Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 21:30 - ಕನ್ನಡ ಸತ್ಯವೇದವು C.L. Bible (BSI)

30 ಕತ್ತಿಯನ್ನು ಒರೆಗೆ ಸೇರಿಸು. ನೀನು ಹುಟ್ಟಿದ ಸ್ಥಳದಲ್ಲಿ, ನಿನ್ನ ಜನ್ಮಭೂಮಿಯಲ್ಲಿ, ನಿನಗೆ ನ್ಯಾಯತೀರಿಸುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

30 “‘ಕತ್ತಿಯನ್ನು ಒರೆಗೆ ಸೇರಿಸು. ನಿನ್ನ ಸೃಷ್ಟಿಯಾದ ಸ್ಥಳದಲ್ಲಿ, ನಿನ್ನ ಜನ್ಮಭೂಮಿಯಲ್ಲಿ ನಿನಗೆ ನ್ಯಾಯ ತೀರಿಸುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

30 ಕತ್ತಿಯನ್ನು ಒರೆಗೆ ಸೇರಿಸು. ನಿನ್ನ ಸೃಷ್ಟಿಸ್ಥಳದಲ್ಲಿ, ನಿನ್ನ ಜನ್ಮಭೂವಿುಯಲ್ಲಿ ನಿನಗೆ ನ್ಯಾಯತೀರಿಸುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

30 “‘ಬಾಬಿಲೋನೇ, ನಿನ್ನ ಖಡ್ಗವನ್ನು ಒರೆಯಲ್ಲಿ ಹಾಕು. ನೀನು ಎಲ್ಲಿ ನಿರ್ಮಿಸಲ್ಪಟ್ಟಿದ್ದೆಯೋ, ಎಲ್ಲಿ ನೀನು ಜನ್ಮತಾಳಿದೆಯೋ ಅಲ್ಲಿ ನಿನ್ನ ನ್ಯಾಯತೀರಿಸುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

30 “ ‘ಖಡ್ಗವನ್ನು ಒರೆಗೆ ಸೇರಿಸು, ನೀನು ಸೃಷ್ಟಿಯಾದ ಸ್ಥಳದಲ್ಲಿಯೇ ನಿನ್ನ ಪೂರ್ವಜರ ನಾಡಿನಲ್ಲಿಯೇ ನಿನಗೆ ನ್ಯಾಯತೀರಿಸುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 21:30
9 ತಿಳಿವುಗಳ ಹೋಲಿಕೆ  

ವ್ಯಭಿಚಾರಮಾಡುವಂಥ, ರಕ್ತ ಹರಿಸುವಂಥ ಹೆಂಗಸರಿಗೆ ವಿಧಿಸತಕ್ಕ ದಂಡನೆಗಳನ್ನು ನಾನು ನಿನಗೆ ವಿಧಿಸಿ ನನ್ನ ಕೋಪೋದ್ರೇಕವನ್ನೂ ರೋಷಾವೇಶವನ್ನೂ ರಕ್ತದಂತೆ ನಿನ್ನ ಮೇಲೆ ಸುರಿಸುವೆನು.


ಆದರೆ ಅವರನ್ನು ಗುಲಾಮರನ್ನಾಗಿಸಿಕೊಳ್ಳುವ ರಾಷ್ಟ್ರವನ್ನು ನಾನು ದಂಡಿಸುವೆನು. ಬಳಿಕ ಬಿಡುಗಡೆ ಹೊಂದಿ ಅಧಿಕ ಆಸ್ತಿವಂತರಾಗಿ ಹಿಂತಿರುಗುವರು.


ಹುಟ್ಟಿದ ದಿನದಿಂದ ಅಪರಾಧವೆಸಗುವವರೆಗೆ ನಿರ್ದೋಷವಾಗಿತ್ತು ನಿನ್ನ ನಡತೆ.


ನೀನಿದ್ದೆ ದೇವರ ಉದ್ಯಾನವನದ ಏದೆನಿನೊಳು ಮಾಣಿಕ್ಯ, ಪುಷ್ಯರಾಗ, ಪಚ್ಚೆ, ಪೀತರತ್ನ, ಬೆರುಲ್ಲ, ವೈಡೂರ್ಯ, ನೀಲ, ಕೆಂಪರಲು, ಸ್ಫಟಿಕವೆಂಬ ನವರತ್ನಗಳಿಂದ ಭೂಷಿತನಾಗಿದ್ದೆ ನೀನು. ನಿನ್ನ ಕಿವಿಯೋಲೆ ಆಭರಣಗಳು ಸುವರ್ಣಖಚಿತವಾಗಿದ್ದವು. ನಿನ್ನ ಸೃಷ್ಟಿಯ ದಿನದಂದೇ ಸಿದ್ಧವಾಗಿದ್ದವವು.


ನಾನು ರಬ್ಬಾಪಟ್ಟಣವನ್ನು ಒಂಟೆಗಳಿಗೆ ಲಾಯವನ್ನಾಗಿ ಹಾಗೂ ಅಮ್ಮೋನ್ ಸೀಮೆಯನ್ನು ಹಿಂಡುಗಳಿಗೆ ರೊಪ್ಪವನ್ನಾಗಿ ಮಾಡುವೆನು; ನಾನೇ ಸರ್ವೇಶ್ವರ ಎಂದು ನಿಮಗೆ ಗೊತ್ತಾಗುವುದು.


ನೀನು ಅವರಿಗೆ ಹೀಗೆ ನುಡಿ, ‘ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ: ಈ ಹೊರೆ ಜೆರುಸಲೇಮಿನಲ್ಲಿರುವ ರಾಜನಿಗೂ ಅಲ್ಲಿನ ಇಸ್ರಯೇಲ್ ವಂಶದವರೆಲ್ಲರಿಗೂ ಸಂಬಂಧಪಟ್ಟಿದೆ;


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು