Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 49:6 - ಕನ್ನಡ ಸತ್ಯವೇದವು C.L. Bible (BSI)

6 ಮತ್ತೆ ಆತ ಇಂತೆಂದನು ನನಗೆ : “ಮಹತ್ಕಾರ್ಯವೇನೂ ಅಲ್ಲ ನನ್ನ ದಾಸನಾದ ನಿನಗೆ ಕುಲಗಳನು ಉದ್ಧರಿಸುವ ಮಾತ್ರಕೆ ಇಸ್ರಯೇಲರಲಿ ರಕ್ಷಿತರಾದವರನ್ನು ಮರಳಿ ಬರಮಾಡುವ ಮಾತ್ರಕೆ. ನೇಮಿಸಿರುವೆನು ನಿನ್ನನ್ನು ಜ್ಯೋತಿಯನ್ನಾಗಿ ಸರ್ವಜನಾಂಗಗಳಿಗೆ ನನ್ನ ರಕ್ಷಣೆ ವ್ಯಾಪಿಸಿರುವಂತೆ ಮಾಡಲು ಜಗದ ಕಟ್ಟಕಡೆಯವರೆಗೆ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

6 ಆತನು ಹೀಗೆನ್ನುತ್ತಾನೆ, “ನೀನು ನನ್ನ ಸೇವಕನಾಗಿ ಮಾಡಬೇಕಾದವುಗಳಲ್ಲಿ ಯಾಕೋಬಿನ ಕುಲಗಳನ್ನು ಉನ್ನತಪಡಿಸುವುದೂ, ಇಸ್ರಾಯೇಲಿನಲ್ಲಿ ರಕ್ಷಿತರಾದವರನ್ನು ತಿರುಗಿ ಬರಮಾಡುವುದೂ ಅಲ್ಪ ಕಾರ್ಯವೇ ಸರಿ. ನನ್ನ ರಕ್ಷಣೆಯು ಲೋಕದ ಕಟ್ಟಕಡೆಯವರೆಗೆ ವ್ಯಾಪಿಸುವಂತೆ ನಿನ್ನನ್ನು ಅನ್ಯಜನಾಂಗಗಳಿಗೂ ಬೆಳಕನ್ನಾಗಿ ದಯಪಾಲಿಸುವೆನು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

6 ಆತನೇ ಈಗ ಹೀಗನ್ನುತ್ತಾನೆ - ನೀನು ನನ್ನ ಸೇವಕನಾಗಿ ಮಾಡಬೇಕಾದವುಗಳಲ್ಲಿ ಯಾಕೋಬಿನ ಕುಲಗಳನ್ನು ಉನ್ನತಪಡಿಸುವದೂ ಇಸ್ರಾಯೇಲಿನಲ್ಲಿ ರಕ್ಷಿತರಾದವರನ್ನು ತಿರಿಗಿ ಬರಮಾಡುವದೂ ಅಲ್ಪಕಾರ್ಯವೇ ಸರಿ; ನನ್ನ ರಕ್ಷಣೆಯು ಲೋಕದ ಕಟ್ಟಕಡೆಯವರೆಗೆ ವ್ಯಾಪಿಸುವಂತೆ ನಿನ್ನನ್ನು ಅನ್ಯಜನಾಂಗಗಳಿಗೂ ಬೆಳಕನ್ನಾಗಿ ದಯಪಾಲಿಸುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

6 ಯೆಹೋವನು ನನಗೆ ಹೇಳಿದ್ದೇನೆಂದರೆ: “ನನ್ನ ಸೇವಕನಾದ ಯಾಕೋಬನ ಕುಲಗಳನ್ನು ಮೇಲೆತ್ತಿ ಇಸ್ರೇಲಿನ ಅಳಿದುಳಿದವರನ್ನು ಪುನಃಸ್ಥಾಪಿಸುವೆ. ಆದರೆ ನಿನಗೆ ಇನ್ನೊಂದು ಕೆಲಸವಿದೆ. ಅದು ಇದಕ್ಕಿಂತಲೂ ಮಹತ್ತಾದದ್ದು. ನಾನು ನಿನ್ನನ್ನು ಎಲ್ಲಾ ಜನಾಂಗಗಳಿಗೆ ಬೆಳಕನ್ನಾಗಿ ಮಾಡುವೆನು. ಲೋಕದ ಎಲ್ಲಾ ಜನರನ್ನು ರಕ್ಷಿಸಲು ನೀನು ನನ್ನ ಮಾರ್ಗವಾಗುವೆ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

6 ಆತನೇ ಈಗ ಹೀಗೆನ್ನುತ್ತಾನೆ, “ನೀನು ನನ್ನ ಸೇವಕನಾಗಿ ಮಾಡಬೇಕಾದವುಗಳಲ್ಲಿ ಯಾಕೋಬಿನ ಕುಲಗಳನ್ನು ಉನ್ನತಪಡಿಸುವುದೂ, ಇಸ್ರಾಯೇಲಿನಲ್ಲಿ ರಕ್ಷಿತರಾದವರನ್ನು ತಿರುಗಿ ಬರಮಾಡುವುದೂ ಅಲ್ಪ ಕಾರ್ಯವಲ್ಲವೇ, ನನ್ನ ರಕ್ಷಣೆಯು ಭೂಲೋಕದ ಕಟ್ಟಕಡೆಯವರೆಗೆ ವ್ಯಾಪಿಸುವಂತೆ ನಿನ್ನನ್ನು ಸರ್ವಜನಾಂಗಗಳಿಗೂ ಬೆಳಕನ್ನಾಗಿ ಮಾಡುವೆನು.”

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 49:6
30 ತಿಳಿವುಗಳ ಹೋಲಿಕೆ  

ಏಕೆಂದರೆ ಪ್ರಭು ನಮಗಿತ್ತ ಆಜ್ಞೆ ಹೀಗಿದೆ: ಅನ್ಯಧರ್ಮೀಯರಿಗೆ ಜ್ಯೋತಿಯನ್ನಾಗಿಯೂ ವಿಶ್ವಪೂರ್ತಿಗೆ ಜೀವೋದ್ಧಾರದ ಸಾಧನವಾಗಿಯೂ ನಾನು ನಿನ್ನನ್ನು ನೇಮಿಸಿದ್ದೇನೆ.’


ಸರ್ವೇಶ್ವರ ಸ್ವಾಮಿಯಾದ ನಾನು ಕೈ ಹಿಡಿದು ಕಾದಿರಿಸುವೆನು ನಿನ್ನನು, ಕರೆದಿಹೆನು ನಿನ್ನನ್ನು ಸದ್ಧರ್ಮ ಸಾಧನೆಗಾಗಿ ಇತ್ತಿರುವೆನು ನಿನ್ನನು ಜನರಿಗೆ ಒಡಂಬಡಿಕೆಯಾಗಿ ನೇಮಿಸಿರುವೆನು ನಿನ್ನನು ರಾಷ್ಟ್ರಗಳಿಗೆ ಬೆಳಕಾಗಿ.


ಈತ ಅನ್ಯಜನರನ್ನು ಬೆಳಗಿಸುವ ಜ್ಯೋತಿ ನಿನ್ನ ಜನ ಇಸ್ರಯೇಲರಿಗೆ ತರುವನು ಕೀರ್ತಿ.”


ಪ್ರದರ್ಶಿಸಿಹನು ಸ್ವಾಮಿ ಸರ್ವೇಶ್ವರನು ರಾಷ್ಟ್ರಗಳಿಗೆಲ್ಲ ತನ್ನ ಶ್ರೀಶಕ್ತಿಯನು. ಕಾಣುವುವು ಜಗದ ಎಲ್ಲೆ ಎಲ್ಲೆಗಳು ನಮ್ಮ ದೇವ ಸಾಧಿಸುವ ಮುಕ್ತಿಯನು.


ರಾಷ್ಟ್ರಗಳು ಬರುವುವು ನಿನ್ನ ಬೆಳಕಿಗೆ ಅರಸರು ನಿನ್ನ ಉದಯದ ಶೋಭೆಗೆ.


ನೀನು ಇವರ ಕಣ್ಣುಗಳನ್ನು ತೆರೆಯಬೇಕು; ಅಂಧಕಾರವನ್ನು ಬಿಟ್ಟು ಬೆಳಕಿಗೆ ಬರುವಂತೆ ಮಾಡಬೇಕು; ಸೈತಾನನ ಆಧಿಪತ್ಯವನ್ನು ತ್ಯಜಿಸಿ ದೇವರತ್ತ ತಿರುಗುವಂತೆ ಮಾಡಬೇಕು. ಹೀಗೆ, ಅವರು ನನ್ನಲ್ಲಿಡುವ ವಿಶ್ವಾಸದ ಪ್ರಯುಕ್ತ ಪಾಪವಿಮೋಚನೆಯನ್ನು ಪಡೆಯುವರು; ಆಯ್ಕೆಯಾದವರಿಗಿರುವ ಹಕ್ಕುಬಾಧ್ಯತೆಗಳಲ್ಲಿ ಭಾಗಿಗಳಾಗುವರು,’ ಎಂದು ಹೇಳಿದರು.


ಆ ದಿನದಂದು ಜೆಸ್ಸೆಯನ ಸಂತಾನದ ಕುಡಿ ಸರ್ವಜನಾಂಗಗಳಿಗೆ ಧ್ವಜಪ್ರಾಯವಾಗಿ ನಿಲ್ಲುವುದು. ಆತನನ್ನು ರಾಷ್ಟ್ರಗಳು ಆಶ್ರಯಿಸುವುವು; ವೈಭವದಿಂದಿರುವುದಾತನ ವಿಶ್ರಾಂತಿನಿಲಯವು.


ಬರಮಾಡುವೆನು ಮುಕ್ತಿಯನು ಹತ್ತಿರಕೆ ಅದಿನ್ನು ದೂರವಿರದು ನಿಮಗೆ. ತಡವಾಗದು ನಿಮಗೆ ನನ್ನ ರಕ್ಷಣೆ ಸಾಧಿಸುವೆನು ರಕ್ಷಣೆಯನ್ನು ಸಿಯೋನಿನಲೇ, ಬೀರುವೆನು ನನ್ನ ಮಹಿಮೆಯನ್ನು ಇಸ್ರಯೇಲ ಮೇಲೆ.”


ಅವರು ತಮ್ಮ ದೃಷ್ಟಿಯಲ್ಲಿ ಅಲ್ಪವಾಗಿರುವ ಈ ಕಾರ್ಯ ಮಾತ್ರವಲ್ಲ, ಮೋವಾಬ್ಯರನ್ನೂ ನಿಮ್ಮ ಕೈಗೆ ಒಪ್ಪಿಸುವರು.


ಹಿಜ್ಕೀಯನು, “ನೆರಳು ಮುಂದೆ ಹೋಗುವುದು ಸುಲಭ; ಆದುದರಿಂದ ಹತ್ತು ಮೆಟ್ಟಲು ಹಿಂದೆ ಬರುವಂತೆ ಮಾಡು,” ಎಂದು ಹೇಳಿದನು.


ಅದೇನೆಂದರೆ, ಲೋಕೋದ್ಧಾರಕನು ಯಾತನೆಯನ್ನು ಅನುಭವಿಸಬೇಕು; ಸತ್ತು ಪುನರುತ್ಥಾನವಾದವರಲ್ಲಿ ಮೊತ್ತಮೊದಲಿಗನಾಗಿ ಯೆಹೂದ್ಯರಿಗೂ ಅನ್ಯಧರ್ಮೀಯರಿಗೂ ಪರಂಜ್ಯೋತಿಯನ್ನು ಪ್ರಕಟಿಸಬೇಕು,” ಎಂದನು.


ರಾಜ್ಯಾಧಿಕಾರ ಪಡೆದವನು ಬರುವ ತನಕ ರಾಷ್ಟ್ರಗಳು ಆತನಿಗೆ ತಲೆಬಾಗುವ ತನಕ ತಪ್ಪದು ರಾಜದಂಡ ಯೆಹೂದನ ಕೈಯಿಂದ ಕದಲದು ಮುದ್ರೆಕೋಲು ಅವನ ವಂಶದಿಂದ.


ಪ್ರಭುವು ನ್ಯಾಯಪ್ರಿಯನು, ಭಕ್ತಜನರ ಪರಿಪಾಲಕನು I ಚಿರವುಳಿಸುವನು ಇವರನು, ಅಳಿಸುವನು ದುರುಳರ ಪೀಳಿಗೆಯನು II


ಕೇಡನು ಹಗೆಮಾಡುವವನಿಗೆ ಪ್ರಭು ಒಲಿವನು I ತನ್ನ ಭಕ್ತರ ಪ್ರಾಣವನು ಕಾಪಾಡುವನು I ದುಷ್ಟರ ಕೈಯಿಂದವರನು ಬಿಡಿಸುವನು II


ಸಮುದ್ರಯಾತ್ರಿಕರೇ, ಸಕಲ ಜಲಚರಗಳೇ, ದ್ವೀಪಗಳೇ, ದ್ವೀಪಾಂತರ ನಿವಾಸಿಗಳೇ, ನೂತನ ಗೀತವ ಹಾಡಿ ಹೊಗಳಿ ಸರ್ವೇಶ್ವರನನು, ದಿಗಂತಗಳಲ್ಲಿಯೂ ಕೀರ್ತಿಸಿ ಆತನನು.


“ಎಲ್ಲೆ ಎಲ್ಲೆಗಳಲ್ಲಿರುವ ಜನರೇ, ತಿರುಗಿಕೊಳ್ಳಿರಿ ನನ್ನ ಕಡೆಗೆ, ಆಗ ಉದ್ಧಾರವಾಗುವಿರಿ. ದೇವರು ಬೇರಾರೂ ಇಲ್ಲ, ನಾನೊಬ್ಬನೆ ಎಂಬುದನರಿಯಿರಿ.


ಹೊರಡಿರಿ ಬಾಬಿಲೋನ್ ನಗರದಿಂದ, ಓಡಿರಿ ಕಸ್ದೀಯರ ಕಡೆಯಿಂದ ಪ್ರಚುರಪಡಿಸಿರಿ ಹರ್ಷಧ್ವನಿಯಿಂದ, ಪ್ರಕಟಿಸಿರಿ ಭೂಮಿಯ ಕಟ್ಟಕಡೆಯ ತನಕ, ಈ ಪರಿ ತಿಳಿಸಿರಿ : “ಸರ್ವೇಶ್ವರ, ತಮ್ಮ ದಾಸ ಯಕೋಬನ ಉದ್ಧಾರಕ".


ಆಲಿಸಿರಿ ನನ್ನ ಜನರೆ, ಕಿವಿಗೊಡಿ ನನ್ನ ಪ್ರಜೆಗಳೆ : ಧರ್ಮೋಪದೇಶ ಹೊರಡುವುದು ರಾಷ್ಟ್ರಗಳಿಗೆ ನನ್ನಿಂದಲೆ; ಬೆಳಗುವುದು ಜಗಜ್ಯೋತಿಯಾಗಿ ನನ್ನ ನ್ಯಾಯಬೋಧೆ.


ಎಲೈ ಇಸ್ರಯೇಲೇ, ನಿನ್ನ ದೇವರಾದ ಸರ್ವೇಶ್ವರನಿಗೋಸ್ಕರ ನಿನ್ನ ಮಹಿಮೆಪಡಿಸಿದ ಇಸ್ರಯೇಲಿನ ಪರಮಪಾವನನಿಗೋಸ್ಕರ ನೀ ಕರೆಗೊಡುವೆ ನಿನಗೆ ಗೊತ್ತಿಲ್ಲದ ಜನಾಂಗಕೆ. ಆಗ ಅಪರಿಚಿತರೂ ಓಡಿಬರುವರು ನಿನ್ನಾಶ್ರಯಕೆ.


ಇಗೋ, ಸಮೀಪಿಸುತ್ತಿದೆ ನೀವು ಮುಕ್ತಿಹೊಂದುವದಿನ ಆತನೊಂದಿಗಿದೆ ಆತ ನೀಡುವ ಬಹುಮಾನ ಆತನ ಮುಂದಿದೆ ಆತ ಗಳಿಸಿದ ವರಮಾನ. ಇದನು ತಿಳಿಯಹೇಳಿರಿ ಸಿಯೋನೆಂಬಾಕೆಗೆ ಸರ್ವೇಶ್ವರನ ಆಜ್ಞೆಯಿದು ಜಗದ ದಿಗಂತದವರೆಗೆ.


ನನ್ನ ಜನರಿಗೆ ಬಾಳ್‍ದೇವತೆಯ ಹೆಸರೆತ್ತಿ ಪ್ರಮಾಣಮಾಡುವ ಅಭ್ಯಾಸವನ್ನು ಮೊದಲು ಕಲಿಸಿಕೊಟ್ಟವರು ಇವರೇ. ಈಗ ನನ್ನ ಜನರ ಮಾರ್ಗವನ್ನು ಅವಲಂಬಿಸಿ ನನ್ನ ಹೆಸರೆತ್ತಿ, “ಸರ್ವೇಶ್ವರನ ಜೀವದಾಣೆ” ಎಂದು ಪ್ರಮಾಣ ಮಾಡುವುದನ್ನು ಕಲಿತರೆ ನನ್ನ ಜನರ ನಡುವೆ ನೆಲೆಗೊಂಡು ವೃದ್ಧಿಯಾಗುವರು.


ಹೌದು, ಅವನೇ ಸರ್ವೇಶ್ವರನ ಆಲಯವನ್ನು ಕಟ್ಟಿಸಿದ ಮೇಲೆ, ರಾಜವೈಭವವನ್ನು ತಾಳಿ ತನ್ನ ಸಿಂಹಾಸನದಲ್ಲಿ ಆಸೀನನಾಗಿ ಆಳುವನು. ಯಾಜಕನೊಬ್ಬನು ಅವನ ಆಸ್ಥಾನದಲ್ಲಿರುವನು. ಅವರಿಬ್ಬರೂ ಶಾಂತಿಸಮಾಧಾನದಿಂದಿರುವರು.


“ನಾನಾದೇಶಗಳಿಂದ, ಪ್ರಬಲ ರಾಷ್ಟ್ರಗಳಿಂದ ಸೇನಾಧೀಶ್ವರ ಸರ್ವೇಶ್ವರಸ್ವಾಮಿಯನ್ನು ಆರಾಧಿಸಿ, ಅವರ ಆಶೀರ್ವಾದವನ್ನು ಕೋರಲು ಜನರು ಜೆರುಸಲೇಮಿಗೆ ಬರುವರು.


ನಿನ್ನ ಕೀರ್ತಿಸಲಿ ದೇವಾ, ಜನರು I ಸಂಕೀರ್ತಿಸಲಿ ಅವರೆಲ್ಲರೂ II


ಇಸ್ರಯೇಲಿನ ಸೆರೆಹೋದ ಜನರನ್ನು ಬರಮಾಡಿಕೊಳ್ಳುವ ದೇವರಾದ ಸರ್ವೇಶ್ವರ, “ನಾನು ಕೂಡಿಸಿಕೊಂಡ ಇಸ್ರಯೇಲ ಜನರೊಂದಿಗೆ ಇನ್ನೂ ಹಲವರನ್ನು ಕೂಡಿಸುವೆನು” ಎಂದಿದ್ದಾರೆ.


ಇಂತಿರಲು ದಿನತುಂಬಿದವಳು ಹೆರುವವರೆಗೂ ಸರ್ವೇಶ್ವರ ತನ್ನ ಜನರನ್ನು ಶತ್ರುಗಳ ವಶಕ್ಕೆ ಬಿಟ್ಟುಬಿಡುವರು. ಅನಂತರ ಅಳಿದುಳಿದ ಸಹೋದರರು ಬಂದು ಇಸ್ರಯೇಲ್ ಜನರೊಂದಿಗೆ ಸೇರಿಕೊಳ್ಳುವರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು