Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 44:2 - ಕನ್ನಡ ಸತ್ಯವೇದವು C.L. Bible (BSI)

2 ನಿನ್ನನ್ನು ಸೃಷ್ಟಿಸಿದ ಸರ್ವೇಶ್ವರ ನಾನೆ ತಾಯ ಗರ್ಭದಿಂದ ನಿನ್ನನ್ನು ರೂಪಿಸಿದವನು ನಾನೆ ಅಂದಿನಿಂದ ನಿನಗೆ ನೆರವಾಗುತ್ತಾ ಬಂದವನು ನಾನೆ. ಭಯಪಡಬೇಡ, ನನ್ನ ದಾಸ ಯಕೋಬನೇ, ಅಂಜಬೇಡ, ನಾನು ಆರಿಸಿಕೊಂಡ ಯೆಶುರೂನೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 ನಿನ್ನನ್ನು ನಿರ್ಮಾಣಮಾಡಿ, ಗರ್ಭದಿಂದಲೂ ರೂಪಿಸುತ್ತಾ ಬಂದು ನಿನಗೆ ಸಹಾಯ ಮಾಡುವವನಾದ ಯೆಹೋವನು ಹೀಗೆನ್ನುತ್ತಾನೆ, “ನನ್ನ ಸೇವಕನಾದ ಯಾಕೋಬೇ, ನಾನು ಆದುಕೊಂಡ ಯೆಶುರೂನೇ, ಭಯಪಡಬೇಡ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

2 ನಿನ್ನನ್ನು ನಿರ್ಮಾಣಮಾಡಿ ಗರ್ಭದಿಂದಲೂ ರೂಪಿಸುತ್ತಾ ಬಂದು ನಿನಗೆ ಸಹಾಯಮಾಡುವವನಾದ ಯೆಹೋವನು ಹೀಗೆನ್ನುತ್ತಾನೆ - ನನ್ನ ಸೇವಕನಾದ ಯಾಕೋಬೇ, ನಾನು ಆದುಕೊಂಡ ಯೆಶುರೂನೇ, ಭಯಪಡಬೇಡ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

2 ಯೆಹೋವನಾದ ನಾನೇ ನಿನ್ನನ್ನು ನಿರ್ಮಿಸಿದಾತನು. ನೀನು ತಾಯಿಯ ಗರ್ಭದಲ್ಲಿರುವಾಗಲೇ ನಾನು ನಿನಗೆ ಸಹಾಯ ಮಾಡಿದೆನು. ಯಾಕೋಬೇ, ನನ್ನ ಸೇವಕನೇ, ಹೆದರದಿರು. ಯೆಶುರೂನೇ (ಇಸ್ರೇಲೇ), ನಾನು ನಿನ್ನನ್ನು ಆರಿಸಿಕೊಂಡಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

2 ನಿನ್ನ ನಿರ್ಮಾಣ ಮಾಡಿ, ಗರ್ಭದಿಂದಲೂ ರೂಪಿಸುತ್ತಾ ಬಂದು, ನಿನಗೆ ಸಹಾಯ ಮಾಡುವವರಾದ ಯೆಹೋವ ದೇವರು ಹೇಳುವುದೇನೆಂದರೆ: ನನ್ನ ಸೇವಕನಾದ ಯಾಕೋಬೇ, ನಾನು ಆಯ್ದುಕೊಂಡ ಯೆಶುರೂನೇ, ಭಯಪಡಬೇಡ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 44:2
29 ತಿಳಿವುಗಳ ಹೋಲಿಕೆ  

“ನಿನ್ನನ್ನು ತಾಯಿಯ ಗರ್ಭದಲ್ಲಿ ರೂಪಿಸುವುದಕ್ಕೆ ಮುಂಚೆಯೇ ನಿನ್ನನ್ನು ನಾನು ತಿಳಿದಿದ್ದೇ; ನೀನು ಉದರದಿಂದ ಹೊರಬರುವುದಕ್ಕೆ ಮೊದಲೇ ನಿನ್ನನ್ನು ಪವಿತ್ರೀಕರಿಸಿದ್ದೇ; ನಿನ್ನನ್ನು ರಾಷ್ಟ್ರಗಳಿಗೆ ಪ್ರವಾದಿಯನ್ನಾಗಿ ನೇಮಿಸಿದ್ದೇನೆ.”


ಈಗಲಾದರೋ ಯಕೋಬ ವಂಶವೇ, ಇಸ್ರಯೇಲ್ ಸಂತಾನವೇ ಕೇಳು : ನಿನ್ನನ್ನು ಸೃಷ್ಟಿಸಿದ, ರೂಪಿಸಿದ ಸರ್ವೇಶ್ವರನ ನುಡಿಯನ್ನು ಕೇಳು; “ಭಯಪಡಬೇಡ, ನಿನ್ನನ್ನು ರಕ್ಷಿಸಿದಾತ ನಾನಲ್ಲವೆ? ನಿನ್ನನ್ನು ಹೆಸರು ಹಿಡಿದು ಕರೆದಾತ ನಾನಲ್ಲವೆ? ನೀನು ನನ್ನವನೇ ಅಲ್ಲವೆ?


ತಾಯ ಗರ್ಭದಿಂದ ರೂಪಿಸಿ ನಿನ್ನನು ಹೊರತಂದ ಸರ್ವೇಶ್ವರ ಹೇಳಿಹನು ಇದನ್ನು : “ಸರ್ವವನು ಸೃಷ್ಟಿಸಿದ ಸರ್ವೇಶ್ವರನು ನಾನೆ ಗಗನಮಂಡಲವನು ವಿಸ್ತರಿಸಿದವನು ನಾನೆ ಭೂಮಂಡಲವನು ಹರಡಿದವನು ನಾನೆ ನನಗಾಗ ನೆರವಾಗಲು ಯಾರಾದರೂ ಇದ್ದರೆ?


ಕರೆತರುವೆ ಈ ಪರಿ ನನ್ನ ನಾಮಧಾರಿಗಳೆಲ್ಲರನು ನನ್ನ ಮಹಿಮೆಗಾಗಿ ನಾನು ಸೃಷ್ಟಿಸಿ ರೂಪಿಸಿದವರನು.


ಕಿವಿಗೊಡಿ ನನ್ನ ದ್ವೀಪನಿವಾಸಿಗಳೇ, ಆಲಿಸಿ ನನ್ನನ್ನು ದೂರದ ಜನಾಂಗಗಳೇ, ಸರ್ವೇಶ್ವರ ಕರೆದನೆನ್ನನ್ನು ಗರ್ಭದಲ್ಲಿದ್ದಾಗಲೇ; ಹೆಸರಿಟ್ಟನೆನಗೆ ನಾನು ತಾಯಿಯ ಉದರದಲ್ಲಿದ್ದಾಗಲೇ.


ಜಗತ್ತು ಸೃಷ್ಟಿಯಾಗುವ ಮೊದಲೇ ದೇವರು ಕ್ರಿಸ್ತಯೇಸುವಿನಲ್ಲಿ ನಮ್ಮನ್ನು ತಮ್ಮವರನ್ನಾಗಿ ಆರಿಸಿಕೊಂಡರು. ಹೀಗೆ ಅವರ ಸನ್ನಿಧಿಯಲ್ಲಿ ನಾವು ನಿಷ್ಕಳಂಕರೂ ನಿರ್ದೋಷಿಗಳೂ ಆಗಿರಬೇಕೆಂದು ಇಚ್ಛಿಸಿದರು.


ಹೆದರಬೇಡ, ನಾನಿದ್ದೇನೆ ನಿನ್ನೊಂದಿಗೆ ಭಯಭ್ರಾಂತನಾಗಬೇಡ, ನಾನೇ ದೇವರು ನಿನಗೆ. ಶಕ್ತಿ ನೀಡುವೆ, ಸಹಾಯಮಾಡುವೆ ನಿನಗೆ ನನ್ನ ವಿಜಯಹಸ್ತದ ಆಧಾರ ಇದೆ ನಿನಗೆ.


ಹೀಗೆ ಯಾರನ್ನು ಮೊದಲೇ ನೇಮಿಸಿದ್ದರೋ ಅವರನ್ನು ಕರೆದಿದ್ದಾರೆ. ಯಾರನ್ನು ಕರೆದಿದ್ದಾರೋ ಅವರನ್ನು ತಮ್ಮೊಡನೆ ಸತ್ಸಂಬಂಧದಲ್ಲಿ ಇರಿಸಿಕೊಂಡಿದ್ದಾರೆ. ಯಾರನ್ನು ತಮ್ಮೊಡನೆ ಸತ್ಸಂಬಂಧದಲ್ಲಿ ಇರಿಸಿಕೊಂಡಿದ್ದಾರೋ ಅವರನ್ನು ಮಹಿಮಾಪದವಿಗೆ ಸೇರಿಸಿಕೊಂಡಿದ್ದಾರೆ.


ಹುಟ್ಟಿನಿಂದಲೆ ನಾ ನಿನಗಂಟಿಕೊಂಡಿರುವೆನಯ್ಯಾ I ಗರ್ಭದಿಂದಲೆ ನೀ ಎನ್ನನು ಕರೆದುತಂದೆಯಯ್ಯಾ I ನಿರಂತರವೂ ನಿನ್ನನು ಕೊಂಡಾಡುತ್ತಿರುವೆನಯ್ಯಾ II


ನಾ ಸೃಷ್ಟಿಸಿದ ಆಪ್ತ ಜನಕೆ ನೀಡುವೆನು ಜಲಪಾನವನು; ಎಂದೇ ಸ್ತುತಿಸಿಕೊಂಡಾಡುವರು ನನ್ನನು.”


ಸಹೋದರರೇ, ನೀವು ದೇವರಿಗೆ ಪ್ರಿಯರು; ದೇವರಿಂದಲೇ ಆಯ್ಕೆಗೊಂಡವರು ಎಂದು ನಾವು ಬಲ್ಲೆವು.


“ಪುಟ್ಟಮಂದೆಯೇ, ಭಯಪಡಬೇಡ. ನಿನ್ನ ತಂದೆ ತಮ್ಮ ಸಾಮ್ರಾಜ್ಯವನ್ನು ನಿನಗೆ ನೀಡಲು ಇಷ್ಟಪಟ್ಟಿದ್ದಾರೆ.


ಆದಕಾರಣ, ನಾವು ಸಮಯೋಚಿತ ಸಹಾಯವನ್ನು ಅವರ ಅನುಗ್ರಹದಿಂದ ಪಡೆಯಲು ಮತ್ತು ಅವರ ಕರುಣೆಯನ್ನು ಸವಿಯಲು ಧೈರ್ಯದಿಂದ ಅವರ ಕೃಪಾಸನವನ್ನು ಸಮೀಪಿಸೋಣ.


“ಯಕೋಬೇ, ಇಸ್ರಯೇಲೇ, ನೆನಪಿನಲ್ಲಿಡು ಇದನ್ನು : ನೀನೆನ್ನ ದಾಸನು, ಇಸ್ರಯೇಲ್, ನಿನ್ನ ನಿರ್ಮಿಸಿದವನು ನಾನು; ನೀನೆನ್ನ ದಾಸನು, ನಿನ್ನನ್ನು ನಾನು ಮರೆತುಬಿಡೆನು.


ದೇವನಿರುವನಾ ನಗರ ಮಧ್ಯೆ, ಅಳಿವಿಲ್ಲ ಅದಕೆ I ಉದಯಕಾಲದಲೆ ದೇವ ಬರುವನು ಅದರ ಸಹಾಯಕೆ II


ಭಯಪಡಬೇಡ, ನಾನಿರುವೆ ನಿನ್ನ ಸಂಗಡ ಕರೆತರುವೆ ನಿನ್ನ ಸಂತತಿಯನ್ನು ಮೂಡಣದಿಂದ ಒಟ್ಟುಗೂಡಿಸುವೆ ನಿನ್ನವರನ್ನು ಪಡುವಣದಿಂದ.


ಸರ್ವೇಶ್ವರ ಇಂತೆನ್ನುತ್ತಾರೆ : “ಹುಳುವಿನಂತಿರುವ ಯಕೋಬೇ, ಇಸ್ರಯೇಲಿನ ಜನತೆಯೇ, ಭಯಪಡಬೇಡ, ನಾನೇ ನಿನಗೆ ಸಹಾಯಕ ಇಸ್ರಯೇಲಿನ ಪರಮಪಾವನ ಸ್ವಾಮಿಯೇ ನಿನಗೆ ವಿಮೋಚಕ.


ಇಸ್ರಯೇಲರ ಕುಲಗಳು ಒಂದಾದಾಗ ಜನನಾಯಕರು ಒಟ್ಟಾಗಿ ಕೂಡಿದಾಗ ಯೆಶುರೂನಿನಲಿ ಸರ್ವೇಶ್ವರನೇ ಅರಸನಾದ.


“ತೃಪ್ತಿಯಾಗಿ ತಿಂದನು ಯಕೋಬನು, ಕೊಬ್ಬಿಹೋದನು ಆ ಯೆಶೂರನು; ತೊರೆದುಬಿಟ್ಟನು ತನ್ನ ಪೊರೆಬಂಡೆಯನು ಮರೆತುಬಿಟ್ಟನು ತನ್ನ ಸೃಷ್ಟಿಕರ್ತನನು.


ಇಸ್ರಯೇಲಿನ ಜನರೇ, ನಿಮ್ಮ ದೇವರಿಗೆ ಸಮಾನನಾರೂ ಇಲ್ಲ, ಆತ ಬರುವನು ಆಕಾಶವನ್ನೇರಿ, ಮೇಘಾರೂಢನಾಗಿ ಮಹಾಗಾಂಭೀರ್ಯದಿಂದ ಬರುವನು ನಿಮ್ಮ ನೆರವಿಗಾಗಿ.


ಮರಗಳ ರೆಂಬೆಕೊಂಬೆಗಳು ಒಣಗಿ ಮುರಿದುಹೋಗಿವೆ. ಹೆಂಗಸರ ಕೈಗೆ ಒಲೆಪಾಲಾಗುವ ಸೌದೆಯಾಗಿವೆ. ಈ ಪ್ರಜೆಗಳು ಮಂದಮತಿಗಳೇ ಸರಿ. ಈ ಕಾರಣ, ಸೃಷ್ಟಿಕರ್ತನು ಇವರನ್ನು ಕರುಣಿಸನು. ನಿರ್ಮಿಸಿದಾತನು ಇವರಿಗೆ ದಯೆ ತೋರಿಸನು.


ಇಂತಿರಲು ನನ್ನ ದಾಸನಾದ ಇಸ್ರಯೇಲೇ, ನಾನು ಆಯ್ದುಕೊಂಡ ಯಕೋಬೇ, ನನ್ನ ಗೆಳೆಯ ಅಬ್ರಹಾಮನ ಸಂತತಿಯೇ,


ಸರ್ವೇಶ್ವರ ಇಸ್ರಯೇಲಿನ ಪರಮಪಾವನ ಸ್ವಾಮಿ, ಅದರ ಸೃಷ್ಟಿಕರ್ತ. ಆ ಸರ್ವೇಶ್ವರನ ನುಡಿಯಿದು : “ನನ್ನ ಮಕ್ಕಳ ಬಗ್ಗೆ ನೀ ಕೇಳುವುದೆಂತು? ನನ್ನ ಕೈಯ ಕೃತಿಗಳ ಬಗ್ಗೆ ನೀ ವಿಧಿಸುವುದೆಂತು?


ಯಕೋಬ್ಯರನ್ನು ತನ್ನ ಬಳಿಗೆ ಕರೆತರಲು ಇಸ್ರಯೇಲರನ್ನು ತನ್ನೊಂದಿಗೆ ಸೇರಿಸಿಕೊಳ್ಳಲು ತನ್ನ ದಾಸನನ್ನಾಗಿ ನನ್ನ ರೂಪಿಸಿದನು, ತಾಯ ಗರ್ಭದಲ್ಲಿದ್ದಾಗಲೇ ಮಾಡಿದನಿದನು. ಸನ್ಮಾನ್ಯನು ನಾನು ಸರ್ವೇಶ್ವರನ ದೃಷ್ಟಿಯಲಿ ನನ್ನ ಶಕ್ತಿಸಾಮರ್ಥ್ಯ ಇರುವುದು ಆ ದೇವರಲಿ.


“ನನ್ನ ದಾಸ ಯಕೋಬನೇ, ಅಂಜಬೇಡ! ಇಸ್ರಯೇಲೇ, ಭಯಪಡಬೇಡ” ಎನ್ನುತ್ತಾರೆ ಸರ್ವೇಶ್ವರ. “ದೂರ ನಾಡಿನಿಂದ ನಿನ್ನನ್ನು ಮುಕ್ತನನ್ನಾಗಿಸುವೆನು ನಿನ್ನ ಸಂತಾನ ಸೆರೆಹೋದ ಸೀಮೆಯಿಂದ ನಿನ್ನನ್ನು ಉದ್ಧರಿಸುವೆನು. ಹಿಂದಿರುಗಿ, ಹಾಯಾಗಿ ನೆಮ್ಮದಿಯಿಂದಿರುವುದು ಯಕೋಬು ಯಾರಿಂದಲೂ ಅದನ್ನು ಹೆದರಿಸಲಾಗದು.


ಬನ್ನಿ ಆರಾಧಿಸೋಣ ಬನ್ನಿ, ಬಾಗಿ ವಂದಿಸೋಣ I ನಮ್ಮನು ಸೃಜಿಸಿದಾ ಪ್ರಭುವಿಗೆ ಸಾಷ್ಟಾಂಗವೆರಗೋಣ II


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು