Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 21:28 - ಕನ್ನಡ ಸತ್ಯವೇದವು C.L. Bible (BSI)

28 “ನರಪುತ್ರನೇ, ನೀನು ದೈವಸಂಕಲ್ಪವನ್ನು ಪ್ರಕಟಿಸುತ್ತಾ ಹೀಗೆ ನುಡಿ - ಅಮ್ಮೋನ್ಯರ ವಿಷಯದಲ್ಲೂ ಅವರು ಮಾಡುವ ದೂಷಣೆಯ ವಿಷಯದಲ್ಲೂ ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ಆಹಾ, ಖಡ್ಗ, ಖಡ್ಗ, ಸಂಹರಿಸುವುದಕ್ಕೆ ಹಿರಿದಿದೆ; ಮಿಂಚುವಂತೆ ಪೂರ್ಣ ಮಸೆಯಲಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

28 ನರಪುತ್ರನೇ, ನೀನು ದೈವಸಂಕಲ್ಪವನ್ನು ಪ್ರಕಟಿಸುತ್ತಾ ಹೀಗೆ ನುಡಿ, “ಅಮ್ಮೋನ್ಯರ ವಿಷಯದಲ್ಲಿಯೂ ಮತ್ತು ಅವರು ಮಾಡುವ ದೂಷಣೆಯ ವಿಷಯದಲ್ಲಿಯೂ ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ‘ಆಹಾ, ಖಡ್ಗ, ಸಂಹರಿಸುವುದಕ್ಕೆ ಹಿರಿದಿದೆ, ಮಿಂಚುವಂತೆ ಚೆನ್ನಾಗಿ ಮಸೆದಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

28 ನರಪುತ್ರನೇ, ನೀನು ದೈವಸಂಕಲ್ಪವನ್ನು ಪ್ರಕಟಿಸುತ್ತಾ ಹೀಗೆ ನುಡಿ - ಅಮ್ಮೋನ್ಯರ ವಿಷಯದಲ್ಲಿಯೂ ಅವರು ಮಾಡುವ ದೂಷಣೆಯ ವಿಷಯದಲ್ಲಿಯೂ ಕರ್ತನಾದ ಯೆಹೋವನು ಇಂತೆನ್ನುತ್ತಾನೆ - ಆಹಾ, ಖಡ್ಗ, ಖಡ್ಗ, ಸಂಹರಿಸುವದಕ್ಕೆ ಹಿರಿದಿದೆ, ವಿುಂಚುವಂತೆ ತೀರಾತಿಕ್ಕಿದೆ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

28 ದೇವರು ಹೇಳಿದ್ದು, “ನರಪುತ್ರನೇ, ನನ್ನ ಪರವಾಗಿ ಜನರ ಕೂಡ ಮಾತನಾಡು. ‘ನನ್ನ ಒಡೆಯನಾದ ಯೆಹೋವನು ಅಮ್ಮೋನಿಯರ ಬಗ್ಗೆಯೂ ಅವರ ದೂಷಣೆಗಳ ಬಗ್ಗೆಯೂ ಹೀಗೆ ಹೇಳುತ್ತಾನೆ: “‘ನೋಡು, ಒಂದು ಖಡ್ಗ. ಆ ಖಡ್ಗವು ಒರೆಯಿಂದ ಹೊರಬಂದಿದೆ. ಆ ಖಡ್ಗವನ್ನು ಹರಿತಗೊಳಿಸಲಾಗಿದೆ ಮತ್ತು ನಯಗೊಳಿಸಲಾಗಿದೆ. ಖಡ್ಗವು ಕೊಲ್ಲಲು ಸಿದ್ಧವಾಗಿದೆ. ಮಿಂಚಿನಂತೆ ಹೊಳೆಯಲೆಂದು ಅದನ್ನು ನಯಗೊಳಿಸಲಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

28 “ಮನುಷ್ಯಪುತ್ರನೇ, ನೀನು ಪ್ರವಾದಿಸಿ, ಸಾರ್ವಭೌಮ ಯೆಹೋವ ದೇವರು ಅಮ್ಮೋನಿಯರ ವಿಷಯವಾಗಿಯೂ ಅವರ ನಿಂದೆಯ ವಿಷಯವಾಗಿಯೂ ಹೀಗೆ ಹೇಳುತ್ತಾರೆ, ‘ಹೌದು, ನೀನು ಹೀಗೆ ಹೇಳು: “ ‘ಒಂದು ಖಡ್ಗವು, ಒಂದು ಖಡ್ಗವು ಸಂಹರಿಸುವುದಕ್ಕೆ ಹಿರಿದಿದೆ, ಮಿಂಚುವಂತೆ ಬಹಳವಾಗಿ ಮಸೆಯಲಾಗಿದೆ. ಥಳಥಳಿಸುತ್ತಾ ನುಂಗುವಹಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 21:28
15 ತಿಳಿವುಗಳ ಹೋಲಿಕೆ  

ಅಮ್ಮೋನ್ಯರ ರಬ್ಬಾ ಪಟ್ಟಣಕ್ಕೂ ಜುದೇಯದಲ್ಲಿ ಕೋಟೆಕೊತ್ತಲಗಳಿಂದ ಕೂಡಿದ ಜೆರುಸಲೇಮಿಗೂ ಆ ಖಡ್ಗ ಬರುವುದಕ್ಕೆ ದಾರಿಗಳನ್ನು ಮಾಡು.


ನಾಡಿನ ಒಂದು ಕಡೆಯಿಂದ ಮತ್ತೊಂದು ಕಡೆಯವರೆಗೆ ಕೊಳ್ಳೆಗಾರರು ಕಾಡುಗುಡ್ಡೆಗಳ ಮೇಲೆಲ್ಲ ಕಂಡುಬಂದಿದ್ದಾರೆ. ಕಬಳಿಸಿಬಿಡುವುದು ನನ್ನ ಖಡ್ಗ ಯಾರಿಗು ನೆಮ್ಮದಿಯಿಲ್ಲದ ಹಾಗೆ.


ಆ ಅಸ್ಸೀರಿಯಾದವರು ಕತ್ತಿಯಿಂದ ಹತರಾಗುವರು, ಮನುಷ್ಯರ ಕತ್ತಿಯಿಂದಲ್ಲ; ಖಡ್ಗವು ಅವರನ್ನು ಕಬಳಿಸುವುದು, ಅದು ಮಾನವ ಖಡ್ಗವಲ್ಲ. ಅವರು ಕತ್ತಿಗೆ ಹೆದರಿ ಓಡುವರು. ಅವರ ಯುವಕರು ಗುಲಾಮರಾಗುವರು.


ಆದರೆ ಈ ದಿನ, ಯುದ್ಧದ ದಿನ ಸೇನಾಧೀಶ್ವರನೆಂಬ ಸರ್ವೇಶ್ವರ ಸ್ವಾಮಿ ಶತ್ರುಗಳಿಗೆ ಮುಯ್ಯಿ ತೀರಿಸುವ ದಿನ ಇದು ದಂಡನೆಯ ದಿನ. ಇಂದು ಖಡ್ಗವು ಕಬಳಿಸುವುದು ತೃಪ್ತಿಯಾಗಿ ರಕ್ತವನ್ನು ಹೀರುವುದು ಸಂತೃಪ್ತಿಯಾಗಿ ಉತ್ತರದ ಯೂಪ್ರೆಟಿಸ್ ನದಿಯ ಹತ್ತಿರ ಬಲಿಮಾಡಬೇಕೆಂದಿರುವನು ಸರ್ವಶಕ್ತನೆಂಬ ಸರ್ವೇಶ್ವರ.


“ಪ್ರಕಟಿಸಿರಿ ಈಜಿಪ್ಟಿನಲ್ಲಿ, ಪ್ರಚುರಪಡಿಸಿರಿ ಮಿಗ್ದೋಲ್, ತಹಪನೇಸ್, ಹಾಗು ಸೋಫ್ ಎಂಬೀ ನಗರಗಳಲ್ಲಿ. ಸಾರಿರಿ ಇಂತೆಂದು: ‘ಈಜಿಪ್ಟೇ, ಸ್ಥಿರವಾಗಿ ನಿಲ್ಲು, ಯುದ್ಧ ಸನ್ನದ್ಧವಾಗು, ಖಡ್ಗ ಆವರಿಸುತ್ತಿದೆ ನಿನ್ನ ಸುತ್ತಮುತ್ತಲು’


ಮ್ಲೇಚ್ಛರ ಧಿಕ್ಕಾರವನ್ನು ಇನ್ನು ನಿನ್ನ ಕಿವಿಗೆ ಬೀಳಿಸೆನು; ನೀನು ಜನಾಂಗಗಳಿಂದ ಇನ್ನು ಅವಮಾನವನ್ನು ಅನುಭವಿಸದಿರುವೆ; ನಿನ್ನ ಪ್ರಜೆ ಮುಗ್ಗರಿಸುವುದಕ್ಕೆ ಇನ್ನು ನೀನು ಕಾರಣನಾಗುವುದಿಲ್ಲ” ಇದು ಸರ್ವೇಶ್ವರನಾದ ದೇವರ ನುಡಿ.


ಸರ್ವೇಶ್ವರಸ್ವಾಮಿ ಬಾಬಿಲೋನಿಯದ ಅರಸನನ್ನು ಅವರ ಮೇಲೆ ಬರಮಾಡಿ ಎಲ್ಲರನ್ನೂ ಅವನ ಕೈಗೊಪ್ಪಿಸಿದರು. ಅವನು ಅವರ ಯುವ ಯೋಧರನ್ನು ಅವರ ಪವಿತ್ರಾಲಯದಲ್ಲೇ ಕತ್ತಿಯಿಂದ ಸಂಹರಿಸಿದನು. ಯುವಕರನ್ನು, ಕನ್ಯೆಯರನ್ನು, ವೃದ್ಧರನ್ನು ಹಾಗು ಅತಿವೃದ್ಧರನ್ನು ಕನಿಕರಿಸದೆ ಎಲ್ಲರನ್ನು ಕೊಲ್ಲಿಸಿದನು.


ಮತ್ತು ರಾಜವಂಶದವನೊಬ್ಬನನ್ನು ಆರಿಸಿ ಅವನೊಂದಿಗೆ ಒಪ್ಪಂದಮಾಡಿ ಅವನಿಂದ ಆಣೆಯಿಡಿಸಿದ.


ಆದರೆ ಅವನು ಬಾಬಿಲೋನಿನ ಅರಸನ ವಿರುದ್ಧ ದಂಗೆಯೆದ್ದು ಕುದುರೆಗಳನ್ನೂ ಬಹುಮಂದಿ ಸೈನಿಕರನ್ನೂ ನಮಗೆ ಒದಗಿಸೆಂದು ಈಜಿಪ್ಟಿಗೆ ರಾಯಭಾರಿಗಳನ್ನು ಕಳುಹಿಸಿದ. ಆದರೂ ಇವನು ಗೆಲ್ಲುವನೇ? ಇಂಥಾ ಕೃತ್ಯಗಳನ್ನು ನಡೆಸಿದವನು ಪಾರಾಗುವನೇ? ಒಪ್ಪಂದವನ್ನು ಮೀರಿದವನು ತಪ್ಪಿಸಿಕೊಂಡಾನೇ?


ಪೂರ್ವದಲ್ಲಿ ಗಿಬ್ಯದವರು ಭ್ರಷ್ಟರಾದಂತೆ ಎಫ್ರಯಿಮಿನವರು ಅತಿ ಭ್ರಷ್ಟರಾಗಿದ್ದಾರೆ. ದೇವರು ಅವರ ಅಪರಾಧವನ್ನು ನೆನಪಿಗೆ ತಂದುಕೊಳ್ಳುವರು. ಅವರ ಪಾಪಕ್ಕೆ ತಕ್ಕ ದಂಡನೆಯನ್ನು ವಿಧಿಸುವರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು