Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 26:6 - ಕನ್ನಡ ಸತ್ಯವೇದವು C.L. Bible (BSI)

6 ಬಯಲು ಭೂಮಿಯಲ್ಲಿನ ಅವರ ಕುವರಿಯರು ಖಡ್ಗದಿಂದ ಹತರಾಗುವರು; ನಾನೇ ಸರ್ವೇಶ್ವರ ಎಂದು ಎಲ್ಲರಿಗೂ ಗೊತ್ತಾಗುವುದು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

6 ಬಯಲು ಭೂಮಿಯಲ್ಲಿನ ಅದರ ಕುಮಾರ್ತೆಯರು ಖಡ್ಗದಿಂದ ಹತರಾಗುವರು. ಆಗ ನಾನೇ ಯೆಹೋವನು” ಎಂದು ಎಲ್ಲರಿಗೂ ಗೊತ್ತಾಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

6 ಬೈಲುಭೂವಿುಯಲ್ಲಿನ ಅದರ ಕುಮಾರ್ತೆಯರು ಖಡ್ಗದಿಂದ ಹತರಾಗುವರು; ನಾನೇ ಯೆಹೋವನು ಎಂದು ಎಲ್ಲರಿಗೂ ಗೊತ್ತಾಗುವದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

6 ಆಕೆಯ ಹೆಣ್ಣುಮಕ್ಕಳು (ಚಿಕ್ಕ ಪಟ್ಟಣಗಳು) ಯುದ್ಧದಲ್ಲಿ ಕೊಲ್ಲಲ್ಪಡುವರು. ನಾನು ಯೆಹೋವನೆಂದು ಆಗ ತಿಳಿಯುವರು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

6 ಮತ್ತು ಪ್ರಧಾನ ಭೂಮಿಯಲ್ಲಿರುವ ಅದರ ಪುತ್ರಿಯರು ಖಡ್ಗದಿಂದ ಹತರಾಗುವರು. ಆಗ ನಾನೇ ಯೆಹೋವ ದೇವರೆಂದು ಎಲ್ಲರಿಗೂ ತಿಳಿಯುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 26:6
10 ತಿಳಿವುಗಳ ಹೋಲಿಕೆ  

ಅವನು ಬಯಲು ಭೂಮಿಯಲ್ಲಿ ನಿನ್ನ ಕುವರಿಯರನ್ನು ಖಡ್ಗದಿಂದ ಹತಿಸಿ, ನಿನಗೆ ವಿರುದ್ಧ ಒಡ್ಡುಕಟ್ಟಿ, ದಿಬ್ಬಹಾಕಿ, ಗುರಾಣಿಯೆತ್ತಿರುವವರನ್ನು ಕಳುಹಿಸಿ,


“ನಿನ್ನ ಉತ್ತರಕ್ಕೆ ತನ್ನ ಕುವರಿಯರೊಂದಿಗೆ ವಾಸಿಸುವ ಸಮಾರಿಯ, ನಿನ್ನ ಅಕ್ಕ; ನಿನ್ನ ದಕ್ಷಿಣ ಕಡೆಯಲ್ಲಿ ಕುವರಿಯರೊಂದಿಗೆ ವಾಸಿಸುವ ಸೊದೋಮ್, ನಿನ್ನ ತಂಗಿ.


ಅವರೆಲ್ಲರನ್ನು ಬಹಳವಾಗಿ ಖಂಡಿಸಿ ಮುಯ್ಯಿಗೆ ಮುಯ್ಯಿ ತೀರಿಸುವೆನು; ಹೀಗೆ ಪ್ರತೀಕಾರಮಾಡುವೆನು, ನಾನೇ ಸರ್ವೇಶ್ವರ ಎಂದು ಅವರಿಗೆ ಗೊತ್ತಾಗುವುದು.”


ನಾನು ಎದೋಮಿಗೆ ನನ್ನ ಜನರಾದ ಇಸ್ರಯೇಲರ ಕೈಯಿಂದ ಮುಯ್ಯಿತೀರಿಸುವೆನು; ಅವರು ನನ್ನ ಕೋಪರೋಷಗಳಿಗೆ ತಕ್ಕ ಹಾಗೆ ಅದಕ್ಕೆ ಮಾಡುವರು; ನನ್ನ ಪ್ರತೀಕಾರವು ಎದೋಮಿನ ಅನುಭವಕ್ಕೆ ಬರುವುದು; ಇದು ಸರ್ವೇಶ್ವರನಾದ ದೇವರ ನುಡಿ.”


ಮೋವಾಬ್ಯರಿಗೂ ದಂಡನೆಗಳನ್ನು ವಿಧಿಸದೆ ಬಿಡೆನು. ಆಗ ನಾನೇ ಸರ್ವೇಶ್ವರ ಎಂದು ಅವರಿಗೆ ಗೊತ್ತಾಗುವುದು.”


ಆದುದರಿಂದ ಇಗೋ, ನಾನು ನಿನ್ನ ಮೇಲೆ ಕೈಯೆತ್ತಿ ಸುಲಿಗೆಗಾಗಿ ನಿನ್ನನ್ನು ಮ್ಲೇಚ್ಛರಿಗೆ ವಶಪಡಿಸುವೆನು. ಜನಾಂಗಗಳಿಂದ ಕಿತ್ತು, ದೇಶಗಳಿಂದ ನಿನ್ನ ಹೆಸರನ್ನು ಅಳಿಸಿ ನಿನ್ನನ್ನು ಹಾಳುಮಾಡುವೆನು; ಆಗ ನಾನೇ ಸರ್ವೇಶ್ವರ ಎಂದು ನಿನಗೆ ಗೊತ್ತಾಗುವುದು.”


ನಾನು ರಬ್ಬಾಪಟ್ಟಣವನ್ನು ಒಂಟೆಗಳಿಗೆ ಲಾಯವನ್ನಾಗಿ ಹಾಗೂ ಅಮ್ಮೋನ್ ಸೀಮೆಯನ್ನು ಹಿಂಡುಗಳಿಗೆ ರೊಪ್ಪವನ್ನಾಗಿ ಮಾಡುವೆನು; ನಾನೇ ಸರ್ವೇಶ್ವರ ಎಂದು ನಿಮಗೆ ಗೊತ್ತಾಗುವುದು.


ಸರ್ವೇಶ್ವರ ದೇವರು ಇಂತೆನ್ನುತ್ತಾರೆ - ನನ್ನ ಜೀವದಾಣೆ, ನೀನೂ ನಿನ್ನ ಕುವರಿಯರೂ ನಡೆದಂತೆ ಸೊದೋಮೆಂಬ ನಿನ್ನ ತಂಗಿಯಾಗಲಿ ಆಕೆಯ ಕುವರಿಯರಾಗಲಿ ನಡೆಯಲಿಲ್ಲ.


ಆದುದರಿಂದ ಇಗೋ ಕೇಳಿ: ನನ್ನ ಅಪ್ಪಣೆಯ ಮೇರೆಗೆ ಶತ್ರುಗಳು ರಬ್ಬಾ ಎಂಬ ಅಮ್ಮೋನ್ಯರ ನಗರದ ಮೇಲೆ ಬಿದ್ದು ಯುದ್ಧ ಘೋಷಣೆ ಮಾಡುವ ದಿನಗಳು ಬರುವುವು. ಆ ನಗರ ಹಾಳುದಿಬ್ಬವಾಗುವುದು. ಅದಕ್ಕೆ ಸೇರಿದ ಗ್ರಾಮಗಳು ಬೆಂಕಿಯಿಂದ ಸುಟ್ಟುಹೋಗುವುವು. ಆಗ ಇಸ್ರಯೇಲ್ ತನ್ನನ್ನು ವಶಮಾಡಿಕೊಂಡವರನ್ನು ತಾನು ವಶಮಾಡಿಕೊಳ್ಳುವುದು. ಇದು ಸರ್ವೇಶ್ವರನಾದ ನನ್ನ ನುಡಿ.


“ಸೊದೋಮ್ ಮತ್ತು ಆಕೆಯ ಕುವರಿಯರ ಹಾಗೂ ಸಮಾರಿಯ ಮತ್ತು ಆಕೆಯ ಕುವರಿಯರ ಸೌಭಾಗ್ಯವನ್ನು ಪುನಃ ನೀಡುವೆನು. ಅದರೊಂದಿಗೆ ನಿನ್ನ ಸೌಭಾಗ್ಯವನ್ನೂ ಮರಳಿಸುವೆನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು