Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 66:10 - ಕನ್ನಡ ಸತ್ಯವೇದವು C.L. Bible (BSI)

10 “ಜೆರುಸಲೇಮನ್ನು ಪ್ರೀತಿಸುವವರೇ, ನೀವೆಲ್ಲರೂ ಆನಂದಿಸಿರಿ ಆಕೆಯೊಂದಿಗೆ, ಹರ್ಷಗೊಳ್ಳಿರಿ ಆಕೆಯ ಬಗ್ಗೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

10 ಯೆರೂಸಲೇಮ್ ನಗರವನ್ನು ಪ್ರೀತಿಸುವವರೇ, ನೀವೆಲ್ಲರೂ ಆಕೆಯೊಂದಿಗೆ ಆನಂದಿಸಿರಿ, ಆಕೆಯ ವಿಷಯದಲ್ಲಿ ಹರ್ಷಗೊಳ್ಳಿರಿ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

10 ಯೆರೂಸಲೇಮ್ ಪುರಿಯನ್ನು ಪ್ರೀತಿಸುವವರೇ, ನೀವೆಲ್ಲರೂ ಆಕೆಯೊಂದಿಗೆ ಆನಂದಿಸಿರಿ, ಆಕೆಯ ವಿಷಯದಲ್ಲಿ ಹರ್ಷಗೊಳ್ಳಿರಿ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

10 ಜೆರುಸಲೇಮೇ, ಹರ್ಷಿಸು. ಜೆರುಸಲೇಮನ್ನು ಪ್ರೀತಿಸುವ ಜನರೇ, ಹರ್ಷಿಸಿರಿ. ಜೆರುಸಲೇಮಿಗೆ ದುಃಖಕೊಡುವ ವಿಷಯಗಳು ಜರುಗಿದ್ದರಿಂದ ನೀವು ದುಃಖಪಡುತ್ತಿದ್ದೀರಿ. ಆದರೆ ನೀವೀಗ ಸಂತೋಷಪಡಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

10 “ಯೆರೂಸಲೇಮಿನ ಸಂಗಡ ನೀವು ಸಂತೋಷಿಸಿರಿ. ಅವಳನ್ನು ಪ್ರೀತಿ ಮಾಡುವವರೆಲ್ಲಾ ಆಕೆಯೊಂದಿಗೆ ಉಲ್ಲಾಸಪಡಿರಿ. ಅವಳಿಗೋಸ್ಕರ ದುಃಖಿಸಿದವರೆಲ್ಲರೂ, ಆಕೆಯ ಸಂತೋಷಕ್ಕಾಗಿ ಆನಂದಪಡಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 66:10
16 ತಿಳಿವುಗಳ ಹೋಲಿಕೆ  

ಜೆರುಸಲೇಮನು ನಾ ಸ್ಮರಣೆಮಾಡದಿದ್ದಲ್ಲಿ I ಆ ಸ್ಮರಣೆ ಸರ್ವೋತ್ತಮ ನಲಿವು ನನಗಾಗದಿದ್ದಲ್ಲಿ I ಸೇದಿಹೋಗಲಿ ನಾಲಿಗೆ ನನ್ನ ಬಾಯಲಿ II


ಪ್ರಿಯವಾದುದೆನಗೆ ನಿನ್ನ ನಿವಾಸದ ಮಂದಿರ I ಸುಪ್ರೀತವಾದುದು ನಿನ್ನ ಮಹಿಮೆಯ ಆಗರ II


“ಜನಾಂಗಗಳೇ ಕೊಂಡಾಡಿರಿ ದೇವಜನರೊಡನೆ! ತನ್ನ ಭಕ್ತಾದಿಗಳ ರಕ್ತ ಚೆಲ್ಲಿದಾ ಶತ್ರುಗಳಿಗೆ ದಂಡಿಸಿ ಮುಯ್ಯಿತೀರಿಸುವವನು ಸರ್ವೇಶ್ವರನೇ. ತನ್ನ ಜನರಾ ನಾಡಿಗೆ ದೋಷಪರಿಹಾರಮಾಡುವವನು ಆತನೇ.”


ನಾನು ಮಾಡುವ ಸೃಷ್ಟಿಕಾರ್ಯದಲ್ಲೇ ಸಂತೋಷಿಸಿ, ಎಂದೆಂದಿಗೂ ಆನಂದಿಸಿರಿ : ಹೌದು, ನಾನು ಜೆರುಸಲೇಮನ್ನು ಉಲ್ಲಾಸದ ನಿವಾಸವನ್ನಾಗಿಸುವೆನು; ಅದರ ಜನರನ್ನು ಹರ್ಷಭರಿತರನ್ನಾಗಿಸುವೆನು.


“ನೀನು ಜೆರುಸಲೇಮ್ ಪಟ್ಟಣದಲ್ಲೆಲ್ಲಾ ತಿರುಗಾಡಿ, ಅದರೊಳಗೆ ನಡೆಯುವ ಸಮಸ್ತ ಅಸಹ್ಯಕಾರ್ಯಗಳಿಗೆ ನರಳಿ ಗೋಳಾಡುತ್ತಿರುವ ಜನರ ಹಣೆಯ ಮೇಲೆ ಗುರುತುಮಾಡು,” ಎಂದು ಅಪ್ಪಣೆಕೊಟ್ಟರು.


ಜಯ ಜಯಕಾರ ಮಾಡು ಓ ಆಕಾಶವೇ, ಜಯಘೋಷ ಮಾಡು ಭೂ ತಳವೇ, ಹರ್ಷಧ್ವನಿಗೈಯಿರಿ ಬೆಟ್ಟಗುಡ್ಡಗಳೇ ವನವೃಕ್ಷಗಳೇ. ವಿಮೋಚಿಸಿದನು ಸರ್ವೇಶ್ವರ ಯಕೋಬನನು, ಇಸ್ರಯೇಲನ್ನು ರಕ್ಷಿಸಿ ಪ್ರಚಾರಗೊಳಿಸಿದನು ತನ್ನ ಮಹಿಮೆಯನು.


ಜೆರುಸಲೇಮಿನ ಶುಭಕ್ಕಾಗಿ ಮಾಡಿರಿ ಪ್ರಾರ್ಥನೆ I “ಜೆರುಸಲೇಮ್, ನಿನ್ನಭಿಮಾನಿಗಳಿಗೆ ಪ್ರವರ್ಧನೆ II


ವೃದ್ಧಿಗೊಳಿಸಿರುವೆ ನೀನು ಆ ದೇಶವನು ಅಧಿಕರಿಸಿರುವೆ ಅದರ ತೋಷವನು ಸುಗ್ಗಿಕಾಲದಲಿ ಹಿಗ್ಗುವವರಂತೆ ಕೊಳ್ಳೆ ಹಂಚಿಕೊಳ್ಳುವವರಂತೆ ಹರ್ಷಿಸುವರವರು ನಿನ್ನ ಮುಂದೆ.


ಇದು ನೆರವೇರಿದಾಗ ಜನರು : “ಇವರೇ ನಮ್ಮ ದೇವರು; ನಮ್ಮನ್ನು ರಕ್ಷಿಸುವರೆಂದು ಇವರನ್ನೇ ನೆಚ್ಚಿಕೊಂಡಿದ್ದೆವು ಇವರೇ ಸರ್ವೇಶ್ವರ; ಇವರನ್ನೇ ನೆಚ್ಚಿಕೊಂಡಿದ್ದೆವು. ಇವರು ನೀಡುವ ರಕ್ಷಣೆಯಲ್ಲಿ ಆನಂದಿಸೋಣ !” ಎಂದು ಹೇಳಿಕೊಳ್ಳುವರು.


ಉಲ್ಲಾಸಿಸಲಿ ಅದು ಹುಲುಸಾಗಿ ಹೂಬಿಟ್ಟು ಹೌದು, ಸಂತಸ ಸಂಗೀತ ಹಾಡುವಷ್ಟು, ದೊರಕಲಿ ಅದಕ್ಕೆ ಲೆಬನೋನಿನ ಮಹಿಮೆಯು ಕರ್ಮೆಲಿನ ಮತ್ತು ಶಾರೋನಿನ ವೈಭವವು. ಕಾಣುವುವು ಸರ್ವೇಶ್ವರನ ಮಹಿಮೆಯನು ನೋಡುವುವು ಇವೆಲ್ಲ ನಮ್ಮ ದೇವರ ವೈಭವವನು.


ಸರ್ವೇಶ್ವರನಾದ ನಾನು ಸಂತೈಸದೆ ಬಿಡೆನು ಸಿಯೋನನ್ನು, ಉದ್ಧರಿಸುವೆನು ಆ ಹಾಳುಬಿದ್ದ ಸ್ಥಳಗಳೆಲ್ಲವನು. ಮಾರ್ಪಡಿಸುವೆನು ಕಾಡುನೆಲವನು ಏದೆನ್ ಉದ್ಯಾನದಂತೆ ಮರುಭೂಮಿಯನು, ದೇವತೆಗಳ ಉದ್ಯಾನವಾಗುವಂತೆ ಹರ್ಷೋಲ್ಲಾಸ, ಸ್ತುತಿಸ್ತೋತ್ರ, ಮಧುರಗಾನ ಅಲ್ಲಿ ನೆಲೆಸುವಂತೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು