Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 66:16 - ಕನ್ನಡ ಸತ್ಯವೇದವು C.L. Bible (BSI)

16 ನ್ಯಾಯ ತೀರಿಸುವನು ಸರ್ವೇಶ್ವರ ಮನುಜರಿಗೆಲ್ಲ ಅಗ್ನಿಯಿಂದ, ತನ್ನ ಖಡ್ಗದಿಂದ. ಹತರಾಗುವರು ಬಹುಜನ ಆತನಿಂದ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

16 ಯೆಹೋವನು ಅಗ್ನಿಯಿಂದಲೂ ಮತ್ತು ತನ್ನ ಖಡ್ಗದಿಂದಲೂ ಎಲ್ಲಾ ನರಜನ್ಮದವರಿಗೂ ನ್ಯಾಯತೀರಿಸುವನು; ಆಗ ಆತನಿಂದ ಹತರಾಗುವವರು ಬಹು ಜನರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

16 ಯೆಹೋವನು ಅಗ್ನಿಯಿಂದಲೂ ತನ್ನ ಖಡ್ಗದಿಂದಲೂ ಎಲ್ಲಾ ನರಜನ್ಮದವರಿಗೂ ನ್ಯಾಯತೀರಿಸುವನು; ಆಗ ಆತನಿಂದ ಹತರಾಗುವವರು ಬಹುಜನ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

16 ಯೆಹೋವನು ಜನರಿಗೆ ನ್ಯಾಯತೀರ್ಪು ಮಾಡುವನು. ಆ ಬಳಿಕ ಯೆಹೋವನು ಜನರನ್ನು ಬೆಂಕಿಯಿಂದಲೂ ಖಡ್ಗದಿಂದಲೂ ನಾಶಮಾಡುವನು. ಯೆಹೋವನು ಅನೇಕಾನೇಕ ಜನರನ್ನು ನಾಶಮಾಡುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

16 ಏಕೆಂದರೆ ಬೆಂಕಿಯಿಂದಲೂ ತಮ್ಮ ಖಡ್ಗದಿಂದಲೂ ಯೆಹೋವ ದೇವರು ಮನುಷ್ಯರಿಗೆಲ್ಲಾ ನ್ಯಾಯತೀರಿಸುವರು. ಯೆಹೋವ ದೇವರಿಂದ ಹತರಾಗುವವರು ಅನೇಕರಾಗಿರುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 66:16
23 ತಿಳಿವುಗಳ ಹೋಲಿಕೆ  

ಆಗ ಸರ್ವೇಶ್ವರ ತಮ್ಮ ಗಂಭೀರವಾದ ವಾಣಿಯನ್ನು ಕೇಳುವಂತೆ ಮಾಡುವರು. ತೀವ್ರಕೋಪ, ದಹಿಸುವ ಅಗ್ನಿಜ್ವಾಲೆ, ಸಿಡಿಯುವ ಮೋಡ, ಚಂಡಮಾರುತ, ಕಲ್ಮಳೆ - ಇವುಗಳಿಂದ ತಮ್ಮ ಶಿಕ್ಷಾಹಸ್ತವನ್ನು ಪ್ರದರ್ಶಿಸುವರು.


ಆ ದಿನದಂದು ಸರ್ವೇಶ್ವರ ಸ್ವಾಮಿ ತಮ್ಮ ಘೋರವಾದ, ಕ್ರೂರವಾದ, ಮಾರಕವಾದ ಖಡ್ಗದಿಂದ ವೇಗವಾಗಿ ಧಾವಿಸುವ ಹಾಗೂ ಡೊಂಕಾಗಿ ಹರಿಯುವ ಸರ್ಪವನ್ನು ಹೊಡೆಯುವರು. ಮಹಾನದಿಯಲ್ಲಿನ ಘಟಸರ್ಪವನ್ನು ಸಹ ಕೊಂದುಹಾಕುವರು.


ಸ್ವಾಮಿ ವಾದಿಸುವುದಕ್ಕೆ ಸಿದ್ಧವಿದ್ದಾರೆ. ಅವರು ಜನರ ನ್ಯಾಯವನ್ನು ನಿರ್ಣಯಿಸುವುದಕ್ಕೆ ತಯಾರಾಗಿದ್ದಾರೆ.


ಖೈದಿಗಳೊಂದಿಗೆ ಕಾರಾಗೃಹವನ್ನು ಸೇರುವಿರಿ; ಇಲ್ಲವೆ, ಇತರರ ಸಮೇತ ಹತರಾಗುವಿರಿ. ಇದೇ ನಿಮ್ಮ ಗತಿ. ಇಷ್ಟಾದರೂ ಸರ್ವೇಶ್ವರನ ಕೋಪ ತಣಿಯದು; ಹೊಡೆಯಲು ಎತ್ತಿದ ಕೈ ಇಳಿಯದು.


ಆ ಅಸ್ಸೀರಿಯಾದವರು ಕತ್ತಿಯಿಂದ ಹತರಾಗುವರು, ಮನುಷ್ಯರ ಕತ್ತಿಯಿಂದಲ್ಲ; ಖಡ್ಗವು ಅವರನ್ನು ಕಬಳಿಸುವುದು, ಅದು ಮಾನವ ಖಡ್ಗವಲ್ಲ. ಅವರು ಕತ್ತಿಗೆ ಹೆದರಿ ಓಡುವರು. ಅವರ ಯುವಕರು ಗುಲಾಮರಾಗುವರು.


ನೀವೆಲ್ಲರು ಕೊಲೆಗೆ ಗುರಿಯಾಗುವಿರಿ, ಕತ್ತಿಗೆ ತುತ್ತಾಗುವಿರಿ. ಏಕೆಂದರೆ, ನಾನು ಕೂಗಿದಾಗ ನೀವು ಉತ್ತರಕೊಡಲಿಲ್ಲ, ನಾನು ಹೇಳಿದಾಗ ನೀವು ಕೇಳಲಿಲ್ಲ. ನನ್ನ ಚಿತ್ತಕ್ಕೆ ವಿರುದ್ಧವಾದುದನ್ನೇ ನಡೆಸಿ ನನಗೆ ಇಷ್ಟವಿಲ್ಲದ್ದನ್ನೇ ಆಯ್ಕೆಮಾಡಿಕೊಂಡಿರಿ.


ಆತನ ಶಬ್ದ ವ್ಯಾಪಿಸುವುದು ಭೂಮಿಯ ಕಟ್ಟಕಡೆಗೆ ಸರ್ವೇಶ್ವರನೆ ಆಪಾದನೆ ಹೊರಿಸುವನು ಜನಾಂಗಗಳ ಮೇಲೆ ನರಮಾನವರನ್ನೆಲ್ಲ ಗುರಿಮಾಡುವನು ತೀರ್ಪಿಗೆ ದುರುಳರನ್ನು ತುತ್ತಾಗಿಸುವನು ಕತ್ತಿಗೆ - ಇದು ಸರ್ವೇಶ್ವರನ ನುಡಿ’.”


ಆ ದಿನದಲ್ಲಿ ಸರ್ವೇಶ್ವರನಿಂದ ಹತರಾದವರು ಲೋಕದ ಒಂದು ಕಡೆಯಿಂದ ಇನ್ನೊಂದು ಕಡೆಯವರೆಗೆ ಬಿದ್ದಿರುವರು. ಅವರಿಗಾಗಿ ಯಾರೂ ಗೋಳಾಡರು, ಅವರನ್ನು ಯಾರೂ ಒಟ್ಟುಗೂಡಿಸರು, ಯಾರೂ ಹೂಣರು. ಭೂಮಿಯ ಮೇಲೆ ಗೊಬ್ಬರವಾಗಿ ಬಿದ್ದಿರುವರು.


ನಿನಗೆ ಮಾತ್ರ ಪ್ರತ್ಯೇಕ ಸ್ಥಾನಮಾನಗಳನ್ನು ನಿರೀಕ್ಷಿಸುತ್ತಿಯೋ? ನಿರೀಕ್ಷಿಸಬೇಡ. ಹೌದು, ಮಾನವ ಜನಾಂಗವನ್ನೇ ನಾನು ದಂಡಿಸಲಿದ್ದೇನೆ. ಆದರೆ ನೀನು ಎಲ್ಲಿಗೆ ಹೋದರೂ ನಿನ್ನ ಪ್ರಾಣವೊಂದನ್ನು ಕೊಳ್ಳೆಯಂತೆ ಉಳಿಸಿಕೊಳ್ಳಲಿಕ್ಕೆ ಅವಕಾಶ ನೀಡುತ್ತೇನೆ. ಇದು ಸರ್ವೇಶ್ವರನಾದ ನನ್ನ ನುಡಿ.”


ನಿನ್ನ ಎಪಿಸ್ ಬಸವ ಬಿದ್ದುಹೋದದ್ದೇನು? ಸರ್ವೇಶ್ವರನೆ ಕೆಡವಲು ಅದು ನಿಲ್ಲಲಾರದೆ ಹೋಯಿತು !


“ನಾನು ಕೋಪದಿಂದ, ರೋಷದಿಂದ ಹಾಗು ತೀವ್ರ ಖಂಡನೆಯಿಂದ ನಿನಗೆ ಮಾಡುವ ದಂಡನೆಗಳು ಸುತ್ತಲಿನ ಜನಾಂಗಗಳ ದೂಷಣೆಗೂ ಪರಿಹಾಸ್ಯಗಳಿಗೂ ಬೆರಗು ಬುದ್ಧಿವಾದಗಳಿಗೂ ಆಸ್ಪದವಾಗುವುವು; ಇದು ಸರ್ವೇಶ್ವರನಾದ ನನ್ನ ನುಡಿ.


ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ: ‘ನನ್ನ ದಾಸರಾದ ಇಸ್ರಯೇಲಿನ ಪ್ರವಾದಿಗಳು ಪುರಾತನಕಾಲದಲ್ಲಿ ಬಹು ವರ್ಷ ಪ್ರವಾದಿಸುತ್ತಾ ನಾನು ಒಬ್ಬನನ್ನು ಇಸ್ರಯೇಲರ ಮೇಲೆ ಬೀಳಮಾಡುವೆನು, ಎಂದು ಮುಂತಿಳಿಸಿದ್ದರು; ನಾನು ಅವರ ಮುಖಾಂತರ ಮುಂತಿಳಿಸಿದವನು ನೀನೇ ಅಲ್ಲವೇ?’


ಎಲ್ಲಾ ರಾಷ್ಟ್ರಗಳನ್ನು ನ್ಯಾಯತೀರ್ಪಿನ ಜೊಸೆಫಾತ್ ಕಣಿವೆಗೆ ಬರಮಾಡುವೆನು. ನನ್ನ ಪ್ರಜೆಯೂ ಸ್ವಜನರೂ ಆದ ಇಸ್ರಯೇಲರಿಗೆ ಅವರು ಮಾಡಿದ ಹಿಂಸೆಗಾಗಿ ನ್ಯಾಯಕೇಳುವೆನು. ಅವರು ನನ್ನ ಪ್ರಜೆಯನ್ನು ದೇಶವಿದೇಶಗಳಿಗೆ ಚದರಿಸಿದ್ದಾರೆ. ನನ್ನ ನಾಡನ್ನು ಹಂಚಿಕೊಂಡಿದ್ದಾರೆ.


ಒಡೆಯರಾದ ಸರ್ವೇಶ್ವರ ನನಗೆ ಇನ್ನೊಂದು ದರ್ಶನವನ್ನು ತೋರಿಸಿದರು. ಅವರು ತನ್ನ ಜನರನ್ನು ದಂಡಿಸುವುದಕ್ಕಾಗಿ ಬೆಂಕಿಯನ್ನು ಬರಮಾಡಿದರು. ಅದು ಆಳವಾದ ಮಹಾಸಾಗರವನ್ನೂ ಇಡೀ ನಾಡನ್ನೂ ಕಬಳಿಸುವುದರಲ್ಲಿತ್ತು.


ರಾಹುತರ ರಭಸ, ಕತ್ತಿಯ ಥಳಥಳಿಪು, ಈಟಿಯ ಝಳಿಪು; ಹತರಾದವರು ಅಗಣಿತ, ಸತ್ತವರು ಅಸಂಖ್ಯಾತ, ಶವಗಳ ರಾಶಿ ವಿಪರೀತ; ನುಗ್ಗುವವರು ಎಡವುತಿಹರು ಹೆಣಗಳನು ದಾಟಿಹೋಗುತ.


ನೀನು ಇದ್ದಲ್ಲಿಯೇ ಬೆಂಕಿ ನಿನ್ನನ್ನು ಕಬಳಿಸುವುದು. ಕತ್ತಿಯು ನಿನ್ನನ್ನು ಕಡಿದುಬಿಡುವುದು. ಮಿಡತೆಗಳು ಬೆಳೆಯನ್ನು ನುಂಗುವಂತೆ ಶತ್ರುಗಳು ನಿನ್ನನ್ನು ನುಂಗಿಬಿಡುವರು. “ನಿನ್ನ ಜನರು ಮಿಡತೆಗಳಂತೆ ಅಸಂಖ್ಯಾತರಾಗಲಿ! ಗುಂಪುಮಿಡತೆಗಳಂತೆ ಅಪರಿಮಿತರಾಗಲಿ!


ನೀವು ಆ ಗುಡ್ಡಗಳ ನಡುವೆ ಉಂಟಾಗುವ ಕಣಿವೆಯ ಮೂಲಕ ಪಲಾಯನಗೈಯುವಿರಿ. ಆ ಕಣಿವೆ ಆಚೆಲಿನವರೆಗೆ ಹಬ್ಬಿರುವುದು. ಜುದೇಯದ ಅರಸನಾದ ಉಜ್ಜೀಯನ ಕಾಲದಲ್ಲಿ ಭೂಕಂಪವಾದಾಗ ನೀವು ಮಾಡಿದಂತೆ ಪಲಾಯನ ಗೈಯುವಿರಿ. ಆಗ ನನ್ನ ದೇವರಾದ ಸರ್ವೇಶ್ವರ ತಮ್ಮ ದೂತರ ಸಮೇತ ಬರುವರು.


ಸರ್ವೇಶ್ವರ ಸ್ವಾಮಿ ಸಕಲ ರಾಷ್ಟ್ರಗಳ ಮೇಲೆ ಕೋಪಗೊಂಡಿದ್ದಾರೆ - ಅವುಗಳ ಸೈನ್ಯಗಳ ಮೇಲೆ ರೋಷಗೊಂಡಿದ್ದಾರೆ. ಅವರನ್ನು ಕೊಲೆಗೆ ಈಡುಮಾಡಿ ಸಂಪೂರ್ಣವಾಗಿ ಸಂಹರಿಸಲು ನಿಶ್ಚಯಿಸಿದ್ದಾರೆ.


ಅಪಾರ ಅಪರಾಧಗಳಿಂದ, ಅನ್ಯಾಯ ವ್ಯಾಪಾರಗಳಿಂದ ನಿನ್ನಲ್ಲಿನ ಪವಿತ್ರಾಲಯ ಅಶುದ್ಧವಾಯಿತು ನಿನ್ನಿಂದ. ಎಂದೇ, ನಾ ಬರಮಾಡಿದೆ ಬೆಂಕಿಯನು ನಿನ್ನೊಳಗಿಂದ ನೋಡ್ವರೆಲ್ಲರ ಮುಂದೆ ಸುಟ್ಟು ಭಸ್ಮ ಮಾಡಿತು ನಿನ್ನ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು