Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 19:3 - ಕನ್ನಡ ಸತ್ಯವೇದವು C.L. Bible (BSI)

3 ಯುವ ಸಿಂಹವಾಯಿತು ಆಕೆ ಬೆಳೆಸಿದಾ ಮರಿಯೊಂದು, ನರಭಕ್ಷಕ ಆಗಲಾರಂಭಿಸಿತದು ಬೇಟೆಯನು ಕಲಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 ಅವಳು ಬೆಳೆಯಿಸಿದ ಒಂದು ಮರಿಯು ಪ್ರಾಯದ ಸಿಂಹವಾಗಿ, ಬೇಟೆಯನ್ನು ಕಲಿತು, ಮನುಷ್ಯರನ್ನು ನುಂಗಲಾರಂಭಿಸಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

3 ಅದು ಬೆಳೆಯಿಸಿದ ಒಂದು ಮರಿಯು ಪ್ರಾಯದ ಸಿಂಹವಾಗಿ ಬೇಟೆಯನ್ನು ಕಲಿತು ಮನುಷ್ಯರನ್ನು ನುಂಗಲಾರಂಭಿಸಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

3 ಮರಿಗಳಲ್ಲೊಂದು ಎದ್ದು ಗಟ್ಟಿಮುಟ್ಟಾದ ಸಿಂಹವಾಗಿ ಬೆಳೆಯುತ್ತಾ ಬಂತು. ತನ್ನ ಆಹಾರವನ್ನು ತಾನೇ ಬೇಟೆಯಾಡತೊಡಗಿ ಮನುಷ್ಯರನ್ನು ಕೊಂದು ತಿನ್ನಲಾರಂಭಿಸಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

3 ಅವಳೂ ತನ್ನ ಮರಿಗಳಲ್ಲಿ ಒಂದನ್ನು ಬೆಳೆಸಿದಳು, ಇದು ಪ್ರಾಯದ ಸಿಂಹವಾಯಿತು. ಇದು ಬೇಟೆಯನ್ನು ಕಲಿತು, ಮನುಷ್ಯರನ್ನು ನುಂಗಿಬಿಟ್ಟಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 19:3
10 ತಿಳಿವುಗಳ ಹೋಲಿಕೆ  

ಆ ನಾಡಿನೊಳಗೆ ಪ್ರವಾದಿಗಳು ಒಳಸಂಚು ಮಾಡಿಕೊಂಡಿದ್ದಾರೆ, ಬೇಟೆಯನ್ನು ಸೀಳುತ್ತಾ ಗರ್ಜಿಸುವ ಸಿಂಹದಂತಿದ್ದಾರೆ. ನರಪ್ರಾಣಿಗಳನ್ನು ನುಂಗಿದ್ದಾರೆ, ಆಸ್ತಿಯನ್ನೂ ಅಮೂಲ್ಯ ವಸ್ತುಗಳನ್ನೂ ದೋಚಿಕೊಂಡಿದ್ದಾರೆ; ದೇಶದಲ್ಲಿ ಬಹುಮಂದಿಯನ್ನು ವಿಧವೆಯರನ್ನಾಗಿ ಮಾಡಿದ್ದಾರೆ.


ಇದು ಕೂಡ ಯುವಸಿಂಹವಾಯಿತು ಇತರ ಸಿಂಹಗಳ ನಡುವೆ ತಿರುಗಾಡಿತು. ಬೇಟೆಯಾಡುವುದನು ಕಲಿತು ತಾನೂ ನರಭಕ್ಷಕನಾಗಲಾರಂಭಿಸಿತು.


ದಾನ್ ಕುಲ ಕುರಿತು ಮೋಶೆ ನುಡಿದದ್ದು: “ದಾನನು ಬಾಷಾನ್ ದೇಶದಿಂದ ಧಾವಿಸಿಬಂದ ಯುವಸಿಂಹನು!”


ಫರೋಹ ನೆಕೋವನು, ಯೋಷೀಯನಿಗೆ ಬದಲಾಗಿ ಅವನ ಮಗ ಎಲ್ಯಾಕೀಮನನ್ನು ಅರಸನನ್ನಾಗಿ ನೇಮಿಸಿ ಅವನಿಗೆ ಯೆಹೋಯಾಕೀಮನೆಂಬ ಹೊಸ ಹೆಸರನ್ನಿಟ್ಟು, ಯೆಹೋವಾಹಾಜನನ್ನು ಈಜಿಪ್ಟ್ ದೇಶಕ್ಕೆ ತೆಗೆದುಕೊಂಡು ಹೋದನು; ಯೆಹೋವಾಹಾಜನು ಅಲ್ಲೆ ಮೃತನಾದನು.


ಇಗೋ, ನಿನ್ನ ತಾಯಿ, ಸಿಂಹಗಳ ಮಧ್ಯೆ ಸಿಂಹಿಣಿ, ಸಾಕಿದಳು ತನ್ನ ಮರಿಗಳನು, ಯುವ ಸಿಂಹಗಳ ನಡುವೆ ಪವಡಿಸಿ.


ಇದ ಕೇಳಿದ ರಾಷ್ಟ್ರಗಳು ಹಿಡಿದವದನ್ನು ಗುಂಡಿತೋಡಿ, ಈಜಿಪ್ಟ್ ದೇಶಕೊಯ್ದವು ಅದಕ್ಕೆ ಬಿಗಿದು ಸರಪಣಿ.


“ನರಪುತ್ರನೇ, ನೀನು ಈಜಿಪ್ಟಿನ ಅರಸ ಫರೋಹನನ್ನು ಕುರಿತು ಶೋಕಗೀತೆಯೊಂದನ್ನು ನುಡಿ : “ನೀನು ಮೃಗರಾಜನೆನಿಸಿಕೊಂಡಿರುವೆ ಜನಾಂಗಗಳಲ್ಲಿ, ಇಗೋ ದೊಡ್ಡ ಮೊಸಳೆಯಾಗಿಬಿಟ್ಟಿರುವೆ ಮಹಾನದಿಯಲ್ಲಿ. ನೀನಿದ್ದ ನದಿಗಳ ಭೇದಿಸಿಕೊಂಡು ಬಂದು, ಕಾಲಿಂದ ನೀ ಕಲಕಿರುವೆ ಅದರ ನೀರನ್ನು, ತುಳಿದು ಬದಿಮಾಡಿರುವೆ ಜನಾಂಗವೆಂಬ ಹೊಳೆಯನ್ನು.”


ಆಹಾ! ಕೇಳಿಬರುತ್ತಿದೆ ಕುರುಬರ ಗೋಳಾಟ ಬರಡಾಗಿದೆ ಅವರ ಹುಲ್ಲುಗಾವಲ ನೋಟ ಕೇಳಿರಿ, ಇಗೋ, ಯುವಸಿಂಹಗಳ ಆಕ್ರಂದನ ಏಕೆನೆ ಪಾಳುಬಿದ್ದಿದೆ ಜೋರ್ಡನಿನ ದಟ್ಟವನ!


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು