Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 20:7 - ಕನ್ನಡ ಸತ್ಯವೇದವು C.L. Bible (BSI)

7 ‘ನೀವೆಲ್ಲರೂ ನಿಮ್ಮ ಕಣ್ಣಿಗೆ ಇಷ್ಟವಾದ ಅಸಹ್ಯವಸ್ತುಗಳನ್ನು ಬಿಸಾಡಿಬಿಡಿ; ಈಜಿಪ್ಟಿನ ವಿಗ್ರಹಗಳಿಂದ ನಿಮ್ಮನ್ನು ಹೊಲಸು ಮಾಡಿಕೊಳ್ಳಬೇಡಿ; ನಾನು ನಿಮ್ಮ ದೇವರಾದ ಸರ್ವೇಶ್ವರ’ ಎಂದು ಅವರನ್ನು ಎಚ್ಚರಿಸಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

7 ‘ನೀವೆಲ್ಲರೂ ನಿಮ್ಮ ಕಣ್ಣಿಗೆ ಕಾಣುವ ಇಷ್ಟವಾದ ಅಸಹ್ಯ ವಸ್ತುಗಳನ್ನು ಬಿಸಾಡಿಬಿಡಿರಿ, ಐಗುಪ್ತದ ವಿಗ್ರಹಗಳಿಂದ ನಿಮ್ಮನ್ನು ಹೊಲಸು ಮಾಡಿಕೊಳ್ಳಬೇಡಿರಿ; ನಾನು ನಿಮ್ಮ ದೇವರಾದ ಯೆಹೋವನು’” ಎಂಬುದಾಗಿ ಅವರನ್ನು ಎಚ್ಚರಿಸಿದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

7 ನೀವೆಲ್ಲರೂ ನಿಮ್ಮ ಕಣ್ಣಿಗೆ ಇಷ್ಟವಾದ ಅಸಹ್ಯವಸ್ತುಗಳನ್ನು ಬಿಸಾಟುಬಿಡಿರಿ, ಐಗುಪ್ತದ ವಿಗ್ರಹಗಳಿಂದ ನಿಮ್ಮನ್ನು ಹೊಲಸು ಮಾಡಿಕೊಳ್ಳಬೇಡಿರಿ; ನಾನು ನಿಮ್ಮ ದೇವರಾದ ಯೆಹೋವನು ಎಂಬದಾಗಿ ಅವರನ್ನು ಎಚ್ಚರಿಸಿದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

7 “‘ನಾನು ಇಸ್ರೇಲ್ ಜನಾಂಗದವರಿಗೆ, ಅವರಲ್ಲಿದ್ದ ಅಸಹ್ಯವಾದ ಎಲ್ಲಾ ವಿಗ್ರಹಗಳನ್ನು ಬಿಸಾಡಿಬಿಡಲು ಹೇಳಿದೆನು. ಈಜಿಪ್ಟಿನ ಹೊಲಸು ವಿಗ್ರಹಗಳಿಂದ ಹೊಲಸು ಆಗಬಾರದು ಎಂದು ಹೇಳಿದೆನು. “ನಾನು ನಿಮ್ಮ ದೇವರಾದ ಯೆಹೋವನು” ಎಂಬುದಾಗಿ ಹೇಳಿದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

7 ಆಮೇಲೆ ನಾನು ಅವರಿಗೆ, “ನಿಮ್ಮಲ್ಲಿ ಒಬ್ಬೊಬ್ಬನು ತಮ್ಮ ತಮ್ಮ ಕಣ್ಣುಗಳ ಮುಂದೆ ಅಸಹ್ಯವಾದವುಗಳನ್ನು ಬಿಸಾಡಿ ಬಿಡಿರಿ. ಈಜಿಪ್ಟಿನ ವಿಗ್ರಹಗಳಿಂದ ನಿಮ್ಮನ್ನು ಅಶುದ್ಧಪಡಿಸಿಕೊಳ್ಳಬೇಡಿರಿ. ನಿಮ್ಮ ದೇವರಾಗಿರುವ ಯೆಹೋವ ದೇವರು ನಾನಾಗಿರುವೆನು.”

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 20:7
26 ತಿಳಿವುಗಳ ಹೋಲಿಕೆ  

ನೀವು ವಾಸವಾಗಿದ್ದ ಈಜಿಪ್ಟಿನ ಆಚಾರಗಳನ್ನು ಅನುಸರಿಸಬಾರದು; ನಾನು ನಿಮ್ಮನ್ನು ಕರೆದೊಯ್ಯುತ್ತಿರುವ ಕಾನಾನ್ ನಾಡಿನ ಆಚರಣೆಗಳನ್ನು ಕೂಡ ನೀವು ಅನುಸರಿಸಬಾರದು. ಅವರಲ್ಲಿರುವ ನಿಯಮಗಳಿಗೆ ನೀವು ಒಳಗಾಗಕೂಡದು.


ಅವರಾದರೋ ನನ್ನ ಮಾತನ್ನು ಲೆಕ್ಕಿಸದೆ ನನ್ನ ವಿರುದ್ಧ ದಂಗೆಯೆದ್ದರು; ತಮ್ಮ ಕಣ್ಣಿಗೆ ಇಷ್ಟವಾದ ಅಸಹ್ಯವಸ್ತುಗಳನ್ನು ಯಾರೂ ಬಿಸಾಡಿಬಿಡಲಿಲ್ಲ. ಈಜಿಪ್ಟಿನ ವಿಗ್ರಹಗಳನ್ನು ತ್ಯಜಿಸಲಿಲ್ಲ. ಆಗ ನಾನು ಈಜಿಪ್ಟ್ ದೇಶದಲ್ಲಿ ಇವರ ಮೇಲೆ ನನ್ನ ರೋಷಾಗ್ನಿಯನ್ನು ಸುರಿಸಿ, ನನ್ನ ಕೋಪವನ್ನು ತೀರಿಸಿಕೊಳ್ಳುವೆನು ಎಂದುಕೊಂಡೆ.


ನೀವು ಮಾಡುತ್ತಾ ಬಂದಿರುವ ಅಪರಾಧಗಳನ್ನೆಲ್ಲಾ ನಿಮ್ಮಿಂದ ತೊಲಗಿಸಿಬಿಟ್ಟು, ನಿಮ್ಮ ಹೃದಯವನ್ನೂ ಸ್ವಭಾವವನ್ನೂ ನೂತನ ಮಾಡಿಕೊಳ್ಳಿ; ಇಸ್ರಯೇಲ್ ವಂಶದವರೇ, ನೀವು ಏಕೆ ಸಾಯಬೇಕು?


ಏಕೆಂದರೆ ನಾನು ನಿಮ್ಮ ದೇವರಾದ ಸರ್ವೇಶ್ವರ; ನೀವು ದೇವಜನರಿಗೆ ತಕ್ಕಂತಿರಬೇಕು. ನಾನು ಪರಿಶುದ್ಧನಾಗಿರುವುದರಿಂದ ನೀವೂ ಪರಿಶುದ್ಧರಾಗಿರಬೇಕು. ನೆಲದ ಮೇಲೆ ಹರಿದಾಡುವ ಯಾವ ಜಂತುವಿನಿಂದಾದರೂ ನೀವು ನಿಮ್ಮನ್ನು ಅಶುದ್ಧಮಾಡಿಕೊಳ್ಳಬಾರದು.


ಅವಳು ಈಜಿಪ್ಟಿನಲ್ಲಿ ಇದ್ದಂದಿನಿಂದಲೂ ತನ್ನ ಸೂಳೆತನವನ್ನು ಬಿಡಲಿಲ್ಲ; ಬಾಲ್ಯದಲ್ಲಿಯೇ ಅಲ್ಲಿಯವರು ಅವಳೊಂದಿಗೆ ಮಲಗಿ, ಅವಳ ಎಳೆಯ ತೊಟ್ಟುಗಳನ್ನು ನಸುಕಿ, ಅವಳ ಸಂಗಡ ಸೂಳೆಗಾರಿಕೆಯನ್ನು ಹೆಚ್ಚೆಚ್ಚಾಗಿ ಮಾಡಿದರು.


ಅವರು ಈಜಿಪ್ಟಿನಲ್ಲಿ ಸೂಳೆತನ ಮಾಡುತ್ತಿದ್ದರು. ಬಾಲ್ಯದಲ್ಲಿ ವೇಶ್ಯೆಯರಾಗಿ ನಡೆಯುತ್ತಿದ್ದರು. ಅಲ್ಲಿನ ಪುರುಷರು ಅವರ ಸ್ತನಗಳನ್ನು ಹಿಸುಕಿದರು, ಎಳೆಯ ತೊಟ್ಟುಗಳನ್ನು ಸವರಿಸಿದರು.


ನಾನು ನಿಮ್ಮ ದೇವರಾದ ಸರ್ವೇಶ್ವರ; ನೀವು ನನ್ನ ಆಜ್ಞೆಗಳನ್ನು ಅನುಸರಿಸಿ ನನ್ನ ವಿಧಿಗಳನ್ನು ಕೈಗೊಂಡು ನಡೆಯಿರಿ.


ಗುಡ್ಡಗಳ ಮೇಲೆ ಯಜ್ಞಶೇಷವನ್ನು ತಿನ್ನದೆ, ಇಸ್ರಯೇಲ್ ವಂಶದವರ ವಿಗ್ರಹಗಳ ಕಡೆಗೆ ಕಣ್ಣೆತ್ತದೆ, ನೆರೆಯವನ ಹೆಂಡತಿಯನ್ನು ಕೆಡಿಸದೆ, ಯಾರನ್ನೂ ಹಿಂಸಿಸದೆ,


ಗುಡ್ಡಗಳ ಮೇಲೆ ಯಜ್ಞಶೇಷವನ್ನು ತಿನ್ನದೆ, ಇಸ್ರಾಯೇಲ್ ವಂಶದವರ ವಿಗ್ರಹಗಳ ಕಡೆಗೆ ಕಣ್ಣೆತ್ತದೆ, ನೆರೆಯವನ ಹೆಂಡತಿಯನ್ನು ಕೆಡಿಸದೆ,


“ಆದಕಾರಣ ನೀನು ಇಸ್ರಯೇಲ್ ವಂಶದವರಿಗೆ ಹೀಗೆ ನುಡಿ - ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ನೀವು ನಿಮ್ಮ ವಿಗ್ರಹಗಳನ್ನು ತೊರೆದುಬಿಟ್ಟು ಹಿಂದಿರುಗಿರಿ; ನಿಮ್ಮ ಎಲ್ಲಾ ಅಸಹ್ಯವಸ್ತುಗಳ ಕಡೆಗೆ ಬೆನ್ನುಮಾಡಿರಿ.


ಹೀಗೆ ಅಳಿದುಳಿದು ಸೆರೆಗೆ ಒಯ್ಯಲ್ಪಟ್ಟು ಜನಾಂಗಗಳ ಮಧ್ಯೆ ವಾಸಿಸುವ ನಿಮ್ಮವರು ನನ್ನನ್ನು ಸ್ಮರಿಸಿಕೊಳ್ಳುವರು. ಅನ್ಯದೇವತೆಗಳಲ್ಲಿನ ಮೋಹದಿಂದ ನನ್ನನ್ನು ತೊರೆದು ತಮ್ಮ ಹೃದಯವನ್ನು ಹಾಗು ತಮ್ಮ ವಿಗ್ರಹಗಳ ಮೇಲಣ ಕಾಮದಿಂದ ದೇವದ್ರೋಹ ಮಾಡಿದ ತಮ್ಮ ಕಣ್ಣುಗಳನ್ನು ಭಂಗಪಡಿಸಿದವನು ನಾನೇ ಎಂಬುದಾಗಿ ನನ್ನನ್ನು ಜ್ಞಾಪಕಮಾಡಿಕೊಳ್ಳುವರು. ತಾವು ಬಹಳ ಅಸಹ್ಯಕಾರ್ಯಗಳನ್ನು ನಡೆಸಿ ಕೆಟ್ಟತನವನ್ನು ಮಾಡಿದ್ದೇವೆಂದು ತಮ್ಮನ್ನು ತಾವೇ ಹೇಸಿಕೊಳ್ಳುವರು.


ನೀವು ಪಾಪಕಳಂಕಿತವಾದ ನಿಮ್ಮ ಕೈಯಿಂದ ನಿರ್ಮಿಸಿರುವ ಬೆಳ್ಳಿಬಂಗಾರದ ವಿಗ್ರಹಗಳನ್ನು ಎತ್ತಿ ಬಿಸಾಡುವ ದಿನ ಬರಲಿದೆ.


ಆಸನು ಓದೇದನ ಮಗ ಅಜರ್ಯನ ಈ ಪ್ರವಾದನೋಕ್ತಿಗಳನ್ನು ಕೇಳಿ ಧೈರ್ಯಗೊಂಡನು. ಜುದೇಯ ಹಾಗೂ ಬೆನ್ಯಾಮೀನ್ ಪ್ರಾಂತ್ಯಗಳಲ್ಲೂ ತಾನು ಸ್ವಾಧೀನಮಾಡಿಕೊಂಡಿದ್ದ ಎಫ್ರಯಿಮ್ ಪರ್ವತ ಪ್ರದೇಶದ ಪಟ್ಟಣಗಳಲ್ಲೂ ಇದ್ದ ಅಸಹ್ಯ ಪ್ರತಿಮೆಗಳನ್ನು ತೆಗೆದು ಹಾಕಿಸಿದನು; ಸರ್ವೇಶ್ವರನ ಆಲಯಕ್ಕೆ ಸೇರಿದ ಮಂಟಪದ ಮುಂದಿದ್ದ ಬಲಿಪೀಠವನ್ನು ದುರಸ್ತಿ ಮಾಡಿಸಿದನು.


“ಈ ಕಾರಣ ನೀವು ಸರ್ವೇಶ್ವರನಲ್ಲಿ ಭಯಭಕ್ತಿಯುಳ್ಳವರಾಗಿರಿ. ಪೂರ್ಣ ಮನಸ್ಸಿನಿಂದ ಯಥಾರ್ಥಚಿತ್ತದಿಂದ ಅವರಿಗೆ ಸೇವೆಸಲ್ಲಿಸಿರಿ. ನಿಮ್ಮ ಪೂರ್ವಜರು ಯೂಫ್ರಟಿಸ್ ನದಿಯಾಚೆಯಲ್ಲೂ ಈಜಿಪ್ಟಿನಲ್ಲೂ ಪೂಜಿಸುತ್ತಿದ್ದ ದೇವತೆಗಳನ್ನು ತೊರೆದುಬಿಡಿ.


ಅವರು ಇದುವರೆಗೆ ಪೂಜಿಸುತ್ತಿದ್ದ ಅಜದೇವತೆಗಳಿಗೆ ಇನ್ನು ಮುಂದೆ ಬಲಿಕೊಟ್ಟು ದೇವದ್ರೋಹಿಗಳಾಗಬಾರದು. ಅವರಿಗೂ ಅವರ ಸಂತತಿಯವರಿಗೂ ಇದು ಶಾಶ್ವತನಿಯಮ.


ಆಕಾಶದಲ್ಲಾಗಲಿ, ಭೂಮಿಯಲ್ಲಾಗಲಿ, ಭೂಮಿಯ ಕೆಳಗಿನ ನೀರಿನಲ್ಲಾಗಲಿ, ಇರುವ ಯಾವುದರ ರೂಪವನ್ನು ಅಥವಾ ವಿಗ್ರಹವನ್ನು ಮಾಡಿಕೊಳ್ಳಬೇಡ.


“ನಾನೇ ನಿನ್ನ ದೇವರಾದ ಸರ್ವೇಶ್ವರ; ಗುಲಾಮತನದಲ್ಲಿದ್ದ ನಿನ್ನನ್ನು ಈಜಿಪ್ಟಿನಿಂದ ಬಿಡುಗಡೆ ಮಾಡಿದವನು.


ಇಸ್ರಯೇಲರ ಗೊಣಗಾಟ ನನಗೆ ಕೇಳಿಸಿತು. ಅವರಿಗೆ, ‘ಸಂಜೆ ಮಾಂಸವನ್ನೂ ಬೆಳಿಗ್ಗೆ ಬೇಕಾದಷ್ಟು ರೊಟ್ಟಿಯನ್ನೂ ತಿನ್ನುವಿರಿ; ಇದರಿಂದ ನಾನು ನಿಮ್ಮ ದೇವರಾದ ಸರ್ವೇಶ್ವರ ಎಂದು ನಿಮಗೆ ಗೊತ್ತಾಗುವುದು’ ಎಂದು ಹೇಳು,” ಎಂದರು.


ನಾನು ನಿಮ್ಮ ದೇವರಾದ ಸರ್ವೇಶ್ವರನಾಗಿರುವ ಕಾರಣ ನೀವು ನನ್ನವರಾಗಿ ಪರಿಶುದ್ಧರಾಗಿರಬೇಕು.


ಅವುಗಳಿಗೆ ಅಡ್ಡಬೀಳಬೇಡ, ಅವುಗಳನ್ನು ಆರಾಧಿಸಬೇಡ. ಏಕೆಂದರೆ ನಾನೇ ನಿನ್ನ ದೇವರಾದ ಸರ್ವೇಶ್ವರ. ನನಗೆ ಸಲ್ಲತಕ್ಕ ಗೌರವವನ್ನು ನಾನು ಮತ್ತೊಬ್ಬರಿಗೆ ಸಲ್ಲಗೊಡಿಸುವುದಿಲ್ಲ. ನನ್ನನ್ನು ದ್ವೇಷಿಸುವವರನ್ನು ದಂಡಿಸುತ್ತೇನೆ; ಅವರ ದೋಷಫಲವನ್ನು ಅವರ ಮಕ್ಕಳ ಮೇಲೆ ಮೂರು ನಾಲ್ಕು ತಲೆಗಳವರೆಗೆ ಬರಮಾಡುತ್ತೇನೆ.


“ಸರ್ವೇಶ್ವರನಾದವನಿಗೆ ಹೊರತಾಗಿ ಬೇರೊಬ್ಬ ದೇವರಿಗೆ ಬಲಿ ಕೊಡುವವನು ನಾಶಕ್ಕೆ ಅರ್ಹನು.


ತನ್ನನ್ನು ಸೂಳೆಯಾಗಿ ಒಪ್ಪಿಸಿಕೊಂಡಳು; ಇವರೆಲ್ಲರು ಅಸ್ಸೀರಿಯದಲ್ಲಿನ ಗಣ್ಯವ್ಯಕ್ತಿಗಳು; ಅವಳು ಯಾರನ್ನು ಮೋಹಿಸಿದಳೋ ಅವರ ವಿಗ್ರಹಗಳಿಂದ ತನ್ನನ್ನೇ ಹೊಲಸುಮಾಡಿಕೊಂಡಳು.


“ನಾನು ನಿಮ್ಮ ದೇವರಾಗಿರುವ ಸರ್ವೇಶ್ವರ.


ಸರ್ವೇಶ್ವರನಾದ ನಾನು ನನ್ನ ಜನರ ದೇವರಾಗಿರುವೆನು; ನನ್ನ ದಾಸ ದಾವೀದನು ಅವರನ್ನಾಳುವ ಪ್ರಭುವಾಗಿರುವನು; ಸರ್ವೇಶ್ವರನಾದ ನಾನೇ ಇದನ್ನು ನುಡಿದಿದ್ದೇನೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು