Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 16:39 - ಕನ್ನಡ ಸತ್ಯವೇದವು C.L. Bible (BSI)

39 ನಾನು ನಿನ್ನನ್ನು ಸುತ್ತಲಿನವರ ಕೈವಶಮಾಡುವೆನು; ಅವರು ನಿನ್ನ ಮಂಟಪವನ್ನು ಕೆಡವಿ, ನಿನ್ನ ಜಗಲಿಗಳನ್ನು ಒಡೆದು, ನಿನ್ನ ಬಟ್ಟೆಗಳನ್ನು ಕಿತ್ತು, ನಿನ್ನ ಒಡವೆಗಳನ್ನು ಸುಲಿದುಕೊಂಡು, ನಿನ್ನನ್ನು ಬಟ್ಟಬರಿದಾಗಿ ಬಿಟ್ಟುಹೋಗುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

39 ನಾನು ನಿನ್ನನ್ನು ಸುತ್ತಲಿನವರ ಕೈವಶಮಾಡುವೆನು; ಅವರು ನಿನ್ನ ಮಂಟಪವನ್ನು ಕೆಡವಿ, ನಿನ್ನ ಜಗಲಿಗಳನ್ನು ಒಡೆದು, ನಿನ್ನ ಬಟ್ಟೆಗಳನ್ನು ಕಿತ್ತು ನಿನ್ನ ಒಡವೆಗಳನ್ನು ಸುಲಿದುಕೊಂಡು, ನಿನ್ನನ್ನು ಬಟ್ಟಬರಿದಾಗಿ ಬಿಟ್ಟುಹೋಗುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

39 ನಾನು ನಿನ್ನನ್ನು ಸುತ್ತಲಿನವರ ಕೈವಶಮಾಡುವೆನು; ಅವರು ನಿನ್ನ ದಿಬ್ಬವನ್ನು ಕೆಡವಿ ನಿನ್ನ ಜಗಲಿಗಳನ್ನು ಒಡೆದು ನಿನ್ನ ಬಟ್ಟೆಗಳನ್ನು ಕಿತ್ತು ನಿನ್ನ ಒಡವೆಗಳನ್ನು ಸುಲಿದುಕೊಂಡು ನಿನ್ನನ್ನು ಬಟ್ಟಬರಿದಾಗಿ ಬಿಟ್ಟುಹೋಗುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

39 ಆ ನಿನ್ನ ಪ್ರಿಯತಮರಿಗೆ ನಿನ್ನನ್ನು ಬಿಟ್ಟುಕೊಡುವೆನು. ಅವರು ನಿನ್ನ ದಿಬ್ಬಗಳನ್ನು ನಾಶಮಾಡುವರು ಮತ್ತು ಪೂಜಾಯಜ್ಞವೇದಿಕೆಗಳನ್ನು ಕೆಡವಿಹಾಕುವರು. ನಿನ್ನ ಬಟ್ಟೆಗಳನ್ನು ಕಿತ್ತುಕೊಳ್ಳುವರು ಮತ್ತು ಚಂದವಾದ ಆಭರಣಗಳನ್ನು ತೆಗೆದುಕೊಂಡು ಹೋಗುವರು. ಮತ್ತು ನಿನ್ನನ್ನು ಬೆತ್ತಲೆಯಾಗಿ ಮಾಡುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

39 ಅನಂತರ ನಿನ್ನನ್ನು ಅವರ ಕೈಗಳಿಗೆ ಒಪ್ಪಿಸುವೆನು. ಅವರು ನಿನ್ನ ಎತ್ತರ ಸ್ಥಳಗಳನ್ನೆಲ್ಲಾ ಕೆಡವಿಹಾಕಿ, ನಿನ್ನ ಉನ್ನತ ಸ್ಥಾನಗಳನ್ನು ಒಡೆದು ಬಿಡುವರು. ಅವರು ನಿನ್ನ ವಸ್ತ್ರಗಳನ್ನು ತೆಗೆದುಹಾಕಿ, ನಿನ್ನ ಸುಂದರ ಆಭರಣಗಳನ್ನು ಕಸಿದುಕೊಂಡು, ನಿನ್ನನ್ನು ಬರೀ ಬೆತ್ತಲೆಯನ್ನಾಗಿ ಮಾಡಿಹೋಗುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 16:39
13 ತಿಳಿವುಗಳ ಹೋಲಿಕೆ  

ಇಲ್ಲವಾದರೆ ಅವಳನ್ನು ನಗ್ನವಾಗಿಸಿ (ಹುಟ್ಟಿದಾಗ ಇದ್ದಂತೆ) ಬೆತ್ತಲೆಯಾಗಿ ನಿಲ್ಲಿಸುವೆನು. ಅವಳನ್ನು ಬೆಂಗಾಡನ್ನಾಗಿ ಮಾಡಿ, ಮರುಭೂಮಿಯಂತೆ ಮಾರ್ಪಡಿಸಿ, ನೀರಡಿಕೆಯಿಂದ ಸಾಯುವಂತೆ ಮಾಡುವೆನು.


ನಿನ್ನ ವಸ್ತ್ರಗಳನ್ನು ಸೆಳೆದು, ನಿನ್ನ ಚಂದದ ಒಡವೆಗಳನ್ನು ಕಳಚಿಬಿಡುವರು.


ಅವರ ಕೈಗೆ ನಿನ್ನನ್ನು ನಾನು ಒಪ್ಪಿಸುವೆನು. ಅವರು ನಿನ್ನಲ್ಲಿ ಹಗೆ ತೀರಿಸಿಕೊಳ್ಳುವರು. ನೀನು ದುಡಿದದ್ದನ್ನೆಲ್ಲಾ ಅಪಹರಿಸಿ, ನಿನ್ನನ್ನು ಬಟ್ಟಬರಿದುಮಾಡಿ ಬಿಟ್ಟುಬಿಡುವರು; ಹೀಗೆ ನಾಚಿಕೆಗೀಡಾದ ನಿನ್ನ ಹಾದರವು, ಹೌದು, ನಿನ್ನ ಲಂಪಟತನ ಹಾಗು ಸೂಳೆತನ ಬಯಲಿಗೆ ಬರುವುವು.


ಒಂದೊಂದು ಬೀದಿಯ ಕೊನೆಯಲ್ಲೂ ನೀನು ಮಂಟಪವನ್ನು ಕಟ್ಟಿ ಎಲ್ಲಾ ಚೌಕಗಳಲ್ಲಿ ಜಗಲಿಯನ್ನು ಸ್ಥಾಪಿಸಿಕೊಂಡಿರುವೆ; ದೊರೆತದ್ದನ್ನು ಇದು ಕಡಿಮೆಯೆಂದು ತಿರಸ್ಕರಿಸುವ ಸೂಳೆಯಂತೆ ನೀನು ನಡೆಯುವವಳಲ್ಲ.


ಇಂತಿರಲು ಯಕೋಬ್ಯರ ಅಧರ್ಮಕ್ಕೆ ಪ್ರಾಯಶ್ಚಿತ್ತವಾಗಬೇಕಾದರೆ, ಅವರ ಪಾಪಪರಿಹಾರವನ್ನು ಸೂಚಿಸುವ ಪೂರ್ಣಫಲ ದೊರಕಬೇಕಾದರೆ, ಅವರ ವಿಗ್ರಹಾರಾಧಕ ಬಲಿಪೀಠದ ಕಲ್ಲುಗಳೆಲ್ಲ ಸುಣ್ಣದಂತೆ ಪುಡಿಪುಡಿ ಆಗಬೇಕು; ಆಶೇರಾ ಎಂಬ ವಿಗ್ರಹಸ್ತಂಭಗಳನ್ನೂ ಸೂರ್ಯಸ್ತಂಭಗಳನ್ನೂ ಪ್ರತಿಷ್ಠಾಪಿಸುವುದು ಇನ್ನು ನಿಲ್ಲಬೇಕು.


ನೀನು ಕಂಡ ಮೃಗವೂ ಅದರ ಹತ್ತು ಕೊಂಬುಗಳೂ ಆ ವೇಶ್ಯೆಯನ್ನು ದ್ವೇಷಿಸುವವರನ್ನು ಸೂಚಿಸುತ್ತದೆ. ಅವರು ಅವಳನ್ನು ನಿರ್ಗತಿಕಳನ್ನಾಗಿ ಮಾಡುವರು, ಬೆತ್ತಲೆಯಾಗಿಸುವರು; ಅವಳ ಮಾಂಸವನ್ನು ಕಿತ್ತು ತಿನ್ನುವರು; ಅವಳನ್ನೇ ಬೆಂಕಿಯಲ್ಲಿ ಸುಟ್ಟುಬಿಡುವರು.


ನಿಮ್ಮ ಪೂಜಾಸ್ಥಳಗಳನ್ನು ಇಲ್ಲದಂತೆ ಮಾಡುವೆನು. ನೀವು ಸೂರ್ಯನ ಪೂಜೆಗೆ ಇಟ್ಟಿರುವ ಕಂಬಗಳನ್ನು ಕಡಿದು ಹಾಕುವೆನು. ನಿಮ್ಮ ಬೊಂಬೆಗಳ ಬುರುಡೆಗಳ ಮೇಲೆ ನಿಮ್ಮ ಬುರುಡೆಗಳನ್ನು ಬಿಸಾಡುವೆನು; ನಿಮ್ಮ ಬಗ್ಗೆ ಅಸಹ್ಯಪಡುವೆನು.


ಅವರ ತಾಯಿ ವೇಶ್ಯೆಯಾಗಿದ್ದಾಳೆ. ಲಜ್ಜೆಗೆಟ್ಟ ಹೆಂಗಸಾಗಿ ವರ್ತಿಸಿದ್ದಾಳೆ. ‘ನನಗೆ ಅನ್ನಪಾನ, ಉಣ್ಣೆ ಉಡಿಗೆ, ಎಣ್ಣೆತೈಲ, ಪಾಯಸಪಾನಕಗಳನ್ನು ಕೊಡುವಂಥ ನಲ್ಲರ ಹಿಂದೆ ಹೋಗುವೆನು’ ಎಂದುಕೊಂಡಿದ್ದಾಳೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು