Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 23:22 - ಕನ್ನಡ ಸತ್ಯವೇದವು C.L. Bible (BSI)

22 ಹೀಗಿರಲು, ಒಹೊಲೀಬಳೇ, ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - “ಇಗೋ, ಯಾವ ಮಿಂಡರಿಂದ ನಿನ್ನ ಆಸೆ ತೊಲಗಿತೋ ಆ ಮಿಂಡರನ್ನು ಅಂದರೆ, ಮನೋಹರ ಯುವಕರು, ಎಲ್ಲ ನಾಯಕ ಉಪನಾಯಕರು, ಪ್ರಭುಪ್ರಧಾನರು, ಅಶ್ವಾರೂಢರು ಆದ ಬಾಬಿಲೋನಿನವರು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

22 ಆದುದರಿಂದ ಒಹೊಲೀಬಳೇ, ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ಆಹಾ, ಯಾರಿಂದ ನಿನ್ನ ಆಶೆ ತೊಲಗಿತೋ, ಆ ನಿನ್ನ ಪ್ರಿಯನನ್ನು ನಾನು ನಿನ್ನ ವಿರುದ್ಧವಾಗಿ ಎಬ್ಬಿಸುತ್ತೇನೆ. ನಾನು ಅವರನ್ನು ಪ್ರತಿಯೊಂದು ಕಡೆಯಲ್ಲಿಯೂ ನಿನ್ನ ವಿರುದ್ಧವಾಗಿ ತರುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

22 ಹೀಗಿರಲು, ಒಹೊಲೀಬಳೇ, ಕರ್ತನಾದ ಯೆಹೋವನು ಇಂತೆನ್ನುತ್ತಾನೆ - ಆಹಾ, ಯಾವ ವಿುಂಡರಿಂದ ನಿನ್ನ ಆಶೆ ತೊಲಗಿತೋ ಆ ವಿುಂಡರನ್ನು ಅಂದರೆ ಮನೋಹರ ಯುವಕರೂ ಯಾರೂ ತಪ್ಪದೆ ನಾಯಕೋಪನಾಯಕರೂ ಪ್ರಭುಪ್ರಧಾನರೂ ಅಶ್ವಾರೂಢರೂ ಆದ ಬಾಬೆಲಿನವರು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

22 ಆದ್ದರಿಂದ ನನ್ನ ಒಡೆಯನಾದ ಯೆಹೋವನು ಹೇಳುವುದೇನೆಂದರೆ, ‘ಓಹೊಲೀಬಳೇ, ನಿನ್ನ ಪ್ರಿಯತಮರಲ್ಲಿ ಕೆಲವರು ನಿನಗೆ ಅಸಹ್ಯವಾಗಿದ್ದಾರೆ. ಆದರೆ ನಾನು ಆ ಪ್ರಿಯತಮರನ್ನು ಇಲ್ಲಿಗೆ ಕರೆದುಕೊಂಡು ಬರುವೆ. ಅವರು ನಿನ್ನನ್ನು ಸುತ್ತುವರಿಯುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

22 “ಆದ್ದರಿಂದ ಒಹೊಲೀಬಳೇ, ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ; ಯಾರಿಂದ ನಿನ್ನ ಮನಸ್ಸಿನಲ್ಲಿ ಜಿಗುಪ್ಸೆ ಹುಟ್ಟಿತೋ ಆ ನಿನ್ನ ಪ್ರಿಯನನ್ನು ನಾನು ನಿನಗೆ ವಿರೋಧವಾಗಿ ಎಬ್ಬಿಸುತ್ತೇನೆ. ನಾನು ಅವರನ್ನು ಪ್ರತಿಯೊಂದು ಕಡೆಯಲ್ಲಿಯೂ ವಿರೋಧವಾಗಿ ತರುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 23:22
11 ತಿಳಿವುಗಳ ಹೋಲಿಕೆ  

ಇವುಗಳನ್ನು ನಾನು ನೋಡಿ, ನೀನು ರಮಿಸಿದ ನಿನ್ನ ಎಲ್ಲ ಮಿಂಡರನ್ನೂ, ನೀನು ಮೋಹಿಸಿದ ಸಮಸ್ತ ಜಾರರನ್ನೂ, ನೀನು ಹಗೆಮಾಡಿದ ಎಲ್ಲರನ್ನೂ, ಸುತ್ತುಮುತ್ತಲು ನಿನಗೆ ವಿರುದ್ಧ ಒಟ್ಟುಗೂಡಿಸಿ, ಅವರ ಕಣ್ಣೆದುರಿಗೆ ನಿನ್ನನ್ನು ಬೆತ್ತಲೆಗೈದು ನಿನ್ನ ಮಾನವನ್ನು ಬಟ್ಟಬಯಲು ಮಾಡುವೆನು.


ನೀನು ಕಂಡ ಮೃಗವೂ ಅದರ ಹತ್ತು ಕೊಂಬುಗಳೂ ಆ ವೇಶ್ಯೆಯನ್ನು ದ್ವೇಷಿಸುವವರನ್ನು ಸೂಚಿಸುತ್ತದೆ. ಅವರು ಅವಳನ್ನು ನಿರ್ಗತಿಕಳನ್ನಾಗಿ ಮಾಡುವರು, ಬೆತ್ತಲೆಯಾಗಿಸುವರು; ಅವಳ ಮಾಂಸವನ್ನು ಕಿತ್ತು ತಿನ್ನುವರು; ಅವಳನ್ನೇ ಬೆಂಕಿಯಲ್ಲಿ ಸುಟ್ಟುಬಿಡುವರು.


ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - “ಇಗೋ, ನೀನು ಯಾರನ್ನು ಹಗೆಮಾಡುತ್ತೀಯೋ ಯಾರ ಬಗ್ಗೆ ಅಸಹ್ಯಪಡುತ್ತಿಯೋ


ಆದಕಾರಣ ನಾನು ಅವಳನ್ನು ಅವಳ ಮಿಂಡರ ಕೈಗೆ ಅಂದರೆ, ಅವಳು ಮೋಹಿಸಿದ ಅಸ್ಸೀರಿಯರ ಕೈಗೆ ಒಪ್ಪಿಸಿದೆ.


ಒಹೊಲೀಬಳೇ, ನಿನ್ನ ಪುಟ್ಟ ಮೊಲೆಗಳಿಗೆ ಆಸೆಬಿದ್ದ ಈಜಿಪ್ಟ್‌ರಿಂದ ತೊಟ್ಟುಗಳನ್ನು ಚಿವುಟಿಸಿಕೊಂಡ ನಿನ್ನ ತಾರುಣ್ಯದ ಕಾಮವನ್ನು ನೀನು ನೆನಪಿಗೆ ತಂದುಕೊಂಡು ಆ ಮಿಂಡರನ್ನು ಮೋಹಿಸಿದೆಯಲ್ಲವೆ?”


ಸಮಸ್ತ ಕಸ್ದೀಯರು, ಪಕೋದಿನವರು, ಷೋಯದವರು, ಕೋಯದವರು, ಇವರನ್ನೂ ಇವರೊಂದಿಗೆ ಅಸ್ಸೀರಿಯರೆಲ್ಲರನ್ನೂ ನಾನು ನಿನಗೆ ವಿರುದ್ಧ ಎಬ್ಬಿಸಿ, ಎಲ್ಲ ಕಡೆಯಿಂದಲೂ ನಿನ್ನ ಮೇಲೆ ಬೀಳುವಂತೆ ಮಾಡುವೆನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು