Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 64:9 - ಕನ್ನಡ ಸತ್ಯವೇದವು C.L. Bible (BSI)

9 ಸ್ವಾಮಿ, ನಮ್ಮ ಮೇಲೆ ಅತಿಕೋಪಗೊಳ್ಳದಿರಿ. ಸದಾ ನಮ್ಮ ಅಕ್ರಮಗಳನ್ನು ನೆನೆಸದಿರಿ, ಇಗೋ ನೋಡಿ, ಬೇಡುತ್ತಿದ್ದೇವೆ, ನಾವೆಲ್ಲರೂ ನಿಮ್ಮ ಜನರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9 ಯೆಹೋವನೇ, ಅತಿರೋಷಗೊಳ್ಳದಿರು, ನಮ್ಮ ಅಧರ್ಮವನ್ನು ಕಡೆಯವರೆಗೂ ಜ್ಞಾಪಕದಲ್ಲಿಡಬೇಡ; ಎಲೈ, ಕರ್ತನೇ, ಕಟಾಕ್ಷಿಸು, ನಾವೆಲ್ಲರೂ ನಿನ್ನ ಜನರಾಗಿದ್ದೇವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

9 ಯೆಹೋವನೇ, ಅತಿರೋಷಗೊಳ್ಳದಿರು, ನಮ್ಮ ಅಧರ್ಮವನ್ನು ಕಡೆಯವರೆಗೂ ಜ್ಞಾಪಕದಲ್ಲಿಡಬೇಡ; ಎಲೈ, ಸ್ವಾಮೀ, ಕಟಾಕ್ಷಿಸು, ನಾವೆಲ್ಲರೂ ನಿನ್ನ ಜನರಾಗಿದ್ದೇವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

9 ಯೆಹೋವನೇ, ನಮ್ಮ ಮೇಲೆ ಸಿಟ್ಟಿನಿಂದಲೇ ಇರಬೇಡ. ನಮ್ಮ ಪಾಪಗಳನ್ನು ನಿನ್ನ ನೆನಪಿನಲ್ಲಿಟ್ಟುಕೊಂಡೇ ಇರಬೇಡ. ದಯಮಾಡಿ ನಮ್ಮ ಕಡೆಗೆ ನೋಡು. ನಾವು ನಿನ್ನ ಜನರೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

9 ಯೆಹೋವ ದೇವರೇ, ಅತ್ಯಧಿಕವಾಗಿ ಬೇಸರಗೊಳ್ಳಬೇಡ. ಎಂದೆಂದಿಗೂ ಪಾಪವನ್ನು ಜ್ಞಾಪಕ ಮಾಡಬೇಡ. ನೋಡಿರಿ, ನಾವು ಬೇಡುತ್ತೇವೆ, ದೃಷ್ಟಿ ಇಡಿರಿ. ನಾವೆಲ್ಲರೂ ನಿನ್ನ ಜನರೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 64:9
27 ತಿಳಿವುಗಳ ಹೋಲಿಕೆ  

ಆಗ ಸಲ್ಲಿಸುವೆವು ಸದಾಕಾಲ ಕೃತಜ್ಞತೆಯನು ನಿನಗೆ I ಸ್ಮರಿಸುವೆವು ನಿನ್ನ ಮಹಿಮೆಯನು ತಲತಲಾಂತರದವರೆಗೆ I ಹೇ ದೇವಾ, ನಾವು ನಿನ್ನ ಪ್ರಜೆ, ನೀ ಪಾಲಿಸುವ ಮಂದೆ II


ಜನರನ್ನು ಮರುಳುಗೊಳಿಸುತ್ತಿದ್ದ ಪಿಶಾಚಿಯನ್ನು ಗಂಧಕದ ಅಗ್ನಿ ಸರೋವರಕ್ಕೆ ಎಸೆಯಲಾಯಿತು. ಆ ಮೃಗವನ್ನೂ ಕಪಟ ಪ್ರವಾದಿಯನ್ನೂ ಮೊದಲೇ ಅದಕ್ಕೆ ಎಸೆಯಲಾಗಿತ್ತು. ಇವರೆಲ್ಲರೂ ಯುಗಯುಗಾಂತರಗಳವರೆಗೆ ಹಗಲಿರುಳೆನ್ನದೆ ಅಲ್ಲಿಯೇ ಬೇನೆಬೇಗುದಿಗಳಿಂದ ನರಳುವರು.


ಈ ಕಳ್ಳಬೋಧಕರು ನೀರಿಲ್ಲದ ಬಾವಿಗಳು, ಬಿರುಗಾಳಿಯಿಂದ ಚದರಿಹೊಗುವ ಮಂಜುಮೋಡಗಳು, ಕಾರ್ಗತ್ತಲಿನ ಕಂದಕವೇ ಅವರ ಪಾಲಿಗೆ ಕಟ್ಟಿಟ್ಟ ಬುತ್ತಿ.


ಏಸಾವನ ವಂಶದವರಾದ ಎದೋಮ್ಯರು, “ನಮ್ಮ ನಾಡು ಹಾಳಾಯಿತು; ಆದರೆ ಹಾಳುಬಿದ್ದದ್ದನ್ನು ಮರಳಿ ಕಟ್ಟುವೆವು,” ಎನ್ನಬಹುದು. ಅದಕ್ಕೆ ಸೇನಾಧೀಶ್ವರ ಸರ್ವೇಶ್ವರ ಕೊಡುವ ಉತ್ತರ ಇದು: “ಅವರು ಕಟ್ಟಲಿ; ನಾನು ಅವುಗಳನ್ನು ಕೆಡವಿಹಾಕುವೆ. ‘ಅವರು ಕೇಡಿಗರು. ಸರ್ವೇಶ್ವರಸ್ವಾಮಿಯ ಕೋಪಕ್ಕೆ ಗುರಿಯಾದವರು’ ಎಂದು ಜನರೇ ಆಡಿಕೊಳ್ಳುವರು.”


ಮರಳಿ ಮಾಡು ನಮ್ಮೀಕಾಲದಲಿ ಅವುಗಳನು ಪ್ರಚುರಪಡಿಸು ಪ್ರಸ್ತುತಕಾಲದಲಿ ಅವುಗಳನು ರೋಷಗೊಂಡರೂ ಮರೆಯದಿರು ಕರುಣೆಯನು


ನಮ್ಮನ್ನೇಕೆ ಮರೆತುಬಿಟ್ಟೆ ಇಷ್ಟುಕಾಲ ನಮ್ಮನ್ನೇಕೆ ಕೈಬಿಟ್ಟೆ ಇಲ್ಲಿಯ ತನಕ?


ಹೇ ಸರ್ವೇಶ್ವರಾ, ನಮ್ಮನ್ನು ದಂಡಿಸಿ ಸುಧಾರಿಸಿ ಆದರೆ ಮಿತಿಮೀರಬೇಡ, ಕೋಪದಿಂದ ದಂಡಿಸಬೇಡಿ. ಇಲ್ಲವಾದರೆ ನಾವು ನಶಿಸಿ ನಾಶವಾದೇವು !


ನೀನು ಉತ್ತರ ದಿಕ್ಕಿಗೆ ಹೋಗಿ ಆ ಇಸ್ರಯೇಲಿಗೆ ಈ ಸಂದೇಶವನ್ನು ಸಾರು - ಸರ್ವೇಶ್ವರ ಸ್ವಾಮಿ ಹೀಗೆನ್ನುತ್ತಾರೆ; ಭ್ರಷ್ಟಳಾದ ಇಸ್ರಯೇಲೇ, ಹಿಂದಿರುಗು; ನಾನು ಅಷ್ಟು ಕೋಪಮುಖದಿಂದ ನಿನ್ನನ್ನು ನೋಡುವುದಿಲ್ಲ. ನಾನು ಕರುಣಾಮೂರ್ತಿ, ನಿತ್ಯಕೋಪಿಯಲ್ಲ.


ನಾವಾದರೋ, ನಿಮ್ಮ ದೊರೆತನಕ್ಕೆ ಎಂದಿಗೂ ಒಳಗಾಗದ, ನಿಮ್ಮ ನಾಮವನ್ನು ಧರಿಸದ, ಪರಕೀಯರಂತೆ ಆಗಿದ್ದೇವಲ್ಲಾ !


ಕಟ್ಟುವರು ವಿದೇಶಿಯರು ನಿನ್ನ ಪೌಳಿಗೋಡೆಗಳನು ಅರಸರು ಕೂಡ ಸಲ್ಲಿಸುವರು ನಿನಗೆ ಸೇವೆಯನು. ಶಿಕ್ಷಿಸಿದೆ ನಿನ್ನನ್ನು ಕೋಪದಿಂದ ಆದರೆ, ಕರುಣಿಸುವೆನು ಕೃಪೆಯಿಂದ.


ನನ್ನ ಜನರ ದುರಾಶೆಯ ದೋಷದ ನಿಮಿತ್ತ ನಾನು ಕೋಪಗೊಂಡೆ, ದಂಡಿಸಿದೆ, ಮುಖ ಮರೆಸಿಕೊಂಡೆ, ರೋಷಭರಿತನಾದೆ. ಅವರಾದರೋ ಮೊಂಡುತನದಿಂದ ಮನಸ್ಸಿಗೆ ತೋಚಿದ ಹಾಗೆ ನಡೆಯುತ್ತಾ ಬಂದಿದ್ದಾರೆ.


ಆದರೂ ನಾನೇ ನಾನಾಗಿ ಅಳಿಸಿಬಿಡುವೆ ನಿನ್ನ ದ್ರೋಹಗಳನು, ನನ್ನ ನೆನಪಿನಿಂದ ತೆಗೆದುಹಾಕುವೆ ನಿನ್ನ ಪಾಪಗಳನು.


ಉದ್ಧರಿಸೆನ್ನನು, ನಾನು ನಿನ್ನವನು I ನಿನ್ನ ನಿಯಮಗಳಲೇ ಆಸಕ್ತನು II


ಕೋಪದಿಂದೆನ್ನ ಪ್ರಭು, ಬೈಯಬೇಡ I ರೋಷದಿಂದೆನ್ನನು ದಂಡಿಸಲು ಬೇಡ II


ಖಂಡಿಸಬೇಡೆನ್ನ ಪ್ರಭು, ರೋಷದಿಂದ I ದಂಡಿಸಬೇಡೆನ್ನನು ಕಡುಕೋಪದಿಂದ II


“ನಿಜವಾಗಿ ಇವರು ನನ್ನ ಜನ, ನನ್ನ ಮಕ್ಕಳು, ನನಗೆ ಮೋಸಮಾಡರು,” ಎಂದುಕೊಂಡರು ಸರ್ವೇಶ್ವರ ಸ್ವಾಮಿ.


ನೀವು, ನಿಮ್ಮ ಪೂರ್ವಜರು, ನಿಮ್ಮ ಅರಸರು, ಅಧಿಕಾರಿಗಳು, ಜನಸಾಮಾನ್ಯರು ಮತ್ತು ನೀವೆಲ್ಲರು ಜುದೇಯದ ಊರುಗಳಲ್ಲೂ ಜೆರುಸಲೇಮಿನ ಬೀದಿಗಳಲ್ಲೂ ಎತ್ತಿದ ಧೂಪಾರತಿ ಸರ್ವೇಶ್ವರನ ನೆನಪಿನಲ್ಲಿ ಇದೆ ಅಲ್ಲವೆ? ಅದನ್ನು ಅವರು ಮರೆತುಬಿಟ್ಟಿದ್ದಾರೆಯೇ?


ತಿರುಗಿಸು ನಮ್ಮನ್ನು ನಿನ್ನ ಕಡೆಗೆ ತಿರುಗುವೆವು ನೀನು ತಿರುಗಿಸಿದ ಹಾಗೆ. ಪ್ರಾಚೀನ ವೈಭವವನ್ನು ಮರಳಿ ದಯಪಾಲಿಸು ನಮಗೆ.


ಈಜಿಪ್ಟ್ ಇನ್ನು ಇಸ್ರಯೇಲ್ ವಂಶದವರ ಭರವಸೆಯಾಗದು; ಅದರ ಕಡೆಗೆ ಕಣ್ಣೆತ್ತುವಾಗ ದೇವದ್ರೋಹದ ನೆನಪು ಇಸ್ರಯೇಲರಲ್ಲಿ ಹುಟ್ಟುವುದು; ನಾನೇ ಸರ್ವೇಶ್ವರ ಎಂದು ಅವರಿಗೆ ಮನದಟ್ಟಾಗುವುದು.”


ನಿಮ್ಮ ಪಟ್ಟಣಗಳನ್ನು ಹಾಳುಮಾಡುವೆನು; ನಿಮ್ಮ ದೇವಸ್ಥಾನಗಳನ್ನು ನೆಲಸಮ ಮಾಡುವೆನು; ನೀವು ಸಮರ್ಪಿಸುವ ಸುಗಂಧದ್ರವ್ಯಗಳ ಸುವಾಸನೆಯನ್ನು ನಾನು ಮೂಸಿಯೂ ನೋಡುವುದಿಲ್ಲ.


ಸರ್ವೇಶ್ವರನ ಆಲಯವನ್ನೂ ಅರಮನೆಯನ್ನೂ ಜೆರುಸಲೇಮಿನ ಎಲ್ಲ ದೊಡ್ಡ ಮನೆಗಳನ್ನೂ ಸುಟ್ಟುಬಿಟ್ಟನು.


ನಿಮ್ಮ ಸ್ವಕೀಯ ಜನರು ಸ್ವಲ್ಪಕಾಲ ಮಾತ್ರ ಅನುಭವಿಸಿದಾ ನಿಮ್ಮ ಪವಿತ್ರ ಗರ್ಭಗುಡಿಯನ್ನು ನಮ್ಮ ವೈರಿಗಳು ತುಳಿದು ಹಾಳುಮಾಡಿದರಲ್ಲಾ !


ಸ್ವಾಮಿ ತಿರಸ್ಕರಿಸಿಬಿಟ್ಟಿದ್ದಾನೆ ತನ್ನ ಬಲಿಪೀಠವನ್ನೇ ಅಸಹ್ಯಗೊಂಡು ತೊರೆದುಬಿಟ್ಟಿದ್ದಾನೆ ತನ್ನ ಪವಿತ್ರಸ್ಥಾನವನ್ನೇ ಸಿಯೋನ್ ಅರಮನೆಯ ಗೋಡೆಗಳನ್ನು ಕೆಡವಲು ಬಿಟ್ಟಿದ್ದಾನೆ ಹಗೆಗಳನ್ನೇ. ಹಬ್ಬಹರಿದಿನಗಳ ಜಯಘೋಷವೋ ಎಂಬಂತೆ ಘೋಷಣೆ ಹಾಕುತ್ತಿದ್ದಾರಲ್ಲಾ ಶತ್ರುಗಳು ಸರ್ವೇಶ್ವರನ ಮಂದಿರದಲ್ಲೆ !


ಸಿಯೋನ್ ಶ್ರೀ ಪರ್ವತ ಹಾಳಾಯಿತು ಅದು ಅಲೆದಾಡುವ ನರಿಗಳ ಬೀಡಾಯಿತು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು