Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 64:6 - ಕನ್ನಡ ಸತ್ಯವೇದವು C.L. Bible (BSI)

6 ನಾವೆಲ್ಲರೂ ಅಶುದ್ಧರು, ನಮ್ಮ ಸತ್ಕಾರ್ಯಗಳೆಲ್ಲ ಕೊಳಕು, ತರಗೆಲೆಯಂತೆ ಒಣಗಿಹೋಗಿದ್ದೇವೆ. ಬಿರುಗಾಳಿಯಂತೆ ನಮ್ಮನ್ನು ತಳ್ಳಿಕೊಂಡು ಬಂದಿವೆ, ನಮ್ಮ ಅಪರಾಧಗಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

6 ನಾವೆಲ್ಲರು ಅಶುದ್ಧನ ಹಾಗಿದ್ದೇವೆ, ನಮ್ಮ ಧರ್ಮಕಾರ್ಯಗಳೆಲ್ಲಾ ಹೊಲೆಯ ಬಟ್ಟೆಯಂತಿವೆ; ನಾವೆಲ್ಲರೂ ಎಲೆಗಳೋಪಾದಿಯಲ್ಲಿ ಒಣಗಿಹೋಗಿದ್ದೇವೆ; ನಮ್ಮ ಅಪರಾಧಗಳು ಬಿರುಗಾಳಿಯ ಪ್ರಕಾರ ನಮ್ಮನ್ನು ಬಡಿದುಕೊಂಡು ಹೋಗಿವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

6 ನಾವೆಲ್ಲರು ಅಶುದ್ಧನ ಹಾಗಿದ್ದೇವೆ, ನಮ್ಮ ಧರ್ಮಕಾರ್ಯಗಳೆಲ್ಲಾ ಹೊಲೆಯ ಬಟ್ಟೆಯಂತಿವೆ; ನಾವೆಲ್ಲರೂ ತರಗೆಲೆಯೋಪಾದಿಯಲ್ಲಿ ಒಣಗಿ ಹೋಗಿದ್ದೇವೆ; ನಮ್ಮ ಅಪರಾಧಗಳು ಬಿರುಗಾಳಿಯ ಪ್ರಕಾರ ನಮ್ಮನ್ನು ಬಡಿದುಕೊಂಡು ಹೋಗಿವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

6 ನಾವೆಲ್ಲರೂ ಪಾಪದಿಂದ ಮಲಿನರಾಗಿದ್ದೇವೆ. ನಮ್ಮ ಸುಕಾರ್ಯಗಳೆಲ್ಲಾ ಹಳೇ ಕೊಳಕು ಬಟ್ಟೆಯಂತಿವೆ. ನಾವೆಲ್ಲಾ ಒಣಗಿಹೋದ ಎಲೆಗಳಂತಿದ್ದೇವೆ. ನಮ್ಮ ಪಾಪಗಳು ಬಿರುಗಾಳಿಯಂತೆ ನಮ್ಮನ್ನು ಬಡಿದುಕೊಂಡುಹೋಗಿವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

6 ನಾವೆಲ್ಲರೂ ಅಶುದ್ಧನ ಹಾಗೆ ಇದ್ದೇವೆ. ನಮ್ಮ ನೀತಿ ಕಾರ್ಯಗಳೆಲ್ಲಾ ಮೈಲಿಗೆ ವಸ್ತ್ರದ ಹಾಗೆ ಇವೆ. ನಾವೆಲ್ಲರೂ ಎಲೆಯ ಹಾಗೆ ಒಣಗಿಹೋಗಿದ್ದೇವೆ. ನಮ್ಮ ಪಾಪಗಳು ಗಾಳಿಯಂತೆ ನಮ್ಮನ್ನು ಬಡಿದುಕೊಂಡು ಹೋಗಿವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 64:6
38 ತಿಳಿವುಗಳ ಹೋಲಿಕೆ  

ನನ್ನಲ್ಲಿ, ಅಂದರೆ ನನ್ನ ಶಾರೀರಿಕ ಸ್ವಭಾವದಲ್ಲಿ ಒಳ್ಳೆಯತನವೆಂಬುದೇನೂ ನೆಲೆಗೊಂಡಿಲ್ಲ. ಇದು ನನಗೆ ಗೊತ್ತು. ಏಕೆಂದರೆ, ಒಳಿತನ್ನು ಮಾಡಬೇಕೆಂಬ ಮನಸ್ಸು ನನಗಿದ್ದರೂ ಅದನ್ನು ಮಾಡಲು ನನ್ನಿಂದ ಆಗುತ್ತಿಲ್ಲ.


ಅಯ್ಯೋ, ನಾನೆಂಥ ನಿರ್ಭಾಗ್ಯನು! ಸಾವಿನ ದವಡೆಗೆ ಸಿಕ್ಕಿರುವ ಈ ಶರೀರದಿಂದ ನನ್ನನ್ನು ಬಿಡಿಸುವವರು ಯಾರು?


ದೇವದೂತನ ಮುಂದೆ ನಿಂತಿದ್ದ ಯೆಹೋಶುವನು ಮಲಿನವಾದ ಬಟ್ಟೆಯನ್ನು ಧರಿಸಿದ್ದನು.


ತೊಳಲುತ್ತಿದ್ದೆವು ನಾವೆಲ್ಲರು ದಾರಿತಪ್ಪಿದ ಕುರಿಗಳಂತೆ ಹಿಡಿಯುತ್ತಿದ್ದನು ಪ್ರತಿಯೊಬ್ಬನು ತನ್ನ ತನ್ನ ದಾರಿಯನ್ನೆ. ನಮ್ಮೆಲ್ಲರ ದೋಷವನು ಸರ್ವೇಶ್ವರ ಹಾಕಿದ್ದ ಆತನ ಮೇಲೆ.


ಹಿಂದೆ ನಾವು ಅವಿವೇಕಿಗಳೂ ಅವಿಧೇಯರೂ ಆಗಿ ದಾರಿ ತಪ್ಪಿಹೋಗಿದ್ದೆವು. ಅನೇಕ ಪ್ರಲೋಭನೆಗಳಿಗೂ ದುರಿಚ್ಛೆಗಳಿಗೂ ಗುಲಾಮರಾಗಿದ್ದೆವು. ದುಷ್ಟತನ ಹಾಗೂ ಮತ್ಸರಗಳಲ್ಲಿ ಕಾಲ ಕಳೆಯುತ್ತಾ ಅಸಹ್ಯರೂ ಪರಸ್ಪರ ದ್ವೇಷಿಗಳೂ ಆಗಿದ್ದೆವು.


ನರನು ದೇವರ ದೃಷ್ಟಿಯಲ್ಲಿ ಸಜ್ಜನನಾಗಿರಲು ಸಾಧ್ಯವೆ? ಸ್ತ್ರೀಯರಲ್ಲಿ‌ ಹುಟ್ಟಿದವನು ಪರಿಶುದ್ಧನಾಗಿರುವುದು ಶಕ್ಯವೆ?


ಅಶುದ್ಧತೆಯಿಂದ ಬಂದೀತೆ ಶುದ್ಧತೆ? ಇಲ್ಲ, ಎಂದಿಗೂ ಅದು ಅಸಾಧ್ಯವೆ.


ಧರ್ಮಶಾಸ್ತ್ರದ ಪಾಲನೆಯಿಂದ ದೊರಕುವ, ನನ್ನದೇ ಎಂದು ಹೇಳಿಕೊಳ್ಳಬಹುದಾದ ಸತ್ಸಂಬಂಧ ಯಾವುದೂ ನನಗಿಲ್ಲ. ಪ್ರತಿಯಾಗಿ, ನಾನು ಕ್ರಿಸ್ತಯೇಸುವಿನಲ್ಲಿಟ್ಟಿರುವ ವಿಶ್ವಾಸದ ಪ್ರಯುಕ್ತ ದೇವರೊಂದಿಗೆ ಸರಿಯಾದ ಸತ್ಸಂಬಂಧವನ್ನು ಹೊಂದಿದ್ದೇನೆ. ಈ ಸಂಬಂಧವು ದೇವರು ನನಗೆ ದಯಪಾಲಿಸಿರುವ ಅನುಗ್ರಹ. ನನ್ನ ವಿಶ್ವಾಸದ ಆಧಾರದ ಮೇಲೆ ಅವರೇ ನೀಡಿರುವ ಕೃಪಾವರ.


ಧರ್ಮಕ್ಕೆ ದೂರವಾದ ಹಟಮಾರಿಗಳೇ, ಕಿವಿಗೊಡಿರಿ ನೀವು ನನ್ನ ಮಾತಿಗೆ.


ನಾ ಜನಿಸಿದೆ ಪಾಪಪಂಕದಲೆ I ದ್ರೋಹಿ ನಾ ಮಾತೃಗರ್ಭದಿಂದಲೆ II


ಸಭಾಪ್ರಮುಖರಲ್ಲಿ ಒಬ್ಬನು, “ಶ್ವೇತಾಂಬರರಾದ ಇವರೆಲ್ಲರೂ ಯಾರು? ಎಲ್ಲಿಂದ ಬಂದರು?” ಎಂದು ನನ್ನ‍ನ್ನು ಪ್ರಶ್ನಿಸಿದನು.


ಆಗ ನಾನು “ಅಯ್ಯೋ, ನನ್ನ ಗತಿಯೇನು? ನನ್ನ ಕಥೆ ಮುಗಿಯಿತು. ಅಶುದ್ಧ ವದನದವನು ನಾನು. ಅಶುದ್ಧ ವದನದವರ ಮಧ್ಯೆ ಬಾಳುವವನು. ನನ್ನ ಕಣ್ಣುಗಳು ರಾಜಾಧಿರಾಜನನ್ನು, ಸೇನಾಧೀಶ್ವರ ಸರ್ವೇಶ್ವರನನ್ನು ಕಂಡೆವಲ್ಲಾ !” ಎಂದು ಕೂಗಿಕೊಂಡೆನು.


ಬಿರುಗಾಳಿ ಅವರನ್ನು ಬಡಿದೆತ್ತಿಕೊಂಡು ಹೋಗುವುದು. ಅವರು ವಿಗ್ರಹಗಳಿಗೆ ಅರ್ಪಿಸುತ್ತಿದ್ದ ಬಲಿಗಳಿಗಾಗಿ ನಾಚಿಕೆಪಡುವರು.


ಇಸ್ರಯೇಲೆಂಬ ನಾಮಧಾರಿಗಳೇ, ಯೆಹೂದ ವಂಶೋತ್ಪನ್ನರೇ, ಯಕೋಬ ಮನೆತನದವರೇ, ಇಡುತ್ತೀರಿ ನೀವು ಸರ್ವೇಶ್ವರನ ಮೇಲೆ ಆಣೆ ಸ್ಮರಿಸುತ್ತೀರಿ ನಿಸ್ಸಂದೇಹವಾಗಿ ಇಸ್ರಯೇಲಿನ ದೇವರನೆ. ಆದರೆ, ದೂರವಾಗಿದೆ ಸತ್ಯಕ್ಕೂ ಧರ್ಮಕ್ಕೂ ನಿಮ್ಮ ಕಾರ್ಯಾಚರಣೆ.


ದುರುಳರಾದರೊ ತೂರಿ ಹೋಗುವರು I ಬಿರುಗಾಳಿಗೆ ತರಗೆಲೆಯಾಗುವರು II


“ಅಯ್ಯೋ, ನಾನು ಅಲ್ಪನೇ ಸರಿ ತಮಗೇನು ಪ್ರತ್ಯುತ್ತರ ಹೇಳಲಿ? ಬಾಯ ಮೇಲೆ ಕೈಯಿಡುವೆ ಮೌನತಾಳಿ.


ಎಲೆ ಒಣಗಿದ ಮರಗಳಂತೆ ಆಗುವಿರಿ. ಜಲವಿಲ್ಲದ ವನದಂತಾಗುವಿರಿ.


ಸರ್ವೇಶ್ವರ ಹೀಗೆನ್ನುತ್ತಾರೆ : “ವಿವಾಹ ವಿಚ್ಛೇದನಗೈದ ಗಂಡಸಿನಂತೆ ನಾನು ನಿಮ್ಮ ಜನಾಂಗವನ್ನು ಪರಿತ್ಯಜಿಸಿದುಂಟೊ? ತನ್ನ ಮಕ್ಕಳನ್ನು ಜೀತಕ್ಕೆ ಇರಿಸುವವನಂತೆ ನಾನು ನಿಮ್ಮನ್ನು ನನ್ನ ಸಾಲಗಾರರಿಗೆ ಮಾರಿದುಂಟೊ? ಇಲ್ಲ, ನೀವು ಸೆರೆವಾಸಿಗಳಾದಿರಿ ನಿಮ್ಮ ದೋಷಗಳ ನಿಮಿತ್ತ; ನಿಮ್ಮ ತಾಯಿಯನು ಬಿಡಲಾಯಿತು ನಿಮ್ಮ ದ್ರೋಹಗಳ ನಿಮಿತ್ತ.


ಆದರೆ ಒಬ್ಬ ವ್ಯಕ್ತಿಯ ಚರ್ಮದಲ್ಲಿ ತೊನ್ನು ಹತ್ತಿ ಯಾಜಕನು ನೋಡುವ ಎಲ್ಲಾ ಕಡೆಯಲ್ಲಿಯೂ ತಲೆ ಮೊದಲುಗೊಂಡು ಅಂಗಾಲಿನವರೆಗೂ ಹರಡಿಕೊಂಡಿದ್ದರೆ ಯಾಜಕನು ನೋಡುವಾಗ


ಎದೆಗುಂದಿದವರಾದರು ಆ ವಿದೇಶಿಯರು ತಮ್ಮ ಕೋಟೆಯಿಂದ ನಡುಗುತ್ತಾ ಹೊರಬಂದರು.


ದುರ್ಜನರೆನ್ನ ಜನರನು ಅನ್ನದಂತೆ ನುಂಗುವುದೇಕೆ? I ಪ್ರಭುವನು ನೆನೆಯದಾ ದುಷ್ಕರ್ಮಿಗಳಿಗೆ ಅರಿವಿಲ್ಲವೇಕೆ? I


ನಾಶವಾಗುವರು ದ್ರೋಹಿಗಳೂ ಪಾಪಿಗಳೂ ಒಟ್ಟಾಗಿ; ನಿರ್ಮೂಲವಾಗುವರು ಸ್ವಾಮಿಯನ್ನು ತೊರೆದವರು ನಿಶ್ಚಯವಾಗಿ.


ಯಕೋಬನ ಮನೆತನದವರಿಗೆ ತನ್ನ ಮುಖವನ್ನು ಮರೆಯಿಸಿಕೊಂಡು ಇರುವ ಸ್ವಾಮಿಗಾಗಿ ಕಾದಿರುವೆನು. ಸ್ವಾಮಿಯನ್ನೇ ಎದುರು ನೋಡುತ್ತಿರುವೆನು.


“ಯಕೋಬೇ, ನೀನೆನ್ನ ನಾಮಸ್ಮರಣೆ ಮಾಡದೆಹೋದೆ; ಇಸ್ರಯೇಲೇ, ನನ್ನ ವಿಷಯದಲ್ಲಿ ನೀನು ಬೇಸರಗೊಂಡೆ.


ನಾನು ರಕ್ಷಿಸಲು ಬಂದಾಗ ಯಾರೂ ಕಾದಿರಲಿಲ್ಲ, ಏಕೆ? ನಾನು ಕೂಗಿಕರೆದಾಗ ಯಾರೂ ಉತ್ತರಕೊಡಲಿಲ್ಲ, ಏಕೆ? ನನ್ನ ಹಸ್ತವು ರಕ್ಷಿಸಲಾರದ ಮೋಟುಗೈಯೋ? ಉದ್ಧರಿಸುವ ಶಕ್ತಿ ನನ್ನಲ್ಲಿ ಇಲ್ಲವೋ? ಬರಿ ಗರ್ಜನೆಯಿಂದ ಬತ್ತಿಸಬಲ್ಲೆ ಸಮುದ್ರವನು ಬೆಂಗಾಡಾಗಿಸಬಲ್ಲೆ ನಾ ನದಿಸರೋವರಗಳನು ಬಾಯಾರಿ ಸತ್ತು ನಾರುವಂತೆ ಮಾಡಬಲ್ಲೆ ಅಲ್ಲಿಯ ಮೀನುಗಳನು.


ಮೋಶೆಯ ಧರ್ಮಶಾಸ್ತ್ರದಲ್ಲಿ ಬರೆದಿರುವಂತೆಯೇ ಈ ವಿಪತ್ತೆಲ್ಲಾ ನಮ್ಮ ಮೇಲೆ ಬಂದಿದೆ. ಆದರೂ ನಾವು ನಮ್ಮ ಧರ್ಮಮಾರ್ಗಗಳನ್ನು ತೊರೆದುಬಿಟ್ಟಿದ್ದೇವೆ. ನಿಮ್ಮ ಸತ್ಯೋಪದೇಶವನ್ನು ಗ್ರಹಿಸಿ ನಡೆಯುವಂತೆ ನಮ್ಮ ದೇವರಾದ ಸರ್ವೇಶ್ವರನೆಂಬ ನಿಮ್ಮ ದಯೆಯನ್ನು ಬೇಡಿಕೊಳ್ಳಲಿಲ್ಲ.


“ಎಲ್ಲರು ಒಲೆಯಂತೆ ಉರಿಯುತ್ತ ತಮ್ಮ ಅಧಿಕಾರಿಗಳನ್ನೇ ನುಂಗಿಬಿಡುತ್ತಾರೆ. ಅವರ ಅರಸರೆಲ್ಲ ಸತ್ತುಬಿದ್ದಿದ್ದಾರೆ. ನನಗೆ ಮೊರೆಯಿಡುವವರು ಅವರಲ್ಲಿ ಯಾರೂ ಇಲ್ಲ.”


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು