಆಗ ಆಕೆ ಎಲೀಯನಿಗೆ, “ದೈವಪುರುಷನೇ, ನನ್ನ ವಿರುದ್ಧ ನಿನಗೇನಿದೆ? ನೀನು ನನ್ನ ಪಾಪವನ್ನು ನೆನಪಿಗೆ ತಂದು ನನ್ನ ಮಗನನ್ನು ಸಾಯಿಸುವುದಕ್ಕೆ ಬಂದಿಯೋ?” ಎಂದಳು.


ಈ ಎರಡು ಸಂದರ್ಭಗಳಲ್ಲೂ ಆ ಗಂಡನು ತನ್ನ ಹೆಂಡತಿಯನ್ನು ಯಾಜಕನ ಬಳಿಗೆ ಕರೆದುಕೊಂಡು ಬರಬೇಕು. ಅವಳ ಸಂಗತಿಯನ್ನು ವಿಚಾರಿಸುವುದಕ್ಕಾಗಿ, ಅವನು ಯಾಜಕನಿಗೆ ಮೂರು ಸೇರು ಜವೆಗೋದಿ ಹಿಟ್ಟನ್ನು ಕಾಣಿಕೆಯಾಗಿ ತಂದುಕೊಡಬೇಕು. ಅದು ವ್ಯಭಿಚಾರ ಸಂಶಯವನ್ನು ಸೂಚಿಸುವುದಕ್ಕೂ ಪಾಪವನ್ನು ಹೊರಪಡಿಸುವುದಕ್ಕೂ, ಸರ್ವೇಶ್ವರನಿಗೆ ನೈವೇದ್ಯವಾದ ಕಾಣಿಕೆ. ಆದ್ದರಿಂದ ಆ ಹಿಟ್ಟಿನ ಮೇಲೆ ಎಣ್ಣೆಯನ್ನು ಹುಯ್ಯಬಾರದು, ಸಾಂಬ್ರಾಣಿಯನ್ನು ಹಾಕಬಾರದು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು