Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 27:7 - ಕನ್ನಡ ಸತ್ಯವೇದವು C.L. Bible (BSI)

7 ನಿನ್ನ ಹಾಯಿ ನಿನಗೆ ಧ್ವಜವಾಗಲೆಂದೆ ಮಾಡಿಹರು ಈಜಿಪ್ಟಿನ ಕಸೂತಿಯ ನಾರುಮಡಿಯಿಂದ. ನಿನ್ನ ಮೇಲ್ಕಟ್ಟು ಚಿತ್ರಿತವಾಗಿದೆ ಎಲೀಷ ಕರಾವಳಿಯ ಊದಾ ಕಡುಗೆಂಪುಗಳಿಂದ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

7 ನಿನ್ನ ಹಾಯಿಯು ನಿನಗೆ ಧ್ವಜವಾಗಲೆಂದು ಅದನ್ನು ಐಗುಪ್ತದ ಕಸೂತಿಯ ನಾರು ಬಟ್ಟೆಯಿಂದ ಮಾಡಿದರು. ನಿನ್ನ ಮೇಲ್ಕಟ್ಟನ್ನು ಎಲೀಷ ಕರಾವಳಿಯ ಧೂಮ್ರ ರಕ್ತವರ್ಣಗಳಿಂದ ಚಿತ್ರಿತವಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

7 ನಿನ್ನ ಹಾಯಿಯು ನಿನಗೆ ಧ್ವಜವೂ ಆಗಲೆಂದು ಅದನ್ನು ಐಗುಪ್ತದ ಕಸೂತಿಯ ನಾರುಬಟ್ಟೆಯಿಂದ ಮಾಡಿದರು. ನಿನ್ನ ಮೇಲ್ಕಟ್ಟು ಎಲೀಷಕರಾವಳಿಯ ಧೂಮ್ರರಕ್ತವರ್ಣಗಳಿಂದ ಚಿತ್ರಿತವಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

7 ಈಜಿಪ್ಟಿನಲ್ಲಿ ತಯಾರಿಸಿದ ಬಣ್ಣದ ನಾರುಮಡಿಯನ್ನು ನಿನ್ನ ಹಾಯಿಗಳಿಗಾಗಿ ಉಪಯೋಗಿಸಿದರು. ಆ ಹಾಯಿಯು ನಿನ್ನ ಧ್ವಜವಾಯಿತು. ನಿನ್ನ ಮೇಲ್ಮಾಳಿಗೆಯ ಹೊದಿಕೆಯು ನೀಲ ಮತ್ತು ಧೂಮ್ರ ವರ್ಣದವುಗಳಾಗಿದ್ದವು. ಅವು ಸೈಪ್ರಸ್ ದ್ವೀಪದಿಂದ ಬಂದವುಗಳಾಗಿದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

7 ಈಜಿಪ್ಟಿನ ಕಸೂತಿಯ ನಾರುಮಡಿಯಿಂದ ನಿನ್ನ ಪಟವನ್ನು ಮಾಡಿದರು ಮತ್ತು ಅದು ನಿನ್ನ ಧ್ವಜವಾಗಿತ್ತು. ನಿಮ್ಮ ಮೇಲ್ಕಟ್ಟುಗಳು ಎಲೀಷ ಕರಾವಳಿಯಿಂದ ನೀಲಿ ಮತ್ತು ನೇರಳೆ ಬಣ್ಣದ್ದಾಗಿದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 27:7
8 ತಿಳಿವುಗಳ ಹೋಲಿಕೆ  

ಆ ಬೊಂಬೆಗಳ ಭೂಷಣಕ್ಕಾಗಿ ಸಾಗಿಬರುತ್ತವೆ ತಾರ್ಷೀಷಿನಿಂದ ಬೆಳ್ಳೀತಗಡುಗಳು, ಊಫಜಿನಿಂದ ಚಿನ್ನ. ಅವು ಕೆತ್ತನೆಗಾರನ, ಎರಕದವನ ಕೈಕೆಲಸಗಳು ಅವುಗಳ ಉಡುಪು ನೀಲಧೂಮ್ರ ವರ್ಣದ ವಸ್ತ್ರಗಳು. ಇವೆಲ್ಲವು ಕೇವಲ ಕಲಾಕುಶಲರ ಕೌಶಲ್ಯಗಳು.


ನೀಲಿ, ಊದ ಕಡುಗೆಂಪು ವರ್ಣಗಳುಳ್ಳ ದಾರಗಳು, ನಾರುಮಡಿಗಳು, ತುಪ್ಪಟದ ಬಟ್ಟೆಗಳು,


ನಯವಾದ ನಾರುಮಡಿಯನ್ನು ಮತ್ತು ಬಿಳೀ ಬಟ್ಟೆಯನ್ನು ನೇಯುವವರೆಲ್ಲ ಹತಾಶರಾಗುವರು.


ಯಾವಾನನ ಮಕ್ಕಳು - ಎಲಿಷಾ, ಸ್ಪೇಯಿನ್ (ತಾರ್ಷಿಸ್), ಸೈಪ್ರಸ್ (ಕಿತ್ತೀಮ್) ಮತ್ತು ದೋದಾ ಎಂಬ ಸ್ಥಳದವರು. ಇವರು ಸಮುದ್ರದ ರೇವುಗಳಲ್ಲಿ ಹರಡಿಕೊಂಡರು.


ಮೆತ್ತೆ ಸುಪ್ಪತ್ತಿಗೆಯಿಂದ, ಚಿತ್ರವಿಚಿತ್ರ ವಸ್ತುಗಳಿಂದ, ಈಜಿಪ್ಟಿನ ನಾರುಮಡಿಯಿಂದ ಸಿದ್ಧಮಾಡಿರುವೆ ಹಾಸಿಗೆಯನ್ನು.


ಎಲೀಷ, ಸ್ಪೇನ್, ಸೈಪ್ರಸ್, ದೋದಾನೀಮ್ ಎಂಬ ಸ್ಥಳಗಳವರು ಯಾವಾನನ ಮಕ್ಕಳು.


ಅರಸ ಸೊಲೊಮೋನನ ಕುದುರೆಗಳು ಈಜಿಪ್ಟ್ ದೇಶದವುಗಳು; ಅವನ ವರ್ತಕರು ಅವುಗಳನ್ನು ಹಿಂಡುಗಟ್ಟಳೆಯಾಗಿ ಕೊಂಡುಕೊಂಡು ಬರುತ್ತಿದ್ದರು.


ಇದಲ್ಲದೆ ಕಸೂತಿಯ ಬಟ್ಟೆಯನ್ನು ನಿನಗೆ ತೊಡಿಸಿ, ಕಡಲು ಹಂದಿಯ ತೊಗಲಿನ ಕೆರಗಳನ್ನು ನಿನ್ನ ಕಾಲಿಗೆ ಮೆಟ್ಟಿಸಿ, ನಯವಾದ ನಾರುಮಡಿಯನ್ನು ನಿನಗೆ ಉಡಿಸಿ, ರೇಷ್ಮೆಯ ಹೊದಿಕೆಯನ್ನು ನಿನಗೆ ಹೊದಿಸಿದೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು