Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 47:9 - ಕನ್ನಡ ಸತ್ಯವೇದವು C.L. Bible (BSI)

9 ಒಂದೇ ದಿನದೊಳಗೆ, ಒಂದೇ ಕ್ಷಣದೊಳಗೆ ಪುತ್ರಶೋಕ, ವೈಧವ್ಯ - ಇವೆರಡು ಒದಗುವುವು ನಿನಗೆ. ಎಷ್ಟೇ ಮಂತ್ರತಂತ್ರಗಳನು ನಡೆಸಿದರೂ ಅನುಭವಿಸುವೆ ನೀ ಪೂರ್ತಿಯಾಗಿ ಇವುಗಳನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9 ಒಂದೇ ದಿನದೊಳಗೆ, ಒಂದು ಕ್ಷಣದಲ್ಲಿ, ಪುತ್ರಶೋಕ ಮತ್ತು ವಿಧವೆಯ ಸ್ಥಿತಿ ಇವೆರಡೂ ನಿನಗುಂಟಾಗುವವು. ನೀನು ಎಷ್ಟು ಮಾಟಮಾಡಿದರೂ, ಎಷ್ಟೇ ಮಂತ್ರತಂತ್ರಗಳನ್ನು ನಡೆಸಿದರೂ ಇವುಗಳನ್ನು ಸಂಪೂರ್ಣವಾಗಿ ಅನುಭವಿಸುವಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

9 ಒಂದೇ ದಿನದೊಳಗೆ, ಒಂದು ಕ್ಷಣದಲ್ಲಿ, ಪುತ್ರಶೋಕ, ವೈಧವ್ಯ, ಇವೆರಡೂ ನಿನಗುಂಟಾಗುವವು; ನೀನು ಎಷ್ಟು ಮಾಟಮಾಡಿದರೂ ಎಷ್ಟೇ ಮಂತ್ರತಂತ್ರಗಳನ್ನು ನಡಿಸಿದರೂ ಇವುಗಳನ್ನು ಸಂಪೂರ್ಣವಾಗಿ ಅನುಭವಿಸುವಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

9 ಒಂದೇ ದಿನದೊಳಗೆ, ಒಂದೇ ಕ್ಷಣದಲ್ಲಿ ನಿನಗೆ ಎರಡು ಸಂಗತಿಗಳು ಸಂಭವಿಸುತ್ತವೆ. ನೀನು ನಿನ್ನ ಮಕ್ಕಳನ್ನು ಕಳೆದುಕೊಳ್ಳುವೆ, ಆ ಬಳಿಕ ನೀನು ನಿನ್ನ ಗಂಡನನ್ನು ಕಳಕೊಳ್ಳುವೆ. ಹೌದು, ಈ ವಿಷಯಗಳು ನಿನಗೆ ಖಂಡಿತವಾಗಿ ಸಂಭವಿಸುವವು. ನಿನ್ನಲ್ಲಿರುವ ಎಲ್ಲಾ ಮಾಟಮಂತ್ರಗಳು ನಿನ್ನನ್ನು ಕಾಪಾಡಲಾರವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

9 ಒಂದೇ ದಿನದೊಳಗೆ, ಒಂದು ಕ್ಷಣದಲ್ಲೇ, ಪುತ್ರ ಶೋಕ ಮತ್ತು ವಿಧವೆಯ ಸ್ಥಿತಿಯು ಇವೆರಡೂ ನಿನಗೆ ಬರುವುದು. ನಿನ್ನ ಮಂತ್ರಗಳು ಬಹಳವಾಗಿರುವುದರಿಂದಲೂ, ನಿನ್ನ ಮಾಟಗಳು ಹೆಚ್ಚಾಗಿರುವುದರಿಂದಲೂ, ಅವು ಸಂಪೂರ್ಣವಾಗಿ ನಿನ್ನ ಮೇಲೆ ಬರುವುವು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 47:9
26 ತಿಳಿವುಗಳ ಹೋಲಿಕೆ  

ಎಲ್ಲವೂ ಶಾಂತ, ಸುಭದ್ರವೆಂದು ಜನರು ಎಣಿಸುತ್ತಿರುವಾಗಲೇ, ಗರ್ಭಿಣಿಗೆ ಪ್ರಸವವೇದನೆ ಉಂಟಾಗುವಂತೆ, ವಿನಾಶವು ಫಕ್ಕನೆ ಅವರ ಮೇಲೆ ಬಂದೆರಗುವುದು. ಇದರಿಂದ ಯಾರೂ ತಪ್ಪಿಸಿಕೊಳ್ಳುವಂತಿಲ್ಲ.


ಕ್ಷಣ ಮಾತ್ರದಲಿ ಅಳಿದು ಹಾಳಾಗುವರು I ಭೀಕರವಾಗಿ ನಿರ್ಮೂಲವಾಗುವರು II


ಇದೆಲ್ಲ ಆಗುವುದು ಅಮಿತ ಹಾದರದ ನಿಮಿತ್ತ ರಾಷ್ಟ್ರಗಳನು ತನ್ನ ಬೆಡಗು ಬಿನ್ನಾಣಗಳಿಂದ ಜಾರತನಕ್ಕೂ ಗುಲಾಮತನಕ್ಕೂ ಆಕೆ ತಂದುದರಿಂದ.


ಆದರೆ ಶುನಕ ಸಮಾನರೂ ಮಾಟಮಂತ್ರಗಾರರೂ ಕಾಮುಕರೂ ಕೊಲೆಗಾರರೂ ವಿಗ್ರಹಾರಾಧಕರೂ ಅಸತ್ಯವಾದಿಗಳೂ ನಗರದ ಹೊರಗೆ ಬಿದ್ದಿರುವರು.


ಆದರೆ ಹೇಡಿಗಳಿಗೆ, ಹೇಯಕೃತ್ಯಗಾರರಿಗೆ ಅವಿಶ್ವಾಸಿಗಳಿಗೆ, ಹಲವು ಅಸತ್ಯಗಾರರಿಗೆ ಕಾಮುಕರಿಗೆ, ಕೊಲೆಗಾರರಿಗೆ ವಿಗ್ರಹಾರಾಧಕರಿಗೆ, ಮಾಟಮಂತ್ರಗಾರರಿಗೆ ಗಂಧಕದಿಂದುರಿಯುವ ಅಗ್ನಿಸರೋವರವೇ ಗತಿ ಇದುವೇ ಅವರೆಲ್ಲರ ಎರಡನೆಯ ಮೃತಿ.” ಎಂದು ಹೇಳಿದನು.


ಕೂಡಲೆ ರಾಜನು ಗಟ್ಟಿಯಾಗಿ ಕೂಗಿ ಮಂತ್ರವಾದಿ, ಪಂಡಿತ ಹಾಗು ಶಾಕುನಿಕರನ್ನು ಕರೆಯಿಸಿದನು. ಬಾಬಿಲೋನಿನ ಆ ವಿದ್ವಾಂಸರಿಗೆ, “ಯಾವನು ಈ ಬರಹವನ್ನು ಓದಿ ಇದರ ಅರ್ಥವನ್ನು ನನಗೆ ತಿಳಿಸುತ್ತಾನೋ ಅವನಿಗೆ ಕೆನ್ನೀಲಿ ರಾಜವಸ್ತ್ರವನ್ನು ತೊಡಿಸಿ, ಕೊರಳಿಗೆ ಚಿನ್ನದ ಹಾರವನ್ನು ಹಾಕಿಸಿ, ಅವನನ್ನು ರಾಜ್ಯದ ಮೂವರು ಮುಖ್ಯಾಧಿಕಾರಿಗಳಲ್ಲಿ ಒಬ್ಬನನ್ನಾಗಿ ನೇಮಿಸುವೆನು,” ಎಂದು ಹೇಳಿದನು.


ಜೋಯಿಸರು, ಮಂತ್ರವಾದಿಗಳು, ಪಂಡಿತರು, ಶಾಕುನಿಕರು ಇವರೆಲ್ಲರು ನನ್ನ ಸಮ್ಮುಖಕ್ಕೆ ಬಂದರು. ನಾನು ಕನಸನ್ನು ತಿಳಿಸಿದೆ. ಆದರೆ ಅದರ ಅರ್ಥವನ್ನು ಅವರಿಂದ ತಿಳಿಸಲಾಗಲಿಲ್ಲ.


ಆಗ ಆ ರಾಜನು ತನ್ನ ಕನಸಿನ ಅರ್ಥ ತಿಳಿಸಬೇಕೆಂದು ಜೋಯಿಸರನ್ನೂ ಮಂತ್ರವಾದಿಗಳನ್ನೂ ಮಾಟಗಾರರನ್ನೂ ಪಂಡಿತರನ್ನೂ ಕರೆಯಿಸಿದನು. ಅವರು ಆಸ್ಥಾನಕ್ಕೆ ಬಂದು ರಾಜನ ಮುಂದೆ ನಿಂತುಕೊಂಡರು.


ಪೊಡವಿ ನೊಂದು ನಡುಗುತ್ತಿದೆ! ಏಕೆಂದರೆ ಬಾಬಿಲೋನ್ ದೇಶ ಹಾಳುಬಿದ್ದು ನಿರ್ಜನವಾಗಲಿ ಎಂದು ಸರ್ವೇಶ್ವರ ಅದರ ವಿಷಯವಾಗಿ ಮಾಡಿಕೊಂಡಿರುವ ಸಂಕಲ್ಪ ಅಚಲವಾಗಿದೆ.


ಅದಕ್ಕೆ ಅವಳು, “ನನ್ನನ್ನು ‘ನವೊಮಿ’ ಎಂದು ಕರೆಯಬೇಡಿ; ‘ಮಾರಾ’ ಎಂದು ಕರೆಯಿರಿ. ಏಕೆಂದರೆ ಸರ್ವಶಕ್ತ ದೇವರು ನನ್ನನ್ನು ಬಹಳ ದುಃಖಪಡಿಸಿದ್ದಾರೆ.


ಮಹ್ಲೋನ್ ಮತ್ತು ಕಿಲ್ಯೋನ್ ಸಹ ತೀರಿಹೋದರು. ಹೀಗೆ ನವೊಮಿ ತನ್ನ ಪತಿಯನ್ನೂ ಇಬ್ಬರು ಪುತ್ರರನ್ನೂ ಕಳೆದುಕೊಂಡು ಒಬ್ಬಂಟಿಗಳು ಆದಳು.


ಅವರ ಮಕ್ಕಳನ್ನು ಬಂಡೆಗೆ ಅಪ್ಪಳಿಸಲಾಗುವುದು. ಅವರ ಮನೆಗಳನ್ನು ಸೂರೆಮಾಡಲಾಗುವುದು. ಅವರ ಹೆಂಗಳೆಯರು ಅತ್ಯಾಚಾರಕ್ಕೆ ಈಡಾಗುವರು.


ಇಗೋ, ಸವಾರರು ಜೋಡಿಜೋಡಿಯಾಗಿ ಬರುತಿಹರು,” ಎಂದು ಕೂಗಿ ಹೇಳುತ್ತಿದ್ದಾನೆ. ಅನಂತರ ಅವನು, “ಬಾಬಿಲೋನ್ ಬಿದ್ದುಹೋಯಿತು. ಅದರ ಪೂಜಾ ವಿಗ್ರಹಗಳೆಲ್ಲ ಒಡೆದು ಬೀದಿಪಾಲಾಗಿವೆ,” ಎಂದನು.


ಇಂತಿರಲು ನಿನಗೊದಗುವುದು ಮಂತ್ರಕ್ಕು ಮೀರಿದ ಆಪತ್ತು ನಿನ್ನ ಮೇಲೆರಗುವುದು ಪರಿಹರಿಸಲಾಗದ ವಿಪತ್ತು ತಟ್ಟನೆ ತಟ್ಟುವುದು ನಿನಗೆ ತಪ್ಪಿಸಲಾಗದ ಕುತ್ತು.


ಏಳು ಮಕ್ಕಳನ್ನು ಕಳೆದುಕೊಂಡ ತಾಯಿ ಪ್ರಾಣಬಿಟ್ಟಂತಿದ್ದಾಳೆ ದುಃಖದಿಂದ ಬಳಲಿ ಅವಳ ಪಾಲಿಗೆ ಸೂರ್ಯ ಮುಳುಗಿದ್ದಾನೆ ಹಾಡುಹಗಲಲ್ಲೆ. ಆಶಾಭಂಗಪಟ್ಟಿದ್ದಾಳೆ, ಅವಮಾನಕ್ಕೆ ಈಡಾಗಿದ್ದಾಳೆ. ಖಡ್ಗಕ್ಕೆ ಗುರಿಮಾಡುವೆ ಅವಳ ಉಳಿದ ಸಂತಾನವನ್ನು ಶತ್ರುಗಳ ಕಣ್ಣೆದುರಿಗೆ. ಇದು ಸರ್ವೇಶ್ವರನಾದ ನನ್ನ ನುಡಿ.”


ಅದೇ ರಾತ್ರಿ ಬಾಬಿಲೋನಿನ ರಾಜ ಬೇಲ್ಶಚ್ಚರನು ಕೊಲ್ಲಲ್ಪಟ್ಟನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು