Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 14:8 - ಕನ್ನಡ ಸತ್ಯವೇದವು C.L. Bible (BSI)

8 ಅವನಿಗೆ ವಿಮುಖನಾಗಿ ಅವನ ದುರ್ಗತಿಯು ಎಚ್ಚರಿಕೆಗೆ ಗುರುತಾಗಿಯೂ ಕಟ್ಟುಗಾದೆಗಳಿಗೆ ವಸ್ತುವಾಗಿಯೂ ಆಗುವಂತೆ ಮಾಡುವೆನು; ಅವನನ್ನು ನನ್ನ ಜನರಿಂದ ಹೊರಹಾಕುವೆನು; ಹೀಗೆ ನಾನೇ ಸರ್ವೇಶ್ವರ ಎಂದು ನಿಮಗೆ ಗೊತ್ತಾಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

8 ಅವನ ಮೇಲೆ ಉಗ್ರಕೋಪಗೊಂಡು, ಅವನನ್ನು ಎಚ್ಚರಿಕೆಗೆ ಗುರುತಾಗಿಯೂ, ಕಟ್ಟು ಗಾದೆಗಳಿಗೂ ವಸ್ತುವಾಗಿ ಮಾಡಿ, ನನ್ನ ಜನರೊಳಗಿಂದ ಕಿತ್ತುಹಾಕುವೆನು; ಹೀಗೆ ನಾನೇ ಯೆಹೋವನು ಎಂದು ನಿಮಗೆ ಗೊತ್ತಾಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

8 ಅವನ ಮೇಲೆ ಉಗ್ರಕೋಪಗೊಂಡು ಅವನ ಗತಿಯನ್ನು ಬೆರಗಿಗೂ ಎಚ್ಚರಿಕೆಯ ಮಾತುಗಳಿಗೂ ಕಟ್ಟುಗಾದೆಗಳಿಗೂ ಈಡುಮಾಡಿ ಅವನನ್ನು ನನ್ನ ಜನರೊಳಗಿಂದ ಕಿತ್ತುಹಾಕುವೆನು; ಹೀಗೆ ನಾನೇ ಯೆಹೋವನು ಎಂದು ನಿಮಗೆ ಗೊತ್ತಾಗುವದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

8 ನಾನು ಅವನ ವಿರುದ್ಧವಾಗಿ ತಿರುಗಿ ಅವನನ್ನು ನಾಶಮಾಡುವೆನು. ಅವನು ಇಸ್ರೇಲರಿಗೆ ನಿದರ್ಶನವಾಗಿರಬೇಕು, ಜನರು ಅವನನ್ನು ನೋಡಿ ನಗಾಡುವರು. ನಾನು ಅವನನ್ನು ನನ್ನ ಜನರ ಮಧ್ಯದಿಂದ ತೆಗೆದು ಬಿಡುವೆನು. ಆಗ ನೀವು ನಾನೇ ಯೆಹೋವನೆಂದು ತಿಳಿಯುವಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

8 ನಾನು ಅಂಥವನ ಮೇಲೆ ಬಹುಕೋಪಗೊಂಡು, ಅವನನ್ನು ಗುರುತನ್ನಾಗಿಯೂ, ಗಾದೆಯನ್ನಾಗಿಯೂ ಮಾಡಿ, ನನ್ನ ಜನರ ಮಧ್ಯದೊಳಗಿಂದ ತೆಗೆದುಬಿಡುವೆನು. ಹೀಗೆ ನಾನೇ ಯೆಹೋವ ದೇವರು ಎಂದು ನಿಮಗೆ ಗೊತ್ತಾಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 14:8
25 ತಿಳಿವುಗಳ ಹೋಲಿಕೆ  

ನಾನವರ ಮೇಲಿಡುವೆನು ಕೋಪ ದೃಷ್ಟಿಯನ್ನು; ಬೆಂಕಿಯಿಂದ ತಪ್ಪಿಸಿಕೊಂಡರೂ ನುಂಗಿಬಿಡುವುದು ಅದು ಅವರನ್ನು. ನಾನವರ ಮೇಲೆ ಕೋಪ ದೃಷ್ಟಿಯನ್ನಿಟ್ಟಾಗ ನಾನೇ ಸರ್ವೇಶ್ವರನೆಂದು ನಿಮಗೆ ಮನದಟ್ಟಾಗುವುದು.


“ನಾನು ಕೋಪದಿಂದ, ರೋಷದಿಂದ ಹಾಗು ತೀವ್ರ ಖಂಡನೆಯಿಂದ ನಿನಗೆ ಮಾಡುವ ದಂಡನೆಗಳು ಸುತ್ತಲಿನ ಜನಾಂಗಗಳ ದೂಷಣೆಗೂ ಪರಿಹಾಸ್ಯಗಳಿಗೂ ಬೆರಗು ಬುದ್ಧಿವಾದಗಳಿಗೂ ಆಸ್ಪದವಾಗುವುವು; ಇದು ಸರ್ವೇಶ್ವರನಾದ ನನ್ನ ನುಡಿ.


“ಆದಕಾರಣ ಇಸ್ರಯೇಲಿನ ದೇವರೂ ಸೇನಾಧೀಶ್ವರರೂ ಆದ ಸರ್ವೇಶ್ವರ ಹೇಳುವುದನ್ನು ಕೇಳಿರಿ: ‘ಜುದೇಯವನ್ನೆಲ್ಲ ನಿರ್ಮೂಲ ಮಾಡುವೆನು. ಕೇಡಿಗಾಗಿಯೇ ನಿಮ್ಮ ಮೇಲೆ ಕಣ್ಣಿಡುವೆನು.


ಹತರಾದವರು ನಿಮ್ಮ ಮಧ್ಯದಲ್ಲಿ ಬೀಳುವರು; ಆಗ ನಾನೇ ಸರ್ವೇಶ್ವರ ಎಂದು ನಿಮಗೆ ಗೊತ್ತಾಗುವುದು.


ಆಯ್ಕೆಯಾದವರಿಗೆ ನಿಮ್ಮ ಹೆಸರು ಶಾಪದ ಹೆಸರಾಗಿಯೇ ಉಳಿಯುವುದು. ಏಕೆಂದರೆ, ಸ್ವಾಮಿ ಸರ್ವೇಶ್ವರ ಆದ ನಾನು ನಿಮ್ಮನ್ನು ಕೊಲೆಗೀಡುಮಾಡುವೆನು. ನನ್ನ ಭಕ್ತಾದಿಗಳಿಗಾದರೋ ಹೊಸ ಹೆಸರನ್ನು ಕೊಡುವೆನು.


ಸರ್ವೇಶ್ವರ ನಿಮ್ಮನ್ನು ಒಯ್ಯಿಸುವ ಜನಾಂಗಗಳಲ್ಲಿ ನೀವು ಭೀಕರತೆಗೂ ನಿಂದೆಲಾವಣಿಗೂ ಪರಿಹಾಸ್ಯಕ್ಕೂ ಗುರಿಯಾಗುವಿರಿ.


“ಅಷ್ಟುಮಾತ್ರವಲ್ಲ, ಇಸ್ರಯೇಲರಲ್ಲಾಗಲಿ, ಅವರ ನಡುವೆ ವಾಸಿಸುವ ಅನ್ಯದೇಶದವರಲ್ಲಾಗಲಿ ಯಾರಾದರು ರಕ್ತಭೋಜನ ಮಾಡಿದರೆ ಸರ್ವೇಶ್ವರ ಅಂಥ ವ್ಯಕ್ತಿಯ ವಿರುದ್ಧ ಉಗ್ರಕೋಪಗೊಳ್ಳುವರು; ಅವನನ್ನು ತನ್ನ ಪ್ರಜೆಯಿಂದ ತೆಗೆದುಹಾಕುವರು.


ಇದೆಲ್ಲ ಅವರಿಗೆ ಸಂಭವಿಸಿದುದು ಇತರರಿಗೆ ನಿದರ್ಶನವಾಗಿರಲೆಂದು. ಇವುಗಳನ್ನು ಬರೆದಿಟ್ಟಿರುವುದು, ಯುಗಾಂತ್ಯಕ್ಕೆ ಬಂದಿರುವ ನಮಗೆ ಮುನ್ನೆಚ್ಚರಿಕೆಯಾಗಿರಲೆಂದು.


ಇಲ್ಲ, ದೇವರ ಕರುಣೆ ಹಾಗೂ ಕಠಿಣತೆಯನ್ನು ಗಮನಿಸು. ಬಿದ್ದವರತ್ತ ಕಾಠಿಣ್ಯವನ್ನೂ ನಿನ್ನತ್ತ ಕರುಣೆಯನ್ನೂ ತೋರಿಸಿದ್ದಾರೆ. ನೀನು ಅವರ ಕರುಣೆಯನ್ನು ಆಶ್ರಯಿಸಿ ನಡೆಯಬೇಕು. ಇಲ್ಲವಾದರೆ ನಿನ್ನನ್ನು ಆ ರೆಂಬೆಗಳಂತೆ ಕಡಿದುಹಾಕಲಾಗುತ್ತದೆ.


ಆದಕಾರಣ ನೀವು ಮಿಥ್ಯದರ್ಶನವನ್ನು ಹೊಂದಿ, ಸುಳ್ಳುಭವಿಷ್ಯ ಹೇಳುವ ಕೆಲಸ ಇನ್ನು ನಡೆಯುವುದೇ ಇಲ್ಲ; ನನ್ನ ಜನರನ್ನು ನಿಮ್ಮ ಕೈವಶದಿಂದ ಬಿಡಿಸುವೆನು; ನಾನೆ ಸರ್ವೇಶ್ವರ ಎಂದು ನಿಮಗೆ ಗೊತ್ತಾಗುವುದು.”


ಇವರಿಗೆ ಒದಗಿದ ಗತಿಯನ್ನು ನೆನೆದು, ಬಾಬಿಲೋನಿಯದಲ್ಲಿ ಸೆರೆಯಾಗಿರುವ ಯೆಹೂದ್ಯರೆಲ್ಲರು ಯಾರನ್ನಾದರು ಶಪಿಸುವಾಗ, ‘ಬಾಬಿಲೋನಿಯದ ಅರಸ ಬೆಂಕಿಯಲ್ಲಿ ಸುಟ್ಟು ಭಸ್ಮಮಾಡಿದ ಚಿದ್ಕೀಯನ ಹಾಗು ಅಹಾಬನ ಗತಿಯನ್ನೆ ಸರ್ವೇಶ್ವರ ನಿನಗೂ ತರಲಿ’ ಎಂದು ಶಾಪಹಾಕುವರು.


ಅವರ ಕೇಡಿಗಾಗಿ ನಾನು ಅವರನ್ನು ಜಗದ ಎಲ್ಲ ರಾಜ್ಯಗಳಿಗೆ ಭಯಾಸ್ಪದವಾಗುವಂತೆ ಮಾಡುವೆನು. ಅವರನ್ನು ಅಟ್ಟಲಾಗುವ ಸ್ಥಳಗಳಲ್ಲೆಲ್ಲ ಅವರು ಕಟ್ಟುಗಾದೆಗೆ, ನಿಂದೆ ಪರಿಹಾಸ್ಯಕ್ಕೆ, ಶಾಪತಾಪಕ್ಕೆ ಗುರಿಯಾಗುವರು.


ಈ ನಗರಕ್ಕೆ ಒಳಿತನ್ನು ಅಲ್ಲ, ಕೆಡುಕನ್ನು ಮಾಡಲೆಂದೆ ಇದರ ಮೇಲೆ ಕಣ್ಣಿಟ್ಟಿದ್ದೇನೆ. ಇದು ಬಾಬಿಲೋನಿಯಾದ ಅರಸನ ಕೈವಶವಾಗುವುದು. ಅವನು ಇದನ್ನು ಸುಟ್ಟು ಭಸ್ಮಮಾಡುವನು. ಇದು ಸರ್ವೇಶ್ವರನಾದ ನನ್ನ ನುಡಿ.’


ಪ್ರಭುವಿನಿಂದ ಆಶೀರ್ವದಿತರು ನಾಡಿಗೆ ಬಾಧ್ಯಸ್ಥರು I ಆತನಿಂದ ಶಾಪಗ್ರಸ್ಥರು ಬಹಿಷ್ಕೃತರು II


ದುರ್ಜನರಿಗಾದರೋ ಪ್ರಭು ವಿಮುಖನು I ಅವರ ಹೆಸರನು ಧರೆಯಿಂದ ಅಳಿಸುವನು II


ಇವರನ್ನು ಹಾಗು ಕೋರಹನನ್ನು ಭೂಮಿ ಬಾಯ್ದೆರೆದು ನುಂಗಿಬಿಟ್ಟಿತು. ಆ ಪಂಗಡದವರಲ್ಲಿ ಬೇರೆ ಇನ್ನೂರೈವತ್ತು ಮಂದಿಯನ್ನು ಬೆಂಕಿ ಸುಟ್ಟು ಹಾಕಿತು. ಹೀಗೆ ಇಸ್ರಯೇಲರಿಗೆ ಎಚ್ಚರಿಕೆ ಉಂಟಾಗುವಂತೆ ಮಾಡಿತು.


ಮಡಿಗೆಟ್ಟು ದೋಷಪರಿಹಾರ ಮಾಡಿಕೊಳ್ಳದವನು ಸರ್ವೇಶ್ವರನ ದೇವಸ್ಥಾನವನ್ನು ಅಪವಿತ್ರಗೊಳಿಸುತ್ತಾನೆ. ಆದಕಾರಣ ಅಂಥವನಿಗೆ ಸಭೆಯಿಂದ ಬಹಿಷ್ಕಾರ ಹಾಕಬೇಕು. ಶುದ್ಧೀಕರಣ ಜಲವನ್ನು ತನ್ನ ಮೇಲೆ ಚಿಮುಕಿಸಿಕೊಳ್ಳದೆ ಹೋದುದರಿಂದ ಅವನು ಮಡಿಗೆಟ್ಟವನಾಗಿಯೇ ಇರುತ್ತಾನೆ.


ನಾನು ನಿಮ್ಮ ಮೇಲೆ ಕಡುಕೋಪಗೊಳ್ಳುವೆನು; ನೀವು ನಿಮ್ಮ ಶತ್ರುಗಳ ಮುಂದೆಯೇ ಸೋತುಬೀಳುವಿರಿ; ನಿಮ್ಮ ವೈರಿಗಳು ನಿಮ್ಮನ್ನು ಆಳುವರು. ಯಾರೂ ಬೆನ್ನಟ್ಟಿ ಬರದಿದ್ದರೂ ನೀವು ಹೆದರಿ ಓಡುವಿರಿ.


ಅವರಿಗೆ ಹೀಗೆಂದು ವಿಧಿಸು: ನಿಮ್ಮಲ್ಲಿಯಾಗಲಿ, ನಿಮ್ಮ ಸಂತತಿಯವರಲ್ಲಿಯಾಗಲಿ ಯಾವನಾದರು ಅಶುದ್ಧನಾಗಿರುವಾಗ ಇಸ್ರಯೇಲರು ಸರ್ವೇಶ್ವರ ಸ್ವಾಮಿಗೆ ಮೀಸಲೆಂದು ಸಮರ್ಪಿಸುವ ಕಾಣಿಕೆಗಳ ಬಳಿಗೆ ಬಂದರೆ ಅವನನ್ನು ನನ್ನ ಸಾನ್ನಿಧ್ಯ ಸೇವೆಯಿಂದ ತೆಗೆದುಹಾಕಬೇಕು. ನಾನು ಸರ್ವೇಶ್ವರ.


ಆ ಧೂಪಾರತಿಗಳು ಸರ್ವೇಶ್ವರನ ಸನ್ನಿಧಿಗೆ ತರಲಾದವುಗಳು. ಈ ಕಾರಣ ಪವಿತ್ರವಾದುವು. ಆದುದರಿಂದ ಅವುಗಳನ್ನು ತಗಡುಗಳಾಗಿ ತಟ್ಟಿ ಬಲಿಪೀಠಕ್ಕೆ ಮುಚ್ಚಳವನ್ನಾಗಿ ಮಾಡಿಸು. ಹೀಗೆ ಅವು ಇಸ್ರಯೇಲರಿಗೆ ನೆನಪು ಹುಟ್ಟಿಸುವ ಗುರುತುಗಳಾಗುವುವು,” ಎಂದು ಹೇಳಿದರು.


ಇವು ನಿಮಗೂ ನಿಮ್ಮ ಸಂತತಿಯವರಿಗೂ ನಿರಂತರವಾಗಿ ಪ್ರಾಪ್ತವಾಗುವುವು; ಸರ್ವರಿಗೆ ಬೆರಗನ್ನೂ ಎಚ್ಚರಿಕೆಯನ್ನೂ ಉಂಟುಮಾಡುವುವು.


ಶಾಪದಿಂದ ಕೂಡಿರುವ ಈ ಪ್ರತಿಜ್ಞೆಯನ್ನು ಕೇಳಿದ ಯಾವನಾದರು ತನ್ನೊಳಗೆ, ‘ನಾನು ಹಟಹಿಡಿದು ಅವಿಧೇಯನಾದರೂ ನನಗೆ ಕ್ಷೇ‍ಮವಾಗಿಯೇ ಇರುವುದು’ ಎಂದುಕೊಂಡು ಹಿಗ್ಗಬಾರದು. ಹಾಗೆ ಮಾಡುವವನು ದೋಷಿಗಳಿಗೂ ನಿರ್ದೋಷಿಗಳಿಗೂ ನಾಶವನ್ನುಂಟು ಮಾಡುವನು.


ಕಿವಿಗೊಡುವನು ಪ್ರಭು ಸಜ್ಜನರ ಮೊರೆಗೆ I ನೆರವೀವನವರ ಕಷ್ಟನಿವಾರಣೆಗೆ II


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು