Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 26:3 - ಕನ್ನಡ ಸತ್ಯವೇದವು C.L. Bible (BSI)

3 ಆದುದರಿಂದ ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ: “ಟೈರೇ, ಇಗೋ ನಿನಗೆ ವಿರುದ್ಧವಾಗಿದ್ದೇನೆ; ಸಮುದ್ರವು ತೆರೆಗಳನ್ನು ಎಬ್ಬಿಸುವಂತೆ ನಾನು ಬಹುಜನಾಂಗಗಳನ್ನು ನಿನ್ನ ವಿರುದ್ಧ ಎಬ್ಬಿಸುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ಇಗೋ, ತೂರ್ ದೇಶವೇ, ನಾನು ನಿನಗೆ ವಿರುದ್ಧವಾಗಿದ್ದೇನೆ; ಸಮುದ್ರವು ತನ್ನ ತೆರೆಗಳನ್ನು ಎಬ್ಬಿಸುವಂತೆ ನಾನು ಅನೇಕ ಜನಾಂಗಗಳನ್ನು ನಿನ್ನ ಮೇಲೆ ಎಬ್ಬಿಸುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

3 ಕರ್ತನಾದ ಯೆಹೋವನು ಇಂತೆನ್ನುತಾನೆ - ಇಗೋ, ತೂರೇ, ನಿನಗೆ ವಿರುದ್ಧನಾಗಿದ್ದೇನೆ; ಸಮುದ್ರವು ತೆರೆಗಳನ್ನು ಎಬ್ಬಿಸುವಂತೆ ನಾನು ಬಹುಜನಾಂಗಗಳನ್ನು ನಿನ್ನ ಮೇಲೆ ಎಬ್ಬಿಸುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

3 ಆದ್ದರಿಂದ ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: “ತೂರೇ, ನಾನು ನಿನಗೆ ಮ್ಯುಯಿತೀರಿಸುವೆನು. ನಿನಗೆ ವಿರುದ್ಧವಾಗಿ ಯುದ್ಧ ಮಾಡಲು ಅನೇಕ ರಾಜ್ಯಗಳನ್ನು ಎಬ್ಬಿಸುತ್ತೇನೆ. ಅವರು ಸಮುದ್ರದ ತೆರೆಯಂತೆ ಮೇಲಿಂದ ಮೇಲೆ ನಿನಗೆ ವಿರುದ್ಧವಾಗಿ ಬರುವರು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

3 ಆದ್ದರಿಂದ ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಟೈರ್ ದೇಶವೇ, ನಾನು ನಿನಗೆ ವಿರೋಧವಾಗಿದ್ದೇನೆ, ಸಮುದ್ರವು ತನ್ನ ಅಲೆಗಳನ್ನು ಹೇಗೆ ಬರಮಾಡುವುದೋ ಹಾಗೆಯೇ ನಾನು ನಿನಗೆ ವಿರೋಧವಾಗಿ ಅನೇಕ ಜನಾಂಗಗಳನ್ನು ನಿನ್ನ ಮೇಲೆ ಬರಮಾಡುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 26:3
23 ತಿಳಿವುಗಳ ಹೋಲಿಕೆ  

ರಾಷ್ಟ್ರಗಳ ಕಣ್ಣಿಗೆ ಬಾಬಿಲೋನ್ ಭೀಕರವಾಗಿಬಿಟ್ಟಿದೆ, ಸಮುದ್ರವೆ ಬಾಬಿಲೋನಿಯದ ಮೇಲೆ ನುಗ್ಗಿಬಿಟ್ಟಿದೆ, ಲೆಕ್ಕವಿಲ್ಲದ ತೆರೆಗಳು ಆ ರಾಜ್ಯವನ್ನು ಮುಚ್ಚಿಬಿಟ್ಟಿವೆ.


ಗುರುಗುಟ್ಟುತಿಹರು ಯೆಹೂದ್ಯರ ಮೇಲೆ ಭೋರ್ಗರೆಯುವ ಸಮುದ್ರದಂತೆ; ನಾಡಿನೆಲ್ಲೆಡೆ ಕವಿದಿಹುದು ಗಾಡಾಂಧಕಾರ; ತಾಂಡವವಾಡುತಿಹುದು ನೋಡಿದೆಡೆ ದುಃಖದುಗುಡ; ಮೋಡ ಕವಿದು ಇರುಳಾಗಿಹುದು ಹಗಲೊಳು ಕೂಡ !


ಹಲವು ರಾಷ್ಟ್ರಗಳು ನಿನಗೆ ವಿರುದ್ಧ ಕೂಡಿಬಂದು: “ಜೆರುಸಲೇಮನ್ನು ಹೊಲಸುಮಾಡೋಣ, ‘ಸಿಯೋನಿನ ನಾಶವನ್ನು ಕಣ್ಣಾರೆ ನೋಡೋಣ’ ಎನ್ನುತ್ತಿವೆ.


“ಸೂರ್ಯ, ಚಂದ್ರ, ನಕ್ಷತ್ರಗಳಲ್ಲಿ ವಿಚಿತ್ರ ಸೂಚನೆಗಳು ಕಾಣಿಸಿಕೊಳ್ಳುವುವು; ಮೊರೆಯುವ ತೆರೆಗಳ ಹಾಗೂ ಭೋರ್ಗರೆಯುವ ಸಮುದ್ರದ ನಿಮಿತ್ತ ಭೂಮಿಯಲ್ಲಿ ಜನಾಂಗಗಳು ದಿಕ್ಕುತೋಚದೆ ತತ್ತರಿಸಿಹೋಗುವುವು.


ಜೆರುಸಲೇಮಿಗೆ ಎದುರಾಗಿ ಹೋರಾಡಲು ಅನ್ಯರಾಷ್ಟ್ರಗಳನ್ನು ಒಂದುಗೂಡಿಸುವೆನು. ಅವು ಆ ನಗರವನ್ನು ಆಕ್ರಮಿಸಿ, ಮನೆಗಳನ್ನು ಸೂರೆಮಾಡಿ, ಹೆಂಗಸರ ಮೇಲೆ ಅತ್ಯಾಚಾರವೆಸಗುವರು. ಅರ್ಧಕ್ಕೆ ಅರ್ಧ ಜನ ಸೆರೆಹೋಗುವರು. ಮಿಕ್ಕವರು ಅಲ್ಲೇ ಸುರಕ್ಷಿತವಾಗಿರುವರು.


ಅಲ್ಲಿ ಸಿಂಹಬೇಟೆಯನ್ನು ಸೀಳಿಹಾಕುತ್ತಿತ್ತು ತನ್ನ ಮರಿಗಳಿಗಾಗಿ; ಕೊರಳುಹಿಡಿದು ಪ್ರಾಣಿಗಳನ್ನು ಹೊಸಕುತ್ತಿತ್ತು ಸಿಂಹಿಣಿಗಳಿಗಾಗಿ; ಗವಿಗಳನ್ನು ಬೇಟೆಯಿಂದ, ಹಕ್ಕೆಗಳನ್ನು ಮಾಂಸದಿಂದ ತುಂಬಿಸುತ್ತಿತ್ತು ಅವುಗಳಿಗಾಗಿ.


ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ, ‘ರೋಷ್, ಮೆಷೆಕ್, ತೂಬಲ್ ಜನಾಂಗಗಳ ರಾಜನಾದ ಗೋಗನೇ,


ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ: ಆಹಾ, ಸಿದೋನೇ, ನಾನು ನಿನಗೆ ವಿರುದ್ಧನಾಗಿ ನಿನ್ನ ಮಧ್ಯದಲ್ಲೆ ಪ್ರಖ್ಯಾತಿಗೊಳ್ಳುವೆನು ; ನಾನು ಈ ಪಟ್ಟಣವನ್ನು ದಂಡಿಸಿ, ನನ್ನ ಗೌರವವನ್ನು ಕಾಪಾಡಿಕೊಂಡ ಮೇಲೆ, ನಾನೇ ಸರ್ವೇಶ್ವರ ಎಂದು ಎಲ್ಲರಿಗು ಗೊತ್ತಾಗುವುದು.


ಹುಟ್ಟುಹಾಕುವವರು ನಿನ್ನ ಸಿಕ್ಕಿಸಿಹರು ಮಹಾತರಂಗಗಳಿಗೆ ಸಾಗರಮಧ್ಯೆ ಒಡೆದು ಚೂರಾಗಿರುವೆ ಸಿಕ್ಕಿ ಮೂಡಣಗಾಳಿಗೆ.


ಸರ್ವೇಶ್ವರ ಇಂತೆನ್ನುತ್ತಾರೆ - ಇಗೋ, ನಾನು ನಿನಗೆ ವಿರುದ್ಧವಾಗಿದ್ದೇನೆ, ನನ್ನ ಖಡ್ಗವನ್ನು ಒರೆಯಿಂದ ಹಿರಿದು ನಿನ್ನಲ್ಲಿನ ಸಜ್ಜನರನ್ನೂ ದುರ್ಜನರನ್ನೂ ಸಂಹರಿಸಿಬಿಡುವೆನು.


ಆದುದರಿಂದ ಜೆರುಸಲೇಮೇ, ಇಗೋ, ನಾನೇ ನಿನಗೆ ವಿರುದ್ಧವಾಗಿದ್ದೇನೆ. ಜನಾಂಗಗಳ ಕಣ್ಣೆದುರಿಗೆ ನಿನ್ನ ಜನರನ್ನು ದಂಡಿಸುವೆನು; ಇದು ಸರ್ವೇಶ್ವರನಾದ ನನ್ನ ನುಡಿ.


ಆ ಕ್ರೂರಿಗಳು, ಆ ನಿಷ್ಕರುಣಿಗಳು ಹಿಡಿದುಕೊಂಡಿರುವರು ಬಿಲ್ಲನ್ನೂ ಈಟಿಯನ್ನೂ. ಅವರ ಧ್ವನಿ ಮೊರೆಯುತ್ತದೆ ಸಮುದ್ರದಂತೆ ಕುದುರೆ ಸವಾರಿ ತೊಡಗಲಿದೆ. ಬಾಬಿಲೋನ್ ನಗರಿಯೇ, ಕೇಳು, ಆ ಸೈನ್ಯ ಶೂರವೀರರಿಂದ ಕೂಡಿದೆ. ಅದು ನಿನ್ನ ಮೇಲೆ ಯುದ್ಧಸನ್ನದ್ಧವಾಗಿದೆ. ಸರ್ವೇಶ್ವರನಾದ ನನ್ನ ನುಡಿ ಇದು.


ಸೇನಾಧೀಶ್ವರ ಸರ್ವೇಶ್ವರನಾದ ದೇವರು ಹೀಗೆನ್ನುತ್ತಾರೆ: “ಎಲೈ ಅಹಂಕಾರಿಯೇ, ನಾನು ನಿನಗೆ ವಿರುದ್ಧನು. ನಿನಗೆ ಹೊತ್ತು ಬಂದಿದೆ. ನಿನ್ನನ್ನು ದಂಡಿಸತಕ್ಕ ಕಾಲ ಸಮೀಪಿಸಿದೆ.


ಕಣಿವೆಯಲ್ಲಿನ ನಗರಿಯೇ, ಬಯಲಿನ ಬಂಡೆಯಲ್ಲಿರುವ ಪುರಿಯೇ, ‘ನಮ್ಮ ಮೇಲೆ ಯಾರಿಳಿದು ಬಂದಾರು? ನಮ್ಮ ನಿವಾಸಗಳಿಗೆ ಯಾರು ನುಗ್ಗಿಯಾರು?’ ಎನ್ನುವವರೇ, ಇಗೋ ನಾನೆ ನಿಮಗೆ ವಿರುದ್ಧವಾಗಿದ್ದೇನೆ.


ಅವರು ಬಿಲ್ಲನ್ನೂ ಈಟಿಯನ್ನೂ ಹಿಡಿದಿದ್ದಾರೆ. ಅವರು ಕ್ರೂರಿಗಳು, ನಿಷ್ಕರುಣಿಗಳು. ಅವರ ಧ್ವನಿ ಸಮುದ್ರದಂತೆ ಭೋರ್ಗರೆಯುತ್ತಿದೆ. ಕುದುರೆಗಳನ್ನು ಏರಿದ್ದಾರೆ. ಎಲೌ ಸಿಯೋನ್ ನಗರಿಯೇ, ಆ ಶತ್ರುಸೈನ್ಯ ಶೂರನಂತೆ ನಿನ್ನ ಮೇಲೆ ಯುದ್ಧಸನ್ನದ್ಧವಾಗಿದೆ.”


ಬಿರುಗಾಳಿಯೆದ್ದಿತು ಆತನಾಜ್ಞೆಯೊಂದಕ್ಕೆ I ತರಂಗಗಳು ಭೊರ್ಗರೆದವು ಅದರೊಂದಿಗೆ II


ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ: - “ನಾನು ನಿನ್ನನ್ನು ಹಾಳೂರು ಮಾಡಿ ನಿರ್ಜನ ಪಟ್ಟಣಗಳ ಗತಿಗೆ ತಂದು, ನೀನು ಜಲರಾಶಿಯಲ್ಲಿ ಮುಣುಗಿಹೋಗುವಂತೆ ನಿನ್ನ ಮೇಲೆ ಮಹಾಸಾಗರವನ್ನು ಉಕ್ಕಿಸುವೆನು.


ಇಗೋ, ನಾನು ನಿನಗೂ ನಿನ್ನ ನದಿಗೂ ವಿರುದ್ಧನಾಗಿ ಈಜಿಪ್ಟ್ ದೇಶವನ್ನು ಮಿಗ್ದೋಲಿನಿಂದ ಸೆವೇನೆಯ ತನಕ, ಹೌದು, ಸುಡಾನ್ ಎಲ್ಲೆಯವರೆಗೂ ಪೂರ್ತಿಯಾಗಿ ಹಾಳುಪಾಳುಮಾಡುವೆನು.


ಇಂತೆನ್ನುತ್ತಾರೆ ಸರ್ವಶಕ್ತ ಸರ್ವೇಶ್ವರ: “ನಿನೆವೆ, ನಿನಗೆ ನಾ ವಿರೋಧಿಯಾಗಿರುವೆನು ಬಿಚ್ಚಿ ಮುಖದ ಮೇಲೆತ್ತುವೆನು ನಿನ್ನ ನೆರಿಗೆಗಳನು ಜನಾಂಗಗಳಿಗೆ ತೋರಿಸುವೆನು ನಿನ್ನ ಬೆತ್ತಲೆತನವನು ರಾಜ್ಯಗಳಿಗೆ ಕಾಣಿಸುವೆನು ನಿನ್ನ ಅವಮಾನವನು.


ಆದರೆ ಸರ್ವೇಶ್ವರ ಅದರ ಆಸ್ತಿಪಾಸ್ತಿಯನ್ನು ಕಿತ್ತುಕೊಂಡು ಅದೆಲ್ಲವನ್ನು ಸಮುದ್ರದಲ್ಲಿ ಎಸೆದುಬಿಡುವರು. ಆ ಪಟ್ಟಣವು ಬೆಂಕಿಗೆ ಆಹುತಿಯಾಗುವುದು.


ಟೈರ್ ಮತ್ತು ಸಿದೋನ್ ಇವುಗಳ ಅರಸರೆಲ್ಲರು;


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು