Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 14:5 - ಕನ್ನಡ ಸತ್ಯವೇದವು C.L. Bible (BSI)

5 ಇಸ್ರಯೇಲ್ ವಂಶದವರೆಲ್ಲರೂ ತಮ್ಮ ವಿಗ್ರಹಗಳ ನಿಮಿತ್ತ ನನ್ನನ್ನು ತೊರೆದುದ್ದರಿಂದ ನಾನು ಅವರನ್ನೆಲ್ಲಾ ಅವರ ಆಶಾಪಾಶದಲ್ಲೇ ಸಿಕ್ಕಿಸಿ ಹಿಡಿಯುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

5 ಇಸ್ರಾಯೇಲ್ ವಂಶದವರೆಲ್ಲರೂ ತಮ್ಮ ವಿಗ್ರಹಗಳ ನಿಮಿತ್ತ ನನ್ನನ್ನು ತೊರೆದುದರಿಂದ ನಾನು ಅವರನ್ನೆಲ್ಲಾ ಅವರ ಆಶಾಪಾಶದಲ್ಲೇ ಸಿಕ್ಕಿಸಿ ಹಿಡಿಯುವೆನು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

5 ಇಸ್ರಾಯೇಲ್ ವಂಶದವರೆಲ್ಲರೂ ತಮ್ಮ ಬೊಂಬೆಗಳ ನಿವಿುತ್ತ ನನ್ನನ್ನು ತೊರೆದದರಿಂದ ನಾನು ಅವರನ್ನೆಲ್ಲಾ ಅವರ ಆಶಾಪಾಶದಲ್ಲಿ ಸಿಕ್ಕಿಸಿ ಹಿಡಿಯುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

5 ಯಾಕೆಂದರೆ ನಾನು ಅವರ ಹೃದಯಗಳನ್ನು ಪರಿವರ್ತಿಸಬೇಕು. ಅವರು ನನ್ನನ್ನು ತೊರೆದು ಹೊಲಸು ವಿಗ್ರಹಗಳನ್ನು ಪೂಜಿಸಿದರೂ ನಾನು ಅವರನ್ನು ಪ್ರೀತಿಸುತ್ತೇನೆ ಎಂಬುದನ್ನು ಅವರು ತಿಳಿದುಕೊಳ್ಳಬೇಕು.’ ಇದೇ ನನ್ನ ಉದ್ದೇಶ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

5 ತಮ್ಮ ವಿಗ್ರಹಗಳಿಗಾಗಿ ನನ್ನನ್ನು ತೊರೆದ ಇಸ್ರಾಯೇಲ್ ಜನರ ಹೃದಯಗಳನ್ನು ಪುನಃ ವಶಪಡಿಸಿಕೊಳ್ಳಲು ನಾನು ಇದನ್ನು ಮಾಡುತ್ತೇನೆ.’

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 14:5
19 ತಿಳಿವುಗಳ ಹೋಲಿಕೆ  

ಎಲೈ ಪಾಪಿಷ್ಠ ಜನವೇ, ದೋಷಭರಿತ ಪ್ರಜೆಯೇ, ದುಷ್ಟಪೀಳಿಗೆಯೇ, ಭ್ರಷ್ಟಸಂತಾನವೇ, ನಿಮ್ಮ ಗತಿಯನ್ನು ಏನೆಂದು ಹೇಳಲಿ. ನೀವು ಸರ್ವೇಶ್ವರನನ್ನು ತೊರೆದಿದ್ದೀರಿ. ಇಸ್ರಯೇಲರ ಪರಮಪಾವನ ಸ್ವಾಮಿಯನ್ನು ಧಿಕ್ಕರಿಸಿದ್ದೀರಿ. ಅವರಿಗೆ ಬೆನ್ನುಮಾಡಿ ಬೇರೆಯಾಗಿದ್ದೀರಿ.


ಒಂದೇ ತಿಂಗಳೊಳಗೆ ಮೂವರು ಕುರುಬರನ್ನು ಕೆಲಸದಿಂದ ತೆಗೆದುಹಾಕಿದೆ. ಅನಂತರ ನನಗೆ ಕುರಿಗಳ ಬಗ್ಗೆ ಅಸಹ್ಯವಾಯಿತು. ಕುರಿಗಳು ಸಹ ನನ್ನ ಬಗ್ಗೆ ಬೇಸರಗೊಂಡವು.


ಸಹೋದರರೇ, ಜೀವಸ್ವರೂಪರಾದ ದೇವರನ್ನು ಬಿಟ್ಟಗಲುವ ಕೆಟ್ಟಬುದ್ಧಿಯೂ ಅವಿಶ್ವಾಸವೂ ನಿಮ್ಮಲ್ಲಿ ಯಾರಿಗೂ ಇರದಂತೆ ಎಚ್ಚರಿಕೆಯಾಗಿರಿ.


ಹಿಂದೆ, ನೀವು ಆಚಾರ-ವಿಚಾರಗಳಲ್ಲಿ ಕೆಟ್ಟವರಾಗಿದ್ದರಿಂದ ದೇವರ ವಿರೋಧಿಗಳಾಗಿದ್ದು ಅವರಿಂದ ದೂರವಿದ್ದಿರಿ.


ಅವರ ಮನಸ್ಸಿಗೆ ಕತ್ತಲು ಕವಿದಿದೆ. ಅವರು ಅಜ್ಞಾನಿಗಳೂ ಕಠಿಣ ಹೃದಯಿಗಳೂ ಆಗಿರುವುದರಿಂದ ದೇವರು ಕೊಡುವ ಜೀವಕ್ಕೆ ಹೊರತಾಗಿದ್ದಾರೆ.


ಮೋಸಹೋಗದಿರಿ, ದೇವರನ್ನು ವಂಚಿಸಬಹುದೆಂದು ಭಾವಿಸದಿರಿ; ಬಿತ್ತುವುದನ್ನೇ ಕೊಯ್ಯುತ್ತೇವೆ ಎಂಬುದನ್ನು ನೆನಪಿನಲ್ಲಿಡಿ.


ಶರೀರ ಸ್ವಭಾವದಲ್ಲೇ ಮಗ್ನವಾಗಿರುವ ಮನಸ್ಸು ದೇವರಿಗೆ ಶತ್ರು. ಅಂಥ ಮನಸ್ಸು ದೇವರ ನಿಯಮಕ್ಕೆ ಮಣಿಯುವುದಿಲ್ಲ. ಮಣಿಯಲು ಸಾಧ್ಯವೂ ಇಲ್ಲ.


ಅವರು ಹರಟೆಮಲ್ಲರು, ಚಾಡಿಕೋರರು, ದೇವದ್ರೋಹಿಗಳು, ಗರ್ವಿಗಳು, ಅಹಂಕಾರಿಗಳು, ಜಂಭಕೊಚ್ಚಿಕೊಳ್ಳುವವರು, ಕೇಡುಬಗೆಯುವವರು, ತಂದೆತಾಯಿಗಳಿಗೆ ಅವಿಧೇಯರು ಆಗಿದ್ದಾರೆ.


ಅವರು ತಮಗಿದ್ದ ದೇವರ ಜ್ಞಾನವನ್ನು ತಿರಸ್ಕರಿಸಿದ್ದರಿಂದ, ದೇವರು ಅವರನ್ನು ಅಶ್ಲೀಲ ನಡವಳಿಕೆಗೆ ಬಿಟ್ಟುಬಿಟ್ಟರು.


ಅವರದು ವಂಚನೆಯ ಮನಸ್ಸು. ಈಗ ಅವರು ತಮ್ಮ ಪಾಪಕ್ಕೆ ತಕ್ಕ ದಂಡನೆಯನ್ನು ಅನುಭವಿಸಲೇಬೇಕು. ಸರ್ವೇಶ್ವರಸ್ವಾಮಿ ಅವರ ಯಜ್ಞವೇದಿಗಳನ್ನು ಕೆಡವುವರು. ಅವರ ಪೂಜಾಸ್ತಂಭಗಳನ್ನು ಒಡೆದುಹಾಕುವರು.


“ನಿಮ್ಮ ಪಿತೃಗಳು ನನ್ನಲ್ಲಿ ಯಾವ ಕೊರತೆಯನ್ನು ಕಂಡು ನನ್ನಿಂದ ದೂರವಾದರು? ಅವರು ವ್ಯರ್ಥಾಚಾರಗಳನ್ನು ಅನುಸರಿಸುತ್ತಾ ತಾವೇ ವ್ಯರ್ಥವಾಗಿಬಿಟ್ಟರು !


ಸರ್ವೇಶ್ವರನಾದ ನಾನು ಹೃದಯ ಪರಿಶೀಲಕ ಹೌದು, ಅಂತರಿಂದ್ರಿಯಗಳನ್ನು ಪರಿಶೋಧಿಸುವಾತ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು