Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 27:20 - ಕನ್ನಡ ಸತ್ಯವೇದವು C.L. Bible (BSI)

20 ದೆದಾನಿನವರು ಹಲ್ಲಣಕ್ಕೆ ಸರಿಯಾದ ಒಳ್ಳೆಯ ಜಮಖಾನೆಗಳನ್ನು ನಿನಗೆ ತರುತ್ತಿದ್ದ ವ್ಯಾಪಾರಿಗಳಾಗಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

20 ದೇದಾನಿನವರು ರಥಗಳ ಸವಾರಿಗಳಿಗೆ ತಕ್ಕ ಒಳ್ಳೆಯ ಬಟ್ಟೆಗಳಿಂದ ನಿನ್ನ ಸಂಗಡ ವ್ಯಾಪಾರ ಮಾಡುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

20 ದೆದಾನಿನವರು ಹಲ್ಲಣಕ್ಕೆ ಸರಿಯಾದ ಒಳ್ಳೆಯ ಜಮಖಾನೆಗಳನ್ನು ನಿನಗೋಸ್ಕರ ತರುವ ವ್ಯಾಪಾರಿಗಳಾಗಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

20 ದೆದಾನಿನ ನಿನ್ನ ಜನರು ಒಳ್ಳೆಯ ವ್ಯಾಪಾರಸ್ಥರು. ಅವರು ಸವಾರಿ ಕುದುರೆಗಳನ್ನೂ ಜೇನನ್ನೂ ಬಟ್ಟೆಗಳನ್ನೂ ಕೊಟ್ಟು ಕೊಂಡುಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

20 “ ‘ದೆದಾನ್ ರಥಗಳ ಸವಾರಿಗಳಿಗೆ ತಕ್ಕ ಒಳ್ಳೆಯ ಬಟ್ಟೆಗಳಿಂದ ನಿನ್ನ ಸಂಗಡ ವ್ಯಾಪಾರ ಮಾಡುತ್ತಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 27:20
6 ತಿಳಿವುಗಳ ಹೋಲಿಕೆ  

ಯೊಕ್ಷಾನನು ಶೆಬಾ, ದೆದಾನ್ ಎಂಬವರನ್ನು ಪಡೆದನು. ಅಶ್ಯೂರ್ಯರು, ಲೆಟೂಶ್ಯರೂ ಲೆಯುಮ್ಯರು ದೆದಾನನಿಂದ ಹುಟ್ಟಿದರು.


ದೆದಾನಿನವರು ನಿನ್ನ ವರ್ತಕರಾಗಿದ್ದರು; ಬಹುದ್ವೀಪಗಳ ಉತ್ಪತ್ತಿ ನಿನ್ನ ಕೈಗೆ ಸೇರಿತ್ತು. ಗಜದಂತಗಳನ್ನೂ, ಕರೀಮರವನ್ನೂ ನಿನಗೆ ಕಪ್ಪವಾಗಿ ಸಲ್ಲಿಸುತ್ತಿದ್ದರು.


ಕೂಷನ ಮಕ್ಕಳು - ಸೆಬಾ, ಹವೀಲ, ಸಬ್ತಾ, ರಗ್ಮ, ಸಬ್ತಕಾ ಎಂಬ ಜನಾಂಗಗಳು. ರಗ್ಮ ಸಂತಾನದವರು -‍ ಶೆಬಾ, ದೆದಾನ್ ಎಂಬ ಜನಾಂಗಗಳು.


“ವೆದಾನಿನವರೂ, ಯಾವಾನಿನವರೂ ಉಜಾಲಿನಿಂದ ನಾನಾ ಸರಕುಗಳನ್ನು ತಂದು ನಿನಗೆ ಒಪ್ಪಿಸುತ್ತಿದ್ದರು. ಉಕ್ಕು, ಬಜೆ, ಲವಂಗ, ಚಕ್ಕೆಗಳು ನಿನಗೆ ಆಮದಾಗುತ್ತಿದ್ದವು.


ಶೆಬದವರು, ದೆದಾನಿನವರು, ತಾರ್ಷೀಷಿನ ವರ್ತಕರು ಹಾಗು ಅದರ ಸಿಂಹಪ್ರಾಯರೆಲ್ಲರು ನಿನ್ನನ್ನು ನೋಡಿ, ‘ನೀನು ಸೂರೆಮಾಡಲಿಕ್ಕೆ ಬಂದಿಯೋ? ಕೊಳ್ಳೆಹೊಡೆದು ಬೆಳ್ಳಿಬಂಗಾರವನ್ನು ದೋಚಿಕೊಂಡು, ದನ ಮುಂತಾದ ಸೊತ್ತನ್ನು ಅಪಹರಿಸಿ, ಅಪಾರವಾದ ಆಸ್ತಿಯನ್ನು ಸುಲಿದುಕೊಂಡು ಹೋಗಲು ನಿನ್ನ ತಂಡವನ್ನು ಕೂಡಿಸಿಕೊಂಡು ಬಂದಿಯೋ?’ ಎಂದು ಕೇಳುವರು.


ಹೀಗಿರಲು ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ನಾನು ಎದೋಮಿನ ಮೇಲೆ ಕೈಯೆತ್ತಿ, ಅದರೊಳಗಿಂದ ಜನರನ್ನೂ ಪಶುಗಳನ್ನೂ ನಿರ್ಮೂಲಪಡಿಸಿ, ತೇಮೊನಿನಿಂದ ದೆದಾನಿನವರೆಗೂ ಅದನ್ನು ಹಾಳುಮಾಡಿ, ಪ್ರಜೆಗಳನ್ನು ಖಡ್ಗಕ್ಕೆ ಸಿಕ್ಕಿಸುವೆನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು