Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 16:12 - ಕನ್ನಡ ಸತ್ಯವೇದವು C.L. Bible (BSI)

12 ಕೊರಳಿಗೆ ಮಾಲೆಯನ್ನು, ಮೂಗಿಗೆ ಮೂಗುತಿಯನ್ನು, ಶಿರಸ್ಸಿಗೆ ಸುಂದರ ಕಿರೀಟವನ್ನು ಇಟ್ಟು, ನಿನ್ನನ್ನು ಆಭರಣಗಳಿಂದ ಸಿಂಗರಿಸಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ಮೂಗಿಗೆ ಮೂಗುತಿಯನ್ನು, ಶಿರಸ್ಸಿಗೆ ಸುಂದರ ಕಿರೀಟವನ್ನು ಇಟ್ಟು, ನಿನ್ನನ್ನು ಆಭರಣಗಳಿಂದ ಸಿಂಗರಿಸಿದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

12 ಮೂಗಿಗೆ ಮೂಗುತಿಯನ್ನು, ಶಿರಸ್ಸಿಗೆ ಸುಂದರಕಿರೀಟವನ್ನು ಇಟ್ಟು ನಿನ್ನನ್ನು ಆಭರಣಗಳಿಂದ ಸಿಂಗರಿಸಿದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 ನಿನಗೆ ಮೂಗುತಿ, ಕಿವಿಗೆ ಕಿವಿಯುಂಗುರಗಳನ್ನು ಮತ್ತು ಒಂದು ಅಂದವಾದ ಕಿರೀಟವನ್ನು ಧರಿಸಲು ಕೊಟ್ಟೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

12 ನಿನ್ನ ಮೂಗಿಗೆ ಮೂಗುತಿಯನ್ನೂ, ನಿನ್ನ ಕಿವಿಗಳಲ್ಲಿ ವಾಲೆಗಳನ್ನೂ, ನಿನ್ನ ತಲೆಯ ಮೇಲೆ ಸುಂದರ ಕಿರೀಟವನ್ನೂ ಇಟ್ಟೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 16:12
13 ತಿಳಿವುಗಳ ಹೋಲಿಕೆ  

ಆ ದಿನದಂದು ಸೇನಾಧೀಶ್ವರ ಸರ್ವೇಶ್ವರ ಸ್ವಾಮಿಯೇ ಅಳಿದುಳಿದ ತಮ್ಮ ಜನರಿಗೆ ಅಂದದ ಕಿರೀಟ, ಸುಂದರ ಮುಕುಟವಾಗುವರು.


ಮುದ್ರೆ ಉಂಗುರ, ಮೂಗುತಿ,


ಸರ್ವೇಶ್ವರ ನನಗೆ ಹೀಗೆಂದರು : “ರಾಜನಿಗೂ ರಾಜಮಾತೆಗೂ ಈ ವರ್ತಮಾನವನ್ನು ತಿಳಿಸು - ‘ನೀವು ಇಳಿದುಬಂದು ನೆಲದಲ್ಲಿ ಕುಳಿತುಕೊಳ್ಳಿ. ನಿಮ್ಮ ಚೆಲುವಾದ ಕಿರೀಟ ಬಿದ್ದುಹೋಗಿದೆ ತಲೆಯಿಂದ.


ನೀನು ಯಾರ ಮಗಳೆಂದು ಕೇಳಿದ್ದಕ್ಕೆ, 'ನಾಹೋರನಿಗೆ ಮಿಲ್ಕಳಲ್ಲಿ ಹುಟ್ಟಿದ ಬೆತೂವೇಲನ ಮಗಳು’ ಎಂದಳು. ಅದನ್ನು ಕೇಳಿ ನಾನು ಆಕೆಗೆ ಮೂಗುತಿಯನ್ನೂ ಕೈಗಳಿಗೆ ಬಳೆಗಳನ್ನೂ ತೊಡಿಸಿ,


ಕೇಳುವ ಕಿವಿಗೆ ಕೊಡುವ ಬುದ್ಧಿವಾದವು ಹೊನ್ನಿನ ಮುರುವು, ಅಪರಂಜಿಯ ಆಭರಣವು.


ನಾನು ನಿನಗೆ ಅನುಗ್ರಹಿಸಿದ ನಿನ್ನ ವೈಭವದಿಂದ ನಿನ್ನ ಸೌಂದರ್ಯ ಪರಿಪೂರ್ಣವಾಯಿತು; ನಿನ್ನ ಚೆಲುವು ಜನಾಂಗಗಳಲ್ಲಿ ಪ್ರಸಿದ್ಧವಾಯಿತು; ಇದು ಸರ್ವೇಶ್ವರನಾದ ದೇವರ ನುಡಿ.


ನಾನು ನನ್ನ ಬೆಳ್ಳಿಬಂಗಾರದಿಂದ ನಿನಗೆ ಮಾಡಿಸಿಕೊಟ್ಟಿದ್ದ ಅಂದಚೆಂದವಾದ ಆಭರಣಗಳನ್ನು ತೆಗೆದು, ಅವುಗಳಿಂದ ಪುರುಷಮೂರ್ತಿಗಳನ್ನು ರೂಪಿಸಿಕೊಂಡು, ಅವುಗಳೊಡನೆ ಹಾದರ ಮಾಡಿದೆ;


ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ನಿನ್ನ ರುಮಾಲನ್ನು ಕಿತ್ತುಬಿಡು, ಕಿರೀಟವನ್ನು ತೆಗೆದುಹಾಕು. ಎಲ್ಲವೂ ಮೊದಲಿದ್ದ ಹಾಗೆ ಇರುವುದಿಲ್ಲ; ಕೆಳಗಿರುವುದನ್ನು ಮೇಲೆ ಸೇರಿಸಲಾಗುವುದು, ಮೇಲಿರುವುದನ್ನು ಕೆಳಕ್ಕಿಳಿಸಲಾಗುವುದು.


ಅಲ್ಲಿ ವಿನೋದ ಪ್ರಿಯರ ದೊಡ್ಡ ಗುಂಪಿನವರ ಕಳಕಳವಾಯಿತು; ಅರಣ್ಯದಿಂದ ಕರೆಯಿಸಿಕೊಂಡ ಕುಡುಕರು ನಾಡಾಡಿಗರೊಂದಿಗೆ ಸೇರಿ ಅಸ್ಸೀರಿಯರಿಬ್ಬರ ಕೈಗೆ ಕಡಗವನ್ನು ತೊಡಿಸಿ, ಅವರ ತಲೆಗೆ ಸುಂದರ ಕಿರೀಟವನ್ನಿಟ್ಟರು.


ಅವಳು ನನ್ನನ್ನು ಮರೆತುಬಿಟ್ಟಿದ್ದಾಳೆ; ಬಂಗಾರದ ಮೂಗುತಿ ಮುಂತಾದ ಒಡವೆಗಳಿಂದ ಶೃಂಗರಿಸಿಕೊಂಡು ನಲ್ಲರನ್ನು ವರಿಸುತ್ತಾ ಹೋಗಿದ್ದಾಳೆ. ಅಷ್ಟೇ ಅಲ್ಲ, ಬಾಳ್ ದೇವತೆಗಳ ಹಬ್ಬದಲ್ಲಿ ಧೂಪಾರತಿಯನ್ನು ಬೆಳಗಿದ್ದಾಳೆ. ಈ ಕಾರಣ ನಾನು ಅವಳನ್ನು ದಂಡಿಸುವೆನು. ಇದು ಸರ್ವೇಶ್ವರಸ್ವಾಮಿಯ ನುಡಿ.


ಎಷ್ಟು ಅಂದವಾಗಿವೆ ನಿನ್ನ ಕೆನ್ನೆಗಳು ಕಿವಿಯೋಲೆಗಳಿಂದ! ನಿನ್ನ ಕೊರಳು ಕಂಠಹಾರಗಳಿಂದ!


ಮಾಡಿಸುವೆ ನಿನಗೆ ಬಂಗಾರದ ಅಂಚು, ಬೆಳ್ಳಿಯ ಕುಚ್ಚು. ನಲ್ಲೆ :


ಜುಮಕಿ, ಬಳೆ, ಕುಲಾವಿ, ಶಿರವಸ್ತ್ರ,


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು