Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 49:8 - ಕನ್ನಡ ಸತ್ಯವೇದವು C.L. Bible (BSI)

8 ತಮ್ಮ ಪ್ರಜೆಗೆ ಇಂತೆನ್ನುತ್ತಾರೆ ಸರ್ವೇಶ್ವರ ಸ್ವಾಮಿ : “ನಿನಗೆ ದಯಪಾಲಿಸುವೆನು ಸದುತ್ತರವನು ಪ್ರಸನ್ನತೆಯ ಕಾಲದಲಿ ಸಹಾಯ ನೀಡುವೆನು ರಕ್ಷಣೆಯ ದಿನದಲಿ ನಿನ್ನನು ಕಾಪಾಡಿ ನೇಮಿಸುವೆನು ಜನತೆಗೆ ಸ್ಥಿರ ಒಡಂಬಡಿಕೆಯಾಗಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

8 ಇದೇ ಯೆಹೋವನ ನುಡಿ, “ಈ ಪ್ರಸನ್ನತೆಯ ಕಾಲದಲ್ಲಿ ನಿನಗೆ ಸದುತ್ತರವನ್ನು ದಯಪಾಲಿಸಿದ್ದೇನೆ. ಈ ರಕ್ಷಣೆಯ ದಿನದಲ್ಲಿ ನಿನಗೆ ಸಹಾಯಮಾಡಿದ್ದೇನೆ. ನಾನು ನಿನ್ನನ್ನು ಕಾಪಾಡುತ್ತಾ ನನ್ನ ಜನರಿಗೆ ಒಡಂಬಡಿಕೆಯ ಆಧಾರವನ್ನಾಗಿ ನೇಮಿಸಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

8 ಇದೇ ಯೆಹೋವನ ನುಡಿ - ಈ ಪ್ರಸನ್ನತೆಯ ಕಾಲದಲ್ಲಿ ನಿನಗೆ ಸದುತ್ತರವನ್ನು ದಯಪಾಲಿಸಿದ್ದೇನೆ, ಈ ರಕ್ಷಣೆಯ ದಿನದಲ್ಲಿ ನಿನಗೆ ಸಹಾಯಮಾಡಿದ್ದೇನೆ; ನಾನು ನಿನ್ನನ್ನು ಕಾಪಾಡುತ್ತಾ [ನನ್ನ] ಜನರಿಗೆ ಒಡಂಬಡಿಕೆಯ ಆಧಾರವನ್ನಾಗಿ ನೇವಿುಸಿ ಬಂದಿಗಳಿಗೆ -

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

8 ಯೆಹೋವನು ಹೇಳುವುದೇನೆಂದರೆ, “ನನ್ನ ದಯೆಯನ್ನು ತೋರಿಸಲು ಒಂದು ವಿಶೇಷ ಸಮಯವಿದೆ. ಆಗ ನಾನು ನಿನ್ನ ಪ್ರಾರ್ಥನೆಗೆ ಉತ್ತರ ಕೊಡುವೆನು. ನಿನ್ನನ್ನು ರಕ್ಷಿಸಲು ಒಂದು ವಿಶೇಷ ಸಮಯವಿದೆ. ಆಗ ನಾನು ನಿನಗೆ ಸಹಾಯ ಮಾಡುವೆನು, ನಿನ್ನನ್ನು ಕಾಪಾಡುವೆನು. ಜನರೊಂದಿಗೆ ನಾನು ಒಡಂಬಡಿಕೆ ಮಾಡಿಕೊಂಡಿದ್ದೇನೆ ಎಂಬುದಕ್ಕೆ ನೀನೇ ಸಾಕ್ಷಿಯಾಗಿರುವೆ. ದೇಶವು ಈಗ ನಾಶವಾಗಿದೆ, ಆದರೆ ಈ ಭೂಮಿಯು ಯಾರದಾಗಿತ್ತೋ ಅವರಿಗೆ ನೀನದನ್ನು ಹಿಂದಕ್ಕೆ ಕೊಡುವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

8 ಯೆಹೋವ ದೇವರು ಹೇಳುವುದೇನೆಂದರೆ: “ಪ್ರಸನ್ನತೆಯ ಕಾಲದಲ್ಲಿ ನಿನಗೆ ಸದುತ್ತರವನ್ನು ದಯಪಾಲಿಸಿದ್ದೇನೆ. ರಕ್ಷಣೆಯ ದಿನದಲ್ಲಿ ನಾನು ನಿನಗೆ ಸಹಾಯ ಮಾಡಿದ್ದೇನೆ. ನಾನು ನಿನ್ನನ್ನು ಕಾಪಾಡಿ, ಭೂಮಿಯನ್ನು ಸ್ಥಾಪಿಸುವುದಕ್ಕೂ, ಹಾಳಾಗಿರುವ ಸ್ಥಳಗಳನ್ನು ಸೊತ್ತಾಗಿ ಹೊಂದುವುದಕ್ಕೂ, ಜನರ ಒಡಂಬಡಿಕೆಯನ್ನಾಗಿಯೂ ನೇಮಿಸಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 49:8
31 ತಿಳಿವುಗಳ ಹೋಲಿಕೆ  

:ಸುಪ್ರಸನ್ನತೆಯ ಕಾಲದಲ್ಲಿ ನಿನ್ನನ್ನಾಲಿಸಿದೆನು; ಉದ್ಧಾರ ದಿನದಂದು ನಿನಗೆ ನೆರವಾದೆನು,” ಎಂದಿದ್ದಾರೆ ದೇವರು. ಇದೇ ಆ ಸುಪ್ರಸನ್ನತೆಯ ಕಾಲ. ಇದೇ ಆ ಉದ್ಧಾರದ ಸುದಿನ.


ಸರ್ವೇಶ್ವರ ಸ್ವಾಮಿಯಾದ ನಾನು ಕೈ ಹಿಡಿದು ಕಾದಿರಿಸುವೆನು ನಿನ್ನನು, ಕರೆದಿಹೆನು ನಿನ್ನನ್ನು ಸದ್ಧರ್ಮ ಸಾಧನೆಗಾಗಿ ಇತ್ತಿರುವೆನು ನಿನ್ನನು ಜನರಿಗೆ ಒಡಂಬಡಿಕೆಯಾಗಿ ನೇಮಿಸಿರುವೆನು ನಿನ್ನನು ರಾಷ್ಟ್ರಗಳಿಗೆ ಬೆಳಕಾಗಿ.


ಪ್ರಸನ್ನಕಾಲದಲ್ಲಿ ಪ್ರಭು, ನಾ ಮೊರೆಯಿಡುತ್ತಿರುವೆ ನಿನಗೆ I ಪ್ರೀತಿಮಯ ದೇವಾ, ಜೀವೋದ್ಧಾರಕ, ಸದುತ್ತರ ನೀಡೆನಗೆ II


ಹೊಸ ಒಡಂಬಡಿಕೆಯ ಮಧ್ಯಸ್ಥರಾದ ಯೇಸುಸ್ವಾಮಿಯ ಬಳಿಗೆ, ಹೇಬೆಲನ ರಕ್ತಕ್ಕಿಂತಲೂ ಅಮೋಘವಾಗಿ ಮೊರೆಯಿಡುವ ಪ್ರೋಕ್ಷಣಾರಕ್ತದ ಬಳಿಗೆ ನೀವು ಬಂದಿದ್ದೀರಿ.


ಮರಳಿ ಕಟ್ಟುವರಿವರು ಪಾಳುಬಿದ್ದ ಪುರಾತನ ಮನೆಗಳನು ಮತ್ತೆ ಎಬ್ಬಿಸುವರು ಬಿದ್ದ ಹಳೆಯ ಕಟ್ಟಡಗಳನು ನೂತನಗೊಳಿಸುವರು ತಲಾಂತರದ ಹಾಳುಬೀಳು ಪಟ್ಟಣಗಳನು.


ಪುರಾತನಕಾಲದ ಪಾಳುಬಿದ್ದ ಮನೆಗಳನ್ನು ನಿಮ್ಮವರು ಮರಳಿ ಕಟ್ಟುವರು. ತಲತಲಾಂತರಗಳಿಂದ ಪಾಳುಬಿದ್ದಿರುವ ತಳಹದಿಗಳ ಮೇಲೆ ಕಟ್ಟಡಗಳನ್ನು ನೀವು ನಿರ್ಮಿಸುವಿರಿ. ‘ಬಿದ್ದ ಗೋಡೆಯನ್ನು ಎಬ್ಬಿಸಿದ ರಾಷ್ಟ್ರ’ ಎಂಬ ಬಿರುದು ನಿಮಗೆ ಬರುವುದು.”


ಕ್ರಿಸ್ತಯೇಸು ಈ ಭೂಲೋಕದಲ್ಲಿದ್ದಾಗ, ತಮ್ಮನ್ನು ಮರಣದಿಂದ ಕಾಪಾಡಲು‍ ಶಕ್ತರಾದ ದೇವರನ್ನು ಉಚ್ಚಸ್ವರದಿಂದ ಕೂಗುತ್ತಾ ಕಣ್ಣೀರಿಡುತ್ತಾ ವಿನಂತಿಸಿ ಪ್ರಾರ್ಥಿಸಿದರು. ಅವರ ಭಯಭಕ್ತಿಯನ್ನು ನೋಡಿ ದೇವರು ಅವರ ಮೊರೆಯನ್ನು ಆಲಿಸಿದರು.


ಆಕಾಶವನ್ನ ಹರಡಿದೆ; ಭುವಿಯನ್ನು ಸ್ಥಾಪಿಸಿದೆ; ಸಿಯೋನಿಗೆ ‘ನೀನೆನ್ನ ಜನತೆ’ ಎಂದೆ ನಾನಾಡುವುದನೆ ನಿನ್ನಿಂದ ಮಾತನಾಡಿಸಿದೆ, ನಿನ್ನನು ನನ್ನ ಅಂಗೈಯಲಿ ಕೊರೆದು ಕಾದಿಟ್ಟೆ.”


ನನ್ನ ದಾಸನ ಮಾತನ್ನಾದರೋ ದೃಢೀಕರಿಸುವವನು ನಾನೆ ನನ್ನ ದೂತರ ಯೋಜನೆಯನ್ನು ಸಫಲಗೊಳಿಸುವವನು ನಾನೆ ಜನನಿವಾಸವಾಗುವುದು ಜೆರುಸಲೇಮ್ ನಗರವು ಪುನಃ ಕಟ್ಟಲ್ಪಡುವುವು ಜುದೇಯ ಪಟ್ಟಣಗಳು. ಅಲ್ಲಿ ಹಾಳುಬಿದ್ದವುಗಳು ಮರಳಿ ಎದ್ದು ನಿಲ್ಲುವುವು.


ತಮ್ಮ ಪ್ರೀತಿಯ ಪುತ್ರನಲ್ಲೇ ಅವರು ನಮಗೆ ಉಚಿತವಾಗಿ ಅನುಗ್ರಹಿಸಿರುವ ಅತಿಶಯ ವರಪ್ರಸಾದಕ್ಕಾಗಿ ಅವರಿಗೆ ಸ್ತುತಿಸಲ್ಲಿಸೋಣ.


ಏಕೆಂದರೆ ಹಬ್ಬಿಕೊಳ್ಳುವೆ ನೀನು ಎಡಬಲದೊಳು ಎಲ್ಲೆಲ್ಲು, ವಶಮಾಡಿಕೊಳ್ಳುವರು ನಿನ್ನ ಸಂತಾನದವರು ಜನಾಂಗಗಳನು. ಜನಭರಿತವಾಗುವಂತೆ ಮಾಡುವರು ಪಾಳುಬಿದ್ದ ಪಟ್ಟಣಗಳನು.


ಪಾಳುಬಿದ್ದ ನಿನ್ನ ಪ್ರದೇಶಗಳು ಬೀಳುಬಿದ್ದ ನಿನ್ನ ಭೂಮಿಗಳು ಕೆಡವಿಬಿದ್ದ ನಿನ್ನ ಬೀಡುಗಳು ಕಿಕ್ಕಿರಿದಾಗುವುವು ನಿನ್ನ ನಿವಾಸಿಗಳಿಗೆ; ನಿನ್ನ ಕಬಳಿಸಿದವರು ದೂರವಾಗುವರು ನಿನಗೆ.


ಇಗೋ, ನನ್ನ ದಾಸನು ! ನನ್ನ ಆಧಾರ ಪಡೆದವನು ನನ್ನಿಂದ ಆಯ್ಕೆಯಾದವನು ನನಗೆ ಪರಮ ಪ್ರಿಯನು. ನೆಲೆಗೊಳಿಸಿರುವೆ ಇವನಲ್ಲಿ ನನ್ನ ಆತ್ಮವನು ಅನ್ಯರಾಷ್ಟ್ರಗಳಿಗೆ ಸಾರುವನಿವನು ಸದ್ಧರ್ಮವನು.


ನಿನ್ನ ನೆಚ್ಚಿದವರಿಗೆ, ಸ್ಥಿರಚಿತ್ತವುಳ್ಳವರಿಗೆ, ಚಿರಶಾಂತಿಯ ನೀ ನೀಡುವೆ.


ಇಳೆಯು ಭೂನಿವಾಸಿಗಳ ಸಮೇತ ತಳಮಳಗೊಳ್ಳಲು I ಅದರ ತಳಹದಿಯ ಬಿಗಿಹಿಡಿದಿರುವವನು ನಾನಿಲ್ಲದಿನ್ನಾರು? II


ಕೇಳಿದೆಯಾದರೆ ನಿನಗಧೀನಮಾಡುವೆನು ರಾಷ್ಟ್ರಗಳನು I ಕೊಡುವೆನು ನಿನಗೆ ಸ್ವಾಸ್ತ್ಯವಾಗಿ ಜಗದ ಆದ್ಯಂತವನು II


ಯೇಸು, ಆ ಯಾಜಕರ ಸೇವೆಗಿಂತಲೂ ಶ್ರೇಷ್ಠವಾದ ಯಾಜಕಸೇವೆಯನ್ನು ಕೈಗೊಂಡಿದ್ದಾರೆ. ಯೇಸುವನ್ನು ಮಧ್ಯಸ್ಥರನ್ನಾಗಿ ಪಡೆದಿರುವ ಒಡಂಬಡಿಕೆಯು ಅಷ್ಟೇ ಶ್ರೇಷ್ಠವಾದುದು. ಏಕೆಂದರೆ ಅದು, ಹಿಂದಿನ ವಾಗ್ದಾನಗಳಿಗಿಂತಲೂ ಉತ್ತಮವಾದ ವಾಗ್ದಾನಗಳನ್ನು ಆಧರಿಸಿದೆ.


ಇದು ನನ್ನ ರಕ್ತ, ಸಮಸ್ತ ಜನರ ಪಾಪಕ್ಷಮೆಗಾಗಿ ಸುರಿಸಲಾಗುವ ಒಡಂಬಡಿಕೆಯ ರಕ್ತ.


ಸರ್ವೇಶ್ವರನಾದ ನಾನು ಸಂತೈಸದೆ ಬಿಡೆನು ಸಿಯೋನನ್ನು, ಉದ್ಧರಿಸುವೆನು ಆ ಹಾಳುಬಿದ್ದ ಸ್ಥಳಗಳೆಲ್ಲವನು. ಮಾರ್ಪಡಿಸುವೆನು ಕಾಡುನೆಲವನು ಏದೆನ್ ಉದ್ಯಾನದಂತೆ ಮರುಭೂಮಿಯನು, ದೇವತೆಗಳ ಉದ್ಯಾನವಾಗುವಂತೆ ಹರ್ಷೋಲ್ಲಾಸ, ಸ್ತುತಿಸ್ತೋತ್ರ, ಮಧುರಗಾನ ಅಲ್ಲಿ ನೆಲೆಸುವಂತೆ.


ಅವನು ನನ್ನ ಹೆಸರಿನಲ್ಲಿ ಒಂದು ದೇವಾಲಯವನ್ನು ಕಟ್ಟುವನು. ನಾನು ಅವನ ಸಿಂಹಾಸನವನ್ನು ಸ್ಥಿರಪಡಿಸುವೆನು.


ಸರ್ವೇಶ್ವರನಾದ ನಾನೇ ಇದರ ತೋಟಗಾರ, ಕ್ಷಣಕ್ಷಣಕ್ಕೂ ಇದಕೆ ಹೊಯ್ಯುವೆ ನೀರ, ಇದನ್ನಾದರೂ ಮುಟ್ಟದಂತೆ ಕಾಯುವೆ ನಿರಂತರ.


ಹೆದರಬೇಡ, ನಾನಿದ್ದೇನೆ ನಿನ್ನೊಂದಿಗೆ ಭಯಭ್ರಾಂತನಾಗಬೇಡ, ನಾನೇ ದೇವರು ನಿನಗೆ. ಶಕ್ತಿ ನೀಡುವೆ, ಸಹಾಯಮಾಡುವೆ ನಿನಗೆ ನನ್ನ ವಿಜಯಹಸ್ತದ ಆಧಾರ ಇದೆ ನಿನಗೆ.


ಅರಸಿರಿ ಸರ್ವೇಶ್ವರನನು ಆತ ದೊರಕುವ ವೇಳೆಯಲಿ ವಿನಂತಿಸಿರಿ ಆತನಿರುವಾಗಲೆ ಸಮೀಪದಲಿ.


ಸಹಾಯಕ್ಕಾಗಿ ನೀನು ಕೂಗಿಕೊಳ್ಳುವಾಗ ನೀನು ಕೂಡಿಹಾಕಿಕೊಂಡಿರುವ ಈ ವಿಗ್ರಹಗಳೇ ನಿನಗೆ ರಕ್ಷಣೆ ನೀಡಲಿ. ಇವುಗಳನ್ನೆಲ್ಲ ಗಾಳಿ ಬಡಿದುಕೊಂಡು ಹೋಗುವುದು. ಕೇವಲ ಒಂದು ಉಸಿರು ಸಾಕು, ಇವುಗಳನ್ನು ಒಯ್ದುಬಿಡಲು. ಆದರೆ ನನ್ನನ್ನು ಆಶ್ರಯಿಸಿಕೊಂಡವನು ನಾಡಿಗೆ ಬಾಧ್ಯಸ್ಥನಾಗುವನು; ನನ್ನ ಪವಿತ್ರ ಪರ್ವತವನ್ನು ಸ್ವಾಧೀನಮಾಡಿಕೊಳ್ಳುವನು.


ಸ್ವಾರ್ಥ ನಿಗ್ರಹಕ್ಕಾಗಿ ನಾನು ನೇಮಿಸಿದ ಉಪವಾಸದ ದಿನ ಇಂಥದೋ? ಒಬ್ಬನು ಜೊಂಡಿನಂತೆ ತಲೆಯನ್ನು ಬಗ್ಗಿಸಿಕೊಳ್ಳುವುದು, ಗೋಣೀತಟ್ಟನ್ನು ಉಟ್ಟುಕೊಳ್ಳುವುದು, ಬೂದಿಯ ಗುಂಡಿಯಲ್ಲಿ ಕುಳಿತುಕೊಳ್ಳುವುದು, ಇವು ನನಗೆ ಮೆಚ್ಚುಗೆಯಾಗುವ ಉಪವಾಸ ಎನ್ನುತ್ತೀರೊ?


ಸರ್ವೇಶ್ವರ ಸ್ವಾಮಿಯ ಅನುಗ್ರಹದ ವರುಷವನು, ನಮ್ಮ ದೇವರು ಮುಯ್ಯಿತೀರಿಸುವಾ ದಿನವನು ಘೋಷಿಸಲೆಂದೆ.


ಯಕೋಬನಿಂದ ಒಂದು ಸಂತಾನವನ್ನು ಉತ್ಪನ್ನಮಾಡುವೆನು; ಯೆಹೂದ ವಂಶದಿಂದ, ನನ್ನ ಪರ್ವತಗಳ ಸೊತ್ತಿಗೆ ಹಕ್ಕುಬಾಧ್ಯತೆಯುಳ್ಳ ಒಂದು ಸಂತತಿಯನ್ನು ಬರಮಾಡುವೆನು. ನನ್ನಿಂದ ಆಯ್ಕೆಯಾದವರು ಆ ಸೊತ್ತನ್ನು ಅನುಭವಿಸುವರು, ನನ್ನ ಭಕ್ತಾದಿಗಳು ಅಲ್ಲಿ ವಾಸಮಾಡುವರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು