Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 49:21 - ಕನ್ನಡ ಸತ್ಯವೇದವು C.L. Bible (BSI)

21 ಆಗ ನೀನು ಹೀಗೆಂದುಕೊಳ್ಳುವೆ ಮನದೊಳು : “ನಾನೋ ಮಕ್ಕಳನು ಕಳೆದುಕೊಂಡವಳು, ಪುತ್ರಹೀನಳು, ದೇಶಭ್ರಷ್ಟಳು, ತಿರುಕಳು. ಇಷ್ಟೊಂದು ಮಕ್ಕಳನು ಕೊಟ್ಟವರಾರು ನನಗೆ? ಇವರನ್ನು ಪೋಷಿಸಿದವರಾರು ಹೀಗೆ? ಇವರೆಲ್ಲಿದ್ದರು? ನಾನೋ ಒಬ್ಬಂಟಿಗಳಾಗಿದ್ದೆ!”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

21 ಆಗ ನೀನು ನಿನ್ನ ಮನದೊಳಗೆ, ‘ನನಗೋಸ್ಕರ ಇವರನ್ನು ಯಾರು ಹೆತ್ತರು? ನಾನೋ ಮಕ್ಕಳನ್ನು ಕಳೆದುಕೊಂಡವಳು, ಪುತ್ರಹೀನಳು, ದೇಶಭ್ರಷ್ಟಳು, ತಿರುಕಳು. ಇವರನ್ನು ಸಾಕಿದವರು ಯಾರು? ಆಹಾ, ನಾನು ಒಂಟಿಯಾಗಿ ಉಳಿದಿದ್ದೆನಲ್ಲಾ, ಇವರೆಲ್ಲಿದ್ದರು?’” ಎಂದುಕೊಳ್ಳುವಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

21 ಆಗ ನೀನು ನಿನ್ನ ಮನದೊಳಗೆ - ನನಗೋಸ್ಕರ ಇವರನ್ನು ಯಾರು ಹೆತ್ತರು? ನಾನೋ ಮಕ್ಕಳನ್ನು ಕಳೆದುಕೊಂಡವಳು, ಪುತ್ರಹೀನಳು, ದೇಶಭ್ರಷ್ಟಳು, ತಿರುಕಳು; ಇವರನ್ನು ಸಾಕಿದವರು ಯಾರು? ಆಹಾ, ನಾನು ಒಂಟಿಯಾಗಿ ಉಳಿದಿದ್ದೆನಲ್ಲಾ; ಇವರೆಲ್ಲಿದ್ದರು? ಅಂದುಕೊಳ್ಳುವಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

21 ಆಗ ನೀನು ನಿನ್ನ ಮನಸ್ಸಿನೊಳಗೆ, ‘ಈ ಮಕ್ಕಳನ್ನೆಲ್ಲಾ ನನಗೆ ಯಾರು ಕೊಟ್ಟರು? ಇದು ಸಂತಸದ ಸಂಗತಿ! ನಾನು ಒಬ್ಬಂಟಿಗಳಾಗಿ ದುಃಖಿಸುತ್ತಿದ್ದೆನು. ನಾನು ಸೋಲಲ್ಪಟ್ಟವಳಾಗಿ ನನ್ನ ಜನರಿಂದ ದೂರವಿದ್ದೆನು. ಹೀಗಿರುವಾಗ ಈ ಮಕ್ಕಳನ್ನೆಲ್ಲಾ ಯಾರು ಕೊಟ್ಟರು? ನಾನು ಒಬ್ಬಂಟಿಗಳಾಗಿ ಇದ್ದೆನಲ್ಲಾ! ಇಷ್ಟೆಲ್ಲಾ ಮಕ್ಕಳನ್ನು ನನಗೆ ಕೊಟ್ಟವರು ಯಾರು?’” ಎಂದು ಅಂದುಕೊಳ್ಳುವಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

21 ‘ನನಗೋಸ್ಕರ ಇವರನ್ನು ಯಾರು ನನ್ನಲ್ಲಿ ಪಡೆದರು? ನಾನು ದುಃಖಿತ ಮತ್ತು ಬಂಜೆಯಾಗಿದ್ದೆ; ನನ್ನನ್ನು ಗಡಿಪಾರು ಮಾಡಿ ತಿರಸ್ಕರಿಸಲಾಯಿತು. ಇವುಗಳನ್ನು ತಂದವರು ಯಾರು? ನಾನು ಒಬ್ಬಂಟಿಯಾಗಿ ಉಳಿದಿದ್ದೇನೆ, ಇವರನ್ನು ಸಾಕಿದವರು ಯಾರು? ಅವರೆಲ್ಲಿದ್ದರು?’ ” ಎಂದುಕೊಳ್ಳುವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 49:21
21 ತಿಳಿವುಗಳ ಹೋಲಿಕೆ  

ನೀವು ಕ್ರಿಸ್ತಯೇಸುವಿಗೆ ಸೇರಿದವರಾಗಿದ್ದರೆ ಅಬ್ರಹಾಮನ ಸಂತತಿಯೂ ಆಗಿದ್ದೀರಿ; ದೈವವಾಗ್ದಾನದ ಪ್ರಕಾರ ವಾರಸುದಾರರೂ ಆಗಿದ್ದೀರಿ.


ನೀನು ಕಾಡು ಓಲಿವ್ ಮರದಿಂದ ಕಡಿದ ರೆಂಬೆ. ಉತ್ತಮ ತಳಿಯ ಓಲಿವ್ ಮರಕ್ಕೆ ಕೃತಕವಾಗಿ ಕಸಿಕಟ್ಟಲಾಗಿರುವೆ. ಇಸ್ರಯೇಲರಾದರೋ ಉತ್ತಮ ತಳಿಯ ಓಲಿವ್ ಮರದಲ್ಲೇ ಹುಟ್ಟಿ ಬೆಳೆದ ರೆಂಬೆಗಳು. ಅದೇ ಮರದಲ್ಲಿ ಹುಟ್ಟಿ ಬೆಳೆದ ರೆಂಬೆಗಳನ್ನು ಕಡಿದು ಮತ್ತೆ ಅದಕ್ಕೆ ಕಸಿಕಟ್ಟುವುದು ಎಷ್ಟೋ ಸುಲಭವಲ್ಲವೆ?


ನಿಮ್ಮ ಪವಿತ್ರ ಪಟ್ಟಣಗಳು ಕಾಡಾಗಿವೆ. ಸಿಯೋನ್ ಪಾಳುಬಿದ್ದಿದೆ. ಜೆರುಸಲೇಮ್ ಹಾಳಾಗಿಹೋಗಿದೆ.


“ಎನ್ನ ಮನದನ್ನೆ” ಎನಿಸಿಕೊಳ್ಳುವೆ ನೀನು “ಸುವಿವಾಹಿತೆ” ಎನಿಸಿಕೊಳ್ಳುವುದು ನಿನ್ನ ನಾಡು. ನಿನ್ನಲ್ಲಿದೆ ಉಲ್ಲಾಸ ಸರ್ವೇಶ್ವರನಿಗೆ ವಿವಾಹವಾಗುವುದಿದೆ ನಿನ್ನ ನಾಡಿಗೆ.


ಪರಿತ್ಯಕ್ತಳೂ ದ್ವೇಷಿತಳೂ ಆದ ನಿರ್ಜನ ನಗರಿಯೇ, ನಿತ್ಯಘನತೆಯನು, ಶಾಶ್ವತ ಸಂತೋಷವನು ನೀಡುವೆ ನಿನಗೆ.


ಖೈದಿಯಾಗಿ ಬಿದ್ದಿರುವ ಸಿಯೋನ್ ಕನ್ಯೆಯೆ, ಕಿತ್ತುಬಿಡು ಬಂಧನವನು ನಿನ್ನ ಕುತ್ತಿಗೆಯಿಂದ ಸಿಂಹಾಸನಾರೂಢಳಾಗು ಜೆರುಸಲೇಮೆ ಝಾಡಿಸಿ ಎದ್ದುನಿಂತು ದುಂಬುಧೂಳಿನಿಂದ!


ಈ ಕಾರಣ, ನನ್ನ ಜನರು ಬುದ್ಧಿಹೀನರಂತೆ ಸೆರೆಹೋಗುವುದು ನಿಶ್ಚಯ. ಅವರ ಮುಖಂಡರು ಹಸಿವಿನಿಂದ ಸಾಯುವರು. ಅವರಲ್ಲಿ ಜನಸಾಮಾನ್ಯರು ಬಾಯಾರಿ ಸೊರಗಿಹೋಗುವರು.


ನಿನ್ನ ಪುರದ್ವಾರಗಳಲ್ಲಿ ದುಃಖ ಪ್ರಲಾಪ ತುಂಬಿರುವುದು. ನೀನು ನಗ್ನಳಂತೆ ನೆಲದ ಮೇಲೆ ಕುಳಿತುಬಿಡುವೆ.


ಸಿಯೋನ್ ನಗರವೊಂದೇ ಮುತ್ತಿಗೆಗೆ ತುತ್ತಾದ ಪಟ್ಟಣದಂತೆ, ದ್ರಾಕ್ಷಾತೋಟದ ಅಟ್ಟಣಿಯಂತೆ, ಸೌತೆ ಹೊಲದ ಗುಡಿಸಿಲಿನಂತೆ ಸುರಕ್ಷತೆಯ ಅವಕಾಶವಿಲ್ಲದೆ ಇದೆ.


ಕೆಲವರು ಕತ್ತಿಯ ಬಾಯಿಗೆ ತುತ್ತಾಗುವರು. ಮತ್ತೆ ಕೆಲವರು ಬಂಧಿತರಾಗಿ ದೇಶದೇಶಗಳಿಗೆ ಕೊಂಡೊಯ್ಯಲ್ಪಡುವರು; ಅನ್ಯದೇಶೀಯರು ತಮ್ಮ ಕಾಲಾವಧಿಯ ತನಕ ಜೆರುಸಲೇಮನ್ನು ತುಳಿದುಹಾಕುವರು.


ಕೋಟೆಕೊತ್ತಲಗಳಿಂದ ಕೂಡಿದ ಪಟ್ಟಣ ಪಾಳುಬಿದ್ದಿದೆ; ಕಾಡಿನಂತೆ ನಿರ್ಜನಪ್ರದೇಶವಾಗಿದೆ. ದನಕರುಗಳು ಮೇದು ಮಲಗುವ ಗೋಮಾಳವಾಗಿದೆ.


ನಿಮ್ಮ ವಂಶಜರು ತಮ್ಮ ಮಧ್ಯದಲ್ಲಿ ನಾನು ಎಸಗುವ ಕಾರ್ಯಗಳನ್ನು ನೋಡಿ, ನನ್ನ ನಾಮವೇ ಪರಮಪೂಜಿತವೆಂದು ಸ್ಥಿರಪಡಿಸುವರು. ಹೌದು, ಯಕೋಬ ವಂಶದ ಪರಮಪಾವನ ಸ್ವಾಮಿಯಾದ ನನ್ನನ್ನು ಪ್ರತಿಷ್ಠಾಪಿಸುವರು. ಇಸ್ರಯೇಲರ ದೇವರಾದ ನನ್ನಲ್ಲಿ ಭಯಭಕ್ತಿಯಿಂದಿರುವರು.


ಹಾರಿಬರುತ್ತಿರುವ ಇವರಾರು ಮೇಘಗಳಂತೆ? ಗೂಡುಗಳಿಗೆ ತ್ವರೆಮಾಡುವ ಪಾರಿವಾಳಗಳಂತೆ?


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು