Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 28:21 - ಕನ್ನಡ ಸತ್ಯವೇದವು C.L. Bible (BSI)

21 “ನರಪುತ್ರನೇ, ನೀನು ಸಿದೋನಿಗೆ ಅಭಿಮುಖನಾಗಿ ಅದರ ಬಗ್ಗೆ ಹೀಗೆ ನುಡಿ -

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

21 “ನರಪುತ್ರನೇ, ನೀನು ಚೀದೋನಿಗೆ ಅಭಿಮುಖನಾಗಿ ಅದಕ್ಕೆ ವಿರುದ್ಧವಾಗಿ ಪ್ರವಾದಿಸು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

21 ನರಪುತ್ರನೇ, ನೀನು ಚೀದೋನಿಗೆ ಅಭಿಮುಖನಾಗಿ ಅದರ ವಿಷಯದಲ್ಲಿ ಹೀಗೆ ನುಡಿ -

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

21 “ನರಪುತ್ರನೇ, ಚೀದೋನಿನ ಕಡೆಗೆ ನೋಡಿ ನನ್ನ ಪರವಾಗಿ ನೀನೇ ಅದರ ವಿರುದ್ಧವಾಗಿ ಮಾತನಾಡು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

21 “ಮನುಷ್ಯಪುತ್ರನೇ, ನೀನು ಸೀದೋನಿಗೆ ಅಭಿಮುಖವಾಗಿ ಅದಕ್ಕೆ ವಿರುದ್ಧವಾಗಿ ಪ್ರವಾದಿಸು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 28:21
19 ತಿಳಿವುಗಳ ಹೋಲಿಕೆ  

“ನರಪುತ್ರನೇ, ಇಸ್ರಯೇಲಿನ ಬೆಟ್ಟಗಳಿಗೆ ಅಭಿಮುಖನಾಗಿ ನಿಂತು ಅವುಗಳನ್ನು ಕುರಿತು ಈ ದೈವೋಕ್ತಿಯನ್ನು ನುಡಿ,


ಕಾನಾನ್ ವಂಶದಲ್ಲಿ ಮೊದಲು ಹುಟ್ಟಿದವನು ಸೀದೋನ್; ಆಮೇಲೆ ಹೇತ್ ಹುಟ್ಟಿದನು.


ನಿನಗೆ ಹುಟ್ಟುಹಾಕುವರು ಸಿದೋನಿನವರು, ಅರ್ವಾದಿನವರು. ಟೈರ್ ನಗರಿಯೇ, ನಿನ್ನಲ್ಲಿನ ವಿವೇಕಿಗಳೇ ನಿನ್ನ ನಾವಿಕರು.


“ನರಪುತ್ರನೇ, ನೀನು ಅಮ್ಮೋನಿಗೆ ಅಭಿಮುಖವಾಗಿ ಅದನ್ನು ಕುರಿತ ದೈವಸಂಕಲ್ಪವನ್ನು ಪ್ರಕಟಿಸುತ್ತಾ ಅದಕ್ಕೆ ಹೀಗೆ ನುಡಿ:


ಟೈರ್ ಮತ್ತು ಸಿದೋನ್ ಇವುಗಳ ಅರಸರೆಲ್ಲರು;


ಅಂತೆಯೇ ದಮಸ್ಕದ ಪಕ್ಕದಲ್ಲಿರುವ ಹಮಾತಿನ ಮೇಲೆ, ತಾವೇ ಜಾಣರೆಂದು ಕೊಚ್ಚಿಕೊಳ್ಳುತ್ತಿರುವ ಟೈರ್ ಮತ್ತು ಸಿದೋನ್ ಪಟ್ಟಣಗಳ ಮೇಲೆ ಅವರು ಕಣ್ಣಿಟ್ಟಿದ್ದಾರೆ.


“ಉತ್ತರದೇಶದ ಸಕಲ ರಾಜರುಗಳೂ ಸಮಸ್ತ ಸಿದೋನ್ಯರೂ ಸಂಹೃತರೊಂದಿಗೆ ಇಳಿದು ಅಲ್ಲಿದ್ದಾರೆ; ಭಯಂಕರರಾಗಿದ್ದ ತಮ್ಮ ಶೌರ್ಯಕ್ಕೆ ನಾಚಿಕೆಗೊಂಡು, ಖಡ್ಗಹತರ ಮಧ್ಯೆ ಸುನ್ನತಿಹೀನರಾಗಿ ಬಿದ್ದು, ಪ್ರೇತಗಳ ನಡುವೆ ಅವಮಾನಪಟ್ಟಿದ್ದಾರೆ.


“ನರಪುತ್ರನೇ, ನೀನು ಈಜಿಪ್ಟಿನ ಅರಸ ಫರೋಹನ ಕಡೆಗೆ ಮುಖಮಾಡಿ ಅವನನ್ನು ಹಾಗು ಈಜಿಪ್ಟಿನವರೆಲ್ಲರನ್ನು ಕುರಿತು ಹೀಗೆ ನುಡಿ -


ಆ ದಿನದಲ್ಲಿ ಸೂರೆಯಾಗುವರು ಫಿಲಿಷ್ಟಿಯರೆಲ್ಲರು ನಿರ್ಮೂಲವಾಗುವರು ಟೈರ್-ಸಿಡೋನಿನ ಸಹಾಯಕರಲ್ಲಿ ಅಳಿದುಳಿದವರು. ಸರ್ವೇಶ್ವರನೆ ನಾಶಮಾಡುವನು ಕ್ರೇಟ್ ದ್ವೀಪದಿಂದ ಉತ್ಪನ್ನರಾದ ಫಿಲಿಷ್ಟಿಯರನ್ನು.


ಜುದೇಯದ ಅರಸ ಚಿದ್ಕೀಯನನ್ನು ನೋಡಲು ಜೆರುಸಲೇಮಿಗೆ ಬಂದಿರುವ ರಾಯಭಾರಿಗಳ ಮೂಲಕ ಎದೋಮಿನ ರಾಜ, ಮೋವಾಬಿನ ರಾಜ, ಅಮ್ಮೋನ್ಯ ರಾಜ, ಟೈರಿನ ರಾಜ, ಸಿದೋನಿನ ರಾಜ ಇವರುಗಳಿಗೆ ಒಂದು ಸಮಾಚಾರವನ್ನು ಕಳಿಸು.


“ಹಿಂಸೆಗೆ ಈಡಾದ ಕನ್ಯೆಯಂತೆ ಇರುವ ಸಿದೋನ್ ನಗರವೇ, ಇನ್ನು ಮೇಲೆ ನಿನಗಿರದು ಸಂತೃಪ್ತಿ: ಸಮುದ್ರ ದಾಟಿ ಸೈಪ್ರಸ್ಸಿಗೆ ಹಾದುಹೋಗು, ಅಲ್ಲಿಯೂ ನಿನಗೆ ದೊರಕದು ವಿಶ್ರಾಂತಿ,” ಎಂದು ಹೇಳಿದ್ದಾರೆ.


ಕಾನಾನ್ಯರ ನಾಡು ಸೀದೋನ್ ಪಟ್ಟಣದಿಂದ ಗೆರಾರಿಗೆ ಹೋಗುವ ದಾರಿಯಲ್ಲಿ ಇರುವ ಗಾಜಾ ಪಟ್ಟಣದವರೆಗೂ ಮತ್ತು ಸೊದೋಮ್, ಗೊಮೋರ, ಆದ್ಮಾ, ಚೆಬೋಯಿಮ್ ಎಂಬ ಪಟ್ಟಣಗಳಿಗೆ ಹೋಗುವ ದಾರಿಯಲ್ಲಿದ್ದ ಲೆಷಾ ಊರಿನವರೆಗೂ ಹಬ್ಬಿತ್ತು.


“ನರಪುತ್ರನೇ, ನೀನು ಜೆರುಸಲೇಮಿಗೆ ಅಭಿಮುಖನಾಗಿ, ಅಲ್ಲಿನ ಪವಿತ್ರಸ್ಥಳಗಳ ಕಡೆಗೆ ಮಾತಾಡುತ್ತಾ , ಇಸ್ರಯೇಲ್ ನಾಡಿನ ಪ್ರಸ್ತಾಪವನ್ನೆತ್ತಿ ಆ ನಾಡಿಗೆ ಹೀಗೆ ಪ್ರವಾದಿಸು:


ಸರ್ವೇಶ್ವರ ಈ ವಾಣಿಯನ್ನು ನನಗೆ ದಯಪಾಲಿಸಿದರು:-


ಕಾಬೂಲ್, ಎಬ್ರೋನ್, ರೆಹೋಬ್, ಹಮ್ಮೋನ್, ಕಾನಾ ಇವುಗಳ ಮೇಲೆ ಸಿದೋನ್ ಎಂಬ ಮಹಾನಗರಕ್ಕೆ ಹೋಗುತ್ತದೆ.


ಅಲ್ಲಿಂದ ಅದು ತಿರುಗಿಕೊಂಡು ರಾಮಾ, ಟೈರ್ ಕೋಟೆ, ಹೋಸಾ ಇವುಗಳ ಮೇಲೆ ಅಕ್ಜೀಬ್ ಪ್ರಾಂತ್ಯಕ್ಕೆ ಹೋಗಿ ಸಮುದ್ರತೀರದಲ್ಲಿ ಕೊನೆಗೊಳ್ಳುತ್ತದೆ.


ಉಮ್ಮಾ, ಅಫೇಕ್, ರೆಹೂಬ್ ಇವೇ ಮೊದಲಾದ ಇಪ್ಪತ್ತೆರಡು ನಗರಗಳೂ ಅವುಗಳ ಗ್ರಾಮಗಳೂ


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು