ಯೆಶಾಯ 60:9 - ಕನ್ನಡ ಸತ್ಯವೇದವು C.L. Bible (BSI)9 ನಿರೀಕ್ಷಿಸುತ್ತಿಹರು ನನ್ನನು ದೂರದ ನಿವಾಸಿಗಳು ಮುಂದಾಗಿ ಬರುತಿಹವು ತಾರ್ಷೀಷಿನ ಹಡಗುಗಳು, ನಿನ್ನ ದೇವರಾದ ಸರ್ವೇಶ್ವರನ ಶ್ರೀನಾಮ ನಿಧಿಯಾದ ಇಲ್ಲಿಗೆ; ನಿನ್ನ ಘನಪಡಿಸಿದ ಇಸ್ರಯೇಲಿನ ಪರಮಪಾವನನ ಸನ್ನಿಧಿಗೆ. ಹೊತ್ತು ತರುತಿಹರು ನಿನ್ನ ಮಕ್ಕಳನು ಜೊತೆಗೆ ಅವರ ಬೆಳ್ಳಿಬಂಗಾರಗಳನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20199 ಯೆಹೋವನು ನಿನ್ನನ್ನು ವೈಭವಪಡಿಸಿರುವುದನ್ನು ಕೇಳಿ ತಾರ್ಷೀಷಿನ ಹಡಗುಗಳು, ನಿನ್ನ ದೇವರಾದ ಯೆಹೋವನ ನಾಮಮಹತ್ತಿನ ನಿಧಿಯೂ, ಇಸ್ರಾಯೇಲಿನ ಸದಮಲಸ್ವಾಮಿಯ ಸನ್ನಿಧಿಯ ಸ್ಥಾನಕ್ಕೆ ನಿನ್ನ ಮಕ್ಕಳನ್ನು ಅವರ ಬೆಳ್ಳಿ ಬಂಗಾರಗಳ ಸಮೇತ ದೂರದಿಂದ ತರುವುದರಲ್ಲಿ ಮುಂದಾಗುತ್ತಿವೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)9 ಯೆಹೋವನು ನಿನ್ನನ್ನು ವೈಭವಪಡಿಸಿರುವದನ್ನು ಕೇಳಿ ತಾರ್ಷೀಷಿನ ಹಡಗುಗಳು ನಿನ್ನ ದೇವರಾದ ಯೆಹೋವನ ನಾಮಮಹತ್ತಿನ ವಿಧಿಯೂ ಇಸ್ರಾಯೇಲಿನ ಸದಮಲಸ್ವಾವಿುಯ ಸನ್ನಿಧಿಯೂ ಆದ ಸ್ಥಾನಕ್ಕೆ ನಿನ್ನ ಮಕ್ಕಳನ್ನು ಅವರ ಬೆಳ್ಳಿ ಬಂಗಾರಗಳ ಸಮೇತ ದೂರದಿಂದ ತರುವದರಲ್ಲಿ ಮುಂದಾಗುತ್ತಿವೆ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್9 ದೂರ ಪ್ರಾಂತ್ಯಗಳು ನನಗಾಗಿ ಕಾದಿವೆ. ದೊಡ್ಡ ಸರಕು ಸಾಗಿಸುವ ಹಡಗುಗಳು ಹೊರಡಲು ತಯಾರಾಗಿವೆ. ಈ ಹಡಗುಗಳು ದೂರ ಪ್ರಾಂತ್ಯದಲ್ಲಿರುವ ನಿನ್ನ ಮಕ್ಕಳನ್ನು ಕರೆತರಲು ತಯಾರಾಗಿವೆ. ಅವರು ಬೆಳ್ಳಿಬಂಗಾರಗಳನ್ನು ತಮ್ಮೊಂದಿಗೆ ತಂದು ಇಸ್ರೇಲಿನ ಪರಿಶುದ್ಧನಾದ ಯೆಹೋವನನ್ನು ಘನಪಡಿಸುವರು. ಯೆಹೋವನು ನಿನಗೆ ಆಶ್ಚರ್ಯಕರವಾದ ಸಂಗತಿಗಳನ್ನು ಮಾಡುವನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ9 ನಿಶ್ಚಯವಾಗಿ ದ್ವೀಪಗಳು, ತಾರ್ಷೀಷಿನ ಹಡಗುಗಳು ಮೊದಲಾಗಿ ನನಗೋಸ್ಕರ ದೂರದಿಂದ ನಿನ್ನ ಪುತ್ರರನ್ನು ತಮ್ಮ ಬೆಳ್ಳಿಬಂಗಾರದ ಸಹಿತವಾಗಿ ನಿನ್ನ ದೇವರಾದ ಯೆಹೋವ ದೇವರ ಬಳಿಗೂ, ನಿನ್ನನ್ನು ವೈಭವದಿಂದ ಶೃಂಗರಿಸಿರುವ ಇಸ್ರಾಯೇಲಿನ ಪರಿಶುದ್ಧನ ಬಳಿಗೂ ತರುವುದರಲ್ಲಿ ಮುಂದಾಗುತ್ತಿವೆ. ಅಧ್ಯಾಯವನ್ನು ನೋಡಿ |
ಸರ್ವೇಶ್ವರ ಇಂತೆನ್ನುತ್ತಾರೆ: “ಸಿಯೋನ್ ನಗರಿಯೇ, ಎದ್ದು ಒಕ್ಕಣೆಮಾಡು. ಇದಕ್ಕಾಗಿ ನಿನ್ನ ಕೊಂಬನ್ನು ಕಬ್ಬಿಣವಾಗಿಸುವೆನು. ನಿನ್ನ ಗೊರಸನ್ನು ಕಂಚನ್ನಾಗಿ ಮಾಡುವೆನು. ಅನೇಕ ರಾಷ್ಟ್ರಗಳನ್ನು ನೀನು ತುಳಿದು ಧ್ವಂಸಮಾಡುವೆ. ಅವುಗಳನ್ನು ಕೊಳ್ಳೆಹೊಡೆದು ತಂದ ಸ್ವತ್ತನ್ನು ಸರ್ವೇಶ್ವರಸ್ವಾಮಿಗೆ ಮೀಸಲಾಗಿಡುವೆ. ಅವುಗಳಿಂದ ಬಂದ ಆಸ್ತಿಯನ್ನು ಲೋಕದೊಡೆಯನಿಗೆ ಪ್ರತ್ಯೇಕಿಸಿಡುವೆ.”