ಯೆಹೆಜ್ಕೇಲನು 23:4 - ಕನ್ನಡ ಸತ್ಯವೇದವು C.L. Bible (BSI)4 ಹಿರಿಯಳ ಹೆಸರು ಒಹೊಲ, ಕಿರಿಯವಳ ಹೆಸರು ಒಹೊಲೀಬ. ಅವರು ನನ್ನವರಾಗಿ ಗಂಡು ಹೆಣ್ಣು ಮಕ್ಕಳನ್ನು ಹೆತ್ತರು. ಒಹೊಲ ಸಮಾರಿಯವನ್ನೂ, ಒಹೊಲೀಬ ಜೆರುಸಲೇಮನ್ನೂ ಸೂಚಿಸುವ ಹೆಸರುಗಳು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20194 ಅವರ ಹೆಸರುಗಳೇನೆಂದರೆ: ಹಿರಿಯವಳ ಹೆಸರು ಒಹೊಲ ಮತ್ತು ಕಿರಿಯವಳ ಹೆಸರು ಒಹೊಲೀಬ. ಅವರು ನನ್ನವರಾಗಿ ಗಂಡು ಮತ್ತು ಹೆಣ್ಣು ಮಕ್ಕಳನ್ನು ಹೆತ್ತರು. ಒಹೊಲ ಸಮಾರ್ಯವನ್ನೂ, ಒಹೊಲೀಬ ಯೆರೂಸಲೇಮನ್ನೂ ಸೂಚಿಸತಕ್ಕ ಹೆಸರುಗಳಾಗಿವೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)4 ಅವರ ಹೆಸರುಗಳೇನಂದರೆ, ಒಹೊಲ ಎಂಬದು ಅಕ್ಕನದು, ಒಹೊಲೀಬ ಎಂಬದು ತಂಗಿಯದು; ಅವರು ನನ್ನ ಹೆಂಡರಾಗಿ ಗಂಡುಹೆಣ್ಣುಮಕ್ಕಳನ್ನು ಹೆತ್ತರು. (ಒಹೊಲ ಎಂಬದು ಸಮಾರ್ಯವನ್ನೂ, ಒಹೊಲೀಬ ಎಂಬದು ಯೆರೂಸಲೇಮನ್ನೂ ಸೂಚಿಸತಕ್ಕ ಹೆಸರುಗಳಾಗಿವೆ.) ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್4 ಹಿರಿಯ ಅಕ್ಕನ ಹೆಸರು ಒಹೊಲ. ತಂಗಿಯ ಹೆಸರು ಒಹೊಲೀಬ. ಅವರಿಬ್ಬರೂ ನನ್ನ ಹೆಂಡತಿಯರಾದರು. ಅವರು ಗಂಡುಮಕ್ಕಳನ್ನು ಮತ್ತು ಹೆಣ್ಣುಮಕ್ಕಳನ್ನು ಹೆತ್ತರು. ಒಹೊಲ ಎಂದರೆ ಸಮಾರ್ಯ; ಮತ್ತು ಒಹೊಲೀಬ ಎಂದರೆ ಜೆರುಸಲೇಮ್. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ4 ಅವರುಗಳ ಹೆಸರುಗಳೇನೆಂದರೆ ಒಹೊಲ ಎಂಬವಳು ದೊಡ್ಡವಳು. ಒಹೊಲೀಬ ಎಂಬವಳು ಚಿಕ್ಕವಳು. ಅವರು ನನ್ನವರಾಗಿದ್ದು ಪುತ್ರಪುತ್ರಿಯರನ್ನು ಹೆತ್ತರು; ಅವರ ಹೆಸರುಗಳಾದ ಒಹೊಲ ಎಂಬುದು ಸಮಾರ್ಯವು ಮತ್ತು ಒಹೊಲೀಬ ಎಂಬುದು ಯೆರೂಸಲೇಮು ಆಗಿದೆ. ಅಧ್ಯಾಯವನ್ನು ನೋಡಿ |