Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 44:8 - ಕನ್ನಡ ಸತ್ಯವೇದವು C.L. Bible (BSI)

8 ಹೆದರಬೇಡಿ, ಅಂಜದಿರಿ, ನನ್ನ ಜನರೇ, ನನಗೆ ಸಾಕ್ಷಿಗಳು ನೀವೇ; ಪೂರ್ವಕಾಲದಿಂದ ನಡೆದವುಗಳನು ನಾ ನಿಮಗೆ ಮುಂತಿಳಿಸಿ ಶ್ರುತಪಡಿಸಿಲ್ಲವೆ? ನನ್ನ ಹೊರತು ಬೇರೆ ದೇವನಿರುವನೆ? ನನ್ನ ಹೊರತು ಬೇರೆ ಸೇನಾಧೀಶ್ವರನಿರುವನೆ? ಅಂಥವನಾರೋ ನಾನರಿಯೆ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

8 ಹೆದರಬೇಡಿರಿ, ಭಯಪಡಬೇಡಿರಿ! ನಾನು ಪೂರ್ವದಿಂದಲೂ ನಿಮಗೆ ಹೇಳಿ ಪ್ರಕಟಿಸಿಕೊಂಡೆನಷ್ಟೆ. ನೀವೇ ನನ್ನ ಸಾಕ್ಷಿಗಳು. ನಾನಲ್ಲದೆ ಇನ್ನೊಬ್ಬ ದೇವರಿದ್ದಾನೋ? ಇನ್ನು ಯಾವ ಶರಣನೂ ಇಲ್ಲ, ಯಾರೂ ನನಗೆ ಗೊತ್ತಿಲ್ಲ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

8 ಹೆದರಬೇಡಿರಿ, ಅಂಜದಿರಿ! ನಾನು ಪೂರ್ವದಿಂದಲೂ ನಿಮಗೆ ಹೇಳಿ ಪ್ರಕಟಿಸಿಕೊಂಡೆನಷ್ಟೆ. ನೀವೇ ನನ್ನ ಸಾಕ್ಷಿಗಳು. ನಾನಲ್ಲದೆ ಇನ್ನೊಬ್ಬ ದೇವರಿದ್ದಾನೋ? ಇನ್ನು ಯಾವ ಶರಣನೂ ಇಲ್ಲ, ಯಾರೂ ನನಗೆ ಗೊತ್ತಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

8 “ನೀವು ಭಯಪಡಬೇಡಿ, ಚಿಂತಿಸಬೇಡಿ. ನಾನು ಭವಿಷ್ಯದ ಸಂಭವಗಳನ್ನು ಯಾವಾಗಲೂ ನಿಮಗೆ ತಿಳಿಸುತ್ತಾ ಬಂದಿದ್ದೇನೆ. ನೀವೇ ನನ್ನ ಸಾಕ್ಷಿಗಳು. ನನ್ನ ಹೊರತು ಬೇರೆ ದೇವರುಗಳಿಲ್ಲ. ನನ್ನ ಹೊರತು ಬೇರೆ ಯಾವ ‘ಬಂಡೆ’ಯೂ ಇಲ್ಲ. ನಾನೊಬ್ಬನೇ!”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

8 ಹೆದರಬೇಡ, ಇಲ್ಲವೆ ಭಯಪಡಬೇಡ! ನಾನು ಪೂರ್ವದಿಂದಲೂ ನಿಮಗೆ ಹೇಳಲಿಲ್ಲವೋ ಮತ್ತು ಅದನ್ನು ಪ್ರಕಟಿಸಲಿಲ್ಲವೋ? ಅಂತೂ ನೀವೇ ನನ್ನ ಸಾಕ್ಷಿಗಳು. ನಾನಲ್ಲದೆ ಇನ್ನೊಬ್ಬ ದೇವರು ಇದ್ದಾನೋ? ಇಲ್ಲ, ಇನ್ನು ಯಾವ ದೇವರೂ ಇಲ್ಲ, ಯಾರೂ ನನಗೆ ಗೊತ್ತಿಲ್ಲ.”

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 44:8
55 ತಿಳಿವುಗಳ ಹೋಲಿಕೆ  

ಇಂತೆನ್ನುತ್ತಾರೆ ಸರ್ವೇಶ್ವರ : “ನೀವೇ ನನಗೆ ಸಾಕ್ಷಿಗಳು; ನನ್ನಿಂದ ಆಯ್ಕೆಯಾದ ನನ್ನ ದಾಸರು; ಏಕೆನೆ ನಾನೇ ಪರಮಾತ್ಮನೆಂದು ಅರಿತು, ವಿಶ್ವಾಸವಿಟ್ಟು, ಗ್ರಹಿಸಬೇಕಾದವರು; ದೇವರಾರೂ ನನಗಿಂತ ಮುಂದೆ ಇರಲಿಲ್ಲ ನನ್ನಾನಂತರವೂ ಇರುವುದಿಲ್ಲ.


ಸರ್ವೇಶ್ವರನಂಥ ಪರಮಪಾವನನಿಲ್ಲ ನಿನ್ನ ಹೊರತು ದೇವಾ, ಬೇರೆ ದೇವನಿಲ್ಲ; ನಮ್ಮ ದೇವನಿಗೆ ಸಮನಾದ ಆಶ್ರಯದುರ್ಗವಿಲ್ಲ.


ಸರ್ವೇಶ್ವರ ಸ್ವಾಮಿಯೊಬ್ಬರೇ ದೇವರು, ಬೇರೆ ದೇವರೇ ಇಲ್ಲವೆಂದು ನೀವು ಅರಿತುಕೊಳ್ಳುವುದಕ್ಕಾಗಿ ಇದನ್ನೆಲ್ಲಾ ನಿಮಗೆ ಮಾತ್ರ ತೋರಿಸಲಾಗಿದೆ.


ನೀವು ಇದನ್ನೆಲ್ಲಾ ಆಲೋಚಿಸಿ, ಮೇಲೆ ಆಕಾಶದಲ್ಲಾಗಲಿ, ಕೆಳಗೆ ಭೂಮಿಯಲ್ಲಾಗಲಿ ಸರ್ವೇಶ್ವರಸ್ವಾಮಿ ಒಬ್ಬರೇ ದೇವರು, ಬೇರೆ ಯಾವ ದೇವರೂ ಇಲ್ಲವೆಂಬುದನ್ನು ಈಗ ಗ್ರಹಿಸಿಕೊಂಡು ಜ್ಞಾಪಕದಲ್ಲಿ ಇಡಬೇಕು.


ನಾನೂ ಪಿತನೂ ಒಂದೇ ಆಗಿದ್ದೇವೆ,” ಎಂದರು.


ಜಗತ್ತು ಉಂಟಾಗುವ ಮೊದಲೇ ‘ದಿವ್ಯವಾಣಿ’ ಎಂಬವರಿದ್ದರು. ಆ ದಿವ್ಯವಾಣಿ ದೇವರಾಗಿದ್ದರು. ಆ ದಿವ್ಯವಾಣಿ ದೇವರೊಂದಿಗೆ ಇದ್ದರು;


ನಾನೇ ಇಸ್ರಯೇಲಿನ ಮಧ್ಯೆ ನೆಲೆಯಾಗಿ ಇರುವವನು ನಾನೇ ನಿಮ್ಮ ಸರ್ವೇಶ್ವರನಾದ ದೇವರು; ನಾನಲ್ಲದೆ ಬೇರೆ ದೇವರು ನಿಮಗಿಲ್ಲ. ನನ್ನ ಜನರಿಗೆ ಎಂದಿಗೂ ಆಶಾಭಂಗವಾಗದು ಎಂದು ನಿಮಗೆ ಮನದಟ್ಟಾಗುವುದು.


ಇಂತೆನ್ನುತ್ತಾರೆ ಸೇನಾಧೀಶ್ವರ ಸರ್ವೇಶ್ವರ, ಇಸ್ರಯೇಲರ ಅರಸ, ಅವರ ಉದ್ಧಾರಕ: “ಆದಿಯು ನಾನೇ, ಅಂತ್ಯವು ನಾನೇ, ನನ್ನ ಹೊರತು ದೇವರಾರು ಇಲ್ಲ ಬೇರೆ.


ಪ್ರಭುವಲ್ಲದೆ ಇನ್ನಾವ ದೇವರುಂಟು? I ನಮ್ಮ ದೇವನಲ್ಲದೆ ಉದ್ಧಾರಕನೆಲ್ಲುಂಟು? II


ಸರ್ವೇಶ್ವರನಲ್ಲದೆ ಇನ್ನಾವ ದೇವರುಂಟು? ನಮ್ಮ ದೇವನಲ್ಲದೆ ಉದ್ಧಾರಕನೆಲ್ಲುಂಟು?


“ಇರುವಾತನು ನಾನೇ, ನಾನೊಬ್ಬನೇ ಬದುಕಿಸುವವನು, ಕೊಲ್ಲುವವನು ನಾನೇ, ಗಾಯಗೊಳಿಸುವವನು, ವಾಸಿಮಾಡುವವನು ನಾನೇ. ಇಂದಾದರು ತಿಳಿಯಿರಿ: ನನ್ನ ವಿನಾ ದೇವರಿಲ್ಲ ನನ್ನ ಕೈಯಿಂದ ತಪ್ಪಿಸಬಲ್ಲ ಶಕ್ತನಾರೂ ಇಲ್ಲ.


ನೆನಪಿಗೆ ತಂದುಕೊಳ್ಳಿ ಪ್ರಾಚೀನ ಘಟನೆಗಳನ್ನು ಅರಿತುಕೊಳ್ಳಿ ನಾನೇ ದೇವರು, ಇನ್ನಾರೂ ಇಲ್ಲ ಎಂಬುದನ್ನು ನಾನೇ ಪರಮದೇವರು, ನನಗೆ ಸರಿಸಮಾನವಿಲ್ಲ ಎಂಬುದನ್ನು.


ನನ್ನ ದೇವರು ತಮ್ಮ ದೂತನನ್ನು ಕಳಿಸಿ, ಸಿಂಹಗಳ ಬಾಯನ್ನು ಬಂಧಿಸಿದರು. ಅವುಗಳಿಂದ ನನಗೆ ಯಾವ ಹಾನಿಯೂ ಆಗಲಿಲ್ಲ. ಏಕೆಂದರೆ ಆ ದೇವರ ದೃಷ್ಟಿಯಲ್ಲಿ ನಾನು ನಿರ್ಮಲನು. ರಾಜರಾದ ತಮಗೂ ನಾನು ಯಾವ ದ್ರೋಹವನ್ನೂ ಮಾಡಲಿಲ್ಲ,” ಎಂದು ಹೇಳಿದನು.


ತಾವು ಮಾನವ ಸಮಾಜದಿಂದ ಬಹಿಷ್ಕೃತರಾಗುವಿರಿ. ಕಾಡುಮೃಗಗಳ ನಡುವೆ ವಾಸಮಾಡುವಿರಿ. ದನಕರುಗಳಂತೆ ಹುಲ್ಲು ಮೇಯುವ ಗತಿ ನಿಮ್ಮದಾಗುವುದು. ಆಕಾಶದ ಇಬ್ಬನಿ ನಿಮ್ಮನ್ನು ತೋಯಿಸುವುದು. ಪರಾತ್ಪರ ದೇವರಿಗೆ ಮಾನವರ ರಾಜ್ಯದ ಮೇಲೂ ಅಧಿಕಾರವಿದೆ. ಅದನ್ನು ತಮಗೆ ಬೇಕಾದವರಿಗೆ ಒಪ್ಪಿಸುತ್ತಾರೆ. ಇದು ತಮಗೆ ತಿಳಿದುಬರುವುದರೊಳಗೆ ಏಳು ವರ್ಷ ಕಳೆದಿರುತ್ತದೆ.


ದಾನಿಯೇಲನ ವಿವರಕ್ಕೆ ಉತ್ತರವಾಗಿ, “ನೀನು ಈ ಗುಟ್ಟನ್ನು ಬಯಲಿಗೆ ತರಲು ಸಮರ್ಥನಾದ ಕಾರಣ ನಿಮ್ಮ ದೇವರು ದೇವಾಧಿದೇವರು, ರಾಜಾಧಿರಾಜರು, ಗುಟ್ಟನ್ನು ಬಟ್ಟಬಯಲಾಗಿಸುವವರು! ಇದು ಸತ್ಯ,” ಎಂದು ಹೇಳಿದನು.


ಆದರೆ ರಹಸ್ಯಗಳನ್ನು ವ್ಯಕ್ತಪಡಿಸಬಲ್ಲವರು ಒಬ್ಬರಿದ್ದಾರೆ. ಅವರೇ ಪರಲೋಕದಲ್ಲಿರುವ ದೇವರು. ಬರಲಿರುವ ಕಾಲದಲ್ಲಿ ನಡೆಯತಕ್ಕದ್ದನ್ನು ರಾಜ ನೆಬೂಕದ್ನೆಚ್ಚರರಾದ ನಿಮಗೆ ಅವರೇ ತಿಳಿಯಪಡಿಸಿದ್ದಾರೆ. ನೀವು ಕಂಡ ಕನಸು, ಹಾಸಿಗೆಯ ಮೇಲೆ ಮಲಗಿದ್ದಾಗ ನಿಮ್ಮ ಮನಸ್ಸಿಗೆ ತೋಚಿದ ಸ್ವಪ್ನಗಳು ಹೀಗಿವೆ:


ಜನಾಂಗಗಳ ಒಡೆಯಾ, ಅರಸರೇ, ನಿಮಗೆ ಅಂಜದೆ ಇರುವವರಾರು? ಹೌದು, ನೀವು ಭಯಭಕ್ತಿಗೆ ಪಾತ್ರರು ರಾಷ್ಟ್ರಗಳ ಜ್ಞಾನಿಗಳಲ್ಲೂ ರಾಜಪರಂಪರೆಯಲ್ಲೂ ಯಾವನೂ ಇಲ್ಲ ನಿಮಗೆ ಸಮಾನನು.


‘ಈ ಕಾರ್ಯಗಳನ್ನು ನಡೆಸಿದ್ದು ನನ್ನ ವಿಗ್ರಹವೇ ವಿಧಿಸಿದ್ದು ನನ್ನ ಕೆತ್ತನೆಯ ಬೊಂಬೆಯೇ, ಎರಕದ ಮೂರ್ತಿಯೇ’ ಎಂದು ನೀ ಜಂಬ ಕೊಚ್ಚಿಕೊಳ್ಳದಂತೆ ಪುರಾತನ ಕಾಲದಲ್ಲೆ ನಾನಿವುಗಳನು ಮುಂತಿಳಿಸಿದೆ. ಅವುಗಳು ನೆರವೇರುವುದಕ್ಕೆ ಮುಂಚೆಯೇ ಪ್ರಕಟಿಸಿದೆ.


ನಿನ್ನನ್ನು ಸೃಷ್ಟಿಸಿದ ಸರ್ವೇಶ್ವರ ನಾನೆ ತಾಯ ಗರ್ಭದಿಂದ ನಿನ್ನನ್ನು ರೂಪಿಸಿದವನು ನಾನೆ ಅಂದಿನಿಂದ ನಿನಗೆ ನೆರವಾಗುತ್ತಾ ಬಂದವನು ನಾನೆ. ಭಯಪಡಬೇಡ, ನನ್ನ ದಾಸ ಯಕೋಬನೇ, ಅಂಜಬೇಡ, ನಾನು ಆರಿಸಿಕೊಂಡ ಯೆಶುರೂನೇ.


ಶ್ರುತಪಡಿಸಿದವನು ನಾನೇ, ಉದ್ಧರಿಸಿದವನು ನಾನೇ, ಘೋಷಿಸಿದವನು ನಾನೇ. ಇದನ್ನು ಮಾಡಿಲ್ಲ ಅನ್ಯದೇವರಾರು ನಿಮ್ಮ ಮಧ್ಯೆ. ನನಗೆ ಸಾಕ್ಷಿಗಳು ನೀವೇ, ದೇವರು ನಾನೊಬ್ಬನೇ.


ಮುಂತಿಳಿಸಿದ ಸಂಗತಿಗಳಿದೋ ಈಡೇರಿವೆ ಹೊಸ ಸಂಗತಿಗಳನಿದೋ ಪ್ರಕಟಿಸುವೆ ಅವು ತಲೆದೋರುವುದಕ್ಕೆ ಮುಂಚೆಯೇ ನಿಮಗೆ ತಿಳಿಸುವೆ.”


ನೀವಾದರೋ ಹಾಡುವಿರಿ ಹಬ್ಬದ ರಾತ್ರಿಯಲ್ಲೋ ಎಂಬಂತೆ ಹೃದಯಾನಂದ ಪಡುವಿರಿ, ಇಸ್ರಯೇಲರ ರಕ್ಷಣೆಯ ಕೋಟೆಗೆ, ಸರ್ವೇಶ್ವರನ ಶಿಖರಕ್ಕೆ ಕೊಳಲನೂದುತ ಹೋಗುವವರಂತೆ.


ನಮ್ಮ ದೇವರ ಕೃಪಾಹಸ್ತ ಅವರ ಎಲ್ಲ ಶರಣಾರ್ಥಿಗಳ ಮೇಲಿತ್ತು. ನಮ್ಮ ದೇವರನ್ನು ತೊರೆದುಬಿಟ್ಟವರೆಲ್ಲರು ಅವರ ಪ್ರಬಲವಾದ ರೌದ್ರಕ್ಕೆ ಗುರಿಯಾಗುವರು ಎಂದು ನಾವು ಅರಸನ ಮುಂದೆ ಹೇಳಿದ್ದೆವು. ಆದುದರಿಂದ ದಾರಿಯಲ್ಲಿ ನಮ್ಮನ್ನು ಶತ್ರುಗಳಿಂದ ರಕ್ಷಿಸುವುದಕ್ಕಾಗಿ ಸೈನ್ಯವನ್ನಾಗಲಿ, ಅಶ್ವಬಲವನ್ನಾಗಲಿ ಕೇಳಿಕೊಳ್ಳುವುದಕ್ಕೆ ನಾನು ನಾಚಿಕೊಂಡಿದ್ದೆ.


ಪರ್ಷಿಯ ರಾಜನಾದ ಸೈರಸೆಂಬ ನನ್ನ ಮಾತನ್ನು ಕೇಳಿರಿ; ಪರಲೋಕ ದೇವರಾದ ಸರ್ವೇಶ್ವರಸ್ವಾಮಿ ಭೂಲೋಕದ ಎಲ್ಲ ರಾಜ್ಯಗಳನ್ನು ನನಗೆ ಕೊಟ್ಟಿದ್ದಾರೆ; ‘ನನಗಾಗಿ ಜುದೇಯ ನಾಡಿನ ಜೆರುಸಲೇಮಿನಲ್ಲಿ ಒಂದು ಆಲಯವನ್ನು ಕಟ್ಟಿಸಬೇಕು’ ಎಂದು ಅವರು ಆಜ್ಞಾಪಿಸಿದ್ದಾರೆ.


‘ನಮ್ಮಾಶ್ರಯ ದುರ್ಗ ಅವರ ಆಶ್ರಯದುರ್ಗದಂತಲ್ಲ’ ಎಂದು ಅವರ ಶತ್ರುಗಳೇ ಒಪ್ಪಿಕೊಳ್ಳುತ್ತಾರಲ್ಲವೆ?


“ನಿಮಗೆ ಪೊರೆಬಂಡೆ ಆತ, ಆತನ ಕಾರ್ಯ ದೋಷರಹಿತ ಆತನ ಮಾರ್ಗ ನ್ಯಾಯಯುತ, ಆ ದೇವ ನಂಬಿಕಸ್ತ. ಆತ ನಿರ್ವಂಚಕ, ಯಥಾರ್ಥನು ಹಾಗು ನೀತಿವಂತ.”


ಆದರೆ ತಂದೆ ಅದಕ್ಕೆ ಒಪ್ಪದೆ, “ಗೊತ್ತು ಮಗನೇ, ನನಗೆ ಗೊತ್ತು; ಇವನಿಂದಲೂ ಒಂದು ರಾಷ್ಟ್ರ ಉತ್ಪತ್ತಿಯಾಗುವುದು; ಇವನೂ ಬಲಿಷ್ಠನಾಗುವನು. ಅವನಿಂದ ರಾಷ್ಟ್ರಗಳ ಸಮೂಹವೆ ಉತ್ಪತ್ತಿಯಾಗುವುದು,” ಎಂದು ಹೇಳಿದನು.


ಆಗ ದೇವರು, “ನಾನೇ ದೇವರು, ನಿನ್ನ ತಂದೆ ಆರಾಧಿಸಿದ ದೇವರು, ನೀನು ಈಜಿಪ್ಟ್ ದೇಶಕ್ಕೆ ಹೋಗಲು ಅಂಜಬೇಡ; ಅಲ್ಲಿ ನಿನ್ನಿಂದ ಮಹಾಜನಾಂಗ ಉತ್ಪನ್ನವಾಗುವಂತೆ ಮಾಡುವೆನು;


ಆ ಜೀವ ಪ್ರತ್ಯಕ್ಷವಾಯಿತು. ಅದನ್ನು ನಾವು ನೋಡಿದ್ದೇವೆ. ಆ ಬಗ್ಗೆ ಸಾಕ್ಷಿ ಹೇಳುತ್ತೇವೆ. ಪಿತನ ಬಳಿಯಿದ್ದು ನಮಗೆ ಪ್ರತ್ಯಕ್ಷವಾದಂಥ ನಿತ್ಯಜೀವವನ್ನು ನಿಮಗೆ ಸಾರುತ್ತೇವೆ.


ಆದಕಾರಣ ಇಷ್ಟುಮಂದಿ ಸಾಕ್ಷಿಗಳು ದೊಡ್ಡ ಮೇಘದಂತೆ ನಮ್ಮ ಸುತ್ತಲೂ ಆವರಿಸಿರುವಾಗ, ನಮಗೆ ಅಡ್ಡಿಯಾಗಬಲ್ಲ ಹೊರೆಯನ್ನೂ ಅಂಟಿಕೊಳ್ಳುವ ಪಾಪವನ್ನೂ ತೆಗೆದುಹಾಕಿ, ನಮಗಾಗಿ ನೇಮಿಸಿರುವ ಓಟದ ಸ್ಪರ್ಧೆಯಲ್ಲಿ ನಾವು‍ ಸ್ಥಿರಚಿತ್ತದಿಂದ ಭಾಗವಹಿಸೋಣ.


“ಮಹಾಜನರೇ, ನೀವು ಮಾಡುತ್ತಿರುವುದೇನು? ನಾವು ನಿಮ್ಮಂತೆ ಕೇವಲ ನರಮಾನವರು. ನಾವು ಬಂದಿರುವುದು ನಿಮಗೆ ಶುಭಸಂದೇಶವನ್ನು ಸಾರುವುದಕ್ಕೆ; ನೀವು ಈ ನಿರರ್ಥಕ ಕಾರ್ಯವನ್ನು ಬಿಟ್ಟುಬಿಡಬೇಕು; ಭೂಮ್ಯಾಕಾಶವನ್ನೂ ಸಮುದ್ರ ಸರೋವರವನ್ನೂ ಮತ್ತು ಅವುಗಳಲ್ಲಿರುವ ಸಮಸ್ತ ಸೃಷ್ಟಿಯನ್ನೂ ಉಂಟುಮಾಡಿದ ಜೀವಂತ ದೇವರ ಭಕ್ತರಾಗಬೇಕು.


ಆದರೆ ಪವಿತ್ರಾತ್ಮ ಅವರು ನಿಮ್ಮ ಮೇಲೆ ಬಂದಾಗ ನೀವು ಶಕ್ತಿಯುತರಾಗುವಿರಿ. ಆಗ ನೀವು ಜೆರುಸಲೇಮಿನಲ್ಲೂ ಜುದೇಯದಲ್ಲೂ ಸಮಾರಿಯದಲ್ಲೂ ಭೂಲೋಕದ ಕಟ್ಟಕಡೆಯವರೆಗೂ ನನಗೆ ಸಾಕ್ಷಿಗಳಾಗುವಿರಿ,” ಎಂದರು.


ಯೇಸು, “ಜನರನ್ನು ಊಟಕ್ಕೆ ಕೂರಿಸಿರಿ,” ಎಂದರು. ಅಲ್ಲಿ ಹುಲುಸಾಗಿದ್ದ ಹುಲ್ಲಿನ ಮೇಲೆ ಜನರು ಕುಳಿತುಕೊಂಡರು. ಗಂಡಸರ ಸಂಖ್ಯೆಯೇ ಐದುಸಾವಿರದಷ್ಟಿತ್ತು.


ಪ್ರಭು, ನೀನೊಬ್ಬನೇ ದೇವನು I ಅದ್ಭುತಶಾಲಿ, ಮಹೋನ್ನತನು II


ಇಸ್ರಯೇಲೇ, ನಿನ್ನ ಉದ್ಧಾರಕನಾದ ದೇವರನ್ನು ನೀನು ಸ್ಮರಿಸಲಿಲ್ಲ. ನಿನಗೆ ಆಶ್ರಯವಿತ್ತ ಪೊರೆಬಂಡೆಯನ್ನು ಮರೆತುಹೋದೆ. ಬದಲಿಗೆ ಅನ್ಯದೇವರ ಆರಾಧನೆಗಾಗಿ ನಿನಗಿಷ್ಟವಾದ ಉದ್ಯಾನವನಗಳನ್ನು ನೆಟ್ಟೆ.


ಶಾಶ್ವತ ಆಶ್ರಯಗಿರಿ, ಸ್ವಾಮಿ ಸರ್ವೇಶ್ವರನೇ, ಸತತ ಭರವಸೆಯಿಡಿರಿ ಆತನಲ್ಲೇ.


ತಿಳಿಸಿ ನಮಗೆ ಮುಂದೆ ನಡೆಯಬೇಕಾದವುಗಳನು ನಂಬುವೆವು ಆಗ ನೀವು ದೇವರುಗಳೆಂಬುದನು, ಪ್ರದರ್ಶಿಸಿ ಒಳಿತನ್ನಾಗಲಿ ಕೆಡುಕನ್ನಾಗಲಿ ಆಗ ನೋಡುವೆವು ಒಟ್ಟಿಗೆ ನಿಬ್ಬೆರಗಾಗಿ !


“ನಾನು, ನಾನೇ ಸರ್ವೇಶ್ವರ, ನನ್ನ ಹೊರತು ಇಲ್ಲ ಬೇರೆ ಉದ್ಧಾರಕ.


ನಾನು ಗುಟ್ಟುಗುಟ್ಟಾಗಿ ಮಾತಾಡಿದವನಲ್ಲ ಕಗ್ಗತ್ತಲೆಯೊಳಗಿನಿಂದ ನುಡಿದವನಲ್ಲ ಶೂನ್ಯದಲ್ಲಿ ನನ್ನ ಹುಡುಕಿರಿ ಎಂದು ಯಕೋಬ ವಂಶಕ್ಕೆ ಹೇಳಿದವನಲ್ಲ. ಸರ್ವೇಶ್ವರನಾದ ನಾನು ಸತ್ಯಾನುಸಾರ ನುಡಿಯುವವನು, ನೆಟ್ಟನೆಯ ಮಾತುಗಳನ್ನೆ ಸ್ಪಷ್ಟವಾಗಿ ಹೇಳುವವನು.”


“ಕೇಳು, ಎಲೈ ಯಕೋಬ ಮನೆತನವೇ, ನಿನಗೆ ತಿಳಿಸಿದೆ ಈವರೆಗೆ ನಡೆದ ಸಂಗತಿಗಳನು ಪೂರ್ವದಲೇ. ಹೌದು ಪ್ರಕಟಿಸಿದೆ ನಾನು, ಹೊರಡಿಸಿದೆ ನನ್ನ ಬಾಯಿಂದಲೇ ಕೈಗೂಡುವಂತೆ ಮಾಡಿದೆ ನಾನವುಗಳನು ಕೂಡಲೆ.


ನಡುಕಟ್ಟಾಗಿ ನನಗೆ ಬಿಗಿದಿದ್ದಾನೆ ಶೌರ್ಯ I ಆತನಿಂದಲೇ ಸರಾಗ ನನ್ನ ಮಾರ್ಗ II


ಬರಲಿ, ಎಲ್ಲಾ ಜನಾಂಗಗಳು ಒಟ್ಟಿಗೆ ನೆರೆಯಲಿ, ಸಕಲ ದೇಶಿಯರು ಇಲ್ಲಿಯೇ. ಅವರ ದೇವರುಗಳಲ್ಲಿ ಭವಿಷ್ಯವನ್ನು ನುಡಿಯಬಲ್ಲವರು ಯಾರು? ಗತಿಸಿದ ಘಟನೆಗಳನ್ನು ಮುಂತಿಳಿಸಿದವರಾರು? ಕರೆತರಲಿ, ಆ ದೇವರುಗಳು ಸಾಕ್ಷಿಗಳನು ಸ್ಥಾಪಿಸಿಕೊಳ್ಳಲಿ, ತಾವು ಸತ್ಯವಂತರೆಂಬುದನು; ರುಜುಪಡಿಸಲಿ ಕೇಳುವವರಿಗೆ ತಮ್ಮ ಮಾತು ನಿಜವೆಂಬುದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು