ಯೆಶಾಯ 66:15 - ಕನ್ನಡ ಸತ್ಯವೇದವು C.L. Bible (BSI)15 ಸರ್ವೇಶ್ವರ ಬರುವನಿದೋ ಅಗ್ನಿಮಯನಾಗಿ ಆತನ ರಥಗಳು ಬಿರುಗಾಳಿಯಂತೆ ರಭಸವಾಗಿ ತೋರಿಸುವನು ತನ್ನ ಸಿಟ್ಟನ್ನು ರೌದ್ರವೇಶದಿಂದ ಖಂಡಿಸುವನು ಧಗಧಗಿಸುವ ಜ್ವಾಲೆಯಿಂದ ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201915 ಆಹಾ, ಯೆಹೋವನು ಬೆಂಕಿಯನ್ನು ಕಟ್ಟಿಕೊಂಡು ಬರುವನು; ಆತನ ರಥಗಳು ಬಿರುಗಾಳಿಯಂತಿರುವವು; ರೌದ್ರಾವೇಶದಿಂದ ತನ್ನ ಸಿಟ್ಟನ್ನು ತೀರಿಸುವನು, ಅಗ್ನಿ ಜ್ವಾಲೆಯಿಂದ ಖಂಡಿಸುವನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)15 ಆಹಾ, ಯೆಹೋವನು ಬೆಂಕಿಯನ್ನು ಕಟ್ಟಿಕೊಂಡು ಬರುವನು; ಆತನ ರಥಗಳು ಬಿರುಗಾಳಿಯಂತಿರುವವು; ರೌದ್ರಾವೇಶದಿಂದ ತನ್ನ ಸಿಟ್ಟನ್ನು ತೀರಿಸುವನು, ಅಗ್ನಿಜ್ವಾಲೆಯಿಂದ ಖಂಡಿಸುವನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್15 ಇಗೋ, ಯೆಹೋವನು ಬೆಂಕಿಯೊಂದಿಗೆ ಬರುತ್ತಿದ್ದಾನೆ. ಯೆಹೋವನ ಸೈನ್ಯಗಳು ಧೂಳಿನ ಮೋಡಗಳೊಂದಿಗೆ ಬರುತ್ತಿವೆ. ಯೆಹೋವನು ತನ್ನ ಕೋಪದಿಂದ ಆ ಜನರನ್ನು ಶಿಕ್ಷಿಸುವನು. ಯೆಹೋವನು ಕೋಪದಲ್ಲಿರುವಾಗ ಬೆಂಕಿಯ ನಾಲಿಗೆಗಳಿಂದ ಅವರನ್ನು ಶಿಕ್ಷಿಸುತ್ತಾನೆ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ15 ಯೆಹೋವ ದೇವರು ಬೆಂಕಿಯೊಡನೆ ಬರುವರು. ಅವರ ರಥಗಳು ಬಿರುಗಾಳಿಯ ಹಾಗೆ ಇರುವುವು. ಕಠಿಣವಾದ ತಮ್ಮ ಕೋಪವನ್ನೂ ಅಗ್ನಿಜ್ವಾಲೆಗಳಿಂದ ತಮ್ಮ ಗದರಿಕೆಯನ್ನೂ ಸಲ್ಲಿಸುವುದಕ್ಕಾಗಿಯೇ ಬರುವರು. ಅಧ್ಯಾಯವನ್ನು ನೋಡಿ |