Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 65:13 - ಕನ್ನಡ ಸತ್ಯವೇದವು C.L. Bible (BSI)

13 ಇಗೋ, ನನ್ನ ಭಕ್ತರು ಊಟಮಾಡುವರು, ನೀವಾದರೋ ಹಸಿದಿರುವಿರಿ. ನನ್ನ ಭಕ್ತರು ಪಾನಮಾಡುವರು, ನೀವಾದರೋ ದಾಹಗೊಳ್ಳುವಿರಿ. ನನ್ನ ಭಕ್ತರು ಉಲ್ಲಾಸಗೊಳ್ಳುವರು; ನೀವಾದರೋ ಲಜ್ಜೆಗೊಳ್ಳುವಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

13 ಹೀಗಿರಲು ಕರ್ತನಾದ ಯೆಹೋವನು ಹೀಗೆನ್ನುತ್ತಾನೆ, “ಇಗೋ, ನನ್ನ ಸೇವಕರು ಊಟಮಾಡುವರು, ನೀವು ಹಸಿದಿರುವಿರಿ; ಇಗೋ, ನನ್ನ ಸೇವಕರು ಕುಡಿಯುವರು, ನೀವು ದಾಹಗೊಳ್ಳುವಿರಿ; ಇಗೋ, ನನ್ನ ಸೇವಕರು ಉಲ್ಲಾಸಗೊಳ್ಳುವರು, ನೀವು ಆಶಾಭಂಗಪಡುವಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

13 ಹೀಗಿರಲು ಕರ್ತನಾದ ಯೆಹೋವನು ಹೀಗನ್ನುತ್ತಾನೆ - ಇಗೋ, ನನ್ನ ಸೇವಕರು ಊಟಮಾಡುವರು, ನೀವು ಹಸಿದಿರುವಿರಿ; ಇಗೋ, ನನ್ನ ಸೇವಕರು ಕುಡಿಯುವರು, ನೀವು ದಾಹಗೊಳ್ಳುವಿರಿ; ಇಗೋ, ನನ್ನ ಸೇವಕರು ಉಲ್ಲಾಸಗೊಳ್ಳುವರು, ನೀವು ಆಶಾಭಂಗಪಡುವಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

13 ನನ್ನ ಒಡೆಯನಾದ ಯೆಹೋವನು ಈ ವಿಷಯಗಳನ್ನು ಹೇಳಿದನು: “ನನ್ನ ಸೇವಕರು ಊಟಮಾಡುವರು. ಆದರೆ ದುಷ್ಟಜನರಾದ ನೀವು ಹಸಿದವರಾಗಿರುವಿರಿ. ನನ್ನ ಸೇವಕರು ಕುಡಿಯುವರು. ಆದರೆ ದುಷ್ಟಜನರಾದ ನೀವು ಬಾಯಾರಿದ್ದೀರಿ. ನನ್ನ ಸೇವಕರು ಸಂತೋಷದಲ್ಲಿರುವರು. ದುಷ್ಟಜನರಾದ ನೀವಾದರೋ ನಾಚಿಕೆಗೆ ಒಳಗಾಗುವಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

13 ಹೀಗಿರುವುದರಿಂದ ಸಾರ್ವಭೌಮ ಯೆಹೋವ ದೇವರು ಹೇಳುವುದೇನೆಂದರೆ: “ನನ್ನ ಸೇವಕರು ತಿನ್ನುವರು. ಆದರೆ ನೀವು ಹಸಿದಿರುವಿರಿ. ನನ್ನ ಸೇವಕರು ಕುಡಿಯುವರು, ಆದರೆ ನೀವು ಬಾಯಾರಿ ಇರುವಿರಿ. ಇಗೋ, ನನ್ನ ಸೇವಕರು ಸಂತೋಷಪಡುವರು, ಆದರೆ ನೀವು ನಾಚಿಕೆ ಪಡುವಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 65:13
23 ತಿಳಿವುಗಳ ಹೋಲಿಕೆ  

ಆಗ ಸಜ್ಜನರಿಗೂ ದುರ್ಜನರಿಗೂ, ದೇವರಸೇವೆ ಮಾಡುವವರಿಗೂ ಮಾಡದವರಿಗೂ ಇರುವ ವ್ಯತ್ಯಾಸವನ್ನು ಮತ್ತೆ ನೀವು ಮನಗಾಣುವಿರಿ.


ಇದನ್ನು ಕಂಡಾಗ ನಿಮ್ಮೆದೆ ಸಂತಸದಿಂದ ಉಬ್ಬುವುದು ಚಿಗುರುವುದು ಹಸಿಹುಲ್ಲಂತೆ ನಿಮ್ಮೆಲುಬು. ‘ಸರ್ವೇಶ್ವರನ ಕೃಪಾಹಸ್ತ ತನ್ನ ಭಕ್ತರ ಮೇಲೆ ಆತನ ರೋಷಾವೇಶ ಶತ್ರುಗಳ ಮೇಲೆ’ ಎಂಬುವುದು ವ್ಯಕ್ತವಾಗುವುದು ನಿಮಗೆ.


ಸರ್ವೇಶ್ವರ ಸ್ವಾಮಿಯ ಮಾತಿನಲ್ಲಿ ಭಯಭಕ್ತಿಯುಳ್ಳವರೇ, ಕೇಳಿ ಸ್ವಾಮಿಯ ಈ ಮಾತನ್ನು ! “ನನ್ನ ನಾಮದ ನಿಮಿತ್ತ ನಿಮ್ಮನ್ನು ದ್ವೇಷಿಸಿ ಬಹಿಷ್ಕರಿಸಿದ ನಿಮ್ಮ ಸಹೋದರರು, ‘ಸರ್ವೇಶ್ವರ ತನ್ನ ಮಹಿಮೆಯನ್ನು ಬೆಳಗಿಸಲಿ, ಆಗ ನಿಮಗಾಗುವ ಆನಂದವನ್ನು ನೋಡೋಣ,’ ಎಂದು ಜರೆದಿದ್ದಾರಲ್ಲವೆ? ಅವರೇ ನಾಚಿಕೆಪಡಬೇಕಾಗುವುದು !


ಸಿಗುವುದು ನಿಮಗಾದ ಅವಮಾನಕೆ ಇಮ್ಮಡಿ ಹಿರಿತನ ಆದ ತಿರಸ್ಕಾರಕೆ ಪ್ರತಿಯಾಗಿ ಸಂತಸ ಸಿರಿತನ. ದ್ವಿಗುಣವಾಗುವುದು ನಿಮಗೆ ನಾಡಿನ ಸಂಪದ ಅನಂತಕಾಲಕ್ಕು ನಿಮಗಿರುವುದು ಆನಂದ.


ವಿಗ್ರಹಗಳನ್ನು ಕೆತ್ತುವವರೆಲ್ಲರು ನಿರರ್ಥಕರು; ಅವರ ಇಷ್ಟಬೊಂಬೆಗಳು ಏತಕ್ಕೂ ಬಾರವು; ಅವುಗಳಲ್ಲಿ ವಿಶ್ವಾಸವಿಡುವವರು ಕುರುಡರು, ತಿಳುವಳಿಕೆ ಇಲ್ಲದವರು. ಅಂಥವರು ನಾಚಿಕೆಗೆ ಗುರಿಯಾಗುವರು.


ಸತ್ತು ಧೂಳಿ ಮಣ್ಣಿನಲ್ಲಿ ‘ದೀರ್ಘನಿದ್ರೆ’ಮಾಡುತ್ತಿರುವ ಅನೇಕರು ಏಳುವರು. ಎಚ್ಚೆತ್ತವರಲ್ಲಿ ಕೆಲವರು ನಿತ್ಯಜೀವವನ್ನು ಅನುಭವಿಸುವರು; ಕೆಲವರು ತಿರಸ್ಕೃತರಾಗಿ ನಿತ್ಯ ನಿಂದನೆಗೆ ಗುರಿಯಾಗುವರು.


ನೀವು ಮನಃಪೂರ್ವಕವಾಗಿ ನನಗೆ ವಿಧೇಯರಾದರೆ ಈ ನಾಡಿನ ಸತ್ಫಲವನ್ನು ಸವಿಯುವಿರಿ.


ಯುವ ಕೇಸರಿಗೆ ಇರಬಹುದು ಹಸಿವು, ದಾಹ I ಪ್ರಭುವನು ಅರಸುವವರಿಗಿರದು ಒಳಿತಿನ ಅಭಾವ II


ದೀನದರಿದ್ರರು ನೀರಿಗಾಗಿ ಪರದಾಡುವಾಗ ಬಾಯಾರಿ ಅವರ ನಾಲಿಗೆ ಒಣಗಿಹೋದಾಗ ಪ್ರಸನ್ನನಾಗುವೆ ಸರ್ವೇಶ್ವರನಾದ ನಾನೇ. ಇಸ್ರಯೇಲಿನ ದೇವರಾದ ನಾನವರನ್ನು ಕೈಬಿಡುವೆನೆ?


ಈ ಕಾರಣ, ನನ್ನ ಜನರು ಬುದ್ಧಿಹೀನರಂತೆ ಸೆರೆಹೋಗುವುದು ನಿಶ್ಚಯ. ಅವರ ಮುಖಂಡರು ಹಸಿವಿನಿಂದ ಸಾಯುವರು. ಅವರಲ್ಲಿ ಜನಸಾಮಾನ್ಯರು ಬಾಯಾರಿ ಸೊರಗಿಹೋಗುವರು.


ಜನರು ಘೋರ ಕಷ್ಟಗಳಿಗೆ ಒಳಗಾಗುವರು. ಹಸಿದು ದೇಶದಲ್ಲೆಲ್ಲ ಅಲೆದಾಡುವರು. ಹಸಿವಿನಿಂದ ರೋಷಗೊಂಡು ಅರಸನನ್ನೂ ದೇವರನ್ನೂ ಹಳಿಯುವರು.


ಹೊರಡಿಸುವೆನು ಬೋಳುಗುಡ್ಡಗಳಲ್ಲಿ ನದಿಗಳನು ತಗ್ಗುತಿಟ್ಟುಗಳಲ್ಲಿ ಒರತೆಗಳನು ಮಾರ್ಪಡಿಸುವೆನು ಕೆರೆಯಾಗಿ ಅರಣ್ಯವನು ಬುಗ್ಗೆಗಳಾಗಿ ಮರುಭೂಮಿಯನು.


ಆದರೆ, ಕೆತ್ತಿದ ವಿಗ್ರಹಗಳಲ್ಲಿ ಭರವಸೆಯಿಡುವವರು : “ನೀವೇ ನಮ್ಮ ದೇವರು"ಗಳು ಎಂದು ಎರಕದ ಬೊಂಬೆಗಳಿಗೆ ಅರಿಕೆಮಾಡುವವರು; ಅವಮಾನಕ್ಕೆ ಈಡಾಗುವರು ಹಿಂಜರಿದು.


ವಿಗ್ರಹಾರಾಧಕರೆಲ್ಲರೂ ಆಶಾಭಂಗಪಡುವರು. ಅದನ್ನು ಕೆತ್ತಿದವರು ಕೇವಲ ಮನುಷ್ಯ ಮಾತ್ರರು. ಅವರೆಲ್ಲರು ಇಲ್ಲಿಗೆ ಕೂಡಿಬರಲಿ; ನಿಶ್ಚಯವಾಗಿ ಅವರು ಹೆದರಿ ಲಜ್ಜೆಪಡುವರು.


ಇರದು ಅವರಿಗೆ ಹಸಿವು ಬಾಯಾರಿಕೆ ಬಡಿಯವು ಅವರಿಗೆ ಬಿಸಿಲುಬೇಗೆ. ನಡೆಸುವೆನು ನೀರುಕ್ಕುವ ಚಿಲುಮೆಗಳ ಬಳಿಗೆ ಕರುಣಾಕರನು ದಾರಿತೋರಿಸುವನು ಅವರಿಗೆ.


ಬೆಂಕಿಯಿಕ್ಕಿ ಸುತ್ತಲು ಕೊಳ್ಳಿಗಳನು ಹತ್ತಿಸಿಕೊಂಡಿರುವ ಎಲೈ ಜನರೇ, ನಡೆಯಿರಿ ನಿಮ್ಮಾ ಬೆಂಕಿಯ ಬೆಳಕಿನಲಿ ನೀವು ಹತ್ತಿಸಿದ ಆ ಕೊಳ್ಳಿಗಳ ನಡುವೆಯೆ ನಡೆಯಿರಿ : ಇಗೋ, ಒದಗುವುದು ದುರ್ಗತಿ ನನ್ನ ಹಸ್ತದಿಂದ, ಸಾಯುವಿರಿ ನೀವು ಬಾಧೆಯಿಂದ.


ಬೆಳೆಮಾಡಿದವರೇ ಕಾಳನು ತಿಂದು ಸ್ತುತಿಸುವರು ಸರ್ವೇಶ್ವರನನು; ದ್ರಾಕ್ಷಿ ಕಿತ್ತವರೇ ಕುಡಿವರು ಈ ರಸವನು ನನ್ನಾಲಯದ ಅಂಗಳದೊಳು.”


ನಿನ್ನನ್ನು ಅಟ್ಟಿ ಮೇಯಿಸುವ ಕುರುಬರನ್ನು ಗಾಳಿ ಅಟ್ಟಿಸಿಕೊಂಡು ಹೋಗುವುದು. ನಿನ್ನ ಮಿಂಡರನ್ನು ಸೆರೆಹಿಡಿದುಕೊಂಡು ಹೋಗುವರು. ಆಗ ಖಂಡಿತವಾಗಿ ನೀನು ಆಶಾಭಂಗಪಡುವೆ ನಿನ್ನ ದುಷ್ಕೃತ್ಯಗಳ ನಿಮಿತ್ತ ಅವಮಾನಕ್ಕೀಡಾಗುವೆ.


ಎಷ್ಟು ತಿಂದರೂ ನಿಮಗೆ ತೃಪ್ತಿಯಾಗದು. ಎಷ್ಟು ವ್ಯಭಿಚಾರಗೈದರೂ ನಿಮಗೆ ಸಂತಾನ ಪ್ರಾಪ್ತಿಯಾಗದು. ಕಾರಣ, ನೀವು ವೇಶ್ಯಾಚಾರಕ್ಕಾಗಿ ಸರ್ವೇಶ್ವರನನ್ನೇ ತಿರಸ್ಕರಿಸಿದ್ದೀರಿ.


ನೀತಿವಂತನು ಹೊಟ್ಟೆತುಂಬ ಉಣ್ಣುವನು; ದುಷ್ಟನ ಹೊಟ್ಟೆ ಹಸಿವಿನಿಂದ ಬಳಲುವುದು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು