Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 7:21 - ಕನ್ನಡ ಸತ್ಯವೇದವು C.L. Bible (BSI)

21 ಅಂದು ಒಬ್ಬ ರೈತನು ಒಂದು ಕಡಸನ್ನು ಎರಡು ಮೇಕೆಗಳನ್ನು ಮಾತ್ರ ಉಳಿಸಿಕೊಳ್ಳಬಲ್ಲವನಾದರೂ ಬಾಯಿ ಮೊಸರಾಗುವಷ್ಟು ಅಧಿಕವಾದ ಹಾಲನ್ನು ಕರೆಯುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

21 ಆ ಕಾಲದಲ್ಲಿ ಮನುಷ್ಯನು ಒಂದು ಹಸುವಿನ ಕರುವನ್ನು ಮತ್ತು ಎರಡು ಕುರಿಗಳನ್ನು ಸಾಕುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

21 ಆ ಕಾಲದಲ್ಲಿ ಯಾವನೇ ಆಗಲಿ ಹಸುವಿನ ಕಡಸನ್ನೂ ಎರಡು ಕುರಿಗಳನ್ನೂ ಸಾಕಿ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

21 “ಆ ಕಾಲದಲ್ಲಿ ಯಾವನೇ ಆಗಲಿ ಹಸುವನ್ನೂ ಎರಡು ಕುರಿಗಳನ್ನೂ ಸಾಕಿ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

21 ಆ ದಿನದಲ್ಲಿ ಮನುಷ್ಯನು ಒಂದು ಹಸುವಿನ ಕಡಸನ್ನು ಮತ್ತು ಎರಡು ಕುರಿಗಳನ್ನು ಸಾಕುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 7:21
8 ತಿಳಿವುಗಳ ಹೋಲಿಕೆ  

ಆದರೆ ಏನೂ ಇಲ್ಲದ ಬಡಜನರನ್ನು ಜುದೇಯದ ನಾಡಿನಲ್ಲೆ ಬಿಟ್ಟು ಅವರಿಗೆ ಹೊಲತೋಟಗಳನ್ನು ಕೊಟ್ಟನು.


ಪಟ್ಟಣ ಪ್ರದೇಶಗಳು ಹಾಳಾಗಿ ಮೇಕೆಮರಿಗಳಿಗೆ ಹುಲ್ಲುಗಾವಲುಗಳಾಗುವುವು. ಕುರಿಮರಿಗಳು ಅಲ್ಲಿ ಮೇಯುವುವು.


ಬಳಿಕ ಯೆಶಾಯನು ರಾಜ ಹಿಜ್ಕೀಯನಿಗೆ, “ಈ ಮಾತುಗಳು ನೆರವೇರುತ್ತವೆಂಬುದಕ್ಕೆ ಸೂಚನೆ ಇದು : ಈ ವರ್ಷದಲ್ಲಿ ನೀವು ಕೂಳೆಬೆಳೆಯನ್ನು, ಮುಂದಿನ ವರ್ಷದಲ್ಲಿ ತನ್ನಷ್ಟಕ್ಕೆ ತಾನೇ ಅದು ಬೆಳೆದುದನ್ನು, ಆದರೆ ಮೂರನೆಯ ವರ್ಷ ಹೊಲಗಳಲ್ಲಿ ಬಿತ್ತಿ ಕೊಯ್ದುದನ್ನು, ದ್ರಾಕ್ಷಿತೋಟದಲ್ಲಿ ವ್ಯವಸಾಯಮಾಡಿ ಶೇಖರಿಸಿದ್ದನ್ನು ಅನುಭವಿಸುವಿರಿ.


ಸಿರಿಯದ ನಗರಗಳೆಲ್ಲ ನಿರ್ಜನ ಪ್ರದೇಶಗಳಾಗಿ ಗೋಮಾಳವಾಗುವುವು. ಅಲ್ಲಿ ದನಕರುಗಳು ನಿರ್ಭಯದಿಂದ ತಂಗುವುವು.


ಸಾಗುವಳಿಯಾಗುತ್ತಿದ್ದ ಗುಡ್ಡಗಳಲ್ಲಿ ಯಾರೂ ಬರಲು ಅಂಜುವಷ್ಟು ಮುಳ್ಳುಕೊಂಪೆಗಳು ತುಂಬಿರುವುವು; ಅವು ದನಕರುಗಳು ಮೇದು ಕುರಿಮೇಕೆಗಳು ತುಳಿದಾಡುವ ಮಾಳಗಳಾಗುವುವು.”


ಪೋಷಣೆ ಪಡೆಯುವರು ದೀನದಲಿತರು, ನಿರ್ಭಯದಿಂದ ನಿದ್ರಿಸುವರು ದಿಕ್ಕಿಲ್ಲದವರು. ನಿನ್ನ ಸಂತಾನದವರಾದರೋ ಸಾಯುವರು ಕ್ಷಾಮದಿಂದ, ಅಳಿದುಳಿದವರು ಹತರಾಗುವರು ಆ ಘಟಸರ್ಪದಿಂದ.


ಕೋಟೆಕೊತ್ತಲಗಳಿಂದ ಕೂಡಿದ ಪಟ್ಟಣ ಪಾಳುಬಿದ್ದಿದೆ; ಕಾಡಿನಂತೆ ನಿರ್ಜನಪ್ರದೇಶವಾಗಿದೆ. ದನಕರುಗಳು ಮೇದು ಮಲಗುವ ಗೋಮಾಳವಾಗಿದೆ.


ಆನಂದಿಸಲಿ ಅರಣ್ಯವೂ ಮರುಭೂಮಿಯೂ ಹೂಗಳಂತೆ ಅರಳಿ ಹರ್ಷಿಸಲಿ ಒಣನೆಲವು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು