Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 7:9 - ಕನ್ನಡ ಸತ್ಯವೇದವು C.L. Bible (BSI)

9 ಅಂತೆಯೇ, ರಾಜಧಾನಿಯಾದ ಸಮಾರ್ಯಕ್ಕಿಂತ ಇಸ್ರಯೇಲ್ ಹೆಚ್ಚಲ್ಲ. ರಾಜನಾದ ಪೆಕಹನಿಗಿಂತ ಸಮಾರ್ಯ ಹೆಚ್ಚಲ್ಲ. ನಿಮ್ಮ ವಿಶ್ವಾಸ ಸ್ಥಿರವಿಲ್ಲದಿದ್ದರೆ, ನಿಮಗೆ ಸ್ಥಿರತೆ ಇರುವುದಿಲ್ಲ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9 ಎಫ್ರಾಯೀಮಿಗೆ ಶಿರಸ್ಸು ಸಮಾರ್ಯ, ಸಮಾರ್ಯಕ್ಕೆ ಶಿರಸ್ಸು ರೆಮಲ್ಯನ ಮಗನು ತಾನೇ. ನೀವು ನಂಬಿಕೆಯಲ್ಲಿ ಸ್ಥಿರವಾಗಿ ನಿಲ್ಲದೆ ಹೋದರೆ ನೀವು ನಿಜವಾಗಿಯೂ ನೆಲೆಗೊಳ್ಳುವುದಿಲ್ಲ” ಎಂಬುದೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

9 ಅರುವತ್ತೈದು ವರುಷಗಳೊಳಗೆ ಎಫ್ರಾಯೀಮ್ಯರು ಭಂಗಪಟ್ಟು ಜನಾಂಗವೆನಿಸಿಕೊಳ್ಳರು. ನಿಮಗೆ ನಂಬಿಕೆಯು ಸ್ಥಿರವಿಲ್ಲದಿದ್ದರೆ ನಿಮಗೆ ಸ್ಥಿರತೆಯೇ ಇಲ್ಲ ಎಂಬದೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

9 ಸಮಾರ್ಯವು ಎಫ್ರಾಯೀಮಿನ ರಾಜಧಾನಿಯಾಗಿರುವಷ್ಟು ಕಾಲ ಮತ್ತು ರೆಮಲ್ಯನ ಮಗನು ಸಮಾರ್ಯದಲ್ಲಿ ಅರಸನಾಗಿರುವಷ್ಟು ಕಾಲ ಅವರ ಯೋಜನೆಗಳು ಕೈಗೂಡುವುದಿಲ್ಲ. ನೀನು ಈ ವಾರ್ತೆಯನ್ನು ನಂಬದಿದ್ದರೆ ಜನರು ನಿನ್ನ ಮಾತನ್ನು ನಂಬದಿರಲಿ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

9 ಎಫ್ರಾಯೀಮಿನ ರಾಜಧಾನಿ ಸಮಾರ್ಯ. ಸಮಾರ್ಯದ ರಾಜಧಾನಿ ರೆಮಲ್ಯನ ಮಗನು. ನೀವು ನಂಬದೆ ಹೋದರೆ ನೀವು ನಿಜವಾಗಿಯೂ ನೆಲೆಗೊಳ್ಳುವುದಿಲ್ಲ,’ ಎಂದು ಹೇಳುತ್ತಾರೆ.”

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 7:9
18 ತಿಳಿವುಗಳ ಹೋಲಿಕೆ  

ವಿಶ್ವಾಸವಿಲ್ಲದೆ ದೇವರ ಮೆಚ್ಚುಗೆಗೆ ಪಾತ್ರರಾಗಲು ಯಾರಿಂದಲೂ ಸಾಧ್ಯವಿಲ್ಲ. ದೇವರ ಬಳಿಗೆ ಸಾಗುವವರು, ಅವರ ಅಸ್ತಿತ್ವವನ್ನು ವಿಶ್ವಾಸಿಸಬೇಕು; ಅವರನ್ನು ಅರಸುವವರಿಗೆ ತಕ್ಕ ಪ್ರತಿಫಲ ಸಿಗುವದೆಂದು ನಂಬಬೇಕು.


ಅದು ಸರಿಯೆ. ಅವರ ಅವಿಶ್ವಾಸದ ಕಾರಣದಿಂದ ಅವರನ್ನು ಕಡಿದುಹಾಕಲಾಯಿತು. ನೀನು ದೃಢವಾಗಿ ನಿಂತಿರುವುದಾದರೋ ವಿಶ್ವಾಸದ ಪ್ರಯುಕ್ತವೇ. ಆದ್ದರಿಂದ ಗರ್ವಪಡಬೇಡ. ಭಯಭಕ್ತಿಯಿಂದಿರು.


ಅವರು ಮರುದಿನ ಬೆಳಿಗ್ಗೆ ಎದ್ದು ತೆಕೋವ ಮರುಭೂಮಿಗೆ ಹೊರಟರು. ಹೊರಡುವಾಗ ಯೆಹೋಷಾಫಾಟನು ಎದ್ದು ನಿಂತು, “ಯೆಹೂದ್ಯರೇ, ಜೆರುಸಲೇಮಿನವರೇ, ನನ್ನ ಮಾತನ್ನು ಕೇಳಿರಿ; ಸರ್ವೇಶ್ವರನಲ್ಲಿ ಭರವಸೆ ಇಡಿ, ಆಗ ಸುರಕ್ಷಿತರಾಗುವಿರಿ; ಸರ್ವೇಶ್ವರನ ಪ್ರವಾದಿಗಳನ್ನು ನಂಬಿರಿ, ಆಗ ಸಾರ್ಥಕರಾಗುವಿರಿ,” ಎಂದು ಹೇಳಿದನು.


ದೇವರ ಪುತ್ರನಲ್ಲಿ ವಿಶ್ವಾಸವಿಡುವವನು ಈ ಸಾಕ್ಷ್ಯವನ್ನು ತನ್ನ ಅಂತರಂಗದಲ್ಲೇ ಹೊಂದಿರುತ್ತಾನೆ. ದೇವರಲ್ಲಿ ವಿಶ್ವಾಸವಿಡದವನಾದರೋ ಅವರನ್ನು ಸುಳ್ಳುಗಾರರನ್ನಾಗಿಸುತ್ತಾನೆ. ಹೇಗೆಂದರೆ, ದೇವರು ತಮ್ಮ ಪುತ್ರನ ಪರವಾಗಿ ಕೊಟ್ಟ ಸಾಕ್ಷ್ಯದಲ್ಲಿ ಅವನಿಗೆ ನಂಬಿಕೆಯಿಲ್ಲ.


ಆದುದರಿಂದ ಗೆಳೆಯರೇ, ಧೈರ್ಯದಿಂದಿರಿ. ನನಗೆ ದೇವರಲ್ಲಿ ವಿಶ್ವಾಸವಿದೆ; ನನಗೆ ತಿಳಿಸಿದಂತೆಯೇ ಎಲ್ಲವೂ ನಡೆದೇ ತೀರುವುದು.


ಆದರೆ ಶತಾಧಿಪತಿ ಪೌಲನನ್ನು ನಂಬದೆ, ನೌಕೆಯ ನಾಯಕನ ಹಾಗೂ ಅದರ ಯಜಮಾನನ ಮಾತುಗಳಿಗೆ ಕಿವಿಗೊಟ್ಟನು.


ಜುದೇಯದ ಅರಸ ಅಜರ್ಯನ ಆಳ್ವಿಕೆಯ ಐವತ್ತೆರಡನೆಯ ವರ್ಷದಲ್ಲಿ ರೆಮಲ್ಯನ ಮಗನಾದ ಪೆಕಹ್ಯನು ಇಸ್ರಯೇಲರ ಅರಸನಾಗಿ ಸಮಾರಿಯದಲ್ಲಿ ಇಪ್ಪತ್ತು ವರ್ಷ ಆಳಿದನು.


ಹೀಗಿರಲು, ಒಣಗಿದ ಕಳೆಯನ್ನು ಅಗ್ನಿಜ್ವಾಲೆ ಕಬಳಿಸುವಂತೆ, ಒಣಹುಲ್ಲು ಬೆಂಕಿಯಲ್ಲಿ ಬೂದಿಯಾಗುವಂತೆ, ಅವರ ಬೇರು ಕೊಳೆತುಹೋಗುವುದು. ಅವರ ಹೂ ಧೂಳಿನಂತೆ ತೂರಿಹೋಗುವುದು. ಏಕೆಂದರೆ, ಅವರು ಸೇನಾಧೀಶ್ವರಸ್ವಾಮಿಯ ಉಪದೇಶವನ್ನು ನಿರಾಕರಿಸಿದ್ದಾರೆ. ಇಸ್ರಯೇಲಿನ ಪರಮಪಾವನ ಸ್ವಾಮಿಯ ವಾಕ್ಯವನ್ನು ಅಸಡ್ಡೆಮಾಡಿದ್ದಾರೆ.


ಜೋಕೆ, ಸುಮ್ಮನಿರು, ಹೆದರಬೇಡ. ರೆಚೀನ, ಸಿರಿಯ ಮತ್ತು ಪೆಕಹ - ಇವರೆಲ್ಲರ ಕೋಪ ಎಷ್ಟು ಉಗ್ರವಾಗಿದ್ದರೂ ಅದು ಹೊಗೆಯಾಡುವ ಎರಡು ಮೋಟುಕೊಳ್ಳಿಗಳಿಗೆ ಸಮಾನ. ಆದ್ದರಿಂದ ಎದೆಗುಂದಬೇಡ.


ಪುನಃ ಸರ್ವೇಶ್ವರಸ್ವಾಮಿ ಆಹಾಜನಿಗೆ ಹೇಳಿದ್ದೇನೆಂದರೆ:


ಅವನು ‘ಅಪ್ಪಾ, ಅಮ್ಮಾ, ಎಂದು ಕೂಗಬಲ್ಲವನಾಗುವುದರೊಳಗೆ ಅಸ್ಸೀರಿಯದ ಅರಸನು ದಮಸ್ಕಸ್ಸಿನ ಆಸ್ತಿಪಾಸ್ತಿಯನ್ನೂ ಸಮಾರ್ಯದ ಸೂರೆಯನ್ನೂ ಹೊರಿಸಿಕೊಂಡು ಹೋಗುವನು,” ಎಂದು ಸರ್ವೇಶ್ವರಸ್ವಾಮಿ ಹೇಳಿದರು.


“ಇಟ್ಟಿಗೆಗಳು ಬಿದ್ದುಹೋಗಿವೆ. ಕೆತ್ತನೆ ಕಲ್ಲುಗಳಿಂದ ಮರಳಿ ಕಟ್ಟುವೆವು. ಕಡಿದಿರುವರು ಅತ್ತಿಮರಗಳನ್ನು, ಅಲ್ಲೇ ನೆಡುವೆವು ದೇವದಾರು ವೃಕ್ಷಗಳನ್ನು,” ಎಂದು ಗರ್ವದಿಂದ ಕೊಚ್ಚಿಕೊಳ್ಳುವ


ಅದಾದ ಮೇಲೆ ಹೋಷಾಯನ ಮಗ ಅಜರ್ಯನು, ಕಾರೇಹನ ಮಗ ಯೋಹಾನಾನನು, ಹಾಗು ಅಹಂಕಾರಿಗಳಾದ ಜನರೆಲ್ಲರು ಅವನಿಗೆ, “ನಿನ್ನ ಮಾತು ಸುಳ್ಳು, ಈಜಿಪ್ಟಿಗೆ ಹೋಗಿ ವಾಸಮಾಡಬಾರದು ಎಂದು ತಿಳಿಸುವಂತೆ ನಮ್ಮ ದೇವರಾದ ಸರ್ವೇಶ್ವರ ನಿನ್ನನ್ನು ಕಳಿಸಲಿಲ್ಲ.


ಇದಕ್ಕೆಲ್ಲಾ ಕಾರಣ ಯಕೋಬನ ದ್ರೋಹ. ಇಸ್ರಯೇಲ್ ಮನೆತನದ ಪಾಪ. ಯಕೋಬನ ದ್ರೋಹಕ್ಕೆ ಕಾರಣ ಯಾವುದು? ಸಮಾರ್ಯ ಅಲ್ಲವೆ? ಜುದೇಯದ ವಿಗ್ರಹಾರಾಧನೆಯ ಸ್ಥಳ ಯಾವುದು? ಜೆರುಸಲೇಮ್ ಅಲ್ಲವೆ?


ಕುಡುಕರಿಂದ ಕೂಡಿದ ಎಫ್ರಯಿಮಿನ ಕಿರೀಟದಂತಿರುವ ನಗರಕ್ಕೆ ಧಿಕ್ಕಾರ ! ಒಮ್ಮೆ ಕುಡಿತಕ್ಕೆ ಸೋತು ಫಲವತ್ತಾದ ಕಣಿವೆಗೆ ಶ್ರೇಷ್ಠ ಶಿರೋಭೂಷಣವಾಗಿದ್ದು ಈಗ ಬಾಡಿಹೋಗುತ್ತಿರುವ ಆ ಹೂವಿಗೆ ಧಿಕ್ಕಾರ !


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು