Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 23:24 - ಕನ್ನಡ ಸತ್ಯವೇದವು C.L. Bible (BSI)

24 ಅವರು ಆಯುಧ, ರಥ, ಸರಕುಗಾಡಿ, ಜನಾಂಗಗಳ ಸಮೂಹ, ಇವುಗಳೊಂದಿಗೆ ನಿನ್ನ ಮೇಲೆ ಬೀಳುವರು; ಗುರಾಣಿ, ಖೇಡ್ಯ, ಶಿರಸ್ತ್ರಾಣ, ಇವುಗಳನ್ನು ಧರಿಸಿ, ನಿನಗೆ ವಿರುದ್ಧ ಸುತ್ತುಮುತ್ತಲು ವ್ಯೂಹ ಕಟ್ಟುವರು. ನ್ಯಾಯತೀರಿಸುವ ಅಧಿಕಾರವನ್ನು ನಾನು ಅವರಿಗೆ ಕೊಡುವೆನು; ಅವರು ತಮ್ಮ ನ್ಯಾಯಾನುಸಾರ ತೀರ್ಪುನೀಡಿ ನಿನ್ನನ್ನು ದಂಡಿಸುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

24 ಅವರು ರಥಗಳ ಸಂಗಡವಾಗಿಯೂ, ಬಂಡಿಗಳ ಸಂಗಡ ಜನಗಳ ಸಮೂಹದ ಸಂಗಡ, ಬಲವುಳ್ಳವರಾಗಿ ನಿನ್ನ ವಿರುದ್ಧವಾಗಿ ಬರುವರು; ಸುತ್ತಲೂ ಗುರಾಣಿಗಳನ್ನೂ, ಶಿರಸ್ತ್ರಾಣವನ್ನೂ, ಹಿಡಿದು ನಿನಗೆ ವಿರುದ್ಧವಾಗಿರುವೆನು. ಇದಲ್ಲದೆ ನಾನು ಅವರಿಗೆ ನ್ಯಾಯ ತೀರಿಸುವ ಅಧಿಕಾರವನ್ನು ಕೊಡುವೆನು. ಅವರು ತಮ್ಮ ನ್ಯಾಯಾನುಸಾರವಾಗಿ ನ್ಯಾಯತೀರಿಸುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

24 ಅವರು ಆಯುಧ, ರಥ, ಚಕ್ಕಡಿಗಾಡಿ, ಜನಾಂಗಗಳ ಸಮೂಹ, ಇವುಗಳೊಂದಿಗೆ ನಿನ್ನ ಮೇಲೆ ಬೀಳುವರು; ಗುರಾಣಿ, ಖೇಡ್ಯ, ಶಿರಸ್ತ್ರಾಣ, ಇವುಳನ್ನು ಧರಿಸಿ ನಿನಗೆ ವಿರುದ್ಧವಾಗಿ ಸುತ್ತುಮುತ್ತಲು ವ್ಯೂಹಕಟ್ಟುವರು; ನ್ಯಾಯತೀರಿಸುವ ಅಧಿಕಾರವನ್ನು ನಾನು ಅವರಿಗೆ ಒಪ್ಪಿಸಲು ಅವರು ತಮ್ಮ ನ್ಯಾಯಾನುಸಾರವಾಗಿ ನ್ಯಾಯತೀರಿಸಿ ನಿನ್ನನ್ನು ದಂಡಿಸುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

24 ಅವರು ನಿನ್ನ ವಿರುದ್ಧವಾಗಿ ರಥಗಳಲ್ಲಿಯೂ ಅರಸರೂಢರಾಗಿಯೂ ಅಂತರಾಷ್ಟ್ರೀಯ ಸೈನ್ಯವಾಗಿ ಬರುವರು. ಅವರ ಕೈಯಲ್ಲಿ ಬರ್ಜಿ, ಗುರಾಣಿ, ಶಿರಸ್ತ್ರಾಣಗಳಿರುವವು. ಅವರು ನಿನ್ನನ್ನು ಸುತ್ತುವರಿಯುವರು. ನೀನು ನನಗೆ ಏನು ಮಾಡಿದ್ದೀ ಎಂದು ನಾನು ಹೇಳಿದಾಗ ಅವರು ತಮ್ಮ ಇಷ್ಟಪ್ರಕಾರ ನಿನ್ನನ್ನು ಶಿಕ್ಷಿಸುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

24 ಅವರು ರಥಗಳ ಸಂಗಡವಾಗಿಯೂ ಬಂಡಿಗಳ ಸಂಗಡವಾಗಿಯೂ ಜನಗಳ ಸಮೂಹದ ಸಂಗಡವಾಗಿಯೂ ಬಲವುಳ್ಳವರಾಗಿ ತಮ್ಮ ಆಯುಧಗಳೊಂದಿಗೆ ನಿನಗೆ ವಿರುದ್ಧವಾಗಿ ಬರುವರು. ಸುತ್ತಲೂ ಖೇಡ್ಯವನ್ನೂ ಗುರಾಣಿಯನ್ನೂ ಶಿರಸ್ತ್ರಾಣವನ್ನೂ ಹಿಡಿದು ನಿನಗೆ ವಿರುದ್ಧವಾಗಿರುವೆನು. ಇದಲ್ಲದೆ ನಾನು ಅವರಿಗೆ ನ್ಯಾಯತೀರ್ಪಿನ ಅಧಿಕಾರ ಕೊಡುವೆನು. ಅವರು ತಮ್ಮ ನ್ಯಾಯಗಳ ಪ್ರಕಾರ ನಿನಗೆ ನ್ಯಾಯತೀರಿಸುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 23:24
12 ತಿಳಿವುಗಳ ಹೋಲಿಕೆ  

ಅವನ ಲೆಕ್ಕವಿಲ್ಲದ ಕುದುರೆಗಳಿಂದೆದ್ದ ಧೂಳು ನಿನ್ನನ್ನು ಮುಸುಕುವುದು; ಒಡಕು ಬಿದ್ದ ಕೋಟೆಯೊಳಗೆ ಶತ್ರು ನುಗ್ಗುವ ಪ್ರಕಾರ ಅವನು ನಿನ್ನ ಬಾಗಿಲುಗಳೊಳಗೆ ನುಗ್ಗುವಾಗ ರಾಹುತ, ಸರಕುಗಾಡಿ, ರಥ, ಇವುಗಳ ಶಬ್ದಕ್ಕೆ ನಿನ್ನ ಗೋಡೆಗಳು ಅದರುವುವು.


ಸದ್ಧರ್ಮಿಗಳು ಅವರಿಗೆ ನ್ಯಾಯತೀರಿಸಿ ವ್ಯಭಿಚಾರಿಣಿಯರಿಗೂ ರಕ್ತಹರಿಸುವ ಹೆಂಗಸರಿಗೂ ತಕ್ಕ ದಂಡನೆಯನ್ನು ವಿಧಿಸುವರು; ಅವರು ವ್ಯಭಿಚಾರಿಣಿಯರು, ಅವರ ಕೈ ರಕ್ತಸಿಕ್ತವಾಗಿದೆ.”


ವ್ಯಭಿಚಾರಮಾಡುವಂಥ, ರಕ್ತ ಹರಿಸುವಂಥ ಹೆಂಗಸರಿಗೆ ವಿಧಿಸತಕ್ಕ ದಂಡನೆಗಳನ್ನು ನಾನು ನಿನಗೆ ವಿಧಿಸಿ ನನ್ನ ಕೋಪೋದ್ರೇಕವನ್ನೂ ರೋಷಾವೇಶವನ್ನೂ ರಕ್ತದಂತೆ ನಿನ್ನ ಮೇಲೆ ಸುರಿಸುವೆನು.


ಯುದ್ಧ ಕುದುರೆಗಳೋಟದ ಶಬ್ದಕ್ಕೂ ರಥಗಳ ರಭಸಕ್ಕೂ ಚಕ್ರಗಳ ಚಟಪಟಕ್ಕೂ ಹೆದರಿ ಜೋಲುಬೀಳುವುವು ಹೆತ್ತವರ ಕೈಗಳು. ತಮ್ಮ ಮಕ್ಕಳನ್ನೂ ಹಿಂದಿರುಗಿ ನೋಡದೆ ಹೋಗುವರು.


ಅದಕ್ಕೆ ದಾವೀದನು, “ನಾನು ಬಲು ಇಕ್ಕಟ್ಟಿಗೆ ಸಿಕ್ಕಿಕೊಂಡಿದ್ದೇನೆ. ಸರ್ವೇಶ್ವರನ ಕೈಯಲ್ಲೆ ಬೀಳುತ್ತೇನೆ; ಅವರು ಕೃಪಾಪೂರ್ಣರು. ಮನುಷ್ಯರ ಕೈಯಲ್ಲಿ ಬೀಳಲೊಲ್ಲೆ,” ಎಂದು ಹೇಳಿ ವ್ಯಾಧಿಯನ್ನು ಆಯ್ದುಕೊಂಡನು.


ಆದರೆ ಪುರನಿವಾಸಿಗಳು ತಾವು ಆ ಅರಸನಿಂದ ಮಾಡಿಸಿಕೊಂಡ ಪ್ರಮಾಣಗಳಲ್ಲಿ ಭರವಸೆಯಿಟ್ಟು, ಈ ಶಕುನವು ಸುಳ್ಳೆಂದು ಭಾವಿಸುವರು; ಆದರೆ ಅವರು ತನ್ನ ಕೈಗೆ ಸಿಕ್ಕಿಬೀಳಲೆಂದು ಅವರ ಅಧರ್ಮವನ್ನು ಅವನು ಬೆಳಕಿಗೆ ತರುವನು.


ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ: “ಇಗೋ, ರಾಜಾಧಿರಾಜನೂ ಬಾಬಿಲೋನಿನ ಅರಸನೂ ಆದ ನೆಬೂಕದ್ನೆಚ್ಚರನನ್ನು, ಅಶ್ವ, ರಥ, ರಾಹುತ, ಬಹುಸೈನ್ಯ ಪರಿವಾರ ಇವುಗಳಿಂದ ಕೂಡಿದವನಾಗಿ, ನಾನು ಉತ್ತರದಿಂದ ಟೈರಿನ ಮೇಲೆ ಬರಮಾಡುವೆನು.


ಅನಂತರ ಬಾಬಿಲೋನಿಯರು ಅವನನ್ನು ತಮ್ಮ ಅರಸ ನೆಬೂಕದ್ನೆಚ್ಚರನ ಬಳಿಗೆ ಎಳೆದುತಂದರು.


ಇದಲ್ಲದೆ ಬಾಬಿಲೋನಿಯದ ಆ ಅರಸನು ಚಿದ್ಕೀಯನ ಎರಡು ಕಣ್ಣುಗಳನ್ನು ಕಿತ್ತು ಅವನಿಗೆ ಬೇಡಿ ಹಾಕಿ ಬಾಬಿಲೋನಿಗೆ ತೆಗೆದುಕೊಂಡು ಹೋಗಿ ಜೀವನಾವಧಿಯವರೆಗೆ ಅವನನ್ನು ಸೆರೆಯಲ್ಲಿಟ್ಟ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು