Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 46:7 - ಕನ್ನಡ ಸತ್ಯವೇದವು C.L. Bible (BSI)

7 ಅದನ್ನು ಮೆರವಣಿಗೆ ಮಾಡುತ್ತಾರೆ ಹೊತ್ತು ಹೆಗಲಮೇಲೆ ಪ್ರತಿಷ್ಠಾಪನೆ ಮಾಡುತ್ತಾರೆ ಇಟ್ಟು ಪೀಠದ ಮೇಲೆ. ಕೂಗಿಕೊಂಡರೂ ಜರುಗದದು ಅಲ್ಲಿಂದ ಉತ್ತರಿಸಿ ಬಿಡಿಸದು ಯಾರನ್ನು ಕಷ್ಟದಿಂದ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

7 ಅವರು ಅದನ್ನು ಹೆಗಲ ಮೇಲೆ ಹೊತ್ತುಕೊಂಡು ಮೆರವಣಿಗೆ ಮಾಡಿ, ಪೀಠದ ಮೇಲೆ ಇಳಿಸಿ ನಿಲ್ಲಿಸುವರು. ಅದು ಅಲ್ಲಿಂದ ಜರುಗದು. ಒಬ್ಬನು ಕೂಗಿಕೊಂಡರೂ ಅದು ಅವನಿಗೆ ಉತ್ತರಕೊಡಲಾರದು. ಇಲ್ಲವೆ ಅವನನ್ನು ಕಷ್ಟದಿಂದ ಬಿಡಿಸಲಾರದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

7 ಅದನ್ನು ಹೆಗಲ ಮೇಲೆ ಹೊತ್ತುಕೊಂಡು ಮೆರವಣಿಗೆ ಮಾಡಿ ಪೀಠದ ಮೇಲೆ ಇಳಿಸಿ ನಿಲ್ಲಿಸುವರು. ಅದು ಅಲ್ಲಿಂದ ಜರಗದು, ಒಬ್ಬನು ಕೂಗಿಕೊಂಡರೂ ಉತ್ತರಕೊಟ್ಟು ಕಷ್ಟದಿಂದ ಅವನನ್ನು ಬಿಡಿಸಲಾರದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

7 ಅವರು ಆ ವಿಗ್ರಹವನ್ನು ಹೆಗಲ ಮೇಲೆ ಕುಳ್ಳಿರಿಸಿಕೊಂಡು ಹೊರುತ್ತಾರೆ. ಆ ಸುಳ್ಳುದೇವರುಗಳು ನಿಷ್ಪ್ರಯೋಜಕವಾಗಿವೆ. ಜನರೇ ಅವುಗಳನ್ನು ಹೊತ್ತುಕೊಳ್ಳಬೇಕು. ಜನರು ಅವುಗಳನ್ನು ನೆಲದ ಮೇಲೆ ಇಟ್ಟಾಗ ಅವು ಅಲ್ಲಾಡುವದಿಲ್ಲ. ತಮ್ಮ ಸ್ಥಳದಿಂದ ಆ ಸುಳ್ಳುದೇವರುಗಳು ಎದ್ದುಹೋಗುವದಿಲ್ಲ. ಜನರು ಅದರ ಮುಂದೆ ಕೂಗಿಕೊಂಡರೂ ಅವು ಕೇಳಿಸಿಕೊಳ್ಳುವದಿಲ್ಲ. ಆ ಸುಳ್ಳುದೇವರುಗಳು ಕೇವಲ ವಿಗ್ರಹಗಳಷ್ಟೇ. ಅವು ಜನರನ್ನು ಅವರ ಕಷ್ಟಗಳಿಂದ ಬಿಡಿಸಲಾರವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

7 ಅವರು ಅದನ್ನು ತಮ್ಮ ಹೆಗಲಿನ ಮೇಲೆ ಹೊತ್ತುಕೊಂಡು ಮೆರವಣಿಗೆ ಮಾಡಿ, ಪೀಠದ ಮೇಲೆ ಇಳಿಸಿ ನಿಲ್ಲಿಸುವರು. ಅದು ಅದರ ಸ್ಥಳದಿಂದ ಜರುಗದು. ಹೌದು, ಒಬ್ಬನು ಕೂಗಿಕೊಂಡರೂ ಅದು ಅವನಿಗೆ ಉತ್ತರ ಕೊಡಲಾರದು ಇಲ್ಲವೆ ಅವನನ್ನು ಕಷ್ಟದಿಂದ ರಕ್ಷಿಸಲಾರದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 46:7
21 ತಿಳಿವುಗಳ ಹೋಲಿಕೆ  

“ಅಳಿದುಳಿದ ಅನ್ಯಜನರೇ, ನೆರೆದು ಬನ್ನಿ, ಒಟ್ಟಿಗೆ ನನ್ನ ಬಳಿಗೆ ಬನ್ನಿ. ತಮ್ಮ ಮರದ ಬೊಂಬೆಯನು ಹೊತ್ತು ತಿರುಗುವವರು ರಕ್ಷಿಸಲಾಗದ ದೇವತೆಗೆ ಮೊರೆಯಿಡುವ ಬುದ್ಧಿಹೀನರು.


ಸೌತೆ ತೋಟದ ಬೆದರುಗಂಬದಂತಿರುವ ಈ ಬೊಂಬೆಗಳು ಮಾತನಾಡಲಾರವು. ಅವನ್ನು ಹೊತ್ತುಕೊಂಡು ಹೋಗಬೇಕು, ಅವು ನಡೆಯಲಾರವು. ಅವುಗಳಿಗೆ ನೀವು ಅಂಜಬೇಕಾಗಿಲ್ಲ, ಅವು ಕೇಡುಮಾಡಲಾರವು; ಮೇಲುಮಾಡಲಿಕ್ಕೂ ಸಾಮರ್ಥ್ಯವಿಲ್ಲದಿರುವುವು.”


ತಗ್ಗಿದೆ ಬೇಲ್ ದೇವತೆ ಕುಗ್ಗಿದೆ ನೆಬೋ ದೇವತೆ ಅವುಗಳ ಪ್ರತಿಮೆಗಳನು ಕತ್ತೆಗಳು ಹೊತ್ತಿವೆ. ನೀವು ಮೆರವಣಿಗೆಯಾಗಿ ಹೊರುತ್ತಿದ್ದ ಆ ಬೊಂಬೆಗಳೆ, ಭಾರವಾದ ಹೊರೆಯಾಗಿವೆ, ಬಳಲಿದಾ ಪಶುಗಳಿಗೆ


ಇಷ್ಟರೊಳಗೆ ಯೋನನು ಹಡಗಿನ ತಳಭಾಗಕ್ಕೆ ಇಳಿದುಹೋಗಿ ಹಾಯಾಗಿ ಮಲಗಿದ್ದನು. ಅವನಿಗೆ ಗಾಢನಿದ್ರೆ ಹತ್ತಿತ್ತು.


ರಾಜ ನೆಬೂಕದ್ನೆಚ್ಚರನು 27 ಮೀಟರ್ ಎತ್ತರದ 3 ಮೀಟರ್ ಅಗಲದ ಒಂದು ಬಂಗಾರದ ಪ್ರತಿಮೆಯನ್ನು ಮಾಡಿಸಿ ಬಾಬಿಲೋನ್ ಸಂಸ್ಥಾನದ ‘ದೂರಾ’ ಎಂಬ ಬಯಲಿನಲ್ಲಿ ನಿಲ್ಲಿಸಿದನು.


“ಎಲೈ ಯೆಹೂದ ಜನರೇ, ನೀವು ನಿರ್ಮಿಸಿಕೊಂಡ ದೇವರುಗಳು ಎಲ್ಲಿ? ನಿಮಗೆ ಕೇಡು ಸಂಭವಿಸಿದಾಗ ನಿಮ್ನನ್ನು ಉದ್ಧರಿಸಲು ಅವರು ಶಕ್ತರಾಗಿದ್ದರೆ ಎದ್ದುಬರಲಿ ! ನಿಮಗೆ ನಗರಗಳು ಎಷ್ಟಿವೆಯೋ ಅಷ್ಟೂ ದೇವರುಗಳು ಇದ್ದಾರೆ!


ಆಗ ಎಲೀಯನು ಅವರಿಗೆ, “ಬಾಳನ ಪ್ರವಾದಿಗಳೆಲ್ಲರನ್ನು ಹಿಡಿಯಿರಿ; ಅವರಲ್ಲಿ ಒಬ್ಬನೂ ತಪ್ಪಿಸಿಕೊಳ್ಳಬಾರದು,” ಎಂದು ಆಜ್ಞಾಪಿಸಲು ಅವರು ಹಿಡಿದರು. ಅವನು ಅವರನ್ನು ಕೀಷೋನ್ ಹಳ್ಳಕ್ಕೆ ಒಯ್ದು ಕೊಲ್ಲಿಸಿದನು.


ಅಂತೆಯೇ ತರಲಾದ ಹೋರಿಗಳಲ್ಲಿ ಒಂದನ್ನು ಅವರು ತೆಗೆದುಕೊಂಡು ಸಿದ್ಧಪಡಿಸಿದರು. ತಮ್ಮ ದೇವರಾದ ಬಾಳನ ಹೆಸರು ಹೇಳಿ, “ಬಾಳನೇ, ನಮಗೆ ಕಿವಿಗೊಡು,” ಎಂದು ಹೊತ್ತಾರೆಯಿಂದ ಮಧ್ಯಾಹ್ನದವರೆಗೆ ಕೂಗಿದರು. ಆದರೆ ಯಾವ ವಾಣಿಯೂ ಕೇಳಿಸಲಿಲ್ಲ; ಅವರು ಪೀಠದ ಸುತ್ತಲೂ ಕುಣಿದಾಡಿದರು. ಆದರೂ ಯಾರೂ ಉತ್ತರಕೊಡಲಿಲ್ಲ.


ಅಷ್ಡೋದಿನವರು ಮರುದಿನ ಬೆಳಿಗ್ಗೆ ಎದ್ದು ನೋಡುವಾಗ ದಾಗೋನ್ ವಿಗ್ರಹ ಸರ್ವೇಶ್ವರನ ಮಂಜೂಷದ ಮುಂದೆ ಬೋರಲುಬಿದ್ದಿರುವುದನ್ನು ಕಂಡು ಅದನ್ನು ಪುನಃ ಅದರ ಸ್ಥಳದಲ್ಲಿಟ್ಟರು.


ನಿನೆವೆ ಪಟ್ಟಣಕ್ಕೆ ಹೋಗಿ ಅಲ್ಲಿನ ದೇವರಾದ ನಿಸ್ರೋಕನನ್ನು ಆರಾಧನೆ ಮಾಡುತ್ತಿರುವಾಗ, ಅದ್ರಮ್ಮೆಲೆಕ್ ಮತ್ತು ಸರೆಚೆರ್ ಎಂಬ ಅವನ ಇಬ್ಬರು ಮಕ್ಕಳು ಅವನನ್ನು ಕತ್ತಿಯಿಂದ ಕೊಂದು ಅರರಾಟ್ ನಾಡಿಗೆ ಪಲಾಯನಗೈದರು. ಬಳಿಕ ಅವನ ಇನ್ನೊಬ್ಬ ಮಗ ಏಸರ್ ಹದ್ದೋನನು ಅರಸನಾದನು.


ನೀವು ಅನ್ಯಮತಸ್ಥರಾಗಿದ್ದಾಗ, ನಿಮಗೆ ಮನಸ್ಸು ಬಂದಂತೆಲ್ಲಾ ಮೂಕ ವಿಗ್ರಹಗಳ ಬಳಿ ಹೋಗಿ ಬರುತ್ತಿದ್ದಿರಿ; ಇದನ್ನು ನೀವೇ ಬಲ್ಲಿರಿ.


ಇಷ್ಟು ಹಣವನ್ನು ವೆಚ್ಚ ಮಾಡಲಾಗದ ಬಡವನು ಹುಡುಕುವನು ಹುಳಿತುಹೋಗದ ಮರವನು ಬಾಗಿ ಬೀಳದ ವಿಗ್ರಹವನ್ನು ಮಾಡಬಲ್ಲಾ ಕುಶಲನನು.


ಚೆನ್ನಾಗಿದೆ ಎನ್ನುತ್ತಾನೆ ಬಡಗಿ ಅಕ್ಕಸಾಲಿಗನಿಗೆ; ಪ್ರೋತ್ಸಾಹ ನೀಡುತ್ತಾನೆ ನುಣುಪು ಮಾಡುವವನು ಅಡಿಗಲ್ಲನ್ನು ತಟ್ಟುವವನಿಗೆ. ಬೆಸುಗೆ ಚೆನ್ನಾಗಿದೆ ಎಂದವರು ಮೊಳೆಗಳನ್ನು ಬಡಿಯುತ್ತಾರೆ ವಿಗ್ರಹ ಅಲುಗದಂತೆ.


ನಾ ನೋಡಲು ಅವರಲ್ಲಿ ಸಮರ್ಥರಾರು ಇಲ್ಲ ನಾ ಪ್ರಶ್ನಿಸಲು ಉತ್ತರಿಸಬಲ್ಲ ವಿವೇಕಿ ಇಲ್ಲ.


ಕಮ್ಮಾರನು ಮುಟ್ಟನ್ನು ತೆಗೆದುಕೊಂಡು ಕೆಂಡದಲ್ಲಿ ಕೆಲಸ ಮಾಡುತ್ತಾನೆ; ಬಲವಾದ ತೋಳಿನಿಂದ ಚಮಟಿಕೆ ಹಿಡಿದು ಬಡಿದು ವಿಗ್ರಹವನ್ನು ರೂಪಿಸುತ್ತಾನೆ; ಹಸಿದು ಬಳಲುತ್ತಾನೆ, ಬಾಯಾರಿ ಸೊರಗುತ್ತಾನೆ.


ಇಂತಾಗುವುದು ನೀ ಗೈದ ಪ್ರಯತ್ನಗಳೆಲ್ಲ. ಬಾಲ್ಯದಿಂದ ನಿನ್ನೊಡನೆ ವ್ಯವಹರಿಸಿದವರು ಸರಿವರು ದೂರಕೆ ಹಿಂದಿರುಗುವರೆಲ್ಲರು ತಂತಮ್ಮ ನಾಡಿಗೆ ಅಂತ್ಯದಲಿ ಯಾರೂ ಆಗರು ರಕ್ಷಣೆ ನಿನಗೆ.”


ಮಧ್ಯಾಹ್ನದಿಂದ ನೈವೇದ್ಯ ಸಮರ್ಪಣೆಯ ಹೊತ್ತಿನವರೆಗೂ ಪರವಶರಾಗಿ ಕೂಗುತ್ತಿದ್ದರು. ಆದರೂ ಯಾವ ವಾಣಿಯೂ ಕೇಳಿಸಲಿಲ್ಲ; ಯಾವನೂ ಅವರಿಗೆ ಉತ್ತರಕೊಡಲಿಲ್ಲ; ಅವರನ್ನು ಯಾವನೂ ಲಕ್ಷಿಸಲೂ ಇಲ್ಲ.


ನಿಶ್ಚಯವಾಗಿ ಆ ದೇವತೆಗಳೆಲ್ಲ ಕ್ಷುದ್ರರೇ‍ ಅವರ ಕಾರ್ಯಗಳೆಲ್ಲ ಶೂನ್ಯವೇ ಆ ಎರಕದ ಬೊಂಬೆಗಳೆಲ್ಲಾ ಬರಿ ಗಾಳಿಯೆ !


ಆಗ ಜುದೇಯದ ನಗರದವರೂ ಜೆರುಸಲೇಮಿನ ನಿವಾಸಿಗಳೂ ಯಾವ ದೇವತೆಗಳಿಗೆ ಧೂಪಾರತಿಯೆತ್ತಿದರೋ ಅವುಗಳನ್ನು ಮರೆಹೊಕ್ಕು ಕೂಗಿಕೊಳ್ಳುವರು. ಆದರೆ ಅಂಥ ಕೇಡಿನ ಕಾಲದಲ್ಲಿ ಆ ದೇವತೆಗಳಿಂದ ಅವರಿಗೆ ಯಾವ ರಕ್ಷಣೆಯೂ ದೊರಕದು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು