Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 21:4 - ಕನ್ನಡ ಸತ್ಯವೇದವು C.L. Bible (BSI)

4 ನಾನು ನಿನ್ನಲ್ಲಿನ ಸಜ್ಜನರನ್ನೂ ದುರ್ಜನರನ್ನೂ ಸಂಹರಿಸಬೇಕೆಂದಿರುವುದರಿಂದ ನನ್ನ ಖಡ್ಗ ಒರೆಯಿಂದ ಹೊರಟು ದಕ್ಷಿಣದಿಂದ ಉತ್ತರವರೆಗೆ ಸಕಲ ನರಪ್ರಾಣಿಗಳ ಮೇಲೆ ಬೀಳುವುದು;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ನಾನು ನಿನ್ನಲ್ಲಿನ ಶಿಷ್ಟರನ್ನೂ, ದುಷ್ಟರನ್ನೂ ಸಂಹರಿಸಬೇಕೆಂದಿರುವುದರಿಂದ ನನ್ನ ಖಡ್ಗವು ಒರೆಯಿಂದ ಹೊರಟು ದಕ್ಷಿಣದಿಂದ ಉತ್ತರದವರೆಗೆ ಸಕಲ ನರಪ್ರಾಣಿಗಳ ಮೇಲೆ ಬೀಳುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4 ನಾನು ನಿನ್ನಲ್ಲಿನ ಶಿಷ್ಟರನ್ನೂ ದುಷ್ಟರನ್ನೂ ಸಂಹರಿಸಬೇಕೆಂದಿರುವದರಿಂದ ನನ್ನ ಖಡ್ಗವು ಒರೆಯಿಂದ ಹೊರಟು ತೆಂಕಲಿಂದ ಬಡಗಲವರೆಗೆ ಸಕಲನರಪ್ರಾಣಿಗಳ ಮೇಲೆ ಬೀಳುವದು;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ಒಳ್ಳೆಯ ಜನರನ್ನೂ ಕೆಟ್ಟ ಜನರನ್ನೂ ನಿನ್ನಿಂದ ಕಡಿದುಹಾಕುವೆನು. ನನ್ನ ಖಡ್ಗವನ್ನು ಒರೆಯಿಂದ ತೆಗೆದು ದಕ್ಷಿಣದಿಂದ ಉತ್ತರದ ತನಕ ಇರುವ ಎಲ್ಲಾ ಜನರಿಗೆ ವಿರುದ್ಧವಾಗಿ ಉಪಯೋಗಿಸುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

4 ಆಮೇಲೆ ನಾನು ನೀತಿವಂತರನ್ನೂ, ದುಷ್ಟರನ್ನೂ ಕಡಿದುಬಿಡುವುದರಿಂದ ನನ್ನ ಖಡ್ಗವು ದಕ್ಷಿಣದಿಂದ ಮೊದಲುಗೊಂಡು ಉತ್ತರದ ಮನುಷ್ಯರೆಲ್ಲರಿಗೆ ವಿರೋಧವಾಗಿ ಅದರ ಒರೆಯನ್ನು ಬಿಟ್ಟು ಹೋಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 21:4
10 ತಿಳಿವುಗಳ ಹೋಲಿಕೆ  

ಆ ವನಕ್ಕೆ ಹೀಗೆ ಪ್ರವಾದಿಸು: ‘ಸರ್ವೇಶ್ವರನ ಮಾತನ್ನು ಕೇಳು: ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ಆಹಾ, ನಾನು ನಿನ್ನೊಳಗೆ ಬೆಂಕಿಯನ್ನು ಹೊತ್ತಿಸುವೆನು. ಅದು ನಿನ್ನಲ್ಲಿನ ಎಲ್ಲಾ ಹಸಿರುಮರಗಳನ್ನೂ ಒಣಮರಗಳನ್ನೂ ಕಬಳಿಸಿಬಿಡುವುದು; ಧಗಧಗಿಸುವ ಜ್ವಾಲೆ ಆರದೆ, ತೆಂಕಲಿಂದ ಬಡಗಲವರೆಗೆ ಎಲ್ಲರ ಮುಖಗಳನ್ನು ಕುಂದಿಸುವುದು.


“ನರಪುತ್ರನೇ, ಸರ್ವೇಶ್ವರನಾದ ದೇವರು ಇಸ್ರಯೇಲ್ ನಾಡಿಗೆ ಹೀಗೆ ನುಡಿಯುತ್ತಾರೆ: ‘ಪ್ರಳಯ, ಪೂರ್ಣಪ್ರಳಯ ನಾಡಿನ ಚತುರ್ದಿಕ್ಕಿನಲ್ಲೂ ಸಂಭವಿಸಿದೆ.’


ಆಕಾಶದತ್ತ ಕೈಯೆತ್ತಿ ಪ್ರಮಾಣಮಾಡುವೆ, ಚಿರಂಜೀವಿಯಾದೆನ್ನ ಮೇಲೆ ಆಣೆಯಿಟ್ಟು ಹೇಳುವೆ:


ನಾಡಿನ ಒಂದು ಕಡೆಯಿಂದ ಮತ್ತೊಂದು ಕಡೆಯವರೆಗೆ ಕೊಳ್ಳೆಗಾರರು ಕಾಡುಗುಡ್ಡೆಗಳ ಮೇಲೆಲ್ಲ ಕಂಡುಬಂದಿದ್ದಾರೆ. ಕಬಳಿಸಿಬಿಡುವುದು ನನ್ನ ಖಡ್ಗ ಯಾರಿಗು ನೆಮ್ಮದಿಯಿಲ್ಲದ ಹಾಗೆ.


ಸರ್ವೇಶ್ವರಾ: “ನೀನು ಅವರಿಗೆ ಹೀಗೆಂದು ಹೇಳು: ‘ಇಸ್ರಯೇಲಿನ ದೇವರೂ ಸರ್ವಶಕ್ತರೂ ಆದ ಸರ್ವೇಶ್ವರ ಹೇಳಿದ್ದಾರೆ - ನೀವು ಕುಡಿಯಬೇಕು, ಕುಡಿದು ಕಕ್ಕಬೇಕು. ನಾನು ಕಳಿಸುವ ಖಡ್ಗಕ್ಕೆ ತುತ್ತಾಗಿ ಬೀಳಬೇಕು, ಬಿದ್ದು ಏಳಬಾರದು.’


“ ‘ಖಡ್ಗವೇ, ಆ ನಾಡನ್ನು ಹೊಕ್ಕುಹೋಗು’ ಎಂದು ಆಜ್ಞಾಪಿಸಿ ನಾನು ಅದನ್ನು ಆ ನಾಡಿಗೆ ತಂದು, ಜನ ಹಾಗು ಜಾನುವಾರುಗಳನ್ನು ಅದರೊಳಗಿಂದ ನಿರ್ಮೂಲಮಾಡುವ ಪಕ್ಷದಲ್ಲಿ


“ನರಪುತ್ರನೇ, ನೀನು ದಕ್ಷಿಣಾಭಿಮುಖನಾಗಿ, ಆ ಕಡೆಗೆ ಮಾತಾಡುತ್ತಾ ದಕ್ಷಿಣ ಸೀಮೆಯ ವನವನ್ನು ಉದ್ದೇಶಿಸಿ ಪ್ರಸ್ತಾಪವನ್ನೆತ್ತಿ,


“ನರಪುತ್ರನೇ, ಪ್ರವಾದಿಸು ಸರ್ವೇಶ್ವರ ಹೀಗೆನ್ನುತ್ತಾರೆಂದು:


ಆಹಾ ಖಡ್ಗ, ಖಡ್ಗ, ಸಾಣೆ ಹಿಡಿದ ಖಡ್ಗ, ಮಸೆದ ಖಡ್ಗ! ಸಾಣೆ ಹಿಡಿದಿದೆ ಹತಿಸುವಂತೆ, ಮಸೆದಿದೆ ಮಿಂಚುವಂತೆ. ಸಂಭ್ರಮಿಸಲಾದೀತೆ ‘ನಮ್ಮ ಕುಮಾರನ ರಾಜದಂಡ’ ಎಂದು? ಮಿಕ್ಕ ದಂಡಗಳನ್ನೆಲ್ಲ ಧಿಕ್ಕರಿಸುವಂಥ ದಂಡವೆಂದುಕೊಂಡು?


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು