Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 21:11 - ಕನ್ನಡ ಸತ್ಯವೇದವು C.L. Bible (BSI)

11 ಬಳಕೆಗೆ ಸಿದ್ಧವಿರಲೆಂದು ಕೊಡಲಾಗಿದೆ ಆ ಖಡ್ಗ ಮಸೆಯಲಿಕ್ಕೆ ಮಸೆದು, ಸಾಣೆ ಹಿಡಿದು, ಸಜ್ಜಾಗಿದೆ ಅದು ಹತ್ಯಗಾರನ ಹಿಡಿತಕ್ಕೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 ಖಡ್ಗವು ಕೈಗೆ ಸಿಗುವಂತೆ ಮಸೆದು ಸಿದ್ಧವಾಗಿದೆ, ಘಾತಕನ ಕೈಗೆ ಈಡಾಗುವ ಹಾಗೆ ಸಾಣೆಹಿಡಿದಿದೆ, ಮಸೆದಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

11 ಖಡ್ಗವು ಕೈಗೆ ಸಿದ್ಧವಾಗುವಂತೆ ತಿಕ್ಕುವದಕ್ಕೆ ಕೊಟ್ಟಿದೆ, ಘಾತಕನ ಕೈಗೆ ಈಡಾಗುವ ಹಾಗೆ ಸಾಣೆಹಿಡಿದಿದೆ, ತಿಕ್ಕಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

11 ಖಡ್ಗವು ಉಜ್ಜಲ್ಪಟ್ಟಿದೆ. ಅದು ಈಗ ಉಪಯೋಗಿಸಲ್ಪಡುತ್ತದೆ. ಖಡ್ಗವು ಹರಿತಮಾಡಲ್ಪಟ್ಟು ಚೆನ್ನಾಗಿ ಉಜ್ಜಲ್ಪಟ್ಟಿದೆ. ಅದನ್ನು ಈಗ ಕೊಲ್ಲುವವನ ಕೈಯಲ್ಲಿ ಕೊಡಲಾಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

11 “ ‘ಖಡ್ಗವು ಕೈಯಲ್ಲಿ ಅದು ಹಿಡಿಯಲಾಗುವ ಹಾಗೆ ಮಸೆಯಲು ಕೊಡಲಾಗಿದೆ. ಕೊಲ್ಲುವವನ ಕೈಗೆ ಕೊಡುವ ಹಾಗೆ ಆ ಖಡ್ಗಕ್ಕೆ ಹದವನ್ನೂ, ಸಾಣೆಯನ್ನೂ ಮಾಡಲಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 21:11
8 ತಿಳಿವುಗಳ ಹೋಲಿಕೆ  

ಬಾಬಿಲೋನಿನ ಅರಸನ ಖಡ್ಗ ಬರುವುದಕ್ಕೆ ಎರಡು ದಾರಿಗಳುಳ್ಳ ನಕ್ಷೆಯನ್ನು ಬರೆ; ಅವೆರಡು ದಾರಿಗಳು ಒಂದೇ ದೇಶದಿಂದ ಹೊರಟಹಾಗಿರಲಿ; ಒಂದೊಂದು ಪಟ್ಟಣಕ್ಕೆ ಹೋಗುವ ದಾರಿಯ ಮೊದಲಲ್ಲಿ ಕೈಮರವನ್ನು ಚಿತ್ರಿಸು.


ಆ ದಿನದಲ್ಲಿ ಸರ್ವೇಶ್ವರನಿಂದ ಹತರಾದವರು ಲೋಕದ ಒಂದು ಕಡೆಯಿಂದ ಇನ್ನೊಂದು ಕಡೆಯವರೆಗೆ ಬಿದ್ದಿರುವರು. ಅವರಿಗಾಗಿ ಯಾರೂ ಗೋಳಾಡರು, ಅವರನ್ನು ಯಾರೂ ಒಟ್ಟುಗೂಡಿಸರು, ಯಾರೂ ಹೂಣರು. ಭೂಮಿಯ ಮೇಲೆ ಗೊಬ್ಬರವಾಗಿ ಬಿದ್ದಿರುವರು.


“ನೀವು ನನ್ನ ಮಾತನ್ನು ಕೇಳದ ಕಾರಣ ನಾನು ಉತ್ತರಭಾಗದ ರಾಷ್ಟ್ರಗಳನ್ನೆಲ್ಲ ಕರೆಯಿಸುವೆನು. ಬಾಬಿಲೋನಿನ ಅರಸ ಹಾಗು ನನ್ನ ಸೇವಕನಾದ ನೆಬೂಕದ್ನೆಚ್ಚರನನ್ನೂ ಬರಮಾಡುವೆನು. ಅವರು ಈ ನಾಡಿನ, ಇದರ ನಿವಾಸಿಗಳ, ಮತ್ತು ಸುತ್ತಮುತ್ತಲಿನ ನಾಡುಗಳ ಮೇಲೂ ಬೀಳುವರು. ಹೀಗೆ ಇವುಗಳನ್ನು ತೀರ ಹಾಳುಮಾಡುವೆನು. ನಿರಂತರ ಪರಿಹಾಸ್ಯಕ್ಕೂ ಪರಿವಿನಾಶಕ್ಕೂ ಇವನ್ನು ಗುರಿಪಡಿಸುವೆನು.


ಆಹಾ ಖಡ್ಗ, ಖಡ್ಗ, ಸಾಣೆ ಹಿಡಿದ ಖಡ್ಗ, ಮಸೆದ ಖಡ್ಗ! ಸಾಣೆ ಹಿಡಿದಿದೆ ಹತಿಸುವಂತೆ, ಮಸೆದಿದೆ ಮಿಂಚುವಂತೆ. ಸಂಭ್ರಮಿಸಲಾದೀತೆ ‘ನಮ್ಮ ಕುಮಾರನ ರಾಜದಂಡ’ ಎಂದು? ಮಿಕ್ಕ ದಂಡಗಳನ್ನೆಲ್ಲ ಧಿಕ್ಕರಿಸುವಂಥ ದಂಡವೆಂದುಕೊಂಡು?


ನರಪುತ್ರನೇ, ಕೂಗು, ಗೋಳಾಡು, ಬಡಿದುಕೋ ಎದೆ! ಎರಗಿದೆ ಆ ಖಡ್ಗ ನನ್ನ ಜನರ ಮೇಲೆ ಇಸ್ರಯೇಲಿನ ಅರಸರೆಲ್ಲರ ಮೇಲೆ ತುತ್ತಾಗುವರು ಅದಕ್ಕೆ ಜನನಾಯಕರು ಜನರೊಂದಿಗೆ.


ನಡೆದ ಸಂಗತಿಯನ್ನೆಲ್ಲಾ ಕೇಳಿದಾಗ, ಮೊರ್ದೆಕೈ ತನ್ನ ಬಟ್ಟೆಗಳನ್ನು ಹರಿದು ಗೋಣಿತಟ್ಟನ್ನು ಉಟ್ಟು, ಬೂದಿಯನ್ನು ಸುರಿದುಕೊಂಡು ನಗರದ ಮಧ್ಯೆ ಹೋಗುತ್ತಾ ಅಪಾರ ದುಃಖದಿಂದ ಗೋಳಾಡಿದನು.


“ಆದ್ದರಿಂದ ನನ್ನ ಕಡೆ ನೋಡಬೇಡಿ. ನನ್ನನ್ನು ಸಂತೈಸಲು ಪ್ರಯತ್ನಿಸಬೇಡಿ. ಸತ್ತುಹೋದ ನನ್ನ ಜನರಿಗಾಗಿ ಕಣ್ಣೀರು ಸುರಿಸುತ್ತಿರುವೆನು” ಎಂದೆ ನಾನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು