Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 28:14 - ಕನ್ನಡ ಸತ್ಯವೇದವು C.L. Bible (BSI)

14 ರೆಕ್ಕೆ ತೆರೆದು ನೆರಳು ನೀಡುವ ಕೆರೂಬಿ ನೀನಾಗಿದ್ದೆ ದೇವರ ಪರಿಶುದ್ಧ ಮರೆಯಲ್ಲಿ ನಿನ್ನ ನಾ ನೆಲೆಗೊಳಿಸಿದ್ದೆ. ಕೆಂಡದ ಮಡುಮಧ್ಯೆ ನೀ ವಿಹಾರಮಾಡುತ್ತಿದ್ದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

14 “‘ನೀನು ರೆಕ್ಕೆತೆರೆದು ನೆರಳು ನೀಡುವ ಕೆರೂಬಿಯಾಗಿದ್ದೆ; ನಾನು ನಿನ್ನನ್ನು ದೇವರ ಪರಿಶುದ್ಧ ಪರ್ವತದಲ್ಲಿ ನೆಲೆಗೊಳಿಸಿದೆನು; ನೀನು ಅಮೂಲ್ಯ ರತ್ನಗಳ ಕೆಂಡದ ಮಧ್ಯದಲ್ಲಿ ವಿಹಾರ ಮಾಡುತ್ತಿದ್ದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

14 ನೀನು ರೆಕ್ಕೆತೆರೆದು ನೆರಳುಕೊಡುವ ಕೆರೂಬಿಯಾಗಿದ್ದಿ; ನಾನು ನಿನ್ನನ್ನು ದೇವರ ಪರಿಶುದ್ಧಪರ್ವತದಲ್ಲಿ ನೆಲೆಗೊಳಿಸಿದೆನು; ನೀನು ಕೆಂಡದ ಮಳೆಯಲ್ಲಿ ವಿಹಾರಮಾಡುತ್ತಾ ಇದ್ದಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

14 ನೀನು ಆರಿಸಲ್ಪಟ್ಟ ಕೆರೂಬಿಯರಲ್ಲಿ ಒಬ್ಬನಾಗಿದ್ದೆ. ನಿನ್ನ ರೆಕ್ಕೆಗಳು ನನ್ನ ಸಿಂಹಾಸನದ ಮೇಲೆ ಚಾಚಿದ್ದವು. ನಾನು ನಿನ್ನನ್ನು ದೇವರ ಪವಿತ್ರ ಪರ್ವತದಲ್ಲಿಟ್ಟೆನು. ನೀನು ಬೆಂಕಿಯಂತೆ ಹೊಳೆಯುವ ರತ್ನಗಳ ಮೇಲೆ ನಡೆದಾಡಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

14 ನೀನು ರಕ್ಷಕ ಕೆರೂಬಿಯಾಗಿ ಅಭಿಷೇಕಹೊಂದಿದೆ. ನಾನೇ ನಿನ್ನನ್ನು ನೇಮಿಸಿದ್ದೇನೆ. ನೀನು ದೇವರ ಪರಿಶುದ್ಧ ಪರ್ವತದ ಮೇಲೆ ಇದ್ದೆ; ನೀನು ಉರಿಯುತ್ತಿರುವ ಕಲ್ಲುಗಳ ನಡುವೆ ನಡೆದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 28:14
22 ತಿಳಿವುಗಳ ಹೋಲಿಕೆ  

ಅದರಿಂದ ದೇವದರ್ಶನದ ಗುಡಾರ, ಆಜ್ಞಾಶಾಸನಗಳ ಮಂಜೂಷ, ಮೇಜು, ಮೇಜಿನ ಉಪಕರಣಗಳು,


ನೀನಿದ್ದೆ ದೇವರ ಉದ್ಯಾನವನದ ಏದೆನಿನೊಳು ಮಾಣಿಕ್ಯ, ಪುಷ್ಯರಾಗ, ಪಚ್ಚೆ, ಪೀತರತ್ನ, ಬೆರುಲ್ಲ, ವೈಡೂರ್ಯ, ನೀಲ, ಕೆಂಪರಲು, ಸ್ಫಟಿಕವೆಂಬ ನವರತ್ನಗಳಿಂದ ಭೂಷಿತನಾಗಿದ್ದೆ ನೀನು. ನಿನ್ನ ಕಿವಿಯೋಲೆ ಆಭರಣಗಳು ಸುವರ್ಣಖಚಿತವಾಗಿದ್ದವು. ನಿನ್ನ ಸೃಷ್ಟಿಯ ದಿನದಂದೇ ಸಿದ್ಧವಾಗಿದ್ದವವು.


ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ನಾಡಿನಲ್ಲಿ ಇಸ್ರಯೇಲ್ ವಂಶದವರೆಲ್ಲರೂ ನನ್ನ ಪರಿಶುದ್ಧ ಬೆಟ್ಟದಲ್ಲೇ, ಇಸ್ರಯೇಲಿನ ಪರ್ವತಾಗ್ರದಲ್ಲೇ, ನನ್ನನ್ನು ಪೂಜಿಸುವರು; ಅಲ್ಲೇ ಅವರಿಗೆ ಪ್ರಸನ್ನನಾಗುವೆನು, ಅಲ್ಲೇ ನಿಮ್ಮ ಕಾಣಿಕೆಗಳನ್ನೂ ಉತ್ತಮ ನೈವೇದ್ಯಗಳನ್ನೂ ಮೀಸಲಾದುದೆಲ್ಲವನ್ನೂ ಅಂಗೀಕರಿಸುವೆನು.


ಬಳಿಕ ಅಭಿಷೇಕ ತೈಲವನ್ನು ತೆಗೆದುಕೊಂಡು ಗುಡಾರವನ್ನೂ ಅದರಲ್ಲಿ ಇರುವುದೆಲ್ಲವನ್ನೂ ಅದರ ಎಲ್ಲ ಉಪಕರಣಗಳನ್ನೂ ಅಭಿಷೇಕಿಸಿ ಪ್ರತಿಷ್ಠಾಪಿಸು. ಅಂದಿನಿಂದ ಅದು ಪರಿಶುದ್ಧವಾಗಿರುವುದು.


ಆದರೆ ನಾನು ನಿನ್ನಲ್ಲಿ ನನ್ನ ಶಕ್ತಿಯನ್ನು ತೋರಿಸಿ ನನ್ನ ಹೆಸರನ್ನು ಲೋಕದಲ್ಲೆಲ್ಲಾ ಪ್ರಸಿದ್ಧಿಪಡಿಸಬೇಕೆಂಬ ಉದ್ದೇಶದಿಂದಲೆ ನಿನ್ನನ್ನು ಸಾಯಿಸದೆ ಉಳಿಸಿದ್ದೇನೆ.


“ಅಯ್ಯೋ ! ಅಯ್ಯೋ ! ಮಹಾನಗರಿ ನಿನಗೆಂಥಾ ದುರ್ಗತಿ ! ಕೆನ್ನೀಲಿಯ ಕಡುಗೆಂಪಿನ ನಯವಸ್ತ್ರಗಳನುಟ್ಟವಳೇ, ಹೊನ್ನ ತೊಟ್ಟವಳೇ, ಮತ್ತು ರತ್ನಾಭರಣಗಳನು ಧರಿಸಿದವಳೇ, ತಾಸೊಂದರಲೇ ನಿನ್ನ ಐಸಿರಿಯೆಲ್ಲಾ ವ್ಯರ್ಥವಾಯಿತೇ!” ಎಂದು ದುಃಖಿಸಿ ಅತ್ತು ಗೋಳಾಡುವರು.


ಹೀಗೆ ಕುದುರೆಗಳನ್ನೂ ಅವುಗಳ ಮೇಲೆ ಕುಳಿತ ಸವಾರರನ್ನೂ ನಾನು ದರ್ಶನದಲ್ಲಿ ಕಂಡೆ. ಆ ಸವಾರರು ಬೆಂಕಿಯ, ನೀಲಮಣಿಯ ಹಾಗೂ ಗಂಧಕ ವರ್ಣಗಳ ಕವಚಗಳನ್ನು ಧರಿಸಿದ್ದರು. ಕುದುರೆಗಳ ತಲೆಗಳು ಸಿಂಹಗಳ ತಲೆಗಳಂತೆ ಇದ್ದವು. ಅವುಗಳ ಬಾಯಿಂದ ಬೆಂಕಿ, ಹೊಗೆ ಮತ್ತು ಗಂಧಕ ಹೊರಬರುತ್ತಿದ್ದವು.


ದೇವರೆನಿಸಿಕೊಳ್ಳುವ ಎಲ್ಲವನ್ನೂ ಅಲ್ಲಗಳೆಯುವನು; ಆರಾಧನೆಗೈಯುವ ಎಲ್ಲವನ್ನೂ ಇಲ್ಲಗೊಳಿಸುವನು; ಇವೆಲ್ಲಕ್ಕೂ ತಾವೇ ಮಿಗಿಲೆಂದು ಭಾವಿಸಿ ದೇವಮಂದಿರದಲ್ಲಿ ಕುಳಿತುಕೊಂಡು ತಾನೇ ದೇವರೆಂದು ಘೋಷಿಸಿಕೊಳ್ಳುವನು.


ಆತನ ದೃಷ್ಟಿಯಲ್ಲಿ ಭೂನಿವಾಸಿಗಳೆಲ್ಲರು ಶೂನ್ಯರು ಇಹದ ಜನರೂ ಪರದ ದೂತರೂ ಆತನಿಗೆ ಅಧೀನರು. ಆತನ ಶಕ್ತಿಯುತ ಹಸ್ತವನ್ನು ಯಾರಿಂದಲೂ ತಡೆಯಲಾಗದು. ‘ನೀನು ಮಾಡುತ್ತಿರುವುದೇನು?’ ಎಂದು ಯಾರೂ ಆತನನ್ನು ಪ್ರಶ್ನಿಸಲಾರರು.


“ನರಪುತ್ರನೇ, ನೀನು ಟೈರ್ ನಗರದ ರಾಜನಿಗೆ ಹೀಗೆ ನುಡಿ; ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ನೀನು ಗರ್ವದಿಂದ ‘ಆಹಾ, ನಾನೆ ದೇವರು, ಸಮುದ್ರ ಮಧ್ಯೆ ದೇವರ ಆಸನವನ್ನೇ ಅಲಂಕರಿಸಿದ್ದೇನೆ’, ಎಂದುಕೊಂಡೆ. ನೀನು ನಿನ್ನ ದೇವರಿಗೆ ಸಮನಾಗಿಸಿಕೊಂಡೆಯೋ? ನೀನು ಎಂದಿಗೂ ದೇವರಲ್ಲ, ನೀನೊಬ್ಬ ನರಪ್ರಾಣಿಯಷ್ಟೆ.


ಕೊಡಲಿ, ಕಡಿಯುವವನನ್ನೇ ಕಡಿಯಲು ನಿಂತೀತೆ? ಗರಗಸ, ಆಡಿಸುವವನನ್ನೇ ಕತ್ತರಿಸಲು ಎದೆಗೊಂಡೀತೆ? ಕೋಲು, ಹಿಡಿದವನನ್ನೇ ಹೊಡೆದಂತಾಯಿತು! ನಿರ್ಜೀವ ದೊಣ್ಣೆ ಸಜೀವ ಮನುಷ್ಯನನ್ನೇ ಬಡಿದಂತಾಯಿತು!


ಆ ಧರ್ಮಭ್ರಷ್ಟ ಪ್ರಜೆಗೆ ಇದಿರಾಗಿ ಅಸ್ಸೀರಿಯವನ್ನು ಕಳುಹಿಸುತ್ತೇನೆ. ನನ್ನ ಕೋಪಕ್ಕೆ ಗುರಿಯಾದ ಜನರಿಗೆ ವಿರುದ್ಧ ಕಾರ್ಯವನ್ನು ಕೈಗೊಳ್ಳಲು ಆಜ್ಞೆ ಮಾಡುತ್ತೇನೆ. ನನ್ನ ಪ್ರಜೆಯನ್ನು ಸೂರೆಮಾಡಲು, ಕೊಳ್ಳೆಹೊಡೆಯಲು, ಬೀದಿಯ ಕಸದಂತೆ ತುಳಿದುಬಿಡಲು ಅದಕ್ಕೆ ಆಜ್ಞೆಮಾಡುತ್ತೇನೆ.


ಇದನ್ನು ಅವನು ತಾನಾಗಿಯೇ ಹೇಳಲಿಲ್ಲ. ಆ ವರ್ಷ ಆತನು ಪ್ರಧಾನಯಾಜಕನಾಗಿದ್ದ ಕಾರಣ, ಯೇಸು ಜನತೆಗಾಗಿ ಪ್ರಾಣತ್ಯಾಗ ಮಾಡಲಿದ್ದಾರೆ ಎಂದು ಹೀಗೆ ಪ್ರವಾದಿಸಿದನು.


ಅಯ್ಯಯ್ಯೋ, ಸ್ವಾಮಿಯೆ ಸಿಟ್ಟುಗೊಂಡಿರುವನಲ್ಲಾ ! ಸಿಯೋನ್ ಕುವರಿಗೆ ಕಾರ್ಮೋಡ ಕವಿದಂತೆ ಮಾಡಿರುವನಲ್ಲಾ ! ಇಸ್ರಯೇಲಿನ ವೈಭವವನ್ನು ಆಗಸದಿಂದ ನೆಲಕ್ಕೆಸೆದುಬಿಟ್ಟಿರುವನಲ್ಲಾ ! ಆ ಸಿಟ್ಟಿನ ದಿನದಂದು ತನ್ನ ಪಾದಪೀಠವಾದ ದೇವಾಲಯವನ್ನೂ ನೆನೆಯದೆಹೋದನಲ್ಲಾ !


ಬಳಿಕ ಸರ್ವೇಶ್ವರನ ತೇಜಸ್ಸು ದೇವಾಲಯದ ಹೊಸ್ತಿಲನ್ನು ಬಿಟ್ಟು, ಕೆರೂಬಿಗಳ ಮೇಲೆ ನಿಂತಿತು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು