Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 48:11 - ಕನ್ನಡ ಸತ್ಯವೇದವು C.L. Bible (BSI)

11 ಇದನ್ನು ಮಾಡುವೆ ನನಗೋಸ್ಕರವೆ ಇದನ್ನು ಮಾಡುವೆ ಕಳಂಕಬಾರದಂತೆ ನನ್ನ ಹೆಸರಿಗೆ ಸಲ್ಲಗೊಡಿಸೆನು ನನ್ನ ಮಹಿಮೆಯನು ಮತ್ತೊಬ್ಬನಿಗೆ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 ನನಗಾಗಿ, ನನಗೋಸ್ಕರವೇ, ಇದನ್ನು ಮಾಡುವೆನು. ಏಕೆಂದರೆ ನನ್ನ ಹೆಸರು ಹೇಗೆ ಅಪವಿತ್ರವಾಗುವುದು? ನನ್ನ ಮಹಿಮೆಯನ್ನು ಮತ್ತೊಬ್ಬನಿಗೆ ಸಲ್ಲಗೊಡಿಸೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

11 ನನಗಾಗಿ, ನನಗೋಸ್ಕರವೇ, ಇದನ್ನು ಮಾಡುವೆನು; ನನ್ನ ಹೆಸರು ಕೆಡಬಾರದಷ್ಟೆ; ನನ್ನ ಮಹಿಮೆಯನ್ನು ಮತ್ತೊಬ್ಬನಿಗೆ ಸಲ್ಲಗೊಡಿಸೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

11 ನಾನು ಇದನ್ನು ನನಗಾಗಿ ಮಾಡುವೆನು. ನಾನು ನಿಮ್ಮನ್ನು ಪ್ರಾಮುಖ್ಯವಾದ ವ್ಯಕ್ತಿಗಳೆಂದು ಪರಿಗಣಿಸುವುದಿಲ್ಲ. ನನ್ನ ಮಹಿಮೆಯನ್ನು ಮತ್ತು ನನಗೆ ಸಲ್ಲತಕ್ಕ ಸ್ತುತಿಯನ್ನು ತೆಗೆದುಕೊಳ್ಳಲು ನಾನು ಸುಳ್ಳುದೇವರುಗಳಿಗೆ ಅವಕಾಶ ಕೊಡುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

11 ನನಗಾಗಿಯೇ, ನನಗೋಸ್ಕರವೇ ಇದನ್ನು ಮಾಡುವೆನು. ಏಕೆಂದರೆ ನನ್ನ ಹೆಸರು ಹೇಗೆ ಅಪವಿತ್ರವಾಗುವುದು? ನನ್ನ ಮಹಿಮೆಯನ್ನು ನಾನು ಮತ್ತೊಬ್ಬನಿಗೆ ಸಲ್ಲಗೊಡಿಸೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 48:11
23 ತಿಳಿವುಗಳ ಹೋಲಿಕೆ  

ನಾನೇ ಸರ್ವೇಶ್ವರ, ನನ್ನ ನಾಮವು ಅದುವೆ. ಸಲ್ಲಿಸೆನು ನನ್ನ ಮಹಿಮೆಯನ್ನು ಮತ್ತೊಬ್ಬರಿಗೆ ನನ್ನ ಸ್ತೋತ್ರವನು ವಿಗ್ರಹಗಳ ಪಾಲಿಗೆ.


ಆದರೂ, ‘ನಿಮ್ಮನ್ನು ಈಜಿಪ್ಟಿನಿಂದ ಪಾರುಮಾಡುವೆನು,’ ಎಂಬುದಾಗಿ ಜನಾಂಗಗಳ ಮುಂದೆಯೇ ನನ್ನನ್ನು ಇವರಿಗೆ ಪ್ರಕಟಿಸಿಕೊಂಡೆನಲ್ಲಾ ಎಂದು ಯೋಚಿಸಿ ಅವರ ಸುತ್ತಮುತ್ತಲಿನ ಆ ಜನಾಂಗಗಳ ಮುಂದೆ ನನ್ನ ಹೆಸರು ಅಪಕೀರ್ತಿಗೆ ಗುರಿಯಾಗದಂತೆ ನನ್ನ ಹೆಸರಿನ ನಿಮಿತ್ತವೇ ಸಹಿಸಿಕೊಂಡೆ.


ಆದರೂ ಯಾವ ಜನಾಂಗಗಳ ಮುಂದೆ ಅವರನ್ನು ಪಾರುಮಾಡಿದೆನೋ ಆ ಜನಾಂಗಗಳ ಮುಂದೆ ನನ್ನ ಹೆಸರು ಅಪಕೀರ್ತಿಗೆ ಬರಬಾರದೆಂದು ನನ್ನ ಹೆಸರಿನ ನಿಮಿತ್ತವೇ ಸಹಿಸಿಕೊಂಡೆ.


ನನಗಾಗಿಯೂ ನನ್ನ ದಾಸ ದಾವೀದನಿಗಾಗಿಯೂ ಈ ಪಟ್ಟಣವನ್ನು ಉಳಿಸಿ ಕಾಪಾಡುವೆನು - ಎಂದಿದ್ದಾರೆ,” ಎಂದು ಹೇಳಿದನು.


ಆದರೂ ನಾನು ಯಾವ ಜನಾಂಗಗಳ ಮುಂದೆ ಅವರನ್ನು ಬಿಡುಗಡೆ ಮಾಡಿದೆನೋ, ಆ ಜನಾಂಗಗಳ ಮುಂದೆ ನನ್ನ ಹೆಸರು ಅಪಕೀರ್ತಿಗೆ ಗುರಿಯಾಗಬಾರದೆಂದು ನನ್ನ ಹೆಸರಿನ ನಿಮಿತ್ತವೇ ಸಹಿಸಿಕೊಂಡು, ಕೈಯನ್ನು ಹಿಂದಕ್ಕೆ ತೆಗೆದುಕೊಂಡೆ.


ಸರ್ವೇಶ್ವರನ ದಯೆ ನಿಮ್ಮನ್ನು ಸ್ವಕೀಯ ಜನರನ್ನಾಗಿ ಆರಿಸಿಕೊಂಡ ಮೇಲೆ, ಅವರು ತಮ್ಮ ಮಹೋನ್ನತ ನಾಮದ ನಿಮಿತ್ತ, ನಿಮ್ಮನ್ನು ಖಂಡಿತವಾಗಿ ಕೈಬಿಡುವುದಿಲ್ಲ.


ಆದರೂ ನಾನೇ ನಾನಾಗಿ ಅಳಿಸಿಬಿಡುವೆ ನಿನ್ನ ದ್ರೋಹಗಳನು, ನನ್ನ ನೆನಪಿನಿಂದ ತೆಗೆದುಹಾಕುವೆ ನಿನ್ನ ಪಾಪಗಳನು.


ಸರ್ವೇಶ್ವರಾ, ನಮ್ಮ ದ್ರೋಹಗಳು ಹಲವು ನಿಮಗೆ ವಿರುದ್ಧ ಪಾಪಮಾಡಿದೆವು. ನಮ್ಮ ಅಪರಾಧಗಳೇ ನಮಗೆ ವಿರುದ್ಧ ಸಾಕ್ಷಿ ನೀಡುತ್ತಿವೆ ಆದರೂ ನಿಮ್ಮ ನಾಮದ ನಿಮಿತ್ತ ಕೈನೀಡು ನಮಗೆ.


ಇಸ್ರಯೇಲ್ ವಂಶದವರೇ, ನಿಮ್ಮ ದುರ್ನಡತೆಗೂ ದುಷ್ಕೃತ್ಯಗಳಿಗೂ ತಕ್ಕ ಹಾಗೆ ನಾನು ನಿಮ್ಮನ್ನು ಸಹಿಸಿಕೊಂಡಿರುವಾಗ, ನಾನೇ ಸರ್ವೇಶ್ವರ ಎಂದು ನಿಮಗೆ ತಿಳಿಯುವುದು; ಇದು ಸರ್ವೇಶ್ವರನಾದ ದೇವರ ನುಡಿ.”


“ಇಸ್ರಯೇಲ್ ವಂಶದವರೇ, ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ಹೋಗಿರಿ, ನಿಮ್ಮ ವಿಗ್ರಹಗಳನ್ನು ಪೂಜಿಸಿರಿ; ಮುಂದಕ್ಕಾದರು ನನ್ನ ಮಾತನ್ನು ಕೇಳಿಯೇ ಕೇಳುವಿರಿ; ಇನ್ನು ಮೇಲಾದರು ನನ್ನ ಪರಿಶುದ್ಧನಾಮವನ್ನು ನಿಮ್ಮ ಬಲಿಗಳಿಂದ ಹಾಗೂ ವಿಗ್ರಹಗಳಿಂದ ನೀವು ಅಪಕೀರ್ತಿಗೆ ಒಳಪಡಿಸಲಾರಿರಿ.


ಈ ಕಾರಣದಿಂದ. “ನಿಮ್ಮ ದೆಸೆಯಿಂದಲೇ ಯೆಹೂದ್ಯರಲ್ಲದವರು ದೇವರ ಹೆಸರನ್ನು ದೂಷಿಸುತ್ತಾರೆ,” ಎಂದು ಪವಿತ್ರಗ್ರಂಥದಲ್ಲಿ ಬರೆದಿದೆ.


ಏಕೆಂದರೆ, ತಮ್ಮನ್ನು ಗೌರವಿಸುವಂತೆಯೇ ಜನರೆಲ್ಲರು ಪುತ್ರನನ್ನು ಗೌರವಿಸಬೇಕೆಂಬುದು ಅವರ ಬಯಕೆ. ಪುತ್ರನನ್ನು ಗೌರವಿಸದವನು ಆತನನ್ನು ಕಳುಹಿಸಿದ ಪಿತನನ್ನೂ ಗೌರವಿಸುವುದಿಲ್ಲ.


ಈಗಲೂ ಅನ್ಯರು ನನ್ನ ಜನರನ್ನು ಕಾರಣವಿಲ್ಲದೆ ಕರೆದೊಯ್ದಿದ್ದಾರೆ. ಇಲ್ಲಿ ನಾನು ಸುಮ್ಮನಿರುವುದಾದರೂ ಹೇಗೆ? ಆಳುತ್ತಿರುವವರು ನನ್ನ ಪ್ರಜೆಯಾದವರನ್ನು ಗೋಳಿಡಿಸುತ್ತಿದ್ದಾರೆ, ಎಡೆಬಿಡದೆ ನನ್ನ ಶ್ರೀ ನಾಮವು ದಿನವೆಲ್ಲ ದೂಷಣೆಗೆ ಗುರಿಯಾಗುತ್ತಿದೆ.


‘ಈ ಕಾರ್ಯಗಳನ್ನು ನಡೆಸಿದ್ದು ನನ್ನ ವಿಗ್ರಹವೇ ವಿಧಿಸಿದ್ದು ನನ್ನ ಕೆತ್ತನೆಯ ಬೊಂಬೆಯೇ, ಎರಕದ ಮೂರ್ತಿಯೇ’ ಎಂದು ನೀ ಜಂಬ ಕೊಚ್ಚಿಕೊಳ್ಳದಂತೆ ಪುರಾತನ ಕಾಲದಲ್ಲೆ ನಾನಿವುಗಳನು ಮುಂತಿಳಿಸಿದೆ. ಅವುಗಳು ನೆರವೇರುವುದಕ್ಕೆ ಮುಂಚೆಯೇ ಪ್ರಕಟಿಸಿದೆ.


ನಿನ್ನ ನಾಮದ ನಿಮಿತ್ತ ನನ್ನನು ಈಕ್ಷಿಸು I ಎನ್ನ ಘೋರ ಪಾಪವನು ಪ್ರಭು ಕ್ಷಮಿಸು II


ಆದರೂ ತನ್ನ ನಾಮಪ್ರಯುಕ್ತ ರಕ್ಷಿಸಿದನವರನು I ಪ್ರಕಟಿಸಿದನಾತ ಹೀಗೆ ತನ್ನ ಶಕ್ತಿಸಾಮರ್ಥ್ಯವನು II


ನಮಗಲ್ಲ ಹೇ ಪ್ರಭು, ನಮಗಲ್ಲ ಮಹಿಮೆ I ನಿನ್ನ ನಾಮಕೇ ಸಲ್ಲಲಿ ಆ ಮಹಿಮೆ I ನಿನ್ನ ನೀತಿ ಸತ್ಯತೆಗಳ ನಿಮಿತ್ತವೆ II


ಆದರೂ ನನ್ನ ಹೆಸರು ಕೆಡದಂತೆ ತಡೆಹಿಡಿವೆನು ನಿನ್ನ ಮೇಲಣ ಕೋಪವನು; ನನ್ನ ಕೀರ್ತಿಗೆ ಕಳಂಕ ಬಾರದಂತೆ ತಾಳಿಕೊಳ್ಳುವೆನು, ನಿರ್ಮೂಲಮಾಡದೆ ನಿನ್ನನು.


ಓ ನಮ್ಮ ದೇವರೇ, ನಿಮ್ಮ ದಾಸನ ಪ್ರಾರ್ಥನೆ ವಿಜ್ಞಾಪನೆಗಳನ್ನು ಈಗ ಆಲಿಸಿರಿ. ಹಾಳಾಗಿರುವ ನಿಮ್ಮ ಪವಿತ್ರಾಲಯವನ್ನು ಸರ್ವೇಶ್ವರ ಎಂಬ ನಿಮ್ಮ ಹೆಸರಿನ ನಿಮಿತ್ತವೇ ಪ್ರಸನ್ನ ಮುಖದಿಂದ ನೋಡಿ.


ಯೌವನದೆನ್ನ ಪಾಪಪ್ರವೃತ್ತಿಗಳ ಮನದಲ್ಲಿಟ್ಟುಕೊಳ್ಳಬೇಡ I ನಿನ್ನೊಲುಮೆ ನಲ್ಮೆಗಳ ನಿಮಿತ್ತ ಪ್ರಭು, ನನ್ನ ನೆನೆಯದಿರಬೇಡ II


“ಆದಕಾರಣ - ನೀನು ಇಸ್ರಯೇಲ್ ವಂಶದವರಿಗೆ ಹೀಗೆ ನುಡಿ - ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ಇಸ್ರಯೇಲ್ ವಂಶದವರೇ, ನಿಮ್ಮ ನಿಮಿತ್ತವಲ್ಲ, ನೀವು ಜನಾಂಗಗಳೊಳಗೆ ಸೇರಿ ಅಪಕೀರ್ತಿಗೆ ಗುರಿಮಾಡಿದ ನನ್ನ ಪರಿಶುದ್ಧ ನಾಮದ ನಿಮಿತ್ತವೆ, ಈ ರಕ್ಷಣಾಕಾರ್ಯವನ್ನು ಮಾಡುತ್ತೇನೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು