Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 16:16 - ಕನ್ನಡ ಸತ್ಯವೇದವು C.L. Bible (BSI)

16 ನೀನು ಪುಣ್ಯಕ್ಷೇತ್ರಗಳನ್ನು ನಿರ್ಮಿಸಿ, ನಿನ್ನ ನಾನಾ ಶೈಲಿಯ ವಸ್ತ್ರಗಳಿಂದ ಅವುಗಳನ್ನು ಅಲಂಕರಿಸಿ, ಹಿಂದೆಂದೂ ನಡೆಯದಂತಹ, ಮುಂದೆ ಎಂದೂ ನಡೆಯಬಾರದಂತಹ ವ್ಯಭಿಚಾರವನ್ನು ನಡೆಸಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

16 ನೀನು ಪೂಜಾ ಸ್ಥಾನಗಳನ್ನು ಕಟ್ಟಿಕೊಂಡು ನಿನ್ನ ಚಿತ್ರವಿಚಿತ್ರ ವಸ್ತ್ರಗಳಿಂದ ಅವುಗಳನ್ನು ಅಲಂಕರಿಸಿ ಅಲ್ಲಿ ವ್ಯಭಿಚಾರ ನಡಿಸಿದೆ. ಇದು ನಡೆಯತಕ್ಕದ್ದಲ್ಲ. ಆಗಬಾರದಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

16 ನೀನು ಪೂಜಾಸ್ಥಾನಗಳನ್ನು ಕಟ್ಟಿಕೊಂಡು ನಿನ್ನ ಚಿತ್ರವಿಚಿತ್ರ ವಸ್ತ್ರಗಳಿಂದ ಅವುಗಳನ್ನು ಅಲಂಕರಿಸಿ ಅಲ್ಲಿ ವ್ಯಭಿಚಾರನಡಿಸಿದಿ. (ಇದು ನಡೆಯತಕ್ಕದ್ದಲ್ಲ. ಆಗಬಾರದಾಗಿತ್ತು.)

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

16 ನೀನು ನಿನ್ನ ಬಟ್ಟೆಗಳಲ್ಲಿ ಕೆಲವನ್ನು ತೆಗೆದುಕೊಂಡು ನಿನ್ನ ಪೂಜಿಸುವ ಸ್ಥಳಗಳನ್ನು ವರ್ಣರಂಜಿತವನ್ನಾಗಿ ಮಾಡಿದೆ ಮತ್ತು ಆ ಸ್ಥಳಗಳಲ್ಲಿ ನೀನು ಸೂಳೆಯಂತೆ ವರ್ತಿಸಿದೆ. ಹಾದುಹೋಗುವ ಪ್ರತಿಯೊಬ್ಬ ಗಂಡಸಿಗೂ ನೀನು ನಿನ್ನನ್ನು ಒಪ್ಪಿಸಿಕೊಟ್ಟೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

16 ನಿನ್ನ ವಸ್ತ್ರಗಳನ್ನು ತೆಗೆದುಕೊಂಡು ಚಿತ್ರ ವಿಚಿತ್ರ ಮಾಡಿ ಅಲಂಕರಿಸಿಕೊಂಡು ಪೂಜಾ ಸ್ಥಳದಲ್ಲಿ ವ್ಯಭಿಚಾರ ಮಾಡಿದೆ; ನೀನು ಅವನ ಬಳಿಗೆ ಹೋದೆ ಮತ್ತು ಅವನು ನಿನ್ನ ಸೌಂದರ್ಯವನ್ನು ತೆಗೆದುಕೊಂಡಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 16:16
10 ತಿಳಿವುಗಳ ಹೋಲಿಕೆ  

ಸರ್ವೇಶ್ವರನ ಆಲಯದ ಪ್ರಾಕಾರದೊಳಗಿದ್ದ ವೇಶ್ಯಾವೃತ್ತಿಯವರ ಮನೆಗಳನ್ನು ಕೆಡವಿಸಿದನು. ಆ ಮನೆಗಳಲ್ಲಿ ಸ್ತ್ರೀಯರು ಅಶೇರ ದೇವತೆಗಾಗಿ ಬಟ್ಟೆಬರೆಗಳನ್ನು ನೇಯುತ್ತಿದ್ದರು.


ಅವಳಿಗೆ ದವಸಧಾನ್ಯ, ದ್ರಾಕ್ಷಾರಸ, ತೈಲಗಳನ್ನು ಕೊಟ್ಟವನು ನಾನೇ ಎಂಬುದನ್ನು ಅರಿತುಕೊಳ್ಳದೆಹೋದಳು. ನಾನು ಧಾರಾಳವಾಗಿ ಕೊಟ್ಟ ಬೆಳ್ಳಿಬಂಗಾರಗಳನ್ನು ಬಾಳನ ಪೂಜೆಗೆ ಉಪಯೋಗಿಸಿದಳು.


“ಅವರ ಆಭರಣಗಳ ಚಂದವು ಅವರಿಗೆ ಗರ್ವಕ್ಕೆ ಆಸ್ಪದವಾಯಿತು. ಇದಲ್ಲದೆ ಹೇಯವೂ ಅಸಹ್ಯವೂ ಆದ ತಮ್ಮ ದೇವತೆಗಳ ಪ್ರತಿಮೆಗಳನ್ನು ಬೆಳ್ಳಿಬಂಗಾರದಿಂದ ರೂಪಿಸುತ್ತಿದ್ದರು.


ಇದಲ್ಲದೆ, ಅಹಾಜನು ದೇವಾಲಯದ ಸಾಮಗ್ರಿಗಳನ್ನು ಕೂಡಿಸಿ, ಅವುಗಳನ್ನು ಚೂರುಚೂರು ಮಾಡಿಬಿಟ್ಟನು; ಸರ್ವೇಶ್ವರನ ಆಲಯದ ಬಾಗಿಲುಗಳನ್ನು ಮುಚ್ಚಿ ಜೆರುಸಲೇಮಿನ ಪ್ರತಿಯೊಂದು ಮೂಲೆಯಲ್ಲೂ ಯಜ್ಞವೇದಿಗಳನ್ನು ಕಟ್ಟಿಸಿದನು.


ಬಲಿಯರ್ಪಿಸಲು ಎತ್ತರವಾದ, ದೊಡ್ಡದಾದ ಬೆಟ್ಟವನ್ನು ಹತ್ತಿರುವೆ. ಆದರೆ ಅಲ್ಲಿ ಕಾಮಕೇಳಿಗಳಲ್ಲಿ ತೊಡಗಿರುವೆ.


“ಆದರೆ ನೀನು ನಿನ್ನ ಸೌಂದರ್ಯವನ್ನೇ ನೆಚ್ಚಿಕೊಂಡೆ, ‘ನಾನು ಪ್ರಸಿದ್ಧಳಾದೆ’ ಎಂದು ಉಬ್ಬಿಕೊಂಡು ಸೂಳೆತನಮಾಡಿದೆ; ಹಾದುಹೋಗುವ ಪ್ರತಿಯೊಬ್ಬನ ಸಂಗಡ ಮಿತಿಮೀರಿ ಹಾದರಮಾಡಿದೆ. ಒಬ್ಬೊಬ್ಬನಿಗೂ ಒಳಗಾದೆ.


ನಾನು ನನ್ನ ಬೆಳ್ಳಿಬಂಗಾರದಿಂದ ನಿನಗೆ ಮಾಡಿಸಿಕೊಟ್ಟಿದ್ದ ಅಂದಚೆಂದವಾದ ಆಭರಣಗಳನ್ನು ತೆಗೆದು, ಅವುಗಳಿಂದ ಪುರುಷಮೂರ್ತಿಗಳನ್ನು ರೂಪಿಸಿಕೊಂಡು, ಅವುಗಳೊಡನೆ ಹಾದರ ಮಾಡಿದೆ;


“ಸೈಪ್ರಸ್ ದ್ವೀಪಗಳಿಗೆ ಹೋಗಿ ನೋಡಿ; ಕೇದಾರ್ ನಾಡಿಗೆ ಕಳಿಸಿ ವಿಚಾರಮಾಡಿ, ಇಂಥ ಕಾರ್ಯ ಎಲ್ಲಿಯಾದರು ನಡೆಯಿತೆ ಎಂದು ಚೆನ್ನಾಗಿ ಆಲೋಚಿಸಿರಿ.


ಸರ್ವೇಶ್ವರ ಮತ್ತೊಂದು ವಾಣಿಯನ್ನು ನನಗೆ ದಯಪಾಲಿಸಿದರು:


ಅವಳ ನಲ್ಲರ ಕಣ್ಣೆದುರಿಗೆ ಅವಳ ಲಜ್ಜೆಗೇಡಿತನವನ್ನು ಬಯಲುಮಾಡುವೆನು. ಅವಳನ್ನು ನನ್ನ ಕೈಯಿಂದ ಯಾರೂ ಬಿಡಿಸರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು