Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 46:4 - ಕನ್ನಡ ಸತ್ಯವೇದವು C.L. Bible (BSI)

4 ನಾನೇ ನಿಮಗೆ ಆಧಾರ ಮುಪ್ಪಿನ ತನಕ ಹೊತ್ತು ಸಲಹುವೆನು ನಿಮ್ಮನು ನರೆಬಂದಾಗ. ಉಂಟುಮಾಡಿದವನು ನಾನೇ, ಹೊರುವವನು ನಾನೇ ಹೌದು, ನಿಮ್ಮನು ಹೊತ್ತು ಸಲಹುವವನು ನಾನೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ನಿಮ್ಮ ಮುಪ್ಪಿನ ತನಕ ನಾನೇ ಆಧಾರ, ನರೆ ಬಂದಾಗಲೂ ನಿಮ್ಮನ್ನು ಹೊತ್ತು ಸಹಿಸುವೆನು. ನಾನೇ ಉಂಟುಮಾಡಿದೆನು, ನಾನೇ ಹೊರುವೆನು. ಹೌದು, ನಿಮ್ಮನ್ನು ಹೊತ್ತು ಸಹಿಸಿ ನಿರ್ವಹಿಸುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4 ನಿಮ್ಮ ಮುಪ್ಪಿನ ತನಕ ನಾನೇ ಆಧಾರ, ನರೆಬಂದಾಗಲೂ ನಿಮ್ಮನ್ನು ಹೊತ್ತು ಸಹಿಸುವೆನು; ನಾನೇ ಉಂಟುಮಾಡಿದೆನು, ನಾನೇ ಹೊರುವೆನು, ಹೌದು, ನಿಮ್ಮನ್ನು ಹೊತ್ತು ಸಹಿಸಿ ನಿರ್ವಹಿಸುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ನೀವು ಹುಟ್ಟಿದಾಗ ನಾನು ನಿಮ್ಮನ್ನು ಹೊತ್ತುಕೊಂಡೆನು. ನೀವು ಮುದುಕರಾಗುವಾಗಲೂ ನಾನು ನಿಮ್ಮನ್ನು ಹೊತ್ತುಕೊಳ್ಳುವೆನು. ನಿಮ್ಮ ತಲೆಕೂದಲು ನರೆತಾಗಲೂ ನಾನು ನಿಮ್ಮನ್ನು ಹೊರುವೆನು; ಯಾಕೆಂದರೆ ನಾನು ನಿಮ್ಮನ್ನು ಸೃಷ್ಟಿಸಿದೆನು. ಆದ್ದರಿಂದ ನಾನು ನಿಮ್ಮನ್ನು ಹೊತ್ತುಕೊಳ್ಳುವೆನು, ನಿಮ್ಮನ್ನು ರಕ್ಷಿಸುವೆನು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

4 ನಿಮ್ಮ ಮುಪ್ಪಿನ ತನಕ ನಾನೇ ಆಧಾರ; ನೆರೆ ಬಂದಾಗಲೂ ನಿಮ್ಮನ್ನು ಹೊತ್ತು ಸಹಿಸುವೆನು; ನಾನೇ ಉಂಟುಮಾಡಿದೆನು; ನಾನೇ ಹೊರುವೆನು; ಹೌದು, ನಿಮ್ಮನ್ನು ಹೊತ್ತು, ಸಹಿಸಿ, ನಿರ್ವಹಿಸುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 46:4
17 ತಿಳಿವುಗಳ ಹೋಲಿಕೆ  

ದೇವಾ, ನರೆಯ ಮುದುಕನಾಗಿರುವಾಗ ನನ್ನ ಕೈ ಬಿಡಬೇಡಯ್ಯಾ I ನಿನ್ನ ಪರಾಕ್ರಮವನು ಮುಂದಿನ ಪೀಳಿಗೆಗೆ ಸಾರುವ ತನಕ ಬೇಡವಯ್ಯಾ I ನಿನ್ನ ಪ್ರತಾಪವನು ತಲತಲಾಂತರದವರೆಗೆ ಪ್ರಕಟಿಸುವೆನಯ್ಯಾ II


ಆಗ ತಿಳಿಸಿರಿ ಮುಂದಣ ಪೀಳಿಗೆಗಿಂತೆಂದು - “ಈತನೀತನೇ ನಮ್ಮ ದೇವನು ಯುಗಯುಗಕು I ನಮಗೀತ ಮಾರ್ಗದರ್ಶಕ ತಲತಲಾಂತರಕು” II


ಯೇಸುಕ್ರಿಸ್ತರು, ನಿನ್ನೆ ಇದ್ದಹಾಗೆಯೇ ಇಂದೂ ಎಂದೆಂದೂ ಇದ್ದಾರೆ.


ಎಲ್ಲಾ ಯೋಗ್ಯ ವರಗಳೂ ಉತ್ತಮ ಕೊಡುಗೆಗಳೂ ಬರುವುದು ಮೇಲಿನಿಂದಲೇ. ಜ್ಯೋತಿರ್ಮಂಡಲವನ್ನು ಉಂಟುಮಾಡಿದ ದೇವರೇ ಅವುಗಳ ಮೂಲದಾತರು. ಅವರಲ್ಲಿ ಚಂಚಲತೆ ಇಲ್ಲ, ಮಬ್ಬು ಮುಸುಕಿನ ಛಾಯೆಯೂ ಇಲ್ಲ.


ಮುದುರಿ ಮೂಲೆಗೆಸೆಯುವೆ ಇವನ್ನು ಮೇಲಂಗಿಯಂತೆ. ಬದಲಾಯಿಸುವೆ ನೀ ಅವನ್ನು ಉಡುಪಿನಂತೆ ನೀನಾದರೋ ಬದಲಾಗದೆ ಇರುವೆ ಮೊದಲಿನಂತೆ. ಮುಗಿವೇ ಇರದು ನಿನ್ನ ಬಾಳುವೆಗೆ,” ಎಂದೂ ಸಹ ದೇವರು ನುಡಿದಿದ್ದಾರೆ.


ದೇವರು ತಾವೇ ನೀಡುವ ವರಗಳನ್ನಾಗಲಿ, ಕೊಡುವ ಕರೆಯನ್ನಾಗಲಿ ಹಿಂತೆಗೆದುಕೊಳ್ಳುವವರಲ್ಲ.


“ಯಕೋಬನ ಕುಲಪುತ್ರರೇ, ನಾನು ಅದಲುಬದಲಾಗದ ಸರ್ವೇಶ್ವರ, ಈ ಕಾರಣದಿಂದ ನೀವು ಅಳಿಯದೆ ಉಳಿದಿದ್ದೀರಿ.


ಆದರೂ ನಾನೇ ನಾನಾಗಿ ಅಳಿಸಿಬಿಡುವೆ ನಿನ್ನ ದ್ರೋಹಗಳನು, ನನ್ನ ನೆನಪಿನಿಂದ ತೆಗೆದುಹಾಕುವೆ ನಿನ್ನ ಪಾಪಗಳನು.


ಇದನ್ನೆಲ್ಲಾ ನಡೆಯಿಸಿ ನೆರವೇರಿಸಿದವನು ಯಾರು? ಆದಿಯಿಂದ ಈಗಿನವರೆಗೂ ತಲತಲಾಂತರಗಳನ್ನು ಬರಮಾಡುವವರು ಯಾರು? ಸರ್ವೇಶ್ವರನಾದ ನಾನೇ. ಹೌದು, ಆದಿಯಲ್ಲಿದ್ದವನು. ಅಂತ್ಯದಲ್ಲಿ ಇರುವವನು ಆದ ನಾನೇ.


ಹೌದು, ನಾನೇ ಪರಮಾತ್ಮ ಆದಿಯಿಂದ ಬಿಡಿಸುವವರಾರು ಇಲ್ಲ ನನ್ನ ಕೈಯಿಂದ ನಾಗೈದುದನು ತಡೆಯಲಾಗದು ಯಾರಿಂದ.” ಈ ಪರಿ ನುಡಿದಿಹನು ಸರ್ವೇಶ್ವರನು, ನಿಮ್ಮ ಉದ್ಧಾರಕನು, ಇಸ್ರಯೇಲಿನ ಪರಮಪಾವನನು;


ಇಸ್ರಯೇಲಿನ ದೇವರಾದ ಸರ್ವೇಶ್ವರ ಹೀಗೆ ಹೇಳುತ್ತಾರೆ: “ವಿವಾಹ ವಿಚ್ಛೇದನವನ್ನು ದ್ವೇಷಿಸುತ್ತೇನೆ. ತನ್ನ ಮಡದಿಗೆ ನಂಬಿಕೆದ್ರೋಹವನ್ನೆಸಗುವವನನ್ನು ಹಾಗು ದೌರ್ಜನ್ಯ ತೋರುವವನನ್ನು ಹಗೆಮಾಡುತ್ತೇನೆ.” ಇದು ಸೇನಾಧೀಶ್ವರ ಸರ್ವೇಶ್ವರಸ್ವಾಮಿಯ ನುಡಿ. ಆದಕಾರಣ ಮನಃಪೂರ್ವಕವಾಗಿ ಎಚ್ಚರಿಕೆಯಿಂದಿರಿ ನಿಮ್ಮ ಮಡದಿಗೆ ದ್ರೋಹವೆಸಗದಿರಿ.


ನೀವು ಈ ಸ್ಥಳಕ್ಕೆ ಸೇರುವ ಪರ್ಯಂತರ ನಿಮ್ಮ ಪ್ರಯಾಣದಲ್ಲೆಲ್ಲಾ ಒಬ್ಬ ತಂದೆ ತನ್ನ ಮಗನನ್ನು ಹೇಗೋ ಹಾಗೆಯೇ, ನಿಮ್ಮ ದೇವರಾದ ಸರ್ವೇಶ್ವರ ನಿಮ್ಮನ್ನು ಹೊತ್ತುತಂದರಲ್ಲವೇ?” ಎಂದು ನಿಮಗೆ ಹೇಳಿದೆ.


ಸ್ತುತಿಯಾಗಲಿ ನಮ್ಮನುದ್ಧರಿಸುವಾ ದೇವನಿಗೆ I ನಮ್ಮನನುದಿನ ಬಿಡದೆ ಸಹಿಸಿಕೊಳ್ಳುವಾ ಪ್ರಭುವಿಗೆ II


ವೃದ್ಧಾಪ್ಯದಲಿ ನನ್ನ ತಳ್ಳಿಬಿಡಬೇಡಯ್ಯಾ I ಶಕ್ತಿ ಕುಂದುತ್ತಿರುವಾಗ ಕೈಬಿಡಬೇಡಯ್ಯಾ II


“ಯಕೋಬೆ, ನಾ ಕರೆದ ಇಸ್ರಯೇಲೆ ನನಗೆ ಕಿವಿಗೊಡು, ಪರಮಾತ್ಮ ನಾನೆ ಆದಿಯು ನಾನೆ, ಅಂತ್ಯವು ನಾನೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು