Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 47:11 - ಕನ್ನಡ ಸತ್ಯವೇದವು C.L. Bible (BSI)

11 ಇಂತಿರಲು ನಿನಗೊದಗುವುದು ಮಂತ್ರಕ್ಕು ಮೀರಿದ ಆಪತ್ತು ನಿನ್ನ ಮೇಲೆರಗುವುದು ಪರಿಹರಿಸಲಾಗದ ವಿಪತ್ತು ತಟ್ಟನೆ ತಟ್ಟುವುದು ನಿನಗೆ ತಪ್ಪಿಸಲಾಗದ ಕುತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 ಹೀಗಿರಲು ನೀನು ಮಂತ್ರಿಸಿ ನಿವಾರಿಸಲಾರದ ಕೇಡು ನಿನಗೆ ಸಂಭವಿಸುವುದು, ನೀನು ಪರಿಹರಿಸಲಾಗದ ವಿಪತ್ತು ನಿನ್ನ ಮೇಲೆ ಬೀಳುವುದು. ನೀನು ತಪ್ಪಿಸಿಕೊಳ್ಳಲಾಗದ ನಾಶನವು ನಿನ್ನ ಮೇಲೆ ಪಕ್ಕನೆ ಬರುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

11 ಹೀಗಿರಲು ನೀನು ಮಂತ್ರಿಸಿ ನಿವಾರಿಸಲಾರದ ಕೇಡು ನಿನಗೆ ಸಂಭವಿಸುವದು, ನೀನು ಪರಿಹರಿಸಲಾಗದ ವಿಪತ್ತು ನಿನ್ನ ಮೇಲೆ ಬೀಳುವದು; ನೀನು ತಪ್ಪಿಸಲರಿಯದ ನಾಶನವು ನಿನಗೇ ತಟ್ಟನೆ ಉಂಟಾಗುವದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

11 “ಆದರೆ ವಿಪತ್ತು ನಿನಗೆ ಪ್ರಾಪ್ತವಾಗುವದು. ಅವು ಯಾವಾಗ ಸಂಭವಿಸುತ್ತದೋ ನಿನಗೆ ತಿಳಿಯದು. ಆದರೆ ವಿಪತ್ತು ಸಂಭವಿಸುವದು. ನೀನು ಏನೇ ಮಾಡಿದರೂ ಆ ವಿಪತ್ತನ್ನು ತಡೆಯಲಾಗದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

11 ಆದ್ದರಿಂದ ನಿನ್ನ ಮಂತ್ರಕ್ಕೂ ಮೀರಿದ ಕೇಡು ನಿನ್ನ ಮೇಲೆ ಬರುವುದು. ನೀನು ಪರಿಹರಿಸಲಾಗದ ವಿಪತ್ತು ನಿನ್ನ ಮೇಲೆ ಬೀಳುವುದು. ನಿನಗೆ ತಿಳಿಯದ ನಾಶನವು ಫಕ್ಕನೆ ನಿನ್ನ ಮೇಲೆ ಬರುವುದು.”

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 47:11
28 ತಿಳಿವುಗಳ ಹೋಲಿಕೆ  

ಎಲ್ಲವೂ ಶಾಂತ, ಸುಭದ್ರವೆಂದು ಜನರು ಎಣಿಸುತ್ತಿರುವಾಗಲೇ, ಗರ್ಭಿಣಿಗೆ ಪ್ರಸವವೇದನೆ ಉಂಟಾಗುವಂತೆ, ವಿನಾಶವು ಫಕ್ಕನೆ ಅವರ ಮೇಲೆ ಬಂದೆರಗುವುದು. ಇದರಿಂದ ಯಾರೂ ತಪ್ಪಿಸಿಕೊಳ್ಳುವಂತಿಲ್ಲ.


ನಿನಗೆ ಕೊಡಲಾದ ಬೋಧನೆಯನ್ನೂ ಅದನ್ನು ನೀನು ಕೇಳಿದ ರೀತಿಯನ್ನೂ ನೆನಪಿಗೆ ತಂದುಕೋ. ಅದರಂತೆ ನಡೆದು ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖನಾಗು. ನೀನು ಎಚ್ಚೆತ್ತುಕೊಳ್ಳದಿದ್ದರೆ ನಾನು ಕಳ್ಳನು ಬರುವಂತೆ ಬರುತ್ತೇನೆ. ನಾನು ಯಾವ ಗಳಿಗೆಯಲ್ಲಿ ನಿನ್ನ ಮೇಲೆ ಧಾಳಿಮಾಡುತ್ತೇನೆಂದೇ ನಿನಗೆ ತಿಳಿಯದು.


ಅಲ್ಲಿಂದ ನೀನು ಹೊರಗೆ ಬರಬೇಕಾದರೆ ಕಡೇ ಕಾಸನ್ನೂ ಬಿಡದೆ ಎಲ್ಲವನ್ನೂ ಸಲ್ಲಿಸಬೇಕಾಗುವುದೆಂಬುದು ನಿಶ್ಚಯ,” ಎಂದರು.


ದೇವನ ನೆನೆಯದವರೇ, ನೀಡಿರಿ ಗಮನವನು I ಇಲ್ಲವಾದರೆ ಛಿನ್ನಛಿನ್ನವಾಗಿಸಿಬಿಟ್ಟೇನು I ನನ್ನ ಕೈಯಿಂದ ತಪ್ಪಿಸುವವರಾರು ನಿಮ್ಮನು? II


ಅತ್ತ ನಮ್ಮ ವಿರೋಧಿಗಳು, “ಅವರಿಗೆ ತಿಳಿಯದೆ, ಗೋಚರವಾಗದೆ, ಫಕ್ಕನೆ ಅವರೊಳಗೆ ನುಗ್ಗಿ ಅವರನ್ನು ಕೊಂದು ಕೆಲಸವನ್ನು ನಿಲ್ಲಿಸಿಬಿಡೋಣ,” ಎಂದುಕೊಳ್ಳುತ್ತಿದ್ದರು.


ಬಳಿಕ ತನಗೆ ಬರಬೇಕಾಗಿದ್ದ ಸಾಲವನ್ನು ತೀರಿಸುವವರೆಗೂ ಅವನನ್ನು ಕಠಿಣ ಶಿಕ್ಷೆಗೆ ಗುರಿಪಡಿಸಿದ.


ಆಗ ಸರ್ವೇಶ್ವರ ಸ್ವಾಮಿಯ ದೂತನು ಹೊರಟುಬಂದು ಅಸ್ಸೀರಿಯರ ಪಾಳೆಯದಲ್ಲಿ 185,000 ಮಂದಿ ಸೈನಿಕರನ್ನು ಮರಣಕ್ಕೆ ಈಡುಮಾಡಿದನು; ಬೆಳಿಗ್ಗೆ ಎದ್ದುನೋಡುವಾಗ ಅವರೆಲ್ಲರೂ ಹೆಣಗಳಾಗಿದ್ದರು.


ನೋವನು ನಾವೆಯನ್ನು ಹತ್ತುವ ದಿನದ ತನಕ ಜನರು ತಿನ್ನುತ್ತಾ ಕುಡಿಯುತ್ತಾ ಇದ್ದರು; ಮದುವೆ ಮಾಡಿಕೊಳ್ಳುತ್ತಾ, ಮಾಡಿಕೊಡುತ್ತಾ ಇದ್ದರು; ಜಲಪ್ರಳಯ ಬಂದು ಎಲ್ಲರನ್ನು ನಾಶಮಾಡಿತು.


ಒಡ್ಡಿದ ಬಲೆಯಲಿ ಒಡ್ಡಿದವನೇ ಪಟಕ್ಕನೆ ಸಿಕ್ಕಿಬೀಳಲಿ I ತೋಡಿದ ಗುಣಿಯಲಿ ತೋಡಿದವನೇ ತಟಕ್ಕನೆ ಬಿದ್ದುಹೋಗಲಿ II


ಮರಣ ತಟ್ಟನೆ ಆ ದುಷ್ಟರ ಮೇಲೆರಗಲಿ I ಜೀವಸಹಿತ ಪಾತಾಳಕ್ಕವರು ಇಳಿಯಲಿ I ಕೆಟ್ಟತನ ಮನೆಮಾಡಿದೆ ಅವರ ಮಧ್ಯದಲಿ II


ಕ್ಷಣ ಮಾತ್ರದಲಿ ಅಳಿದು ಹಾಳಾಗುವರು I ಭೀಕರವಾಗಿ ನಿರ್ಮೂಲವಾಗುವರು II


ಅಮಂಗಳವು ಪಾಪಿಗಳನ್ನು ಹಿಂಬಾಲಿಸುವುದು; ಮಂಗಳವು ಸತ್ಪುರುಷರಿಗೆ ಸಿಗುವ ಪ್ರತಿಫಲವು.


ಪ್ರಲಾಪಿಸಿರಿ, ಸಮೀಪಿಸಿದೆ ಸರ್ವೇಶ್ವರನ ದಿನ; ಸನ್ನಿಹಿತವಾಗಿದೆ, ಸರ್ವನಾಶ ಮಾಡುವ ಸೇನಾಧೀಶ್ವರನ ದಿನ !


ಅರೀಯೇಲೇ, ಗುಂಪುಗುಂಪಾಗಿ ಕೂಡಿಬರುವ ನಿನ್ನ ಶತ್ರುಗಳು ಧೂಳಿಪುಡಿಯಂತೆ ತೂರಿಹೋಗುವರು. ತಂಡೋಪತಂಡವಾಗಿ ಬಂದಿರುವ ಭಯಂಕರ ಸೈನಿಕರು ಹೊಟ್ಟಿನಂತೆ ಹಾರಿಹೋಗುವರು. ತಟ್ಟನೆ ಕ್ಷಣಮಾತ್ರದಲ್ಲಿ ಕಣ್ಮರೆಯಾಗುವರು.


ಇದ್ದಕ್ಕಿದ್ದಂತೆ ಆ ಗೋಡೆ ತಟ್ಟನೆ ಬಿದ್ದುಹೋಗುವುದು. ಅಂತೆಯೇ ನಿಮ್ಮ ಅಪರಾಧ ನಿಮಗೆ ಅಪಾಯಕರವಾಗಿರುವುದು.


ಬೆಳಕಿಗೂ ಕತ್ತಲಿಗೂ ನಾನೆ ಸೃಷ್ಟಿಕರ್ತನೆಂದು ಸುಖದುಃಖಗಳಿಗೆ ಕಾರಣಕರ್ತನೆಂದು ಸಕಲವನು ನಡೆಸುವ ಸರ್ವೇಶ್ವರ ನಾನೇ ಎಂದು.


ಒಂದೇ ದಿನದೊಳಗೆ, ಒಂದೇ ಕ್ಷಣದೊಳಗೆ ಪುತ್ರಶೋಕ, ವೈಧವ್ಯ - ಇವೆರಡು ಒದಗುವುವು ನಿನಗೆ. ಎಷ್ಟೇ ಮಂತ್ರತಂತ್ರಗಳನು ನಡೆಸಿದರೂ ಅನುಭವಿಸುವೆ ನೀ ಪೂರ್ತಿಯಾಗಿ ಇವುಗಳನು.


ಹೌದು, ಹೌದು ನೀ ಕೇಳಿಲ್ಲ, ತಿಳಿದೂ ಇಲ್ಲ ಅದಿಯಿಂದ ನಿನ್ನ ಕಿವಿ ತೆರೆದೂ ಇಲ್ಲ ನೀನು ಆಗರ್ಭ ದ್ರೋಹಿ, ಮಹಾ ಕುಟಿಲ ಎಂಬುದು ನನಗೆ ತಿಳಿದು ಇದೆಯಲ್ಲ !


ಸಜ್ಜನರು ಸಾಯುತ್ತಾರೆ, ಆದರೆ ಯಾರೂ ಮನಸ್ಸಿಗೆ ಹಚ್ಚಿಕೊಳ್ಳುವುದಿಲ್ಲ. ಶರಣರು ಕಣ್ಮರೆಯಾಗುತ್ತಾರೆ, ‘ಇವರು ಕೇಡಿನಿಂದ ಪಾರಾದರು’ ಎಂದು ಯಾರೂ ಅರ್ಥಮಾಡಿಕೊಳ್ಳುವುದಿಲ್ಲ.


ಬಾಬಿಲೋನ್ ತಟ್ಟನೆ ಬಿದ್ದು ಹಾಳಾಯಿತು. ಅದಕ್ಕಾಗಿ ಗೋಳಾಡಿ. ಅದರ ನೋವನ್ನು ನೀಗಿಸಲು ಔಷಧವನ್ನು ತನ್ನಿ. ಒಂದು ವೇಳೆ ಅದು ಗುಣವಾದೀತು!


ಪೊಡವಿ ನೊಂದು ನಡುಗುತ್ತಿದೆ! ಏಕೆಂದರೆ ಬಾಬಿಲೋನ್ ದೇಶ ಹಾಳುಬಿದ್ದು ನಿರ್ಜನವಾಗಲಿ ಎಂದು ಸರ್ವೇಶ್ವರ ಅದರ ವಿಷಯವಾಗಿ ಮಾಡಿಕೊಂಡಿರುವ ಸಂಕಲ್ಪ ಅಚಲವಾಗಿದೆ.


ಕಾಡು, ಕಗ್ಗಾಡು, ಬೆಂಗಾಡು ಆಗಿವೆ ಅದರ ನಗರಗಳು. ಆ ದೇಶದೊಳು ಯಾರೂ ವಾಸಿಸರು, ಯಾವ ನರಪ್ರಾಣಿಯೂ ಹಾದುಹೋಗದು.


ಸಾಂತ್ವನ ತರುವವರಾರೂ ಇಲ್ಲವಲ್ಲಾ ನನಗೆ ! ನನ್ನ ನರಳಾಟದ ಸುದ್ದಿ ಮುಟ್ಟಿದೆ ವೈರಿಗಳ ಕಿವಿಗೆ. ನನಗಾದ ಕೇಡಿಗೆ ನೀನೇ ಕಾರಣನೆಂಬ ಸಂತಸ ಶತ್ರುವಿಗೆ. ನೀ ಮುಂತಿಳಿಸಿದ ಮೇರೆಗೆ ನನಗಾದ ಗತಿ ಬರಲಿ ಅವರಿಗೆ.


ಉಪದ್ರವದ ಮೇಲೆ ಉಪದ್ರವ, ಸುದ್ದಿಯ ಮೇಲೆ ಸುದ್ದಿ ಹರಡುವುವು; ‘ದಿವ್ಯದರ್ಶನವಾಯಿತೆ’ ಎಂದು ಪ್ರವಾದಿಯನ್ನು ಕೇಳುತ್ತಲೇ ಇರುವರು; ಯಾಜಕರಲ್ಲಿ ಧರ್ಮೋಪದೇಶ ಅಡಗಿಹೋಗುವುದು, ಹಿರಿಯರಲ್ಲಿ ಸಲಹೆ ಸಮಾಲೋಚನೆ ಇಲ್ಲವಾಗುವುದು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು