Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 59:4 - ಕನ್ನಡ ಸತ್ಯವೇದವು C.L. Bible (BSI)

4 ನ್ಯಾಯಸ್ಥಾನದಲ್ಲಿ ನ್ಯಾಯಾನುಸಾರ ವಾದಿಸುವವನು ಯಾರೂ ಇಲ್ಲ; ಸತ್ಯಾನುಸಾರ ತೀರ್ಪುಕೊಡುವವನು ಯಾರೂ ಇಲ್ಲ; ನೀವು ಶೂನ್ಯವಾದುದ್ದನ್ನೇ ನಂಬುತ್ತೀರಿ, ಅಬದ್ಧವಾದುದನ್ನೇ ಆಡುತ್ತೀರಿ, ಕೇಡನ್ನು ಬಸಿರಿಸಿ ಅಕ್ರಮವನ್ನು ಹೆರುತ್ತೀರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ಇವರಲ್ಲಿ ಯಾರೂ ನ್ಯಾಯಸ್ಥಾನಕ್ಕೆ ನ್ಯಾಯವಾಗಿ ಹೋಗುವುದಿಲ್ಲ, ಯಾರೂ ಸತ್ಯವಾಗಿ ವಾದಿಸುವುದಿಲ್ಲ; ಇವರು ಶೂನ್ಯವಾಗಿರುವುದನ್ನು ನಂಬಿಕೊಂಡು ಸುಳ್ಳನ್ನಾಡುತ್ತಾರೆ; ಹಿಂಸೆಯನ್ನು ಗರ್ಭಧರಿಸಿ ಶ್ರಮೆಯನ್ನು ಹೆರುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4 [ಇವರಲ್ಲಿ] ಯಾರೂ ನ್ಯಾಯವಾಗಿ ನ್ಯಾಯಾಸ್ಥಾನಕ್ಕೆ ಹೋಗುವದಿಲ್ಲ, ಯಾರೂ ಸತ್ಯವಾಗಿ ವಾದಿಸುವದಿಲ್ಲ; ಇವರು ಶೂನ್ಯವಾಗಿರುವದನ್ನು ನಂಬಿಕೊಂಡು ಅಬದ್ಧವನ್ನಾಡುತ್ತಾರೆ; ಹಿಂಸೆಯನ್ನು ಗರ್ಭಧರಿಸಿ ಶ್ರಮೆಯನ್ನು ಹೆರುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ನೆರೆಯವನ ಬಗ್ಗೆ ಯಾರೂ ಸತ್ಯವನ್ನಾಡುವದಿಲ್ಲ. ಜನರು ನ್ಯಾಯಾಲಯಗಳಲ್ಲಿ ಪರಸ್ಪರ ವ್ಯಾಜ್ಯ ಮಾಡುವರು. ತಾವು ಗೆಲ್ಲಬೇಕೆಂಬ ಉದ್ದೇಶದಿಂದ ಸುಳ್ಳುಸಾಕ್ಷಿಯ ಮೇಲೆ ಅವಲಂಬಿಸುವರು. ಅವರು ಒಬ್ಬರ ಮೇಲೊಬ್ಬರು ಸುಳ್ಳು ಹೇಳುತ್ತಾರೆ; ಅವರು ಕೇಡಿನಿಂದ ತುಂಬಿದವರಾಗಿದ್ದು ಕೇಡನ್ನೇ ಹೆರುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

4 ನೀತಿಗೋಸ್ಕರ ಕರೆಯುವವನು ಯಾವನೂ ಇಲ್ಲ, ಸತ್ಯಕ್ಕೋಸ್ಕರ ನ್ಯಾಯ ವಿಚಾರಿಸುವವನು ಒಬ್ಬನೂ ಇಲ್ಲ. ವ್ಯರ್ಥತ್ವದಲ್ಲಿ ವಿಶ್ವಾಸ ಇಡುತ್ತಾರೆ. ಸುಳ್ಳನ್ನು ಮಾತನಾಡುತ್ತಾರೆ. ಕೇಡನ್ನು ಗರ್ಭಧರಿಸಿ, ಅಕ್ರಮವನ್ನು ಹೆರುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 59:4
36 ತಿಳಿವುಗಳ ಹೋಲಿಕೆ  

ಉದರದಲ್ಲಿ ವಂಚನೆಯನ್ನು ಗರ್ಭಧರಿಸುವರು ಕೇಡನು ಹಡೆವೆನೆಂದೆಣಿಸಿ ಶೂನ್ಯವ ಹೆರುವುದ ನೋಡು.


ದುರಿಚ್ಛೆ ಗರ್ಭಧರಿಸಿ ಪಾಪಕ್ಕೆ ಜನ್ಮವೀಯುತ್ತದೆ; ಪಾಪವು ಪೂರ್ತಿಯಾಗಿ ಬೆಳೆದು ಮರಣವನ್ನು ಹಡೆಯುತ್ತದೆ.


ನಿಷ್ಪ್ರಯೋಜಕವಾದ ಹಾಗೂ ಮೋಸದ ಮಾತುಗಳಲ್ಲಿ ನೀವು ಭರವಸೆ ಇಟ್ಟಿದ್ದೀರಿ.


‘ಇದು ಸರ್ವೇಶ್ವರನ ಗರ್ಭಗುಡಿ, ಸರ್ವೇಶ್ವರನ ಗರ್ಭಗುಡಿ, ಸರ್ವೇಶ್ವರನ ಗರ್ಭಗುಡಿ, (ಆದುದರಿಂದ ಎಲ್ಲ ಸುಭದ್ರ)’ ಎಂಬ ಮೋಸಕರ ಮಾತುಗಳಲ್ಲಿ ಭರವಸೆ ಇಡಬೇಡಿ.


ತಮ್ಮ ಹಾಸಿಗೆಯಲ್ಲೇ ಕುತಂತ್ರವನ್ನು ಕಲ್ಪಿಸಿಕೊಂಡು ಕೇಡನ್ನು ಬಗೆಯುವವರಿಗೆ ಧಿಕ್ಕಾರ! ಬೆಳಗಾದದ್ದೇ ಅವರು ಕುತಂತ್ರವನ್ನು ಕಾರ್ಯಗತ ಮಾಡುತ್ತಾರೆ. ಆ ಸಾಮರ್ಥ್ಯ ಅವರ ಕೈಯಲ್ಲಿದೆ.


ಆದಕಾರಣ, ಇಸ್ರಯೇಲಿನ ಪರಮಪಾವನ ಸ್ವಾಮಿ ಹೀಗೆನ್ನುತ್ತಾರೆ : “ನೀವು ನನ್ನ ಮಾತನ್ನು ತಿರಸ್ಕರಿಸಿ ಹಿಂಸೆ ಕುತಂತ್ರಗಳನ್ನೇ ನೆಚ್ಚಿಕೊಂಡಿದ್ದೀರಿ.


ಕೇಡು ಮಾಡದಿದ್ದರೆ ಆ ದುರುಳರಿಗೆ ನಿದ್ರೆಬಾರದು, ವಂಚಿಸಿ ಬೀಳಿಸದಿದ್ದರೆ ಅವರಿಗೆ ನಿದ್ರೆ ಹತ್ತದು.


ಸರ್ವೇಶ್ವರ ಸ್ವಾಮಿ ಇದನ್ನು ನೋಡಿದ್ದಾರೆ. ನ್ಯಾಯವೇ ಇಲ್ಲದ್ದನ್ನು ಕಂಡು ಖಿನ್ನರಾಗಿದ್ದಾರೆ. ಮುಂದೆ ಬಂದು ಉದ್ಧಾರಮಾಡಬಲ್ಲ ವ್ಯಕ್ತಿ ಯಾರೂ ಇಲ್ಲದಿರುವುದನ್ನು ಅರಿತು ಸ್ತಬ್ಧರಾಗಿದ್ದಾರೆ. ಎಂತಲೇ, ಅವರು ಸ್ವಂತ ಶಕ್ತಿಯನ್ನು ಪ್ರಯೋಗಿಸಿ ಜಯಪ್ರದರಾಗುವರು. ನ್ಯಾಯನೀತಿಯೇ ಅವರಿಗೆ ಆಧಾರ.


ಏಕೆಂದರೆ ನಿಮ್ಮ ಕೈಗಳು ರಕ್ತಸಿಕ್ತವಾದುವು, ನಿಮ್ಮ ಬೆರಳುಗಳು ಅಕ್ರಮದಿಂದ ಮಲಿನವಾಗಿವೆ, ನಿಮ್ಮ ತುಟಿಗಳು ಸುಳ್ಳು ನುಡಿಯುತ್ತವೆ. ನಿಮ್ಮ ನಾಲಿಗೆ ಕೆಡುಕನ್ನು ಗೊಣಗುತ್ತದೆ.


ಹಿಂಸಾಚಾರದ ಸಂಪಾದನೆಯನು ನೆಚ್ಚಬೇಡಿ I ಸೂರೆಮಾಡಿ ಸೇರಿಕೊಂಡುದನು ಕೊಚ್ಚಬೇಡಿ I ಹೆಚ್ಚಿದ ಆಸ್ತಿಪಾಸ್ತಿಗೆ ಮನಸ್ಸು ಹಚ್ಚಬೇಡಿ II


ಜೆರುಸಲೇಮಿನ ಜನರೇ, ಬೀದಿಗಳಲ್ಲಿ ಅತ್ತಿತ್ತ ಓಡಾಡಿ ನೋಡಿ ಅಲ್ಲಿನ ಚೌಕಗಳಲ್ಲಿ ಹುಡುಕಾಡಿ ನೋಡಿ. ನೀತಿಯನ್ನು ಕೈಗೊಂಡು ಸತ್ಯವನ್ನರಸುವವನು ಒಬ್ಬನಾದರೂ ಇದ್ದಾನೆಯೇ? ಅಂಥ ಸತ್ಪುರುಷ ಸಿಕ್ಕುತ್ತಾನೆಯೆ ಎಂಬುದನ್ನು ನೀವೇ ನಿಶ್ಚಯಿಸಿರಿ; ಸಿಕ್ಕಿದ್ದೇ ಆದರೆ ಸರ್ವೇಶ್ವರ ಸ್ವಾಮಿ ಆ ನಗರವನ್ನು ಕ್ಷಮಿಸುವರು.


ದಬ್ಬುವ ದುರಾಲೋಚನೆ ಅವರದು ಗಾದಿಯಿಂದ I ಅಬದ್ಧವಾಡುವುದೆಂದರೊ ಹಬ್ಬದಾನಂದ I ಹರಸುವರು ಅಧರದಿಂದ, ಶಪಿಸುವರು ಉದರದಿಂದ II


ವ್ಯರ್ಥವಾದುದನು ನಂಬಿ ಅವನು ಮೋಸಹೋಗದಿರಲಿ ಇಲ್ಲವಾದರೆ ಅವನಿಗೆ ಸಿಗುವ ಪ್ರತಿಫಲ ವ್ಯರ್ಥವೇ ಸರಿ.


ಇಸ್ರಯೇಲ್ ಮನೆತನವೇ ಸೇನಾಧೀಶ್ವರ ಸರ್ವೇಶ್ವರ ನೆಟ್ಟ ಆ ದ್ರಾಕ್ಷಿಯ ತೋಟ. ಜುದೇಯದ ಜನರೇ ಆತ ನಾಟಿಮಾಡಿದಾ ಸುಂದರ ಸಸಿತೋಟ. ನ್ಯಾಯನೀತಿಯನು ನಿರೀಕ್ಷಿಸಿದನಾತ ಆದರೆ ಸಿಕ್ಕಿತವನಿಗೆ ರಕ್ತಪಾತ ! ಸತ್ಸಂಬಂಧವನು ಎದುರುನೋಡಿದನಾತ ಇಗೋ, ದಕ್ಕಿತವನಿಗೆ ದುಃಖಿತರ ಆರ್ತನಾದ !


ಅಕ್ರಮವೆಂಬ ಹಗ್ಗಗಳಿಂದ ಅಪರಾಧ ಎಂಬ ತೇರನ್ನು ಎಳೆಯುವವರಿಗೆ ಧಿಕ್ಕಾರ !


ಅನ್ಯಾಯವಾದ ನಿಬಂಧನೆಗಳನ್ನು ಕ್ರೂರವಾದ ಕಾನೂನುಗಳನ್ನು ರಚಿಸುವ ನಿಮಗೆ ಧಿಕ್ಕಾರ !


ಪ್ರಸವವೇದನೆಪಟ್ಟು ನಾವು ಹಡೆದದ್ದು ಗಾಳಿಯನ್ನೆ ಆಗಲಿಲ್ಲ ಜಗಕೆ ನಮ್ಮಿಂದ ಯಾವ ರಕ್ಷಣೆ ನೀಡಲಿಲ್ಲ ನಾವು ಜನ್ಮ ಲೋಕನಿವಾಸಿಗಳಿಗೆ.


ನೀವು ನಿಮ್ಮನಿಮ್ಮೊಳಗೆ : “ಮೃತ್ಯುವಿನೊಂದಿಗೆ ಮುಚ್ಚಳಿಕೆ, ಪಾತಾಳದೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ. ಮಹಾವಿಪತ್ತು ನಾಡನ್ನು ಹಾದುಹೋಗುವಾಗ, ಅದು ನಮ್ಮನ್ನು ಮುಟ್ಟದು. ನಾವು ಅಸತ್ಯವನ್ನು ಆಶ್ರಯಿಸಿಕೊಂಡಿದ್ದೇವೆ. ಮೋಸವನ್ನು ಮರೆಹೊಕ್ಕಿದ್ದೇವೆ” ಎಂದು ಕೊಚ್ಚಿಕೊಳ್ಳುತ್ತಿದ್ದೀರಿ.


ಏಕೆಂದರೆ ಭಯೋತ್ಪಾದಕರು ನಿಶ್ಶೇಷರಾಗುವರು, ಧರ್ಮನಿಂದಕರು ನಿರ್ನಾಮವಾಗುವರು.


ಇವರು ದಂಗೆ ಏಳುವ ಜನರು. ಸುಳ್ಳಾಡುವ ಪೀಳಿಗೆ, ಸರ್ವೇಶ್ವರನ ಉಪದೇಶಕ್ಕೆ ಕಿವಿಗೊಡದ ಸಂತಾನ,


ನೀವು ಹೊಟ್ಟನ್ನು ಗರ್ಭದಲ್ಲಿ ಬೆಳೆಸಿ ಕೂಳೆಯನ್ನು ಹೆರುವಿರಿ. ನಿಮ್ಮ ನಿಟ್ಟುಸಿರು ನಿಮ್ಮನ್ನೇ ನುಂಗುವ ಬೆಂಕಿಯಾಗುವುದು.


ಅಂಥವನು ಮುಕ್ಕುವುದು ಬೂದಿಯನ್ನೇ; ಅವನ ಹೃದಯ ಮೋಸಗೊಂಡು ಅವನನ್ನು ತಪ್ಪುದಾರಿಗೆ ಎಳೆದಿದೆ. ಎಂದೇ, ಅವನು ಅಂಗೈ ಹುಣ್ಣಿನಂತಿರುವ ಆ ಸುಳ್ಳನ್ನೂ ಅರಿಯದೆ ಇದ್ದಾನೆ; ತನ್ನನ್ನೇ ರಕ್ಷಿಸಿಕೊಳ್ಳಲು ಆಗದೆ ಇದ್ದಾನೆ.


ಕೇಡನು ನೀ ಮಾಡಿದೆ ಭಯಪಡದೆ ನೋಡರಾರೂ ಎಂದುಕೊಂಡಿದ್ದೆ, ನೀನು ಜ್ಞಾನಿ ವಿವೇಕಿಯೆಂದು ತಿಳಿದುಕೊಂಡೇ ಮರುಳಾದೆ; ‘ಏಕೈಕಳು ನಾನೇ, ಇನ್ನಾರೂ ಇಲ್ಲ’ ಎಂದುಕೊಂಡೆ.


ಸತ್ಯವು ಅದೃಶ್ಯವಾಗಿದೆ. ಕೇಡನ್ನು ಕೈಬಿಟ್ಟವನೇ ಖೂನಿಗೆ ಗುರಿಯಾಗುತ್ತಾನೆ.”


ನಿಮ್ಮ ನಾಮಸ್ಮರಣೆ ಮಾಡುವವನು ಯಾರೂ ಇಲ್ಲ. ನಿಮ್ಮ ಆಶ್ರಯ ಕೋರುವ ಆಸಕ್ತನು ಎಲ್ಲಿಯೂ ಇಲ್ಲ. ಏಕೆಂದರೆ ನೀವು ನಮಗೆ ವಿಮುಖರಾಗಿದ್ದೀರಿ. ನಮ್ಮ ಪಾಪಗಳ ವಶಕ್ಕೆ ನಮ್ಮನ್ನು ಬಿಟ್ಟುಬಿಟ್ಟಿದ್ದೀರಿ.


“ಮೋವಾಬೇ, ನಿನ್ನ ಸಾಧನೆಗಳಲ್ಲೇ, ಧನರಾಶಿಗಳಲ್ಲೇ ಭರವಸೆಯಿಟ್ಟೆ. ಆದುದರಿಂದ ನೀನು ಇದೀಗಲೆ ಶತ್ರುಗಳ ಕೈವಶವಾಗುವೆ. ಕೆಮೋಷ್ ಎಂಬ ನಿನ್ನ ದೇವತೆಯೂ ಅದರ ಭಕ್ತ ಯಾಜಕರೂ ಹಾಗೂ ರಾಜ್ಯಾಧಿಕಾರಿಗಳು ಸೆರೆಗೆ ಹೋಗುವರು ಒಟ್ಟಿಗೆ.


ಇಸ್ರಯೇಲಿನವರೇ, ಸರ್ವೇಶ್ವರಸ್ವಾಮಿಯ ವಾಕ್ಯವನ್ನು ಆಲಿಸಿರಿ: “ಈ ದೇಶದಲ್ಲಿ ಸತ್ಯ, ಪ್ರೀತಿ, ಭಕ್ತಿ ಎಂಬುದೇ ಇಲ್ಲ. ಇಲ್ಲಿನ ನಿವಾಸಿಗಳ ಮೇಲೆ ಸರ್ವೇಶ್ವರ ಆಪಾದನೆ ಹೊರಿಸಿದ್ದಾರೆ.


ಗುಣಿಯನು ತೋಡಿದನು; ಮಣ್ಣನು ಹೊರದೂಡಿದನು I ತೋಡಿದ ಗುಣಿಯಲಿ ತಾನೆ ತಟ್ಟನೆ ಬೀಳುವನು II


ಕಪಟವಾಡುವ ತುಟಿಗಳನು ಪ್ರಭು ಕಡಿದುಬಿಡಲಿ I ಬಡಾಯಿಕೊಚ್ಚುವ ಜಿಹ್ವೆಯನು ಕತ್ತರಿಸಿಬಿಡಲಿ II


ಯೆಹೂದ್ಯರೂ ವಕೀಲನಿಗೆ ಬೆಂಬಲವಾಗಿ ಅವನು ಹೇಳಿದ್ದೆಲ್ಲಾ ಸತ್ಯವೆಂದು ಸಾಧಿಸಿದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು