Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 17:10 - ಕನ್ನಡ ಸತ್ಯವೇದವು C.L. Bible (BSI)

10 ನಾಟಿಕೊಂಡಿದ್ದ ಆ ಲತೆ ಸಮೃದ್ಧವಾಗಿಯೇ ಇರುವುದೇ? ಮೂಡಣಗಾಳಿ ಬಡಿಯುವಾಗ ಅದು ಖಂಡಿತವಾಗಿ ಬಾಡುವುದಲ್ಲವೆ? ಬೆಳೆದ ಪಾತಿಯಲ್ಲಿಯೇ ಅದು ಒಣಗಿಹೋಗುವುದಲ್ಲವೆ?”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

10 ಆಹಾ, ನಾಟಿಕೊಂಡಿದ್ದ ಆ ಲತೆಯು ಸಮೃದ್ಧವಾಗಿಯೇ ಇರುವುದೋ? ಮೂಡಣ ಗಾಳಿಯು ಬಡಿಯುವಾಗ ಬಾಡೇ ಬಾಡುವುದಲ್ಲವೇ? ಬೆಳೆದ ಪಾತಿಯಲ್ಲಿಯೇ ಒಣಗಿಹೋಗುವುದು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

10 ಆಹಾ, ನಾಟಿಕೊಂಡಿದ್ದ ಆ ಲತೆಯು ಸಮೃದ್ಧವಾಗಿಯೇ ಇರುವದೋ? ಮೂಡಣ ಗಾಳಿಯು ಬಡಿಯುವಾಗ ಬಾಡೇ ಬಾಡುವದಲ್ಲವೆ; ಬೆಳೆದ ಪಾತಿಯಲ್ಲಿಯೇ ಒಣಗಿ ಹೋಗುವದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

10 ಆ ಸಸಿಯು ನೆಟ್ಟಿದ ಸ್ಥಳದಲ್ಲಿ ಬೆಳೆಯುವುದೋ? ಇಲ್ಲ! ಪೂರ್ವದ ಬಿಸಿಗಾಳಿಯು ಬೀಸುವದು, ಆಗ ಸಸಿಯು ತಾನು ನೆಡಲ್ಪಟ್ಟಿದ್ದ ಸ್ಥಳದಲ್ಲೇ ಬಾಡಿಹೋಗಿ ಸಾಯುವುದು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

10 ಹೌದು, ನೆಟ್ಟಿರಲಾಗಿ ಅದು ಸಮೃದ್ಧಿಯಾಗಿರುವುದೇ? ಅದಕ್ಕೆ ಪೂರ್ವದಿಕ್ಕಿನ ಗಾಳಿ ಬಡಿಯುವಾಗ ಅದು ಸಂಪೂರ್ಣವಾಗಿ ಒಣಗುವುದಿಲ್ಲವೇ? ಅದು ಮೊಳೆತ ಪಾತಿಗಳಲ್ಲಿಯೇ ಒಣಗಿ ಹೋಗುವುದಿಲ್ಲವೇ?’ ”

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 17:10
12 ತಿಳಿವುಗಳ ಹೋಲಿಕೆ  

ಎಫ್ರಯಿಮ್ ಕಳೆಗಳ ನಡುವೆ ಸೊಂಪಾಗಿ ಬೆಳೆದ ಜೊಂಡಿನಂತಿದೆ. ಆದರೆ ಸರ್ವೇಶ್ವರ ಮರುಭೂಮಿಯಿಂದ ಮೂಡಣಗಾಳಿ ಬೀಸುವಂತೆ ಮಾಡುವರು. ಅದರ ಬುಗ್ಗೆ ಬತ್ತಿಹೋಗುವುದು. ಅದರ ಒರತೆ ಒಣಗಿಹೋಗುವುದು. ಅದರ ಸಿರಿಸಂಪತ್ತಿನ ನಿಧಿಯನ್ನು ಶತ್ರುಗಳು ಸೂರೆಮಾಡುವರು.


ತಮ್ಮ ಮಿತಿಮೀರಿದ ಮದ್ಯಪಾನಾಸಕ್ತಿಯಿಂದ ನಿಮ್ಮ ಪ್ರೇಮಭೋಜನ ಕೂಟಗಳಲ್ಲಿ ಇವರು ಕಳಂಕಪ್ರಾಯರಾಗಿದ್ದಾರೆ. ತಮ್ಮ ಕುರಿಗಳನ್ನು ತೊರೆದು ಹೊಟ್ಟೆಹೊರೆದುಕೊಳ್ಳುವ ಕುರುಬರಂತಿದ್ದಾರೆ. ಇವರು ಬಿರುಗಾಳಿಗೆ ಚದುರಿಹೋಗುವ ನೀರಿಲ್ಲದ ಮೋಡಗಳು; ಎಲೆಗಳು ಉದುರಿ, ಫಲಬಿಡದೆ, ಬಾಡಿಹೋಗಿ, ಬೇರುಸಹಿತ ಕಿತ್ತುಬೀಳುವ ಶರತ್ಕಾಲದ ಮರಗಳು;


ನನ್ನಲ್ಲಿ ನೆಲಸದವನನ್ನು ಕವಲುಬಳ್ಳಿಯಂತೆ ಕತ್ತರಿಸಿ ಎಸೆಯಲಾಗುವುದು; ಅವನು ಒಣಗಿಹೋಗುವನು. ಒಣಗಿದ ಕವಲುಗಳನ್ನು ಒಟ್ಟುಗೂಡಿಸಿ ಬೆಂಕಿಯಲ್ಲಿ ಸುಟ್ಟುಹಾಕಲಾಗುವುದು.


ಬೆಳಿಗ್ಗೆ ಅವರೆಲ್ಲರೂ ಅದೇ ಮಾರ್ಗವಾಗಿ ಹಿಂದಿರುಗುವಾಗ ಅಂಜೂರದ ಮರವು ಬೇರುಸಹಿತ ಒಣಗಿಹೋಗಿರುವುದನ್ನು ಕಂಡರು.


ದಾರಿಯ ಪಕ್ಕದಲ್ಲಿ ಒಂದು ಅಂಜೂರದ ಮರ ಕಣ್ಣಿಗೆ ಬಿದ್ದಿತು. ಹತ್ತಿರಕ್ಕೆ ಹೋಗಿ ನೋಡುವಾಗ ಅದರಲ್ಲಿ ಬರೀ ಎಲೆಗಳೇ ಹೊರತು ಮತ್ತೇನೂ ಕಾಣಲಿಲ್ಲ. ಯೇಸು ಆ ಮರಕ್ಕೆ, “ಇನ್ನು ಮುಂದೆ ನೀನೆಂದಿಗೂ ಹಣ್ಣುಬಿಡದಂತಾಗಲಿ,” ಎಂದರು. ಅದೇ ಕ್ಷಣದಲ್ಲಿ ಆ ಮರ ಒಣಗಿಹೋಯಿತು.


“ಎಫ್ರಯಿಮ್ ಕೇವಲ ಗಾಳಿಗೆ ಕುರಿಗಾಹಿ; ಅದು ದಿನವಿಡೀ ಗುದ್ದಾಡುತ್ತಿರುವುದು ಮೂಡಣಗಾಳಿಯನ್ನೇ. ಅದು ಮೋಸವನ್ನೂ ಹಿಂಸೆಯನ್ನೂ ನಿರಂತರವಾಗಿ ಹೆಚ್ಚಿಸುತ್ತಿದೆ. ಅಸ್ಸೀರಿಯದೊಂದಿಗೆ ಒಪ್ಪಂದಮಾಡಿಕೊಳ್ಳುತ್ತಿದೆ. ಈಜಿಪ್ಟಿಗೆ ಎಣ್ಣೆಯನ್ನು ಕಾಣಿಕೆಯಾಗಿ ಕಳುಹಿಸುತ್ತಿದೆ.”


ಆ ದಿನ ಬಂದಾಗ ಈ ಜನರಿಗೂ ಜೆರುಸಲೇಮಿಗೂ ಈ ಮಾತುಗಳನ್ನು ತಿಳಿಸಲಾಗುವುದು; ಬಿಸಿಗಾಳಿ ಒಣಗಾಡಿನ ಗುಡ್ಡಗಳಿಂದ ಬೀಸಿ ದೇವಪ್ರಜೆಯೆಂಬ ಯುವತಿಯ ಮೇಲೆ ಬೀಸುವುದು. ಅದು ಹೊಟ್ಟನ್ನು ತೂರುವುದಕ್ಕೆ ಅಲ್ಲ, ಕಾಳನ್ನು ಶೋಧಿಸುವುದಕ್ಕೆ ಅಲ್ಲ.


ಆ ಅರಸನು ಚಿದ್ಕೀಯನನ್ನು ಬಾಬಿಲೋನಿಗೆ ಕೊಂಡು ಒಯ್ಯುವನು. ನಾನು ಅವನಿಗೆ ದಯೆತೋರುವ ತನಕ ಅಲ್ಲೇ ಇರುವನು. ನೀವು ಬಾಬಿಲೋನಿಯರೊಡನೆ ಯುದ್ಧಮಾಡಿದರೂ ಜಯವಾಗದು. ಇದು ಸರ್ವೇಶ್ವರನ ನುಡಿ’ ಎಂದು ಹೇಳುತ್ತಿರುವೆ, ಏಕೆ?” ಎಂದು ಆಪಾದಿಸಿ ಸೆರೆಯಲ್ಲಿ ಇಟ್ಟಿದ್ದನು.


“ಈ ಮಾತನ್ನು ನುಡಿ - ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ಅದು ಯಾವಾಗಲು ಸಮೃದ್ಧವಾಗಿಯೆ ಇರುವುದೇ? ಅದನ್ನು ನಾಟಿದ ಆ ಹದ್ದು ಅದರ ಬೇರುಗಳನ್ನು ಕಿತ್ತು ಅದರ ಫಲವನ್ನು ಕಡಿದುಬಿಡುವುದು . ಆಗ ಅದು ಒಣಗಿ ಅದರ ಹಸುರೆಲೆಗಳೆಲ್ಲಾ ಬಾಡುವುದಲ್ಲವೆ? ಅದನ್ನು ಬೇರುಸಹಿತ ಕೀಳಲು ಹೆಚ್ಚು ಬಲಬೇಕಾಗಿಲ್ಲ , ಬಹುಜನರ ಅಗತ್ಯವಿಲ್ಲ


ಸರ್ವೇಶ್ವರ ದಯಪಾಲಿಸಿದ ಇನ್ನೊಂದು ವಾಣಿ:


ಅವುಗಳ ಹಿಂದೆಯೇ ಮೂಡಣಗಾಳಿಯಿಂದ ಒಣಗಿ, ಬತ್ತಿಹೋಗಿದ್ದ ಬೇರೆ ಏಳು ತೆನೆಗಳು ಮೊಳೆತು ಬಂದವು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು