Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 59:9 - ಕನ್ನಡ ಸತ್ಯವೇದವು C.L. Bible (BSI)

9 ಆಗ ಜನರು ಹೀಗೆನ್ನುತ್ತಾರೆ : ಈ ಕಾರಣದಿಂದಲೇ ನ್ಯಾಯನಿರ್ಣಯವು ನಮ್ಮಿಂದ ದೂರವಾಗಿದೆ, ಸದ್ಧರ್ಮವು ನಮಗೆ ದೊರಕದೆ ಇದೆ. ಬೆಳಕಿಗಾಗಿ ಕಾದಿರುವ ನಮ್ಮನ್ನು ಕತ್ತಲು ಆವರಿಸಿದೆ. ಜ್ಯೋತಿಯನ್ನು ನಿರೀಕ್ಷಿಸುತ್ತಿರುವ ನಮ್ಮನ್ನು ಅಂಧಕಾರವೇ ಬೆನ್ನಟ್ಟುತ್ತಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9 ಆದಕಾರಣ ಯೆಹೋವನ ನ್ಯಾಯನಿರ್ಣಯವು ನಮಗೆ ದೂರವಾಗಿದೆ. ಆತನ ರಕ್ಷಣಾಧರ್ಮದ ಕಾರ್ಯವು ನಮಗೆ ಲಭಿಸುವುದಿಲ್ಲ; ಬೆಳಕನ್ನು ಎದುರುನೋಡುತ್ತಿರುವ ನಮ್ಮನ್ನು ಕತ್ತಲೆಯೇ ಆವರಿಸಿದೆ, ಜ್ಯೋತಿಯನ್ನು ನಿರೀಕ್ಷಿಸುತ್ತಿರುವ ನಾವು ಅಂಧಕಾರದಲ್ಲೇ ನಡೆಯುತ್ತೇವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

9 ಆದಕಾರಣ [ಯೆಹೋವನ] ನ್ಯಾಯನಿರ್ಣಯವು ನಮಗೆ ದೂರವಾಗಿದೆ. [ಆತನ] ರಕ್ಷಣಧರ್ಮದ ಕಾರ್ಯವು ನಮಗೆ ಸಂಧಿಸುವದಿಲ್ಲ; ಬೆಳಕನ್ನು ಎದುರುನೋಡುತ್ತಿರುವ ನಮ್ಮನ್ನು ಕತ್ತಲೆಯೇ ಆವರಿಸಿದೆ, ಜ್ಯೋತಿಯನ್ನು ನಿರೀಕ್ಷಿಸುತ್ತಿರುವ ನಾವು ಅಂಧಕಾರದಲ್ಲೇ ನಡೆಯುತ್ತೇವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

9 ಎಲ್ಲಾ ನ್ಯಾಯನೀತಿಗಳು ಇಲ್ಲವಾಗಿವೆ. ನಮ್ಮ ಬಳಿಯಲ್ಲಿ ಅಂಧಕಾರವು ಇರುವದರಿಂದ ನಾವು ಬೆಳಕಿಗಾಗಿ ಕಾಯಬೇಕಾಗಿದೆ. ಪ್ರಕಾಶಮಾನವಾದ ಬೆಳಕಿಗಾಗಿ ಆಶಿಸುತ್ತಿರುವಾಗ ನಮಗೆ ಸಿಕ್ಕಿದ್ದು ಕೇವಲ ಕತ್ತಲೆಯೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

9 ಆದಕಾರಣ ನ್ಯಾಯ ನಿರ್ಣಯವು ನಮಗೆ ದೂರವಾಗಿದೆ. ನೀತಿಯು ನಮ್ಮನ್ನು ತಲುಪುವುದಿಲ್ಲ, ಬೆಳಕನ್ನು ಎದುರು ನೋಡುತ್ತಿರುವ ನಮ್ಮನ್ನು ಕತ್ತಲೆಯೇ ಆವರಿಸಿದೆ; ಜ್ಯೋತಿಯನ್ನು ನಿರೀಕ್ಷಿಸುತ್ತಿರುವ ನಾವು ಅಂಧಕಾರದಲ್ಲಿಯೇ ನಡೆಯುತ್ತೇವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 59:9
21 ತಿಳಿವುಗಳ ಹೋಲಿಕೆ  

ಗುರುಗುಟ್ಟುತಿಹರು ಯೆಹೂದ್ಯರ ಮೇಲೆ ಭೋರ್ಗರೆಯುವ ಸಮುದ್ರದಂತೆ; ನಾಡಿನೆಲ್ಲೆಡೆ ಕವಿದಿಹುದು ಗಾಡಾಂಧಕಾರ; ತಾಂಡವವಾಡುತಿಹುದು ನೋಡಿದೆಡೆ ದುಃಖದುಗುಡ; ಮೋಡ ಕವಿದು ಇರುಳಾಗಿಹುದು ಹಗಲೊಳು ಕೂಡ !


ನಾನು ಒಳಿತನು ನಿರೀಕ್ಷಿಸಿದಾಗ ಕೇಡು ಬಂದೊದಗಿತು ಬೆಳಕನು ಎದುರು ನೋಡುವಾಗ ಕತ್ತಲು ಕವಿಯಿತು.


ಎಲ್ಲವೂ ಶಾಂತ, ಸುಭದ್ರವೆಂದು ಜನರು ಎಣಿಸುತ್ತಿರುವಾಗಲೇ, ಗರ್ಭಿಣಿಗೆ ಪ್ರಸವವೇದನೆ ಉಂಟಾಗುವಂತೆ, ವಿನಾಶವು ಫಕ್ಕನೆ ಅವರ ಮೇಲೆ ಬಂದೆರಗುವುದು. ಇದರಿಂದ ಯಾರೂ ತಪ್ಪಿಸಿಕೊಳ್ಳುವಂತಿಲ್ಲ.


ಕೇಡನ್ನು ನೋಡಲಾರದಷ್ಟು ನಿಷ್ಕಳಂಕ ನಿಮ್ಮ ಕಣ್ಣು. ಕೆಡುಕನ್ನು ಸಹಿಸಲಾಗದಸ್ಟು ಪವಿತ್ರರು ನೀವು. ಇಂತಿರಲು ಕೆಡುಕನ್ನು ನೋಡಿಕೊಂಡಿರುವಿರೇಕೆ? ದುಷ್ಟನು ಶಿಷ್ಟನಾದವನನ್ನು ಕಬಳಿಸುತ್ತಿರುವುದನ್ನು ನೋಡಿ ಸುಮ್ಮನಿರುವಿರೇಕೆ?


ಮಾರೋತಿನ ನಿವಾಸಿಗಳು ತಮ್ಮ ಸಂಕಟ ಪರಿಹಾರವಾಗುವುದೋ ಇಲ್ಲವೋ ಎಂದು ವೇದನೆಪಡುತ್ತಾರೆ: ಏಕೆಂದರೆ ಸ್ವಾಮಿಯಿಂದ ಬಂದ ವಿಪತ್ತು ಜೆರುಸಲೇಮಿನ ಪುರದ್ವಾರವನ್ನು ಮುಟ್ಟಿದೆ.


“ಸ್ವಾಮೀ, ನೀವು ಜುದೇಯವನ್ನು ಸಂಪೂರ್ಣವಾಗಿ ತ್ಯಜಿಸಿಬಿಟ್ಟಿರೊ? ಸಿಯೋನಿನ ಬಗ್ಗೆ ನಿಮಗೆ ಮನಃಪೂರ್ವಕವಾದ ಅಸಹ್ಯ ಹುಟ್ಟಿದೆಯೊ? ಗುಣವಾಗದಂಥ ಪೆಟ್ಟನ್ನು ನಮಗೆ ಕೊಟ್ಟಿರುವಿರಿ ಏಕೆ? ಸುಖವನ್ನು ನಿರೀಕ್ಷಿಸಿದೆವು, ಸಿಗಲಿಲ್ಲ ನಮಗೆ ಯಾವ ಫಲ. ಸುಕ್ಷೇಮವನ್ನು ಎದುರು ನೋಡಿದೆವು, ಇಗೋ ಬಂದೊದಗಿದೆ ಸಂಕಟ.


ಸುಖಶಾಂತಿಯನ್ನು ನಿರೀಕ್ಷಿಸಿದೆವು, ಯಾವ ಒಳಿತೂ ಸಿಗಲಿಲ್ಲ. ಸುಕ್ಷೇಮ ಕಾಲವನ್ನು ಎದುರುನೋಡಿದೆವು. ನಮಗೆ ಗಿಟ್ಟಿದ್ದು ಭಯಭ್ರಾಂತಿ ಮಾತ್ರ.


ಬುದ್ಧಿಹೀನರು, ಮಂದಮತಿಗಳು, ಕತ್ತಲಲಿ ನಡೆವವರು ನೀವು I ಇದರಿಂದಲೆ ಕದಲುತ್ತಿರುವುವು ಧರೆಯ ಅಸ್ತಿವಾರಗಳು II


ದುರ್ಜನರ ಮಾರ್ಗ ಕಗ್ಗತ್ತಲಿನ ಹಾಗೆ, ಎಡವಿಬಿದ್ದ ಸ್ಥಳವೇ ತಿಳಿಯದು ಅವರಿಗೆ.


ಜನರು ಘೋರ ಕಷ್ಟಗಳಿಗೆ ಒಳಗಾಗುವರು. ಹಸಿದು ದೇಶದಲ್ಲೆಲ್ಲ ಅಲೆದಾಡುವರು. ಹಸಿವಿನಿಂದ ರೋಷಗೊಂಡು ಅರಸನನ್ನೂ ದೇವರನ್ನೂ ಹಳಿಯುವರು.


ಆಕಾಶವನ್ನು ದಿಟ್ಟಿಸಿ ನೋಡಿದರೂ ಭೂಮಿಯನ್ನು ದುರುಗುಟ್ಟಿ ನೋಡಿದರೂ ಅವರಿಗೆ ಕಾಣುವುದು ಕಷ್ಟಸಂಕಟಗಳ ಕತ್ತಲೆ, ಭಯಂಕರವಾದ ಕಾಳಗತ್ತಲೆಯಲ್ಲದೆ ಮತ್ತೇನೂ ಅಲ್ಲ. ಅಂಥ ಕರಾಳ ಕತ್ತಲೆಯೊಳಗೆ ಅವರನ್ನು ದೂಡಲಾಗುವುದು.


ಶಾಂತಿಸಮಾಧಾನದ ಮಾರ್ಗವನ್ನು ನೀವು ಅರಿಯಿರಿ. ನಿಮ್ಮ ನಡತೆಯಲ್ಲಿ ನ್ಯಾಯನೀತಿ ಎಂಬುದು ಇಲ್ಲ. ನಿಮ್ಮ ಮಾರ್ಗ ಅಂಕುಡೊಂಕಾಗಿದೆ, ಅವುಗಳಲ್ಲಿ ನಡೆಯುವವನು ಶಾಂತಿಸಮಾಧಾನವನ್ನು ಮುಟ್ಟನು.


ಗುರುಗುಟ್ಟುತ್ತೇವೆ ಕರಡಿಗಳಂತೆ, ಮುಲುಗುತ್ತೇವೆ ಪಾರಿವಾಳಗಳಂತೆ. ನ್ಯಾಯನಿರ್ಣಯವನ್ನು ಎದುರುನೋಡಿದರೂ ಅದು ನಮಗೆ ಸಿಗದಿದೆ; ಜೀವೋದ್ಧಾರವನ್ನು, ನಿರೀಕ್ಷಿಸಿದರೂ ಅದು ನಮ್ಮಿಂದ ದೂರವಿದೆ.


ನ್ಯಾಯವನ್ನು ಓಡಿಸಿಬಿಟ್ಟಿದ್ದೇವೆ; ನೀತಿ ಸಮೀಪಿಸದಂತೆ ಮಾಡಿದ್ದೇವೆ. ಸತ್ಯವು ಸಾರ್ವಜನಿಕ ಚೌಕದಲ್ಲಿ ಬಿದ್ದುಹೋಗಿದೆ; ಸದಾಚಾರವು ಪ್ರವೇಶಿಸಲಾಗದಿದೆ.


ನಿಮ್ಮ ದೇವರಾದ ಸರ್ವೇಶ್ವರನಿಗೆ ಸಲ್ಲಿಸಿ ಗೌರವವನ್ನು ಇಲ್ಲವಾದರೆ ಆತ ಬರಮಾಡುವನು ಸ್ವಲ್ಪಕಾಲದಲ್ಲೇ ಕತ್ತಲನ್ನು. ನಿಮ್ಮ ಕಾಲುಗಳು ಮುಗ್ಗರಿಸುವುವು ಮಬ್ಬಿನ ಗುಡ್ಡಗಳ ನಡುವೆ.


ಆತ ನನ್ನನ್ನು ಕರೆದೊಯ್ದು ಬೆಳಕಿನಲ್ಲಿ ಅಲ್ಲ, ಕತ್ತಲಲ್ಲೇ ನಡೆಸಿದ.


ಕುರುಡರಂತೆ ಬೀದಿಗಳಲ್ಲಿ ಅಲೆಯುತ್ತಿಹರು ಆ ಯಾಜಕರು ಮತ್ತು ಪ್ರವಾದಿಗಳು. ಅವರ ಬಟ್ಟೆಯನ್ನೂ ಯಾರೂ ಮುಟ್ಟರು ಏಕೆಂದರೆ ರಕ್ತದಿಂದ ಅವರು ಕಳಂಕಿತರಾಗಿಹರು.


ಒಡೆಯರಾದ ಸರ್ವೇಶ್ವರ ಇಂತೆನ್ನುತ್ತಾರೆ: “ಆ ದಿನದಂದು ನಡುಮಧ್ಯಾಹ್ನದಲ್ಲಿ ಸೂರ್ಯನನ್ನು ಮುಳುಗಿಸುವೆನು. ಹಾಡುಹಗಲಲ್ಲೇ ಭೂಮಿಯನ್ನು ಕತ್ತಲಾಗಿಸುವೆನು.


ನಾನು ಮುಂದೆ ಹೋಗದಂತೆ ದೇವರು ಅಡ್ಡಗೋಡೆ ಹಾಕಿದ್ದಾನೆ ನನ್ನ ಹಾದಿಗೆ ಕತ್ತಲೆ ಕವಿಯುವಂತೆ ಮಾಡಿದ್ದಾನೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು