Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 48:2 - ಕನ್ನಡ ಸತ್ಯವೇದವು C.L. Bible (BSI)

2 ಹೆಮ್ಮೆಪಡುವರಿವರು ತಾವು ಪವಿತ್ರನಗರದವರೆಂದು ಭರವಸೆಯಿಂದಿರುವರು ದೇವರು ಇಸ್ರಯೇಲಿನವನೇ ಎಂದು ಆತನ ಹೆಸರು ಸೇನಾಧೀಶ್ವರ ಸರ್ವೇಶ್ವರನೇ ಎಂದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 ಇವರು ತಮ್ಮನ್ನು ಪರಿಶುದ್ಧ ಪಟ್ಟಣದವರು ಎಂದುಕೊಂಡು, ದೇವರು ಇಸ್ರಾಯೇಲಿನವನೇ ಎಂದು ಆತನ ಮೇಲೆ ಭರವಸವಿಟ್ಟುಕೊಂಡಿರುತ್ತಾರೆ. ಆತನ ಹೆಸರೋ ಸಕಲ ಸೈನ್ಯಗಳ ಸರ್ವಶಕ್ತನಾದ ಯೆಹೋವನು ಎಂಬುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

2 ಇವರು ತಮ್ಮನ್ನು ಪರಿಶುದ್ಧ ಪಟ್ಟಣದವರು ಎಂದುಕೊಂಡು ದೇವರು ಇಸ್ರಾಯೇಲಿನವನೇ ಎಂದು ಆತನ ಮೇಲೆ ಭರವಸವಿಟ್ಟುಕೊಂಡಿರುತ್ತಾರೆ. ಆತನ ಹೆಸರೋ ಸಕಲ ಸೈನ್ಯಗಳ ಅಧೀಶ್ವರನಾದ ಯೆಹೋವನೆಂಬದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

2 “ಹೌದು, ಅವರು ಪರಿಶುದ್ಧ ಪಟ್ಟಣದ ನಿವಾಸಿಗಳಾಗಿದ್ದಾರೆ. ಅವರು ಇಸ್ರೇಲಿನ ದೇವರನ್ನು ಅವಲಂಬಿಸಿಕೊಂಡಿದ್ದಾರೆ. ಸರ್ವಶಕ್ತನಾದ ಯೆಹೋವನು ಎಂಬುದೇ ಆತನ ಹೆಸರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

2 ಏಕೆಂದರೆ ಅವರು ತಾವು ಪರಿಶುದ್ಧ ಪಟ್ಟಣದವರು ಎಂದು ಇಸ್ರಾಯೇಲಿನ ದೇವರ ಮೇಲೆ ಆತುಕೊಳ್ಳುತ್ತಾರೆ. ಸೇನಾಧೀಶ್ವರ ಯೆಹೋವ ದೇವರು ಎಂಬುದು ಆತನ ಹೆಸರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 48:2
25 ತಿಳಿವುಗಳ ಹೋಲಿಕೆ  

ನಿಮ್ಮ ಮುಖಂಡರು ಲಂಚಕ್ಕಾಗಿ ನ್ಯಾಯತೀರಿಸುತ್ತಾರೆ. ನಿಮ್ಮ ಯಾಜಕರು ಸಂಬಳಕ್ಕಾಗಿ ಉಪದೇಶಮಾಡುತ್ತಾರೆ. ಆದರೂ ಸರ್ವೆಶ್ವರಸ್ವಾಮಿಯ ಮೇಲೆ ಭಾರಹಾಕಿದವರಂತೆ, “ಸ್ವಾಮಿ ನಮ್ಮೊಡನೆ ಇಲ್ಲವೆ? ನಮಗೆ ಕೇಡು ಸಂಭವಿಸುವುದಾದರೂ ಹೇಗೆ?” ಎಂದುಕೊಳ್ಳುತ್ತಾರೆ.


“ನಾನು ಯೆಹೂದ್ಯನು” ಎಂದು ಹೇಳಿಕೊಳ್ಳುತ್ತಿರುವ ನಿನ್ನ ವಿಷಯವಾದರೂ ಏನು? ಧರ್ಮಶಾಸ್ತ್ರವನ್ನು ಆಧಾರವಾಗಿಟ್ಟುಕೊಂಡು ದೇವರಿಗೆ ಸೇರಿದವನೆಂದು ಕೊಚ್ಚಿಕೊಳ್ಳುತ್ತೀಯೆ;


ಎಚ್ಚರಗೊಳ್ಳು, ಎಚ್ಚರಗೊಳ್ಳು ಓ ಸಿಯೋನೇ, ಶಕ್ತಿಶಾಲಿಯಾಗು ಪವಿತ್ರನಗರ ಜೆರುಸಲೇಮೆ. ಧರಿಸಿಕೊ ನಿನ್ನ ಚಂದದ ಉಡುಪನು ನಿನ್ನೊಳಗೆ ಪ್ರವೇಶಿಸರು ಇನ್ನು ಅಪವಿತ್ರರು, ಅನ್ಯಧರ್ಮೀಯರು.


ಆ ದಿನದಂದು ಅಳಿದುಳಿದ ಇಸ್ರಯೇಲರು, ತಪ್ಪಿಸಿಕೊಂಡ ಯಕೋಬ ಮನೆತನದವರು ತಮ್ಮನ್ನು ಬಾಧಿಸಿದವರನ್ನು ನೆಮ್ಮುವುದಿಲ್ಲ. ಬದಲಿಗೆ ಇಸ್ರಯೇಲರ ಪರಮಪಾವನ ಸ್ವಾಮಿಯಾದ ಸರ್ವೇಶ್ವರನನ್ನೇ ನಿಶ್ಚಯವಾಗಿ ಆಶ್ರಯಿಸುವರು.


ಹೀಗೆ ಎದ್ದವರು ಸಮಾಧಿಗಳಿಂದ ಹೊರಗೆಬಂದು, ಯೇಸು ಪುನರುತ್ಥಾನ ಹೊಂದಿದ ಬಳಿಕ ಪವಿತ್ರನಗರಕ್ಕೆ ಹೋಗಿ ಅನೇಕರಿಗೆ ಕಾಣಿಸಿಕೊಂಡರು.


ಇವರು ಬಂದು, “ಬಾಬಿಲೋನಿನ ಅರಸ ನೆಬೂಕದ್ನೆಚ್ಚರನು ನಮಗೆ ವಿರುದ್ಧ ಯುದ್ಧಮಾಡುತ್ತಿರುವುದು ತಿಳಿದ ವಿಷಯ. ಸರ್ವೇಶ್ವರ ಸ್ವಾಮಿ ನಮ್ಮ ಪಕ್ಷ ವಹಿಸುವರೆ? ತಮ್ಮ ಅದ್ಭುತಗಳಲ್ಲಿ ಒಂದನ್ನು ಮಾಡಿ ಈ ಶತ್ರುವನ್ನು ನಮ್ಮಿಂದ ತೊಲಗುವಂತೆ ಮಾಡಬಹುದೆ? ದಯಮಾಡಿ ಸರ್ವೇಶ್ವರನ ಚಿತ್ತವೇನೆಂದು ವಿಚಾರಿಸಿ ತಿಳಿಸಬೇಕು,” ಎಂದು ವಿನಂತಿಸಿದರು.


ಯಾವನಾದರೂ ಈ ಪುಸ್ತಕದಲ್ಲಿ ಬರೆದಿರುವ ಪ್ರವಾದನಾ ವಾಕ್ಯಗಳಲ್ಲಿ ಏನನ್ನಾದರೂ ತೆಗೆದುಹಾಕಿದರೆ, ಈ ಪುಸ್ತಕದಲ್ಲಿ ವಿವರಿಸಿರುವ ಜೀವವೃಕ್ಷದಲ್ಲಿಯೂ ಪವಿತ್ರನಗರದಲ್ಲಿಯೂ ಅವನಿಗೆ ಸಿಗುವ ಪಾಲನ್ನು ದೇವರು ತೆಗೆದುಬಿಡುವರು.”


ಇದಲ್ಲದೆ, ಪವಿತ್ರ ನಗರವಾದ ನೂತನ ಜೆರುಸಲೇಮ್ ಸ್ವರ್ಗದಿಂದಲೂ ದೇವರ ಸನ್ನಿಧಿಯಿಂದಲೂ ಕೆಳಗಿಳಿದು ಬರುವುದನ್ನು ಕಂಡೆ. ಅದು ಮದುಮಗನನ್ನು ಎದುರುಗೊಳ್ಳುವುದಕ್ಕಾಗಿ ಅಲಂಕೃತಳಾದ ಮದುವಣಗಿತ್ತಿಯಂತೆ ಶೃಂಗಾರಮಯವಾಗಿತ್ತು.


ಆಲಯದ ಹೊರ ಅಂಗಳವನ್ನು ಅಳತೆಮಾಡಬೇಡ; ಅದನ್ನು ಬಿಟ್ಟುಬಿಡು. ಅದನ್ನು ಜನರಿಗೆ ಬಿಟ್ಟುಕೊಡಲಾಗಿದೆ. ಅವರು ಪವಿತ್ರನಗರವನ್ನು ನಲವತ್ತೆರಡು ತಿಂಗಳವರೆಗೆ ತುಳಿದಾಡುವರು.


ಬಳಿಕ ಪಿಶಾಚಿ ಅವರನ್ನು ಪವಿತ್ರ ನಗರಕ್ಕೆ ಅಂದರೆ ಜೆರುಸಲೇಮಿಗೆ ಕರೆದೊಯ್ದು ಮಹಾದೇವಾಲಯದ ಗೋಪುರದ ತುದಿಯ ಮೇಲೆ ನಿಲ್ಲಿಸಿ,


“ಅಧರ್ಮವನ್ನು ಕೊನೆಗಾಣಿಸುವುದಕ್ಕೆ ಪಾಪಗಳನ್ನು ತೀರಿಸುವುದಕ್ಕೆ, ಅಪರಾಧವನ್ನು ನಿವಾರಿಸುವುದಕ್ಕೆ, ಸನಾತನ ಧರ್ಮವನ್ನು ಸ್ಥಾಪಿಸುವುದಕ್ಕೆ, ದರ್ಶನವನ್ನೂ ಪ್ರವಾದಿಯ ನುಡಿಯನ್ನೂ ಮುದ್ರೆಹಾಕಿ ಯಥಾರ್ಥ ಮಾಡುವುದಕ್ಕೆ, ಅತಿಪರಿಶುದ್ಧವಾದುದನ್ನು ಅಭಿಷೇಕಿಸುವುದಕ್ಕೆ ನಿನ್ನ ಜನಕ್ಕೂ ನಿನ್ನ ಪವಿತ್ರನಗರಕ್ಕೂ ಏಳೆಪ್ಪತ್ತು ವರ್ಷಗಳು ಕಳೆಯಬೇಕೆಂದು ನಿಷ್ಕರ್ಷೆಯಾಗಿದೆ.


ಹಾಗಲ್ಲ ಯಕೋಬ್ಯರಿಗೆ ಸ್ವಂತವಾದ ದೇವರು ಅವರು ಸಮಸ್ತವನ್ನು ಸೃಷ್ಟಿಸಿದವರು. ಇಸ್ರಯೇಲ್ ಗೋತ್ರ ಅವರಿಗೆ ಸ್ವಾಸ್ತ್ಯ. ‘ಸೇನಾಧೀಶ್ವರ ಸರ್ವೇಶ್ವರ’ ಅವರ ನಾಮಧೇಯ.


ಆಕಾಶವನು ಹರಡಿ ಭೂಮಿಯನು ಸ್ಥಾಪಿಸಿದಾ ನಿನ್ನ ಸೃಷ್ಟಿಕರ್ತ ಸರ್ವೇಶ್ವರನನು ಮರೆತುಬಿಟ್ಟೆಯಾ? ನಾಶಮಾಡಲು ಹವಣಿಸುವ ಹಿಂಸಕನ ಕ್ರೋಧಕೆ ನೀ ಎಡೆಬಿಡದೆ ದಿನವೆಲ್ಲ ಅಂಜುತ್ತಿರಬೇಕೆ? ಆ ಹಿಂಸಕನ ಕ್ರೋಧವು ಈಗ ಹೋದುದೆಲ್ಲಿಗೆ?


ನಮ್ಮ ಉದ್ಧಾರಕನ ನಾಮಧೇಯ ಸೇನಾಧೀಶ್ವರ ಸರ್ವೇಶ್ವರ ಆತನೇ ಇಸ್ರಯೇಲರಿಗೆ ಪರಮಪವಿತ್ರ.


ದೈವ ಶ್ರೀನಗರವೇ, ಕೇಳು ಇವನ್ನು I ನಿನ್ನ ಕುರಿತ ಅತಿಶಯೋಕ್ತಿಗಳನು : II


ಸರ್ವಸ್ತುತಿಗೆ ಪಾತ್ರ, ಪ್ರಭುವು ಪರಮೋನ್ನತ I ದೇವನಗರದಲಿ ಆತನ ಪವಿತ್ರ ಪರ್ವತ II


ಪರಿಶುದ್ಧ ನಗರದಲ್ಲಿದ್ದ ಎಲ್ಲ ಲೇವಿಯರು ಇನ್ನೂರ ಎಂಬತ್ತನಾಲ್ಕುಮಂದಿ.


ಇಸ್ರಯೇಲರ ಪ್ರಮುಖರು ಮಾತ್ರ ಜೆರುಸಲೇಮಿನಲ್ಲಿ ವಾಸಿಸುತ್ತಿದ್ದರು. ಉಳಿದ ಜನರೊಳಗೆ ಹತ್ತುಹತ್ತು ಮಂದಿಯಲ್ಲಿ ಒಂಬತ್ತುಮಂದಿ ತಮ್ಮ ತಮ್ಮ ಊರುಗಳಲ್ಲಿ ಇದ್ದುಕೊಂಡು, ಒಬ್ಬನು ಪವಿತ್ರ ನಗರವಾದ ಜೆರುಸಲೇಮಿನಲ್ಲಿ ವಾಸಿಸುವುದಕ್ಕಾಗಿ, ಅಲ್ಲಿಗೆ ಬರುವಂತೆ ಚೀಟುಹಾಕಿ ಗೊತ್ತುಮಾಡಿದರು.


“ಒಬ್ಬ ಲೇವಿ ನನ್ನ ಮನೆಯಲ್ಲಿ ಯಾಜಕನಾಗಿರುವುದರಿಂದ ಸರ್ವೇಶ್ವರ ನನ್ನನ್ನು ಆಶೀರ್ವದಿಸುವರೆಂದು ಬಲ್ಲೆ,” ಎಂದುಕೊಂಡನು.


ಈಜಿಪ್ಟಿನಲ್ಲಿ ವಾಸವಾಗಿರುವ ಯೆಹೂದ್ಯರೇ, ನೀವೆಲ್ಲರು ಸರ್ವೇಶ್ವರನಾದ ನಾನು ಹೇಳುವ ಮಾತನ್ನು ಕೇಳಿರಿ: ‘ಸರ್ವೇಶ್ವರನಾದ ದೇವರ ಜೀವದಾಣೆ’ ಎಂದು ನನ್ನ ಹೆಸರನ್ನು ಬಾಯಿಂದ ಉಚ್ಚರಿಸಲಿಕ್ಕೆ ಈಜಿಪ್ಟಿನಲ್ಲಿ ಯಾವ ಯೆಹೂದ್ಯನು ಇನ್ನಿರನು ಎಂಬುದಾಗಿ ನನ್ನ ಮಹಾನಾಮದ ಮೇಲೆ ಆಣೆ ಇಟ್ಟಿದ್ದೇನೆ.


ನಿನ್ನ ದೇವರಾದ ಸರ್ವೇಶ್ವರ ನಾನೆ ಸಮುದ್ರವನು ಕಲ್ಲೋಲಗೊಳಿಸುವವನು ನಾನೆ ಅದರ ಅಲೆಗಳನು ಭೋರ್ಗರೆಸುವವನು ನಾನೆ ನನ್ನ ಹೆಸರು ಸೇನಾಧೀಶ್ವರ ಸರ್ವೇಶ್ವರ!


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು