Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 9:4 - ಕನ್ನಡ ಸತ್ಯವೇದವು C.L. Bible (BSI)

4 ಮುರಿದುಹಾಕಿದೆ ಭಾರವಾದ ಅವರ ನೊಗವನು ಅವರ ಬೆನ್ನನ್ನು ಬಡಿದ ಬೆತ್ತವನು ದಬ್ಬಾಳಿಕೆ ನಡೆಸಿದವರ ದೊಣ್ಣೆಯನು; ಮಿದ್ಯಾನನ್ನು ಗೆದ್ದ ದಿನದಂದು ಹಾಗೆಯೆ ಮಾಡಿದೆಯಲ್ಲವೆ ನೀನು?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ಅವರಿಗೆ ಭಾರವಾದ ನೊಗವನ್ನೂ, ಬೆನ್ನನ್ನು ಹೊಡೆದ ಕೋಲನ್ನೂ, ಬಿಟ್ಟೀ ಹಿಡಿದವನ ದೊಣ್ಣೆಯನ್ನೂ ಮಿದ್ಯಾನಿನ ನಾಶನದ ದಿನದಲ್ಲಿ ಮುರಿದುಬಿಟ್ಟಂತೆ ಮುರಿದು ಬಿಟ್ಟಿದ್ದೀ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4 ಅವರಿಗೆ ಭಾರವಾದ ನೊಗವನ್ನೂ ಬೆನ್ನನ್ನು ಹೊಡೆದ ಕೋಲನ್ನೂ ಬಿಟ್ಟಿಹಿಡಿದವನ ದೊಣ್ಣೆಯನ್ನೂ ವಿುದ್ಯಾನಿನ ನಾಶದಿನದಲ್ಲಿ ಮುರಿದುಬಿಟ್ಟಂತೆ ಮುರಿದುಬಿಟ್ಟಿದ್ದೀ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ಯಾಕೆಂದರೆ ಅವರ ಮೇಲಿದ್ದ ಭಾರವನ್ನು ನೀನು ತೆಗೆದುಬಿಡುವೆ. ಅವರ ಬೆನ್ನಿನ ಮೇಲಿದ್ದ ಭಾರವಾದ ನೊಗವನ್ನು ನೀನು ತೆಗೆದುಹಾಕುವೆ; ವೈರಿಗಳು ನಿನ್ನ ಜನರನ್ನು ಶಿಕ್ಷಿಸಲು ಉಪಯೋಗಿಸುವ ಬೆತ್ತವನ್ನು ತೆಗೆದುಬಿಡುವೆ. ಆ ಸಮಯವು ನೀನು ಮಿದ್ಯಾನರನ್ನು ಸೋಲಿಸಿದ ಸಮಯದಂತಿರುವದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

4 ಏಕೆಂದರೆ ಅವನ ನೊಗವನ್ನೂ, ಬೆನ್ನನ್ನು ಹೊಡೆದ ಕೋಲನ್ನೂ, ಬಿಟ್ಟೀ ಹಿಡಿದವನ ದೊಣ್ಣೆಯನ್ನೂ, ಮಿದ್ಯಾನಿನ ದಿನದಲ್ಲಿ ಮುರಿದಂತೆ ಮುರಿದುಬಿಟ್ಟಿದ್ದೀರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 9:4
24 ತಿಳಿವುಗಳ ಹೋಲಿಕೆ  

ನಶಿಸಿಬಿಡುವೆನಾ ಅಸ್ಸೀರಿಯರನು ನನ್ನ ನಾಡಿನಲಿ, ತುಳಿದುಬಿಡುವೆನು ಅವರನು ನನ್ನ ಬೆಟ್ಟಗಳಲಿ, ನೀಗುವುದಾಗ ನನ್ನ ಜನರಿಂದ ಅವರು ಹೂಡಿದ ನೊಗವು, ತೊಲಗುವುದಾಗ ಅವರು ಹೊರಿಸಿದ ಹೊರೆಯು.


(ಸೇನಾಧೀಶ್ವರರಾದ ಸರ್ವೇಶ್ವರ ಹೇಳುವುದನ್ನು ಕೇಳು: “ಅವರ ಮೇಲೆ ಹೇರಲಾಗಿರುವ ನೊಗವನ್ನು ನಾನು ಆ ದಿನದಂದು ಮುರಿದುಬಿಡುವೆನು. ಕಣ್ಣಿಗಳನ್ನು ಕಿತ್ತುಹಾಕುವೆನು. ಅನ್ಯಕುಲದವರು ಇನ್ನು ಅವರನ್ನು ಗುಲಾಮರನ್ನಾಗಿ ಮಾಡಿಕೊಳ್ಳಲಾರರು.


ಆ ಶತ್ರು ನಿಮ್ಮ ಮೇಲೆ ಹೇರಿದ ನೊಗವನ್ನು ಈಗ ನಿಮ್ಮಿಂದ ತೆಗೆದು ಮುರಿದುಬಿಡುವೆನು. ನಿಮ್ಮ ಸಂಕೋಲೆಗಳನ್ನು ಕಿತ್ತುಹಾಕುವೆನು.”


ನ್ಯಾಯನೀತಿ ನಿನಗಾಧಾರ; ದೂರವಿರುವುದು ಹಿಂಸಾಚಾರ. ಭಯಭೀತಿಗೆ ನೀ ದೂರ, ಅವು ಬಾರವು ನಿನ್ನ ಹತ್ತಿರ.


ಮಾಡುವೆನು ನಿನ್ನ ಹಿಂಸಕರು ಸ್ವಮಾಂಸವನ್ನು ತಿನ್ನುವಂತೆ ಅಮಲೇರುವರು ಸ್ವಂತ ರಕ್ತವನ್ನು ಕುಡಿದು ದ್ರಾಕ್ಷಾರಸದಂತೆ. ಅರಿವರು ನರಮಾನವರೆಲ್ಲರು ಇಂತು : ನಾನೇ ಸರ್ವೇಶ್ವರ, ನಿನ್ನ ರಕ್ಷಕ, ನಿನ್ನ ನಿನ್ನ ವಿಮೋಚಕನೆಂದು; ನಾನೇ ಯಕೋಬ ವಂಶದ ಬಲಾಢ್ಯ ದೇವನೆಂದು.


ನೀವು ಈಜಿಪ್ಟಿನವರಿಗೆ ಗುಲಾಮರಾಗಿರಬಾರದೆಂದು ನಿಮ್ಮನ್ನು ಅವರ ದೇಶದಿಂದ ಬರಮಾಡಿದ ನಿಮ್ಮ ದೇವರಾದ ಸರ್ವೇಶ್ವರನು ನಾನೇ. ನಿಮ್ಮ ನೊಗವನ್ನು ಮುರಿದು ನೀವು ನೆಟ್ಟಗೆ ನಿಂತು ನಡೆಯುವಂತೆ ಮಾಡಿದವನು ನಾನಲ್ಲವೆ?


ಬಾಳ ನಡೆಸುವೆ ಕತ್ತಿಕಠಾರಿಯಿಂದಲೇ ಕೂಲಿಯಾಳಾಗುವೆ ಸೋದರನಿಗೆ ಮುರಿಯುವೆ ಅವ ಹೊರಿಸಿದ ನೊಗವ ಸ್ವಾತಂತ್ರ್ಯಕ್ಕಾಗಿ ನೀ ಬಂಡಾಯ ಹೂಡಿದಾಗ,”


ಆಹಾ, ಅಸ್ಸೀರಿಯ ನಾಡೇ, ನೀನು ನನ್ನ ಕೋಪದ ದಂಡಾಯುಧ, ರೋಷದ ದೊಣ್ಣೆ.


ಸಜ್ಜನರ ನಾಡಿನಲಿ ಉಳಿಯದು ದುರ್ಜನರ ದಬ್ಬಾಳಿಕೆ I ಉಳಿಯಿತಾದರೆ ಸಜ್ಜನರೂ ಕೈಹಚ್ಚಬಹುದು ಅಕ್ರಮಕೆ II


ಆಕಾಶವನು ಹರಡಿ ಭೂಮಿಯನು ಸ್ಥಾಪಿಸಿದಾ ನಿನ್ನ ಸೃಷ್ಟಿಕರ್ತ ಸರ್ವೇಶ್ವರನನು ಮರೆತುಬಿಟ್ಟೆಯಾ? ನಾಶಮಾಡಲು ಹವಣಿಸುವ ಹಿಂಸಕನ ಕ್ರೋಧಕೆ ನೀ ಎಡೆಬಿಡದೆ ದಿನವೆಲ್ಲ ಅಂಜುತ್ತಿರಬೇಕೆ? ಆ ಹಿಂಸಕನ ಕ್ರೋಧವು ಈಗ ಹೋದುದೆಲ್ಲಿಗೆ?


“ನಾ ರೋಷಗೊಂಡು ನನ್ನ ಜನರನ್ನೇ ನಿನ್ನ ಕೈವಶಮಾಡಿದೆ ನನಗೆ ಸ್ವಂತವಾದವರನ್ನೇ ಈ ಪರಿ ಹೊಲೆಗೆಡಿಸಿದೆ. ನೀನಾದರೋ ಕರುಣೆ ತೋರಿಸದೆಹೋದೆ ಮುದುಕರ ಮೇಲೂ ತೂಕದ ನೊಗವನು ಹೊರಿಸಿದೆ.


ಅಪರಿಚಿತ ವಾಣಿಯೊಂದು ನುಡಿಯಿತೀ ಮಾತನು : I “ತಪ್ಪಿಸಿದೆ ನಾನು ಹೆಗಲಮೇಲೆ ನೀ ಹೊರೆಹೊರುವುದನು I ಬಿಡುಗಡೆ ಮಾಡಿದೆ ಗೂಡೆಯೆತ್ತುವ ಕೈಗಳನು II


ಅಗ್ನಿಕುಂಡಕ್ಕೆ ಆಹುತಿಯಾಗುವುವು ಯುದ್ಧಕ್ಕೆ ಬಂದ ಯೋಧರ ಪಾದರಕ್ಷೆಗಳು ರಕ್ತಸಿಕ್ತವಾದವರ ದೇಹದ ಕವಚಗಳು.


ನೆಲೆನೀಡಿ ಮೋವಾಬ್ ನಾಡಿನಿಂದ ವಲಸೆಬಂದಿಹ ನಮಗೆ, ವಿನಾಶಕರಿಗೆ ವಶವಾಗದಂತೆ ಆಶ್ರಯ ನೀಡಿ ನಮಗೆ, ನಾಡಿನಿಂದ ನಿರ್ಮೂಲವಾಗುವರು ವಿಧ್ವಂಸಕರು, ನಿಂತುಹೋಗುವುವು ನಾಶವಿನಾಶಗಳು, ಅಳಿದುಹೋಗುವರು ತುಳಿದು ಹಾಳುಮಾಡುವವರು.


ಖೈದಿಯಾಗಿ ಬಿದ್ದಿರುವ ಸಿಯೋನ್ ಕನ್ಯೆಯೆ, ಕಿತ್ತುಬಿಡು ಬಂಧನವನು ನಿನ್ನ ಕುತ್ತಿಗೆಯಿಂದ ಸಿಂಹಾಸನಾರೂಢಳಾಗು ಜೆರುಸಲೇಮೆ ಝಾಡಿಸಿ ಎದ್ದುನಿಂತು ದುಂಬುಧೂಳಿನಿಂದ!


ಮೋವಾಬಿನ ನೆರೆಹೊರೆಯವರೇ, ಅದರ ಹೆಸರುವಾಸಿಯನ್ನು ಅರಿತವರೇ, ನೀವೆಲ್ಲರು ಅದಕ್ಕಾಗಿ ಎದೆಬಡಿದುಕೊಳ್ಳಿ ! ‘ಅಯ್ಯೋ, ಶಕ್ತಿಯುತ ಚೆಂಗೋಲು, ಮಹಿಮೆಯ ದಂಡಕೋಲು ಮುರಿದುಹೋಯಿತಲ್ಲಾ!’ ಎಂದು ಪ್ರಲಾಪಿಸಿರಿ.


ಆದಕಾರಣ, ಒಡೆಯರಾದ ಸೇನಾಧೀಶ್ವರ ಸರ್ವೇಶ್ವರ ಅಸ್ಸೀರಿಯಾದ ಕೊಬ್ಬಿದ ಯೋಧರಿಗೆ ಕ್ಷಯರೋಗವನ್ನು ಬರಮಾಡುವರು. ಅವರ ದೇಹಕ್ಕೆ ಬೆಂಕಿಯಂತೆ ಉರಿಯುವ ಜ್ವರವನ್ನು ಉಂಟುಮಾಡುವರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು