Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 20:31 - ಕನ್ನಡ ಸತ್ಯವೇದವು C.L. Bible (BSI)

31 ನೀವು ಬಲಿಯರ್ಪಿಸುತ್ತಾ, ನಿಮ್ಮ ಮಕ್ಕಳನ್ನು ಆಹುತಿಕೊಟ್ಟು ಇಂದಿನವರೆಗೂ ನಿಮ್ಮನ್ನು ಅಶುದ್ಧಮಾಡಿಕೊಂಡಿರಿ. ಹೀಗಿರುವಾಗ ಇಸ್ರಯೇಲ್ ವಂಶದವರೇ, ನಾನು ನಿಮ್ಮಂಥವರಿಗೆ ದೈವೋತ್ತರವನ್ನು ದಯಪಾಲಿಸಬಹುದೇ? ನನ್ನ ಜೀವದಾಣೆ, ನಿಮಗೆ ದೈವೋತ್ತರವನ್ನು ದಯಪಾಲಿಸೆನು; ಇದು ಸರ್ವೇಶ್ವರನಾದ ದೇವರ ನುಡಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

31 ನೀವು ಬಲಿಯರ್ಪಿಸುತ್ತಾ ನಿಮ್ಮ ಮಕ್ಕಳನ್ನು ಆಹುತಿಕೊಟ್ಟು ಇಂದಿನವರೆಗೂ ನಿಮ್ಮನ್ನು ಅಶುದ್ಧ ಮಾಡಿಕೊಳ್ಳುತ್ತಿದ್ದೀರೋ? ಇಸ್ರಾಯೇಲ್ ವಂಶದವರೇ, ನಾನು ನಿಮ್ಮಂಥವರಿಗೆ ದೈವೋತ್ತರವನ್ನು ದಯಪಾಲಿಸಬಹುದೋ? ನನ್ನ ಜೀವದಾಣೆ, ನಿಮಗೆ ದೈವೋತ್ತರವನ್ನು ದಯಪಾಲಿಸುವುದಿಲ್ಲ” ಇದು ಕರ್ತನಾದ ಯೆಹೋವನ ನುಡಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

31 ನೀವು ಬಲಿಯರ್ಪಿಸುತ್ತಾ ನಿಮ್ಮ ಮಕ್ಕಳನ್ನು ಆಹುತಿಕೊಟ್ಟು ಇಂದಿನವರೆಗೂ ನಿಮ್ಮನ್ನು ಅಶುದ್ಧಮಾಡಿಕೊಳ್ಳುತ್ತಿದ್ದೀರೋ? ಇಸ್ರಾಯೇಲ್ ವಂಶದವರೇ, ನಾನು ನಿಮ್ಮಂಥವರಿಗೆ ದೈವೋತ್ತರವನ್ನು ದಯಪಾಲಿಸಬಹುದೋ? ನನ್ನ ಜೀವದಾಣೆ, ನಿಮಗೆ ದೈವೋತ್ತರವನ್ನು ದಯಪಾಲಿಸೆನು; ಇದು ಕರ್ತನಾದ ಯೆಹೋವನ ನುಡಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

31 ನೀವು ಅವುಗಳಿಗೆ ಅದೇ ರೀತಿಯ ಕಾಣಿಕೆಗಳನ್ನರ್ಪಿಸುತ್ತೀರಿ. ಆ ಸುಳ್ಳು ದೇವರುಗಳಿಗೆ ನೀವು ನಿಮ್ಮ ಮಕ್ಕಳನ್ನು ಬೆಂಕಿಯ ಮೂಲಕ ಆಹುತಿ ಮಾಡುತ್ತೀರಿ. ಈ ಹೊತ್ತಿನ ದಿನದ ತನಕವೂ ಆ ಹೊಲಸು ವಿಗ್ರಹಗಳ ಮೂಲಕ ನೀವು ನಿಮ್ಮನ್ನು ಅಶುದ್ಧಪಡಿಸಿಕೊಳ್ಳುತ್ತಿದ್ದೀರಿ. ನೀವು ನನ್ನ ಬಳಿಗೆ ಬಂದು ನನ್ನ ಸಲಹೆಗಳನ್ನು ಕೇಳಲು ನಿಮ್ಮನ್ನು ನಾನು ಸ್ವಾಗತಿಸಬೇಕೋ? ನಾನು ಒಡೆಯನಾದ ಯೆಹೋವನು. ನನ್ನ ಜೀವದಾಣೆ, ನಾನು ನಿಮಗೆ ಉತ್ತರಿಸುವುದಿಲ್ಲ; ನಿಮಗೆ ಸಲಹೆಗಳನ್ನೂ ಕೊಡುವದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

31 ನಿಮ್ಮ ದಾನಗಳನ್ನು ತರುವಾಗಲೂ, ಬೆಂಕಿಯಲ್ಲಿ ನಿಮ್ಮ ಮಕ್ಕಳನ್ನು ಯಜ್ಞವಾಗಿ ಅರ್ಪಿಸುವಾಗಲೂ, ನೀವು ಇಂದಿನವರೆಗೂ ನಿಮ್ಮ ಎಲ್ಲಾ ವಿಗ್ರಹಗಳಿಂದ ನಿಮ್ಮನ್ನು ಅಪವಿತ್ರಪಡಿಸಿಕೊಳ್ಳುತ್ತಿದ್ದೀರಿ. ಹೀಗಿರುವಾಗ ಇಸ್ರಾಯೇಲ್ ವಂಶದವರೇ, ನೀವು ನನ್ನನ್ನು ವಿಚಾರಿಸಲು ಅನುಮತಿಸಬೇಕೆ? ನನ್ನ ಜೀವದಾಣೆ ನಾನು ನಿಮ್ಮನ್ನು ವಿಚಾರಿಸಲು ಅನುಮತಿಸುವುದಿಲ್ಲ, ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 20:31
25 ತಿಳಿವುಗಳ ಹೋಲಿಕೆ  

ಅವರು ತಮ್ಮ ಚೊಚ್ಚಲುಮಕ್ಕಳನ್ನು ಆಹುತಿಕೊಟ್ಟು ಅರ್ಪಿಸುತ್ತಿದ್ದ ಬಲಿಗಳಿಂದಲೇ ಅವರನ್ನು ಹೊಲೆಗೆಡಿಸಿ, ಕೇವಲ ದುರವಸ್ಥೆಗೆ ತಂದೆನು.


ತಮ್ಮ ಗಂಡುಹೆಣ್ಣು ಮಕ್ಕಳನ್ನೂ ಆಹುತಿಕೊಡುವುದಕ್ಕೆ ಬೆನ್‍ಹಿನ್ನೋಮ್ ಕಣಿವೆಯಲ್ಲಿನ ತೋಫೆತೆಂಬ ಬಲಿಪೀಠವನ್ನು ಕಟ್ಟಿದ್ದಾರೆ. ಇಂಥ ಕಾರ್ಯವನ್ನು ನಾನು ವಿಧಿಸಿಲ್ಲ. ಅದು ನನ್ನ ಮನಸ್ಸಿಗೂ ಸುಳಿದಿಲ್ಲ.


ಆಗ ಹೀಗೆಂದೆ: ‘ನಾನು ಕೂಗಿದಾಗ ಅವರು ಕೇಳದೆಹೋದರು; ಅವರು ಕೂಗಿದಾಗ ನಾನು ಕೇಳಲಿಲ್ಲ.’


“ನರಪುತ್ರನೇ, ಇಸ್ರಯೇಲಿನ ಹಿರಿಯರನ್ನು ಸಂಬೋಧಿಸಿ ಹೀಗೆ ಹೇಳು - ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ನನ್ನನ್ನು ಪ್ರಶ್ನೆಕೇಳುವುದಕ್ಕೆ ಬಂದಿರೋ? ನನ್ನ ಜೀವದಾಣೆ ನಾನು ನಿಮಗೆ ಉತ್ತರ ಕೊಡುವುದೇ ಇಲ್ಲ; ಇದು ಸರ್ವೇಶ್ವರನಾದ ದೇವರ ನುಡಿ.


“ಇದಲ್ಲದೆ ನೀನು ನನಗೆ ಹೆತ್ತ ಗಂಡು ಹೆಣ್ಣು ಮಕ್ಕಳನ್ನು ಹಿಡಿದು ಮೂರ್ತಿಗಳಿಗೆ ಆಹಾರವಾಗಲೆಂದು ಯಜ್ಞವಾಗಿ ಅರ್ಪಿಸಿದೆ.


ತಮ್ಮ ಮಕ್ಕಳನ್ನು ಬಾಳ್‍ದೇವತೆಗೆ ಆಹುತಿಕೊಡಲು ಆ ದೇವತೆಗೆ ಬಲಿಪೀಠಗಳನ್ನು ಕೂಡ ಏರ್ಪಡಿಸಿದ್ದಾರೆ. ನಾನು ಇಂಥ ಆಚಾರಗಳನ್ನು ವಿಧಿಸಲಿಲ್ಲ. ಅದರ ಮಾತನ್ನೇ ಎತ್ತಲಿಲ್ಲ. ಅಂಥದ್ದು ನನ್ನ ಮನಸ್ಸಿಗೂ ತೋಚಿದ್ದಿಲ್ಲ.


ಇವರು ಉಪವಾಸ ಕೈಗೊಂಡರೂ ಇವರ ಮೊರೆಯನ್ನು ನಾನು ಕೇಳುವುದಿಲ್ಲ. ದಹನಬಲಿಗಳನ್ನೂ ಧಾನ್ಯನೈವೇದ್ಯಗಳನ್ನೂ ಅರ್ಪಿಸಿದರೂ ಸ್ವೀಕರಿಸುವುದಿಲ್ಲ. ಖಡ್ಗದಿಂದಲೂ ಕ್ಷಾಮದಿಂದಲೂ ವ್ಯಾಧಿಯಿಂದಲೂ ಇವರನ್ನು ಮುಗಿಸಿಬಿಡುತ್ತೇನೆ,” ಎಂದು ಹೇಳಿದರು.


ನೀವು ಕೈಯೆತ್ತಿ ಬೇಡುವಾಗ ನಾನು ಕಣ್ಣುಮುಚ್ಚಿಕೊಳ್ಳುವೆನು. ನೀವು ಎಷ್ಟೇ ಪ್ರಾರ್ಥನೆಗಳನ್ನು ಮಾಡಿದರೂ ನಾನು ಕಿವಿಗೊಡೆನು, ಏಕೆಂದರೆ ನಿಮ್ಮ ಕೈಗಳು ರಕ್ತಸಿಕ್ತವಾಗಿವೆ.


ಧರ್ಮಶಾಸ್ತ್ರಕ್ಕೆ ಕಿವಿಮುಚ್ಚಿಕೊಳ್ಳುವವನ ಪ್ರಾರ್ಥನೆ, ದೇವರಿಂದ ತಿರಸ್ಕೃತವಾದ ಪ್ರಾರ್ಥನೆ.


ಕೆಟ್ಟತನವನು ನಾ ಮನದಲ್ಲಿಟ್ಟಿದ್ದರೆ I ಮುಟ್ಟುವಂತಿರಲಿಲ್ಲ ಆತನಿಗೆ ಎನ್ನ ಮೊರೆ II


ಅವನು ಆನಂದಿಸುವನೆ ಸರ್ವಶಕ್ತನಲಿ? ಪ್ರಾರ್ಥನೆ ಮಾಡುವನೆ ಸರ್ವದಾ ಆತನಲಿ?


ದೇವರೇ ದುಷ್ಟನ ಪ್ರಾಣ ತೆಗೆವ ಕಾಲಕ್ಕೆ ಅವನಿಗೆಲ್ಲಿಂದ ಬಂದೀತು ಭರವಸೆ!


“ಆಹಾ, ಮಿತಿಮೀರಿದ ನಿನ್ನ ಕಾಮಾತುರ! ನಿನ್ನಲ್ಲಿ ವ್ಯಭಿಚಾರಮಾಡಿದ ನಿನ್ನ ಮಿಂಡರ ಮೂಲಕ ನಿನಗಾದ ಮಾನಭಂಗ, ನಿನ್ನ ಎಲ್ಲ ಅಸಹ್ಯವಿಗ್ರಹಗಳು, ನೀನು ಅವುಗಳಿಗೆ ಅರ್ಪಿಸಿದ ನಿನ್ನ ಮಕ್ಕಳ ರಕ್ತ,


“ನರಪುತ್ರನೇ, ನಿನ್ನ ಜನರು ಗೋಡೆಗಳ ನೆರಳಿನಲ್ಲೂ ಮನೆಯ ಬಾಗಿಲುಗಳಲ್ಲೂ ನಿಂತು ನಿನ್ನ ಪ್ರಸ್ತಾಪವನ್ನೆತ್ತಿ ಒಬ್ಬರಿಗೊಬ್ಬರು, ‘ಸರ್ವೇಶ್ವರನ ಬಾಯಿಂದ ಹೊರಟ ಮಾತೇನೆಂದು ಕೇಳೋಣ ಬನ್ನಿ’ ಎಂದು ಹೇಳಿಕೊಳ್ಳುತ್ತಿದ್ದಾರೆ.


ಜನರು ಸಮುದ್ರದಿಂದ ಸಮುದ್ರದವರೆಗೆ ಉತ್ತರದಿಂದ ಪೂರ್ವದವರೆಗೆ ಅತ್ತಿತ್ತ ಹುಡುಕುತ್ತಾ ಬಳಲಿಹೋಗುವರು. ಆದರೂ ಅದು ಸಿಗದು.


ಓಕ್‍ಮರಗಳ ತೋಪುಗಳಲ್ಲೂ ಸೊಂಪಾಗಿ ಹರಡಿರುವ ಮರಗಳ ಅಡಿಯಲ್ಲೂ ಕಾಮಾಗ್ನಿಯಿಂದ ಕುದಿಯುತ್ತೀರಿ. ಹೊಳೆಕೊರೆದ ಡೊಗರುಗಳಲ್ಲೂ ಬಂಡೆಬಿರುಕುಗಳಲ್ಲೂ ಮಕ್ಕಳನ್ನು ಬಲಿಕೊಡುತ್ತೀರಿ. ನೀವು ವಿದ್ರೋಹಿಗಳ ಸಂತಾನ, ಸುಳ್ಳುಗಾರರ ಸಂತತಿ.


ಅವರು ವ್ಯಭಿಚಾರಿಣಿಯರು, ಅವರ ಕೈ ರಕ್ತಸಿಕ್ತವಾಗಿದೆ, ತಮ್ಮ ವಿಗ್ರಹಗಳಿಂದ ವ್ಯಭಿಚಾರ ಮಾಡಿದ್ದಾರೆ, ನನಗೆ ಹೆತ್ತ ತಮ್ಮ ಗಂಡುಮಕ್ಕಳನ್ನು ಆ ವಿಗ್ರಹಗಳಿಗೆ ಬಲಿಯಾಗಿ ಆಹುತಿಕೊಟ್ಟಿದ್ದಾರೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು